Horoscope: ಈ ರಾಶಿಯವರು ಆರೋಗ್ಯವನ್ನು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುವಿರಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 18 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರು ಆರೋಗ್ಯವನ್ನು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುವಿರಿ
ಈ ರಾಶಿಯವರು ಆರೋಗ್ಯವನ್ನು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುವಿರಿ
Follow us
|

Updated on: Jun 18, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮಂಗಳವಾರ (ಜೂನ್. 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ 15:48 ರಿಂದ 17:25ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:20 ರಿಂದ ಬೆಳಿಗ್ಗೆ 10:57ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 14:11ರ ವರೆಗೆ.

ಧನು ರಾಶಿ: ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ದುರಭ್ಯಾಸದ ಜನರ ಸಹವಾಸ ಇರುವುದು. ಒಳ್ಳೆಯ ಕಾಲ ಬರುವುದೆಂದು ಕಾದು ಕುಳಿತರೆ ಪ್ರಯೋಜನವಿಲ್ಲ. ನಿಮ್ಮ ಕೆಲಸವನ್ನು ನೀವು ಮಾಡಿ. ಕಾಲ ಬಂದಾಗ ಅದು ಮಾಡಬೇಕಾದುದನ್ನು ಮಾಡುತ್ತದೆ. ಮಕ್ಕಳ ಭವಿಷ್ಯವು ಚೆನ್ನಾಗಿರಲು ಅವರ ಹೆಸರಿನಲ್ಲಿ ಹೂಡಿಕೆ ಮಾಡುವಿರಿ. ಮಕ್ಕಳ ವಿಚಾರದಲ್ಲಿ ತಾರತಮ್ಯವನ್ನು ತೋರಿಸಿ ಅವರ ಬಾಯಿಗೆ ಸಿಗುವಿರಿ. ನಿಮ್ಮ ಯೋಜನೆಗೆ ಕುಟುಂಬ ಹಾಗೂ ಸ್ನೇಹಿತ ಬಳಗ ಸಹಾಯ ಮಾಡುವುದು. ಭೂಮಿಗೆ ಸಂಬಂಧಿಸಿದ ಉದ್ಯೋಗವನ್ನು ಆರಂಭ ಮಾಡಬೇಡಿ. ಇರುವ ಉದ್ಯೋಗವು ಯಥಾಸ್ಥಿತಿಯಲ್ಲಿ ಇರಲಿ. ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇನ್ನೊಬ್ಬರ ವಾಹನ ಚಲಾಯಿಸಬೇಕಾದೀತು.

ಮಕರ ರಾಶಿ: ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ಹೆಚ್ಚುವರಿ ಆದಾಯವನ್ನು ಗಳಿಸಲು ನಿಮ್ಮ ಕ್ರೀಯಾಶೀಲತೆ ಅಗತ್ಯವಾಗಿ ಬೇಕು. ಭೂಮಿಯ ವ್ಯವಹಾರವನ್ನು ಸದ್ಯ ಮುಂದುವರಿಸಬೇಡಿ. ಕೈ ತಪ್ಪಿ ಹೋದೀತು. ನ್ಯಾಯಾಲಯದ ಮೆಟ್ಟಿಲೇರಿದ ದೂರು ಇಂದು ಇತ್ಯರ್ಥವಾದೀತು. ಕಲೆಗಳಲ್ಲಿ ಆಸಕ್ತಿ ಇಲ್ಲದೇ ನೀರಸವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಬಹುದು. ದಾಂಪತ್ಯದ ಉತ್ತಮ ಹಾಗೂ ಖುಷಿಯ ದಿನವನ್ನು ಅನುಭವಿಸುವಿರಿ. ಅಪರಿತರು ನಿಮಗೆ ಸಹಾಯವನ್ನು ಮಾಡಲು ಬಂದರೆ ನೀವು ಅದನ್ನು ಸ್ವೀಕರಿಸುವುದಿಲ್ಲ. ಕೆಲಸಗಳು ಕೈಗೂಡುವುದು ಎಂಬ ಆಸೆ ಇರಲಿದೆ. ಕಛೇರಿಯಲ್ಲಿ ಗೌರವ ಸಿಗಲಿದೆ. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ.

ಕುಂಭ ರಾಶಿ: ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಮನೆಗೆ ಅತಿಥಿಗಳ ಆಗಮನವು ಹೊಸ ಮೆರಗನ್ನು ಕೊಡುವುದು. ಮೇಲಧಿಕಾರಿಗಳ ವರ್ತನೆಯಿಂದ ಉದ್ಯೋಗವನ್ನು ಬಿಡುವ ಯೋಚನೆ ಮಾಡುವಿರಿ ಮತ್ತು ಮುಂದಿನ ವೃತ್ತಿಜೀವನದ ಬಗ್ಗೆ ಗೊಂದಲವೂ ಇರಬಹುದು. ಮಿತ್ರರ ಸಹಾಯದಿಂದ ಬಂದೊದಗಿದ ಅಪಾಯವನ್ನು ದೂರಮಾಡಿಕೊಳ್ಳುವಿರಿ. ಅವಿಶ್ರಾಂತ ಕೆಲಸವು ನಿಮಗೆ ಆಯಾಸವನ್ನು ನೀಡುವುದು. ಆರೋಗ್ಯದಲ್ಲಿ ವ್ಯತ್ಯವಾಗಬಹುದು. ಬಂಧುಗಳು ನಿಮ್ಮನ್ನು ಆಡಿಕೊಳ್ಳುವರು. ಆಲಸ್ಯದಿಂದ ಕೆಲಸವು ಹಿಂದೆ ಬೀಳುವುದು. ಇಂದು ನಡೆದ ಅಹಿತಕರ‌ ಘಟನೆಯನ್ನು ಕೆಟ್ಟ ಘಳಿಗೆ ಎಂದು ಮರೆತುಬಿಡಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಮೊದಲು ನಿಷ್ಠುರದ ಮಾತನಾಡಿ ಅನಂತರ ಪಶ್ಚಾತ್ತಾಪಗೊಳ್ಳುವಿರಿ.

ಮೀನ ರಾಶಿ: ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಮನೆಯಲ್ಲಿ, ನಿಮ್ಮ ಮಕ್ಕಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರರು. ಕುಟುಂಬದ ಹಿರಿಯರಿಗೆ ನೀಡಬೇಕಾದ ಗೌರವವನ್ನು ನೀಡಿ. ನಿರಂತರವಾಗಿ ನಡೆಸಿಕೊಂಡು ಬಂದ ಉದ್ಯಮದಿಂದ ಲಾಭವಾಗುವುದು. ಆರೋಗ್ಯವನ್ನು ನಿಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುವಿರಿ. ಯೋಗ್ಯವಾದ ಔಷಧೋಪಚಾರವು ಸಿಗುವುದು. ನಿದ್ರಾಹೀನತೆಯಿಂದ ಬಳಲುತ್ತಿದ್ದು ವಾತಾವರಣವು ನಿಮ್ಮ ನಿದ್ರೆಗೆ ಪೂರಕವಾಗಿರದೇ ಇರುವುದು ಕಾರಣವಾಗಿದೆ. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ. ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡುವರು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಪರ ಊರಿನಲ್ಲಿ ಇಂದು ವಾಸವಾಗುವುದು.

ತಾಜಾ ಸುದ್ದಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು