Nitya Bhavishya: ಈ ರಾಶಿಯವರು ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 11 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Nitya Bhavishya: ಈ ರಾಶಿಯವರು ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jan 11, 2024 | 12:15 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ಇಲ್ಲಿ ತಿಳಿಯಿರಿ. ನಿಮ್ಮ ಇಂದಿನ (ಜನವರಿ 11) ದಿನ ಭವಿಷ್ಯ (Horoscope) ಹೀಗಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: : ಗುರು, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ವ್ಯಾಘಾತ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 14:05 ರಿಂದ 15:30ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:02 ರಿಂದ 08:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:51 ರಿಂದ 11:16ರ ವರೆಗೆ.

ಧನು ರಾಶಿ: ಉನ್ನತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವು ಸಾಗುವುದು. ಮಾತನ್ನು ಉಳಿಸಿಕೊಳ್ಳಲು ನೀವು ಸೋಲಬಹುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅಧಿಕೃತ ಮಾಡಿಕೊಳ್ಳದೇ ಯಾವುದನ್ನೂ ಹೇಳುವುದು ಬೇಡ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ‌. ಭವಿಷ್ಯವು ಅಸ್ಪಷ್ಟವಾಗಿ ಇರುವುದು ನಿಮಗೆ ಆತಂಕವಾಗಬಹುದು. ಸ್ತ್ರೀಯರಿಂದ‌ ಕೆಲವು ಸಮಸ್ಯೆಯು ಬರಲಿದೆ. ಅಪರಿಚಿತರಿಗೆ ಇಂದು ಅಲ್ಪ ಧನಸಹಾಯವನ್ನು ಮಾಡಬೇಕಾಗುವುದು. ಕೋಪದ ನಿಯಂತ್ರಣವು ನಿಮಗೆ ಕಷ್ಟವಾದೀತು.

ಮಕರ ರಾಶಿ: ವಿದ್ಯಾಭ್ಯಾಸವನ್ನು ಬಯಸಿ ಎಲ್ಲಿಗಾದರೂ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ನಿಮಗೆ ಶತ್ರುಗಳ‌ ಚಿಂತೆಯೇ ಅಧಿಕವಾಗಿರುವುದು. ಪಾಲುದಾರಿಕೆಯಲ್ಲಿ ನಿಮ್ಮ ಪಾಲುದಾರಿಕೆಯೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಹತ್ತಿರದ ಬಂಧುಗಳಿಂದ ವಿಶ್ವಾಸಕ್ಕೆ ತೊಂದರೆಯಾಗುವುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಅಸಂಬದ್ಧ ಮಾತುಗಳ ನಿಮ್ಮನ್ನು ವ್ಯಕ್ತಿತ್ವವನ್ನು ತಿಳಿಸುವುದು. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸಬಹುದು.

ಕುಂಭ ರಾಶಿ: ನಿಮ್ಮ ವ್ಯವಹಾರದ ಬಗ್ಗೆ ತಂದೆಯವರು ವಿಚಾರಿಸಬಹುದು. ಸಂಗಾತಿಯ ಜೊತೆಗಿನ ಕೆಲವು ಸಂದರ್ಭಗಳನ್ನು ಎದುರಿಸುವುದು ಕಷ್ಟವಾದೀತು. ಸಿಗು ಸಂತೋಷದ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳುವಿರಿ. ನಿಮ್ಮ‌ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಆಸ್ತಿಯ ವಿಚಾರ ಬಂದಾಗ ಮೌನ ತಾಳುವಿರಿ. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಉತ್ಸಾಹವೂ ಇರಲಿದೆ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌ ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ. ಅಧಿಕ ಖರ್ಚನ್ನು ಇಂದು ಮಾಡಬೇಕಾಗುವುದು. ಸಾಲದಿಂದ ನಿಮ್ಮ ಬಗ್ಗೆ ಬೇಡದ ಅಭಿಪ್ರಾಯಗಳು ಬರಬಹುದು.

ಮೀನ ರಾಶಿ: ವ್ಯಾಪಾರದಲ್ಲಿ ಜಾಣ್ಮೆ ಇದ್ದರೂ ಬೇಕಾದಾಗ ಉಪಯೋಗಕ್ಕೆ ಬಾರದೇ ಹೋಗಬಹುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾದೀತು. ಪ್ರಯಾಣವನ್ನು ಕುಟಂಬದ ಜೊತೆ ಮಾಡುವಿರಿ. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಸುಮ್ಮನೇ ಆಪ್ತರ ಮೇಲೆ‌ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಅಪ್ರಯೋಜಕ ಸಂಗತಿಗಳು ಮುಖ್ಯವಾದೀತು. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು. ಉದ್ವೇಗದಲ್ಲಿ ಇದ್ದರೂ ಸಮಾಧಾನಿಗಳಂತೆ ತೋರುವಿರಿ.‌ ಪುಣ್ಯದ ಫಲವು ಇಂದು ಸಿಗುವುದು. ಇಂದು ಬೇಕಾದುದನ್ನು ಮಾಡುವ ಸ್ವಾತಂತ್ರ್ಯವು ನಿಮಗೆ ಇರದು.

ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ