Horoscope: ದಿನಭವಿಷ್ಯ: ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು-ಎಚ್ಚರ
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮಾರ್ಚ್ 17ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್ 17) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12 ರಿಂದ ಮಧ್ಯಾಹ್ನ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:41 ರಿಂದ ಸಂಜೆ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12 ರ ವರೆಗೆ.
ಧನು ರಾಶಿ : ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ಯಾರದೋ ಮೂಲಕ ಸಿಗಲಿದೆ. ಯಾವುನ್ನಾದರೂ ಒಪ್ಪಿಕೊಳ್ಳುವ ಮೊದಲು ಆಗಬಹುದಾದ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಿಮಗೆ ಆತ್ಮಸಾಕ್ಷಿಯೇ ನಿಜವಾದ ಬಲವಾಗಲಿದೆ. ಸಮಯವು ತುಂಬಾ ವೇಗವಾಗಿ ಓಡುತ್ತಿರುವಂತೆ ಅನ್ನಿಸುವುದು. ನಿಮ್ಮ ಅಮೂಲ್ಯ ಸಮಯವನ್ನು ಬಳಸಲು ಕಲಿಯಿರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡುವಿರಿ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ ಪಾಲಿಗೆ ಬರುವುದು. ಅನಪೇಕ್ಷಿತ ಮಾತುಗಳ ಕಡೆ ಗಮನ ಬೇಡ.
ಮಕರ ರಾಶಿ : ಇಂದು ನಿಮ್ಮ ಒತ್ತಡದ ಸಮಯವು ನಿಮ್ಮ ಸಹನೆಯನ್ನು ವ್ಯತ್ಯಾಸ ಮಾಡಬಹುದು. ಹಿಂದಿನ ಬಂಡವಾಳದಿಂದ ಆದಾಯವನ್ನು ನಿರೀಕ್ಷಿಸಿದ್ದಲ್ಲಿ ಅಲ್ಪ ಸಿಗಬಹುದು. ಗೃಹ ಜೀವನ ಶಾಂತಿಯುತವಾಗಿರುವುದು. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯೋರ್ವರು ಸಂಧಿಸುವರು. ಇಂದು ಅನುಕೂಲಕರವಾದ ದಿನವಾಗಿ ಕಾರ್ಯದಲ್ಲಿ ಸೂಕ್ತವಾಗಿ ಬಳಸಿಕೊಳ್ಳಿ. ಇಂದು ನೀವು ಉತ್ತಮ ವಿಚಾರಗಳನ್ನು ತುಂಬಿಕೊಳ್ಳುವಿರಿ. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಆಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು.
ಕುಂಭ ರಾಶಿ : ನೀವು ಅನ್ಯರನ್ನು ಟೀಕಿಸುವ ಅಭ್ಯಾಸದಿಂದ ನೀವೇ ಟೀಕೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಹಾಸ್ಯವು ಇತರರಿಗೆ ತೊಂದರೆ ಕೊಡಬಹುದು. ಹಣದ ಪರಿಸ್ಥಿತಿಯು ಸ್ವಲ್ಪ ಚೇತರಿಸಿದಂತೆ ಕಾಣಿಸುತ್ತದೆ. ಪತ್ನಿಯೆ ಜೊತೆ ಹೊರಗೆ ಸುತ್ತಾಡಲು ಹೋಗಿ ಆನಂದಿಸುವಿರಿ. ಇಂದು ನಿಮ್ಮ ತಿಳುವಳಿಕೆಯ ಪರೀಕ್ಷೆಯು ಆಗಬಹುದು. ನೀವು ಭವಿಷ್ಯದಲ್ಲಿ ವಿಷಾದಿಸುವ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಇಷ್ಟದ ವಸ್ತುಗಳು ಕಣ್ಮರೆಯಾಗಬಹುದು. ಅಗತ್ಯದ ಕಾರ್ಯವನ್ನು ಇತರರ ಸಹಾಯವನ್ನು ಪಡೆದು ಮುಗಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಸಂಗಾತಿಯ ಜೊತೆ ಕುಳಿತು ದುಃಖದಿಂದ ಸಮಾಧಾನ ಮಾಡುವಿರಿ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದಲೂ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ತಂದೆಯ ಮಾತು ನಿಮಗೆ ಹಿತವೆನಿಸೀತು.
ಮೀನ ರಾಶಿ : ಇಂದು ನೀವು ಪೂರ್ಣ ಯಶಸ್ಸನ್ನು ಪಡೆಯುವ ಹಂತದಲ್ಲಿ ಸೋಲುವಿರಿ. ನಿಮ್ಮ ಹಣವನ್ನು ಒಂದು ಸುರಕ್ಷಿತ ಸ್ಥಳದಲ್ಲಿರಿಸುವಿರಿ. ಮಕ್ಕಳ ಜೊತೆಗಿನ ನಿಮ್ಮ ಕಠಿಣ ವರ್ತನೆ ನಿಮಗೆ ಸಿಟ್ಟನ್ನು ತರಿಸಬಹುದು. ನಿಮಗೆ ತಾಳ್ಮೆಯ ಗೋಡೆಯ ಅವಶ್ಯಕತೆ ಇದೆ. ಅನ್ಯರ ವ್ಯಕ್ತಿಯ ಹಸ್ತಕ್ಷೇಪವನ್ನು ನೀವು ಸಹಿಸಲಾರಿರಿ. ಸ್ವಾಭಿಮಾನಕ್ಕೆ ಅಡ್ಡಪಡಿಸಲು ಕೊಡುವುದಿಲ್ಲ. ನಿಮ್ಮ ಕೈಕೆಳಗಿನವರು ಏನು ಹೇಳುತ್ತಾರೆಂದು ಕೇಳಿ. ನಿಮ್ಮ ಸ್ಪರ್ಧಾತ್ಮಕ ಸ್ವಭಾವವು ಎಲ್ಲವನ್ನೂ ಪಡೆಯಬೇಕು ಎನ್ನುವ ಆಸೆಯು ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ.
-ಲೋಹಿತ ಹೆಬ್ಬಾರ್-8762924271 (what’s app only)




