AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಕೃಷಿ ವ್ಯಾಪಾರದಲ್ಲಿ ಹಿನ್ನಡೆ, ಪ್ರತಿಫಲದ ನಿರೀಕ್ಷೆ ಇಲ್ಲದೇ ಸಹಾಯ ಮಾಡುವಿರಿ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 13) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Rashi Bhavishya: ಕೃಷಿ ವ್ಯಾಪಾರದಲ್ಲಿ ಹಿನ್ನಡೆ, ಪ್ರತಿಫಲದ ನಿರೀಕ್ಷೆ ಇಲ್ಲದೇ ಸಹಾಯ ಮಾಡುವಿರಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jan 13, 2024 | 12:10 AM

Share

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 13) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಜ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 9:52 ರಿಂದ 11:16ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:31ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:02 ರಿಂದ 08:27ರ ವರೆಗೆ.

ಸಿಂಹ ರಾಶಿ: ಎಂದೂ ಊಹಿಸದ ಅವಕಾಶವನ್ನು ಪಡೆದುಕೊಳ್ಳುವಿರಿ. ಕಛೇರಿಯಿಂದ ನಿಮಗೆ ತಿಳಿಯಬೇಕಾದ ವಿಚಾರವು ತಿಳಿಯದೇಹೋಗಬಹುದು. ಭಾರವಾದ ವಸ್ತುಗಳನ್ನು ಎತ್ತುವುದು ಬೇಡ. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಬೆನ್ನು ನೋವು ನಿಮ್ಮನ್ನು ಬಾಧಿಸೀತು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ಕಾರ್ಯದ ಒತ್ತಡ ಹೆಚ್ಚಿರುವುದು. ಜವಾಬ್ದಾರಿಯ ಕಾರ್ಯವನ್ನೇ ಸರಿಯಾಗಿ ಮಾಡಿ ಆದಾಯವು ಹೆಚ್ಚಾಗುವಂತೆ ಮಾಡಿಕೊಳ್ಳಿ.

ಕನ್ಯಾ ರಾಶಿ: ಸತ್ಯವನ್ನು ಹೇಳಲು ಇಂದು ನೀವು ಹಿಂಜರಿಯುವಿರಿ. ತನಗೆ ತೊಂದರೆಯಾಗುವುದೆಂಬ ಭಯವೂ ಕಾಡಬಹುದು. ಪ್ರಭಾವಿ ವ್ಯಕ್ತಿಗಳ ಸಹಾಯಕರಾಗಿ ಹೋಗುವ ಅವಕಾಶಗಳು ಸಿಗಬಹುದು. ಜವಾಬ್ದಾರಿಯ ಮಾತುಗಳಿಂದ ಅಚ್ಚರಿಯಾದೀತು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವಿರಿ. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ. ಯಾರನ್ನೂ ಅಲ್ಪವಾಗಿ ಕಾಣುವುದು ಬೇಡ.

ತುಲಾ ರಾಶಿ: ಧನಾತ್ಮಕವಾಗಿ ಆಲೋಚಿಸಿ ಕಾರ್ಯದಲ್ಲಿ ಮುಂದುವಿರಿ. ಹಣಕಾಸಿನ ವಿಚಾರದಲ್ಲಿ ಧಾರಾಳತನ ಒಳ್ಳೆಯದಲ್ಲ. ಆಪತ್ಕಾಲಕ್ಕೆ ಬೇಕಾದ ಹಣವನ್ನು ತೆಗೆದಿರಿಸುವಿರಿ‌. ಸ್ತ್ರೀಯರು ಆಭರಣಗಳನ್ನು ಜತನದಿಂದ ಇರಿಕೊಳ್ಳಿ. ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ‌. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ತಪ್ಪನ್ನು ಸಮರ್ಥಿಸಿ ಒಪ್ಪಿಕೊಳ್ಳುವುದು ಬೇಡ. ಇನ್ನೊಬ್ಬರಿಗೆ ನೋವಾದೀತು. ಹೇಳಬೇಕಾದ್ದನ್ನು ಹೇಳದೇ ‌ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ.

ವೃಶ್ಚಿಕ ರಾಶಿ: ಇಂದು ಸಂಗಾತಿಯ ಮಾತನ್ನು ಕೇಳಿ ಮುಂದುವರಿಯಲಾರಿರಿ. ದೈವಭಕ್ತಿಯನ್ನು ಬೆಳೆಸಿಕೊಂಡು ನಿಮ್ಮ ಕರ್ತವ್ಯವನ್ನು ಮಾಡುವುದು ಉಚಿತ. ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ‌ ಸಹಕಾರವು ನಿಮಗೆ ಸಿಗಲಿದೆ. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು. ಸಾಧಿಸುವ ವಿಧಾನವವನ್ನು ಹೇಳಿಕೊಳ್ಳುವುದು ಬೇಡ.‌ ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಖಾಸಗಿ ಸಂಸ್ಥೆಯು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸಬಹುದು‌. ವಿದೇಶೀಯ ಹಣವನ್ನು ಪಡೆದುಕೊಳ್ಳುವಾಗ ಎಚ್ಚರ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್