Weekly Horoscope: ನಿಮ್ಮ ರಾಶಿಗನುಗುಣವಾಗಿ ​ಆಗಸ್ಟ್​​​ ತಿಂಗಳ ಕೊನೆಯ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಸೂರ್ಯ ಉಚ್ಚನಾಗಿ, ಶುಕ್ರ ನೀಚನಾಗಿರುವುದು ಕಂಡುಬರಲಿದೆ. ಇದು ಸರ್ಕಾರದ ಕಾರ್ಯದಲ್ಲಿ, ಉದ್ಯೋಗಿಗಳಿಗೆ ಉನ್ನತ ಸ್ಥಾನ ಮತ್ತು ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆ ತರಲಿದೆ. ಪ್ರತಿಯೊಂದು ರಾಶಿಗಳ ಮೇಲೂ ಇದರ ಪ್ರಭಾವ ವಿಭಿನ್ನವಾಗಿರುತ್ತದೆ. ಮೇಷದಿಂದ ಮೀನದವರೆಗೆ ನಿಮ್ಮ ಹಣಕಾಸು, ಆರೋಗ್ಯ, ಕೌಟುಂಬಿಕ ಮತ್ತು ವೃತ್ತಿಜೀವನದ ಭವಿಷ್ಯದ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Weekly Horoscope: ನಿಮ್ಮ ರಾಶಿಗನುಗುಣವಾಗಿ ​ಆಗಸ್ಟ್​​​ ತಿಂಗಳ ಕೊನೆಯ ವಾರದ ಭವಿಷ್ಯ ಇಲ್ಲಿ ತಿಳಿಯಿರಿ
ವಾರದ ಭವಿಷ್ಯ
Edited By:

Updated on: Aug 23, 2026 | 9:04 AM

ಅಗಷ್ಟ್ ತಿಂಗಳ ಕೊನೆಯ ವಾರದಲ್ಲಿ ಸೂರ್ಯ ಉಚ್ಚನಾಗಿ, ಶುಕ್ರ ನೀಚನಾಗಿರುವುದು ಕಂಡುಬರಲಿದೆ. ಸರ್ಕಾರದ ಕಾರ್ಯದಲ್ಲಿ, ಉದ್ಯೋಗಿಗಳಿಗೆ ಉನ್ನತ ಸ್ಥಾನ, ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆ ಕಾಣಿಸಲಿದೆ. ಸುಖವನ್ನು ನಷ್ಟ ಮಾಡಿಕೊಳ್ಳುವ ಸ್ಥಿತಿಯನ್ನು ತಂದುಕೊಳ್ಳುವಿರಿ.

​ಮೇಷ ರಾಶಿ:

ಧೈರ್ಯದಿಂದ ಹೊಸ ಸವಾಲುಗಳನ್ನು ಸ್ವೀಕರಿಸಿ; ಪ್ರಗತಿಯ ಹಾದಿ ಸುಗಮವಾಗಲಿದೆ. ತೃತೀಯದ ಮಂಗಲನಿಂದಾಗಿ ದಿಢೀರ್ ಆರ್ಥಿಕ ಲಾಭ ಹಾಗೂ ಹೊಸ ಆದಾಯದ ಮೂಲಗಳು ತೆರೆಯಲಿವೆ. ಶಕ್ತಿ ಹೆಚ್ಚಿರುತ್ತದೆ, ಆದರೆ ಒತ್ತಡದಿಂದಾಗಿ ರಕ್ತದೊತ್ತಡದಲ್ಲಿ ಏರಿಳಿತವಾಗದಂತೆ ನೋಡಿಕೊಳ್ಳಿ. ಕುಟುಂಬದವರ ಸಂಪೂರ್ಣ ಬೆಂಬಲ ಸಿಗಲಿದ್ದು, ದಾಂಪತ್ಯದಲ್ಲಿ ಉತ್ಸಾಹವಿರುತ್ತದೆ.

​ವೃಷಭ ರಾಶಿ :

​ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಮೌಲ್ಯ ಸಿಗಲಿದೆ; ಪ್ರಮೋಷನ್ ಸಾಧ್ಯತೆ. ಧನ ಭಾವದಲ್ಲಿ ಮಂಗಲನಿರುವುದರಿಂದ ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ. ಗಂಟಲು ಅಥವಾ ಹಲ್ಲಿನ ಸಣ್ಣಪುಟ್ಟ ಕಿರಿಕಿರಿ ಇರಬಹುದು. ಮಾತು ಕೊಡುವಾಗ ಎಚ್ಚರ ವಹಿಸಿ, ಸಣ್ಣ ತಪ್ಪು ತಿಳುವಳಿಕೆಗಳು ಬರದಂತೆ ತಡೆಯಿರಿ.

​ಮಿಥುನ ರಾಶಿ :

​ನಿಮ್ಮ ರಾಶಿಯಲ್ಲೇ ಮಂಗಲ ಇರುವುದರಿಂದ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಲಾಭವಿದ್ದರೂ, ಅನಗತ್ಯ ಖರ್ಚುಗಳು ಜೇಬಿಗೆ ಕನ್ನ ಹಾಕಬಹುದು. ಅತಿಯಾದ ಕೋಪ ಅಥವಾ ಕೆಲಸದ ಸಣ್ಣಪುಟ್ಟ ಗಾಯಗಳ ಬಗ್ಗೆ ಜಾಗ್ರತೆ ವಹಿಸಿ. ಜೀವನಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಉತ್ತಮ.

​ಕರ್ಕಾಟಕ ರಾಶಿ :

​ಲಗ್ನದ ಉಚ್ಚ ಗುರು ನಿಮಗೆ ಸಕಲ ಕ್ಷೇತ್ರದಲ್ಲಿ ಯಶಸ್ಸು ಮತ್ತು ಗೌರವ ತಂದುಕೊಡಲಿದ್ದಾನೆ. ಹಣಕಾಸಿನ ಅಭಿವೃದ್ಧಿ ಚೆನ್ನಾಗಿರಲಿದೆ; ಧಾರ್ಮಿಕ ಕಾರ್ಯಗಳಿಗೆ ಧನ ವಿನಿಯೋಗಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದು ಮನಸ್ಸು ಪ್ರಸನ್ನವಾಗಿರುತ್ತದೆ. ಕುಟುಂಬದಲ್ಲಿದ್ದ ಹಳೆಯ ಭಿನ್ನಾಭಿಪ್ರಾಯಗಳು ಸಂಪೂರ್ಣವಾಗಿ ಶಮನಗೊಳ್ಳಲಿವೆ.

​ಸಿಂಹ ರಾಶಿ :

ರಾಶಿಯಲ್ಲಿ ರವಿ, ಬುಧ, ಕೇತು ಯೋಗವಿರುವುದರಿಂದ ಜವಾಬ್ದಾರಿಗಳು ಹೆಚ್ಚಲಿವೆ. ವ್ಯಾಪಾರದಲ್ಲಿ ಸ್ಪರ್ಧೆ ಹೆಚ್ಚಿದರೂ ಲಾಭಕ್ಕೆ ತೊಂದರೆಯಿಲ್ಲ. ಅತಿಯಾದ ಅಹಂಕಾರ ಮತ್ತು ಕೋಪದಿಂದ ಶಿರೋವೇದನೆ ಅಥವಾ ಮಾನಸಿಕ ಆಯಾಸ ಬರಬಹುದು. ಆತ್ಮೀಯರ ಜೊತೆ ಸಂವಹನ ಮಾಡುವಾಗ ನಮ್ರತೆ ಇರಲಿ.

​ಕನ್ಯಾ ರಾಶಿ :

​ಕಲಾತ್ಮಕ ಮತ್ತು ಐಷಾರಾಮಿ ಕ್ಷೇತ್ರದಲ್ಲಿದ್ದವರಿಗೆ ವೃತ್ತಿಯಲ್ಲಿ ಭಾರಿ ಪ್ರಗತಿ. ಶುಕ್ರನ ಪ್ರಭಾವದಿಂದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರುತ್ತದೆ; ಲಾಭದಾಯಕ ಸಮಯ. ದೈಹಿಕವಾಗಿ ಚೈತನ್ಯದಾಯಿಕ ವಾತಾವರಣವಿರುತ್ತದೆ. ಪ್ರೇಮಿಗಳಿಗೆ ಯಶಸ್ಸು; ಹೊಸ ಸಂಬಂಧಗಳು ಗಟ್ಟಿಯಾಗಲಿವೆ.

​ತುಲಾ ರಾಶಿ :

ಹತ್ತನೇ ಮನೆಯಲ್ಲಿ ಗುರುವಿನ ಕೃಪೆಯಿಂದ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆ. ದ್ವಾದಶದ ಶುಕ್ರನಿಂದಾಗಿ ಐಷಾರಾಮಿ ವಸ್ತುಗಳ ಖರೀದಿಗಾಗಿ ಅತಿಯಾದ ವೆಚ್ಚ. ಕಣ್ಣು ಅಥವಾ ಪಾದದ ನೋವಿನ ಸಮಸ್ಯೆ ಕಾಡಬಹುದು. ದೂರದ ಬಂಧುಗಳಿಂದ ಶುಭ ಸಮಾಚಾರ ಬರಲಿದೆ.

​ವೃಶ್ಚಿಕ ರಾಶಿ :

ಭಾಗ್ಯ ಸ್ಥಾನದ ಗುರುವಿನಿಂದ ಹಿರಿಯ ಅಧಿಕಾರಿಗಳ ಹಾಗೂ ಮಾರ್ಗದರ್ಶಕರ ಬೆಂಬಲ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಅಥವಾ ಲಾಟರಿ ರೂಪದಲ್ಲಿ ದಿಢೀರ್ ಲಾಭ. ವಾಹನ ಚಾಲನೆ ಮಾಡುವಾಗ ಅತಿಯಾದ ವೇಗ ಬೇಡ; ಜಾಗ್ರತೆ ಅಗತ್ಯ. ಸಂಗಾತಿಯೊಂದಿಗೆ ಸುಂದರ ಪ್ರವಾಸದ ಯೋಜನೆಯನ್ನು ರೂಪಿಸುವಿರಿ.

​ಧನು ರಾಶಿ :

​ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕಂತೆ ತಕ್ಷಣದ ಫಲಿತಾಂಶ ಸಿಗದಿರಬಹುದು, ತಾಳ್ಮೆ ಇರಲಿ. ಹೂಡಿಕೆಗಳ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಬಾರದಂತೆ ಆಹಾರಕ್ರಮ ಸರಿಪಡಿಸಿಕೊಳ್ಳಿ. ಕುಟುಂಬದ ಹಿರಿಯರ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಿ.

​ಮಕರ ರಾಶಿ :

ಷಷ್ಠದ ಮಂಗಲನಿಂದ ಶತ್ರುಗಳ ತಂತ್ರಗಳು ವಿಫಲವಾಗಲಿವೆ; ನ್ಯಾಯಾಲಯದ ಕೆಲಸಗಳಲ್ಲಿ ಜಯ. ಹಳೆಯ ಸಾಲಗಳನ್ನು ತೀರಿಸಲು ಉತ್ತಮ ಅವಕಾಶಗಳು ದೊರೆಯಲಿವೆ. ದೀರ್ಘಕಾಲದ ಕಾಯಿಲೆಗಳಿಂದ ಚೇತರಿಕೆ ಕಾಣುವಿರಿ. ಸಹೋದರರ ಸಂಪೂರ್ಣ ಸಹಕಾರ ನಿಮಗಿರುತ್ತದೆ.

​ಕುಂಭ ರಾಶಿ :

ರಾಶಿಯಲ್ಲಿ ಚಂದ್ರ, ರಾಹು ಇರುವುದರಿಂದ ಕೆಲಸದಲ್ಲಿ ಏಕಾಗ್ರತೆಯ ಕೊರತೆ ಕಾಡಬಹುದು. ಹೊಸ ಸಾಲ ಮಾಡುವುದನ್ನು ಅಥವಾ ಯಾರಿಗೂ ಜಮೀನುದಾರರಾಗುವುದನ್ನು ತಪ್ಪಿಸಿ. ಅನಗತ್ಯ ಆತಂಕ ಮತ್ತು ನಿದ್ರಾಹೀನತೆ ಕಾಡಬಹುದು; ಧ್ಯಾನ ಮಾಡಿ. ತಪ್ಪು ತಿಳುವಳಿಕೆಗಳು ಬರದಂತೆ ಪಾರದರ್ಶಕತೆ ಕಾಯ್ದುಕೊಳ್ಳಿ.

​ಮೀನ ರಾಶಿ :

​ಶನಿಯ ಪ್ರಭಾವದಿಂದ ಪ್ರತಿಯೊಂದು ಕೆಲಸದಲ್ಲೂ ಜವಾಬ್ದಾರಿ ಹೆಚ್ಚಿದ್ದು, ಕಠಿಣ ಪರಿಶ್ರಮ ಅಗತ್ಯ. ಹಣಕಾಸಿನ ಹರಿವು ಸಾಧಾರಣವಾಗಿರುತ್ತದೆ; ಆಸ್ತಿ ಖರೀದಿ ಕುರಿತು ಆಲೋಚನೆ ನಡೆಸುವಿರಿ. ಕೀಲು ನೋವು ಅಥವಾ ಕಾಲುಗಳ ಆಯಾಸ ಕಂಡುಬರಬಹುದು. ಕುಟುಂಬದ ಹಿರಿಯರ ಆಶೀರ್ವಾದ ನಿಮ್ಮ ಕಾರ್ಯಗಳಿಗೆ ಶ್ರೀರಕ್ಷೆಯಾಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us