
ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿಗೆ ಪ್ರವೇಶ ಮಾಡಿದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಶನಿ (ಮೂರನೇ ಮನೆ ಸಂಚಾರ):
ಆದಾಯದ ಹರಿವು ಸರಾಗವಾಗಿ ಆಗಲಿದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ದೊರೆಯಲಿದೆ. ಇನ್ನು ಯಾರು ಕೆಲಸ ಬಿಟ್ಟು ಅಥವಾ ಕೆಲಸ ಕಳೆದುಕೊಂಡಿದ್ದೀರಿ ಅಂಥವರಿಗೆ ಉದ್ಯೋಗ ಸಿಗಲಿದೆ. ಫ್ರೀಲ್ಯಾನ್ಸರ್ ಆಗಿದ್ದಲ್ಲಿ, ಸ್ವಂತ ವ್ಯವಹಾರ- ವ್ಯಾಪಾರ ಮಾಡುತ್ತಿರುವವರು ಹೀಗೆ ಎಲ್ಲರಿಗೂ ಇಲ್ಲಿಯವರೆಗೆ ಅನುಭವಿಸಿದ್ದ ಆರ್ಥಿಕ ಸಮಸ್ಯೆ- ಹಿನ್ನಡೆಯಿಂದ ಹೊರಬರುವುದಕ್ಕೆ ಸಾಧ್ಯವಾಗಲಿದೆ. ಸೋದರ- ಸೋದರಿಯರ ಜತೆಗೆ ಇಲ್ಲಿಯವರೆಗೆ ಇದ್ದ ಅಭಿಪ್ರಾಯ ಭೇದ- ಮನಸ್ತಾಪ ದೂರವಾಗಲಿದೆ. ಆಸ್ತಿ- ಹಣಕಾಸಿನ ಹಳೇ ವ್ಯಾಜ್ಯಗಳು ಬಗೆಹರಿಯಲಿವೆ. ಈ ಹಿಂದೆ ನೀವು ಶ್ರಮ ಪಟ್ಟು ಮಾಡಿದ ಕೆಲಸಗಳಿಗೆ ಈಗ ಹೆಸರು- ಖ್ಯಾತಿ ದೊರೆಯಲಿದೆ.
ನಿಮಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಅನುಭವ, ವಿಷಯ ಜ್ಞಾನ ಎಷ್ಟೇ ಇರಲಿ ಅತಿಯಾದ ಆತ್ಮವಿಶ್ವಾಸ ಯಾವುದೇ ಕಾರಣಕ್ಕೂ ಬೇಡ. ಯಾರಿಗೆ ಮಧುಮೇಹದ ಸಮಸ್ಯೆ ಇದೆಯೋ ಅಂಥವರು, ಇನ್ನು ದೇಹದ ತೂಕ ಹೆಚ್ಚಿದ್ದಲ್ಲಿ ಅದರ ನಿರ್ವಹಣೆಗೆ ಗಮನವನ್ನು ನೀಡಿ. ಸರ್ಕಾರದ ಜೊತೆಗಿನ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರು ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ಏಕೆಂದರೆ ಹಗುರ ಮಾತುಗಳನ್ನು ಆಡಿ, ಸಮಸ್ಯೆಗಳನ್ನು ಮಾಡಿಕೊಳ್ಳಬಹುದು. ನಿಮಗೆ ಲಾಭದ ಪ್ರಮಾಣ- ಆದಾಯ ಪ್ರಮಾಣ ಹೆಚ್ಚು ಮಾಡಿಕೊಳ್ಳುತ್ತಾ ಹೋಗುವ ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಗಟ್ಟಿಯಾಗಿ ಪ್ರಯತ್ನಿಸಿ.
ಇದನ್ನೂ ಓದಿ: ಕನ್ಯಾ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ಕೌಟುಂಬಿಕ ವಿಚಾರದಲ್ಲಿ ಜಗಳ- ಕಲಹಗಳು ಕಾಣಿಸಿಕೊಳ್ಳಲಿವೆ. ಹಣವನ್ನು ಹೇಗೆಂದರೆ ಹಾಗೆ ಖರ್ಚು ಮಾಡುವಂತಾಗುತ್ತದೆ. ವಿವೇಚನೆಯಿಂದ ಹಣವನ್ನು ಖರ್ಚು ಮಾಡುವುದು ಮುಖ್ಯವಾಗುತ್ತದೆ. ಷೇರು- ಸಟ್ಟಾ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮಲ್ಲಿ ಕೆಲವರಿಗೆ ಕಣ್ಣಿನ ಪೊರೆಯ ಅಥವಾ ಕಣ್ಣಿನ ಪವರ್ ಕಾರಣಕ್ಕೆ ಆಪರೇಷನ್ ಆಗಲಿದೆ. ತಲೆಹೊಟ್ಟಿನ ಸಮಸ್ಯೆ ಇರುವವರು, ತಲೆಕೂದಲು ಉದುರುವುದು, ಸೋರಿಯಾಸಿಸ್ ನಂಥ ಸಮಸ್ಯೆಯಿರುವವರು ಆಹಾರ ಪಥ್ಯ, ವೈದ್ಯಕೀಯ ಚಿಕಿತ್ಸೆ ಪಡೆಯುವ ಕಡೆಗೆ ಗಂಭೀರವಾಗಿ ಗಮನ ನೀಡಿ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ