Horoscope 25 March: ದಿನಭವಿಷ್ಯ; ಪ್ರೀತಿಪಾತ್ರರ ಜೊತೆ ಸಮಯ ಕಳೆಯುವಿರಿ, ವೈವಾಹಿಕ ಜೀವನವು ಸುಖಕರ
Nitya Bhavishya: 2024 ಮಾರ್ಚ್ 25 ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ :ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ವೃದ್ಧಿ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:05 ರಿಂದ 09:36ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:07 ರಿಂದ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ02:10 ರಿಂದ 03:41 ರ ವರೆಗೆ.
ಮೇಷ ರಾಶಿ: ಇಂದು ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ ಇದೆ. ಧನಾಗಮನ ನಿರೀಕ್ಷೆಯಲ್ಲಿ ಸಫಲತೆ ಇರುವುದು. ನಿಮ್ಮ ಸಂಗಾತಿಯ ಜೊತೆ ಸಣ್ಣ ವಿಷಯಗಳಿಗೆ ಆಗುವ ವಿವಾದವನ್ನು ತಪ್ಪಿಸಿ. ವಿದ್ಯಾರ್ಥಿಗಳು ಕಲಿಕೆಗೆ ಹೊಸ ಸಾಧ್ಯತೆಗಳು ಹುಡುಕಿಕೊಳ್ಳುವುದು ಅಗತ್ಯ. ಸಂಬಂಧಿಕರ ಜೊತೆ ವ್ಯವಹರಿಸುವುದನ್ನು ತಪ್ಪಿಸಿ, ಇಲ್ಲವಾದರೆ ಸಂಬಂಧವು ಹದಗೆಡಬಹುದು. ಇಂದು ಹಲವಾರು ಒತ್ತಡಗಳ ನಡುವೆ ಇರುವಿರಿ. ಪುಣ್ಯ ಪ್ರದೇಶಗಳಿಗೆ ಪ್ರಯಾಣಿಸಿ ದಾನ-ಧರ್ಮದಲ್ಲಿ ಭಾಗಿಯಾಗಿಯಾಗುವಿರಿ. ಮಾನಸಿಕವಾಗಿ ಋುಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆ ಪಡಬಹುದು. ಅಪರಿಚಿತರ ವ್ಯಕ್ತಿಗಳಿಂದ ನಿಮಗೆ ಸಂತೋಷವು ಸಿಗಲಿದೆ. ಮನೆಯಲ್ಲಿ ನಿಮ್ಮ ಕರ್ತವ್ಯದ ಕೆಲಸಗಳು ಇರಲಿದ್ದು, ಅದನ್ನು ನೀವು ಮಾಡಬೇಕಾಗುವುದು.
ವೃಷಭ ರಾಶಿ: ಇಂದು ನಿಮಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಕಷ್ಟವಾದೀತು. ಕೆಲವನ್ನು ನೀವೆ ತಂದುಕೊಳ್ಳುವಿರಿ. ಪರಿಸ್ಥಿತಿಯನ್ನು ಎದುರಿಸಲು ಸ್ಥೈರ್ಯ ಸಾಕಾಗದು. ಒಡಹುಟ್ಟಿದವರೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಪ್ರೀತಿಯಲ್ಲಿ ಮಾತಿನ ಕಠೋರತೆಯಿಂದ ಸಂಬಂಧಗಳಲ್ಲಿ ಬಿರುಕು ಬರಬಹುದು.ತಾಯಿಯ ಕಡೆಯಿಂದ ಸಂಬಂಧಗಳು ಸುಧಾರಿಸುತ್ತವೆ. ವ್ಯಾಪಾರ, ವ್ಯವಹಾರದಲ್ಲಿ ಡೋಲಾಯಮಾನವಾದ ಸ್ಥಿತಿ ಇರುವುದು. ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಬಲವಾದ ಹಿಡಿತವಿರಲಿದೆ. ಒಂದೇ ವಿಚಾರವನ್ನು ಮತ್ತೆ ಮತ್ತೆ ಕೇಳಿ ಕಿರಿ ಕಿರಿ ಎನಿಸಬಹುದು. ವಿದ್ಯಾರ್ಥಿಗಳಿಗೆ ಕರ್ತವ್ಯವನ್ನು ನೆನಪಿಸುವಂತಾಗುತ್ತದೆ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಸಾಹಸಕ್ಕೆ ಹೋಗದೇ ಯಥಾಸಾಧ್ಯ ನಿರ್ವಹಿಸಿ.
ಮಿಥುನ ರಾಶಿ: ಇಂದು ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ವೃತ್ತಿಯಲ್ಲಿ ಉತ್ಸಾಹವು ಕಡಿಮೆ ಆಗದಂತೆ ನೋಡಿಕೊಳ್ಳಿ.ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ವೈದ್ಯರ ಸಲಹೆ ಪಡೆದು ಔಷಧೋಪಚಾರ ಮಾಡಿ. ನೌಕರರಿಂದ ಗೌರವವು ನಿಮಗೆ ಸಿಗುತ್ತದೆ. ಮದುವೆಯಾಗಲು ಪ್ರಯತ್ನಿಸುವವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಹೆತ್ತವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಯಾವುದೇ ಜಗಳ ಮತ್ತು ವಿವಾದಗಳಿಗೆ ಸಿಲುಕಬೇಡಿ. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು. ಯಾವುದೇ ಉದ್ವೇಗಕ್ಕೆ ಒಳಗಾಗುವುದು ಬೇಡ. ಹಿರಿಯರ ಸೇವೆಯಲ್ಲಿ ಆಸಕ್ತಿ ಇರುವುದು.
ಕಟಕ ರಾಶಿ: ಆರೋಗ್ಯದಲ್ಲಿ ವ್ಯತ್ಯಸವಾದ ಕಾರಣ ಉತ್ಸಾಹವೂ ಇರದು. ನಿಮ್ಮ ಬಗ್ಗೆ ಇಲ್ಲದೆ ಆರೋಪವು ಬರಬಹುದು. ನಿಮ್ಮ ಕೆಲಸವನ್ನು ನೋಡಿದ ವಿರೋಧಿಗಳು ನಿಮ್ಮನ್ನು ಹೊಗಳುತ್ತಾರೆ. ವ್ಯವಹಾರವನ್ನು ಹೆಚ್ಚಿಸಲು ಕುಟುಂಬದೊಂದಿಗೆ ಸಮಾಲೋಚನೆ ಮಾಡಬೇಕಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶಗಳು ಸಿಗುತ್ತವೆ. ಹಣಕಾಸಿನ ವಿಚಾರದಲ್ಲಿ ಮುಖ್ಯವಾಗಿ ಖರ್ಚು ವೆಚ್ಚಗಳ ಬಗ್ಗೆ ಯೋಚಿಸುವಂತಾಗಲಿದೆ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ದೈವಭಕ್ತಿಯನ್ನು ಬೆಳೆಸಿಕೊಂಡು ಸಾಗಬೇಕಾಗುವುದು. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು. ನಿಮ್ಮದಾದ ವಸ್ತುವನ್ನು ಇತರರಿಗೆ ಕೊಡಬೇಕಾಗುವುದು. ಇಂದು ನಿಮಗೆ ಮಾತಿಗಿಂತ ಮೌನವೇ ಹೆಚ್ಚು ಸೂಕ್ತ ಎನಿಸಬಹುದು.
ಸಿಂಹ ರಾಶಿ: ನಿಮ್ಮ ಇಂದಿನ ಸಮಯವನ್ನು ಯಾರಾದರೂ ವ್ಯರ್ಥ ಮಾಡಿಯಾರು. ಇದರಿಂದ ಸಿಟ್ಟಾಗಿ ನಿಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ. ಸಂಗಾತಿಯ ಬೆಂಬಲವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ. ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಲಾಭ ಪಡೆಯುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಪ್ರೀತಿಯ ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ಅಜಾಗರೂಕರಾಗಿ ಯಾರ ಜೊತೆಯೂ ವರ್ತಿಸುವುದು ಬೇಡ. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಆರೋಗ್ಯದ ವಿಷಯದಲ್ಲಿ ಇಂದು ಸ್ವಲ್ಪ ತೊಂದರೆಯಾಗಬಹುದು. ಉದ್ಯಮಕ್ಕೆ ಹೊಸ ದಿಕ್ಕನ್ನು ಕೊಡುವ ಸಾಧ್ಯತೆ ಇದೆ. ಅನಿರೀಕ್ಷಿತ ವಾರ್ತೆಗಳು ನಿಮ್ಮನ್ನು ಸ್ತಬ್ಧಗೊಳಿಸಬಹುದು.
ಕನ್ಯಾ ರಾಶಿ: ನಿಮಗೆ ಸಿಗಬೇಕಾದ ಉತ್ತರವು ಯಾರಿಂದಲಾದರೂ ಸಿಕ್ಕಿ, ಸಂತೋಷಿಸುವಿರಿ. ಬಂಧುಗಳಿಂದ ಮಾನಸಿಕವಾಗಿ ಪೀಡೆ ಉಂಟಾಗಬಹುದು. ಮಂಗಳ ಕಾರ್ಯದಿಂದಾಗಿ, ಕುಟುಂಬ ಸದಸ್ಯರ ಸಂತೋಷ ಹೆಚ್ಚಾಗುತ್ತದೆ. ಹಲವು ದಿನಗಳಿಂದ ನಡೆಯುತ್ತಿರುವ ವಹಿವಾಟು ಪ್ರಮುಖ ಸಮಸ್ಯೆಯನ್ನು ಪರಿಹರಿಸಬಹುದು. ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಶುಭ ಕಾರ್ಯದ ಚಿಂತನೆ ಅನಿರೀಕ್ಷಿತವಾಗಿ ನಡೆಯಲಿದೆ. ಉದ್ಯಮ, ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ಧಾರ್ಮಿಕ ಚಟುವಟಿಕೆಗಳನ್ನು ನೀವು ಗಮನದಲ್ಲಿರಿಸಿಕೊಳ್ಳುತ್ತೀರಿ. ನಿಮ್ಮ ವಿರೋಧಿಗಳಿಗೆ ನೀವು ತಲೆನೋವಾಗಿ ಉಳಿಯುತ್ತೀರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು. ಸಜ್ಜನರ ಭೇಟಿಯಾಗುವ ಸಂದರ್ಭ ಬರುವುದು.
ತುಲಾ ರಾಶಿ: ಇಂದು ಆಕಸ್ಮಿಕವಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ಪ್ರೀತಿಯನ್ನು ನೀವು ಒಪ್ಪಿಕೊಳ್ಳುವುದು ನಿಮಗೆ ಅನಿವಾರ್ಯವಾದೀತು. ಸಣ್ಣ ಕಾರಣಕ್ಕೆ ಜೀವನ ಸಂಗಾತಿಯಿಂದ ದೂರಾಗುವ ಸಾಧ್ಯತೆಯಿದೆ. ಸ್ನೇಹಿತರಿಗೆ ಸಹಾಯ ಮಾಡಲು ಅವಕಾಶವಿರುತ್ತದೆ. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಂದ ಊಹಿಸಲಾಗದ ಯಶಸ್ಸನ್ನು ಸಾಧಿಸುವಿರಿ. ನೀವು ಮಕ್ಕಳ ಕಡೆಯಿಂದ ತೃಪ್ತಿದಾಯಕ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮಕ್ಕಳಿಂದ ಬೇಸರವಾಗುವ ಸಾಧ್ಯತೆ ಇದೆ. ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತುಕತೆಯ ಸಾಧ್ಯತೆ ಇರುತ್ತದೆ. ದಾಯಾದಿಗಳ ಆಗಮನ ಕಿರಿಕಿರಿ ತರಲಿದೆ. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು. ಪೂರ್ಣವಾಗಿ ಗೊತ್ತಾಗದೇ ಜವಾಬ್ದಾರಿಯನ್ನು ಸ್ವೀಕರಿಸುವಿರಿ.
ವೃಶ್ಚಿಕ ರಾಶಿ: ಅತಿಯಾದ ವಿನಯವು ಇಂದು ನಿಮ್ಮ ಶತ್ರುವಾಗಬಹುದು. ಎಲ್ಲವನ್ನೂ ಅಧಿಕಾರದಿಂದ ಮಾಡಲಾಗದು ಎಂಬ ಸತ್ಯವನ್ನು ನೀವು ತಿಳಿಯುವಿರಿ. ನಿಮ್ಮ ಶತ್ರುಗಳು ತಮ್ಮ ನಡುವೆ ಹೋರಾಡುವ ಮೂಲಕ ನಾಶವಾಗುತ್ತಾರೆ. ವಿದೇಶದಿಂದ ವ್ಯಾಪಾರವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಆತ್ಮೀಯ ವ್ಯಕ್ತಿ ಸುವಾರ್ತೆಯನ್ನು ಸ್ವೀಕರಿಸುತ್ತಾನೆ. ಚಿಂತಿತ ವ್ಯವಹಾರಗಳು ಹಂತ ಹಂತವಾಗಿ ಬಲಗೊಳ್ಳಲಿವೆ. ಅದೃಷ್ಟ ಬಲದಿಂದ ಹೂಡಿಕೆಗಳು ಲಾಭದಾಯಕವಾಗಲಿವೆ. ನಿಮ್ಮ ಸ್ಥಾನವು ಆರ್ಥಿಕವಾಗಿ ಸದೃಢವಾಗಿರುತ್ತದೆ. ಮನೆಯಲ್ಲಿ ಸಹಕಾರ ಮತ್ತು ಸಂತೋಷದ ವಾತಾವರಣವೂ ಇರುತ್ತದೆ. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟವು ನಿಮ್ಮದಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಪೂರೈಸಿ.
ಧನು ರಾಶಿ: ಇನ್ನೊಬ್ಬರನ್ನು ನೋಡಿ ನೀವು ಸಂಕಟಪಟ್ಟುಕೊಳ್ಳುವಿರಿ. ನಿಮ್ಮನ್ನು ಯಾರಾದರೂ ನಿಂದಿಸಲೂಬಹುದು. ಸ್ತ್ರೀಯರ ವಿಚಾರದಲ್ಲಿ ನೀವು ಸಿಟ್ಟಾಗುವ ಸಾಧ್ಯತೆ ಇದೆ. ಹೊಸ ವಸ್ತುಗಳ ಖರೀದಯ ಬಗ್ಗೆ ನಿಮಗೆ ಆಸಕ್ತಿ ಹೆಚ್ಚಿರುವುದು. ಹೊಸ ಉದ್ಯಮಿಗಳು ಪ್ರಯೋಜನ ಪಡೆಯಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಾಯಕತ್ವದಲ್ಲಿ ನಡೆಯುತ್ತಿರುವ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ. ಲೌಕಿಕ ಆನಂದದ ವಿಧಾನಗಳು ಹೆಚ್ಚಾಗುತ್ತವೆ. ಹೇಳಿಕೊಂಡಷ್ಟು ಸುಲಭವಾಗಿ ಯಾವ ಕಾರ್ಯವನ್ನೂ ನಿರ್ವಹಿಸಲಾಗದು.
ಮಕರ ರಾಶಿ: ನೀವು ಇಂದು ಪ್ರೇಮದ ವಿಚಾರದಲ್ಲಿ ಜಾಗರೂಕರಾಗಬೇಕು. ಅನಂತರ ದುಃಖಪಡಬೇಕಾಗುವುದು. ಎಲ್ಲರಿಂದ ದೂರವಾಗುವ ಆಲೋಚನೆ ಬೇಡ. ನಿಮ್ಮ ಗುಪ್ತ ವಿಚಾರಗಳನ್ನು ಯಾರಾದರೂ ಆಡಿಕೊಂಡಾರು. ಆರ್ಥಿಕ ಪರಿಸ್ಥಿತಿ ಬಲಗೊಳಿಸುವತ್ತ ನಿಮ್ಮ ಶ್ರಮವಿರುತ್ತದೆ. ಸ್ಪರ್ಧೆಯಲ್ಲಿ ಮಗುವಿನ ಯಶಸ್ಸಿನ ಸುದ್ದಿಯನ್ನು ಪಡೆಯುವುದು ಸಂತಸಗೊಳ್ಳುವಿರಿ. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಏರುಗತಿಯನ್ನು ಕಂಡು ಸಮಾಧಾನವಾಗಲಿದೆ. ನಕಾರಾತ್ಮಕ ವಿಚಾರಗಳ ಗಮನ ಕೊಟ್ಟು ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಉದ್ಯೋಗಿಗಳು ಕ್ಷೇತ್ರದಲ್ಲಿ ಬಡ್ತಿ ಸುದ್ದಿಗಳನ್ನು ಕೇಳಬಹುದು. ಆದ್ದರಿಂದ ವ್ಯಾಪಾರಿಗಳು ಸಹ ಲಾಭ ಪಡೆಯಬಹುದು.
ಕುಂಭ ರಾಶಿ: ಇಂದು ಕಾರ್ಯದಲ್ಲಿ ಆದ ಹಿನ್ನಡೆಯು ನಿಮ್ಮ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಬಹುದು. ಹೊಸ ವ್ಯವಹಾರವನ್ನು ಕುದುರಿಸಲು ನೀವು ಸಮರ್ಥರಾಗುವಿರಿ. ರಾಜಕೀಯದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ಸಾರ್ವಜನಿಕ ಸಂಪರ್ಕಕ್ಕೂ ಅನುಕೂಲವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅರ್ಹತೆಯನ್ನು ಹೆಚ್ಚಿಸುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಅತಿಯಾದ ಪ್ರಯಾಣವನ್ನು ನೀವು ನಿಲ್ಲಿಸುವುದು ಉತ್ತಮ. ಇಲ್ಲವಾದರೆ ಅದರ ಪರಿಣಾಮವನ್ನು ಅನುಭವಿಸಬೇಕಾಗುವುದು. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ನೆಮ್ಮದಿ ತರಲಿದೆ. ಆರೋಗ್ಯದ ಬಗ್ಗೆ ಚಿಂತೆ ಕಡಿಮೆಯಾಗಲಿದೆ. ಆಸ್ತಿಯ ವಿಚಾರದಲ್ಲಿ ಅಧಿಕ ಲಾಭ ಸಿಗಲಿದೆ. ಇಂದು ನಿಮಗೆ ಕೆಲವು ತೊಂದರೆಗಳಾಗುವ ಸಾಧ್ಯತೆಯಿದೆ.
ಮೀನ ರಾಶಿ: ಇಂದು ನಿಮ್ಮ ಮಂದಗತಿಯ ವ್ಯಾಪಾರದಲ್ಲಿ ವೇಗವಿರುವುದು. ಸಂಗಾತಿಯಿಂದ ಆದ ಬೇಸರವನ್ನು ಹೆಚ್ಚು ಕಾಲ ಉಳಿಸಿಕೊಳ್ಳುವುದು ಬೇಡ. ನಿಮ್ಮನ್ನು ಯಾವುದಾದರೂ ಶಕ್ತಿಯು ನಿಮ್ಮನ್ನು ನಿಯಂತ್ರಿಸಿದಂತೆ ಅನ್ನಿಸಬಹುದು. ಸಾಮಾಜಿಕ ಖ್ಯಾತಿಯನ್ನು ಶತ್ರು ಹಾನಿ ಮಾಡಬಹುದು. ಕುಟುಂಬ ಜೀವನವು ಒತ್ತಡವನ್ನುಂಟು ಮಾಡುತ್ತದೆ. ಆದರೆ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲಾಗುತ್ತದೆ. ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುವಿರಿ. ನೀವು ಯಾವುದೇ ನಿರ್ಧಾರಕ್ಕೆ ಕಟ್ಟುಬೀಳದೇ ಸ್ವತಂತ್ರವಾಗಿ ಇರಲು ಬಯಸುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ.
ಲೋಹಿತ ಹೆಬ್ಬಾರ್-8762924271 (what’s app only)