Horoscope: ಈ ರಾಶಿಯವರಿಗೆ ಇಂದು ಹಳೆಯ ನೋವುಗಳು ಹೆಚ್ವಾಗಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 07 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಏಪ್ರಿಲ್ 07) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:07 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03: 40 ರಿಂದ ಬೆಳಗ್ಗೆ 05:12ರ ವರೆಗೆ.
ಸಿಂಹ ರಾಶಿ : ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ. ನಿಮ್ಮ ಪ್ರಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ಬಂಧುಗಳ ಆಗಮನವು ಖುಷಿಯನ್ನು ಕೊಡಲಿದೆ. ಅವರೆದುರು ನಿಮ್ಮ ಪ್ರತಿಭೆಯ ಅನಾವರಣವಿಂದು. ಹಳೆಯ ನೋವುಗಳು ಇಂದು ಹೆಚ್ವಾಗಬಹುದು. ಸಂಗಾತಿಯ ಜೊತೆ ಮನಿಸು ಕಾಣಿಸಿಕೊಳ್ಳುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸು ಇಚ್ಛಿಸುವುದು. ಸಹೋದರನಿಂದ ಸಹಾಯ ಸಿಗಲಿದೆ. ವ್ಯಯಿಸುವ ಸಂಪತ್ತಿಗೆ ಕಡಿವಾಣ ಹಾಕಿಕೊಳ್ಳಿ. ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇಂದು ಹಠಾತ್ ಘಟನೆಯ ಬಗ್ಗೆ ಯಾವುದೇ ತಕ್ಷಣದ ನಿರ್ಧಾರ ತೆಗೆದುಕೊಳ್ಳುವುದನ್ನು ಬೇಡ. ನಿಮ್ಮ ಆರೋಗ್ಯ ಸಾಮಾನ್ಯವಾಗಿದ್ದರೂ ಸ್ವಲ್ಪ ಆಯಾಸವೂ ಇರಬಹುದು.
ಕನ್ಯಾ ರಾಶಿ : ಎಷ್ಟೇ ಎಚ್ಷರವಿದ್ದರೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಇಂದು ಹುಟ್ಟಿದ ನೈಜಪ್ರೇಮವೇ ಆಗಿರಬೇಕಿಂದಲ್ಲ. ಕಾಲಿನ ನೋವುಗಳು ಕಾಣಿಸಿಕೊಳ್ಳಬಹುದು. ಔಷಧೋಪಚಾರಗಳಿಂದ ಸರಿ ಮಾಡಿಕೊಳ್ಳಿ. ಅಪರೂಪದವರು ಬಂಧುಗಳಾಗುವರು. ಸಂತಾನವು ವಿಳಂಬವಾದೀತು. ಸಂತಾನನಾಶದ ದುಃಖವು ಬರಬಹುದು. ಕೇಳಿದ ವಿಚಾರವನ್ನೇ ಮತ್ತೆ ಮತ್ತೆ ಮಾನಸಿಕ ಕಿರಿಕಿರಿಯುಂಟಾಗಬಹುದು. ಮಾತನಾಡದೇ ಸುಮ್ಮನಿರುವುದು ಒಳ್ಳೆಯದು. ನಿಮ್ಮ ಸಂಪನ್ಮೂಲಗಳನ್ನು ಕಾಳಜಿಯಿಂದ ರಕ್ಷಿಸಿಕೊಳ್ಳಿ. ಆದಾಯದ ಸ್ವಲ್ಪ ಭಾಗವನ್ನು ಉಳಿಸಲು ಬೇಕಾದ ಚಿಂತನೆ ಇರಲಿದೆ. ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ನಿಮ್ಮ ಮಕ್ಕಳ ಜೀವನವನ್ನು ಸುಧಾರಿಸಲು ನೀವು ಪ್ರಯತ್ನಿಸುತ್ತೀರಿ. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನಿಮ್ಮ ಆಸೆಯೂ ಈಡೇರುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಜನರು ಮಾಡುವಂತೆ ಮಾಡುವಲ್ಲಿ ನೀವು ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗುತ್ತೀರಿ.
ತುಲಾ ರಾಶಿ : ನಿಮ್ಮ ಸಂಗಾತಿಯ ಮುಗ್ಧ ಪ್ರೀತಿಯು ಅರ್ಥವಾಗಿ ಪಶ್ಚಾತ್ತಪಪಡುವಿರಿ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಾಣುವುದು. ಮಕ್ಕಳೇ ಶತ್ರುಗಳಂತೆ ವರ್ತಿಸಿಯಾರು. ತಲೆನೋವು ಕಾಣಿಸಿಕೊಳ್ಳಬಹುದು. ಧರ್ಮಕಾರ್ಯಗಳಲ್ಲಿ ಅನಾಸಕ್ತಿಯೆದ್ದು ತೋರುವುದು. ನೀವಾಡುವ ಮಾತುಗಳನ್ನು ನಿಮ್ಮ ಸಹಾಯಕ್ಕೆ ಇದ್ದವರು ಕೇಳಬಹುದು. ಯಾರ ಮೇಲೂ ಅಸೂಯೆಪಡದೇ ನಿರ್ಮಲಮನಸ್ಸಿನಿಂದ ಇರುವಿರಿ. ಇಂದು ನಿಮ್ಮವರೆ ಮೇಲೆ ಅತಿಯಾದ ಅಕ್ಕರೆ ಇರುವುದು. ಶತ್ರುಗಳು ನಿಮ್ಮ ಹಿಂದೆ ಗಾಸಿಪ್ ಮಾಡಬಹುದು. ಇದು ನಿಮ್ಮ ಪ್ರಚಾರದ ಮೇಲೂ ಪರಿಣಾಮ ಬೀರಬಹುದು. ಅತಿಯಾದ ಕ್ರಮವನ್ನು ತೆಗೆದುಕೊಳ್ಳುವುದು ಬೇಡ. ನಿಮ್ಮ ವ್ಯವಹಾರದ ದೀರ್ಘಾವಧಿಯ ಯೋಜನೆಗಳಿಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ತಾಯಿವು ದೈಹಿಕ ನೋವನ್ನು ಅನುಭವಿಸಬಹುದು. ನಿಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ : ಇಂದು ಅಪ್ರಯೋಜಕ ವಿಷಯಗಳ ಕುರಿತು ಹೆಚ್ಚು ಚರ್ಚೆ ಮಾಡುವಿರಿ. ಅಕಾರಣ ಹಾಗೂ ಶೀಘ್ರ ಕೋಪಿಗಳಾಗುವಿರಿ. ಸತ್ಯವನ್ನು ಅರ್ಥಮಾಡಿಕೊಳ್ಳಲು ಮನಸ್ಸು ನಿಮ್ಮದಾಗಿರುವುದಿಲ್ಲ. ಯಾರನ್ನೂ ಅವಮಾನಿಸಲು ಹೋಗಬೇಡಿ. ಧರ್ಮಕರ್ಮಗಳಲ್ಲಿ ಭಾಗವಹಿಸಿ. ಮಾನಸಿಕ ನೆಮ್ಮದಿಯು ನಿಮ್ಮದಾದೀತು. ನೀವು ಹಿಂಜರಿಕೆಯಿಲ್ಲದೆ ಅಂದುಕೊಂಡ ಕಾರ್ಯದಲ್ಲಿ ಮುಂದುವರಿಯುವಿರಿ. ನಿಮ್ಮ ಬಗ್ಗೆ ನಡೆಯುತ್ತಿರುವ ಅಪಶ್ರುತಿ ಬಗೆಹರಿಯಲಿದೆ. ಕೆಲಸಗಳು ಪೂರ್ಣಗೊಳ್ಳಲು ನೀವು ದೀರ್ಘಕಾಲ ಕಾಯುತ್ತಿದ್ದರೆ, ಅದು ಸಂಭವಿಸಬಹುದು. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಇಂದು ನೀವು ಜನರನ್ನು ಆಕರ್ಷಿಸುವಿರಿ. ಜನರು ನಿಮ್ಮ ಆಲೋಚನಾ ವಿಧಾನವನ್ನು ಇಷ್ಟಪಡುತ್ತಾರೆ. ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಇಂದು ಕೆಲವು ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಪ್ರೀತಿಯ ಜೀವನಕ್ಕೆ ದಿನವು ಸಾಮಾನ್ಯವಾಗಿದೆ.




