Horoscope Today May 17, 2024: ಶುಕ್ರವಾರದ ನಿಮ್ಮ ದಿನ ಭವಿಷ್ಯ ತಿಳಿದುಕೊಳ್ಳಿ

| Updated By: ರಮೇಶ್ ಬಿ. ಜವಳಗೇರಾ

Updated on: May 16, 2024 | 5:50 PM

2024 ಮೇ 17ರ ದಿನ ಭವಿಷ್ಯ: ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today May 17, 2024: ಶುಕ್ರವಾರದ ನಿಮ್ಮ ದಿನ ಭವಿಷ್ಯ ತಿಳಿದುಕೊಳ್ಳಿ
ರಾಶಿ ಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಮೇ​​​​​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಧ್ರುವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ 15:41 ರಿಂದ 17:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42ರಿಂದ 09:17ರ ವರೆಗೆ.

ಮೇಷ ರಾಶಿ :ಅದೃಷ್ಟ ನಿಮ್ಮ ಕಡೆ ಇದೆ ಎಂಬುದು ಸತ್ಯದ ಮಾತಾದರೂ ಅಷ್ಟಕ್ಕೇ ಕೆಲಸಗಳು ಆಗದು. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಸವಾಲಿನ ಪರಿಸ್ಥಿತಿಗಳು ಬರಬಹುದು. ನೀವು ಅವುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಿದೆ. ನೀವು ಇಂದು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿಮ್ಮ ಕಠಿಣ ಪರಿಶ್ರಮ ಮೆಚ್ಚಗೆಯು ಸಿಗಲಿದೆ. ಚರ ಸ್ವತ್ತನ್ನು ನಿರ್ಲಕ್ಷಿಸುವುದು ಬೇಡ. ಸಮಯವನ್ನು ಸುಮ್ಮನೇ ವ್ಯರ್ಥ ಮಾಡುವಿರಿ. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಅಧಿಕಾರದ ಮಾತುಗಳಿಂದ ಕೆಲಸವಾಗದು.

ವೃಷಭ ರಾಶಿ :ಕುಟುಂಬವನ್ನು ಹೊಂದಾಣಿಕೆಯಿಂದ ನಡೆಸುವ ಜವಾಬ್ದಾರಿ ಇರುತ್ತದೆ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ನಿಮ್ಮ ಮಹಾಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಿಟ್ಟುಕೊಡಬೇಡಿ. ನೀವು ನಿಮ್ಮ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಬಯಸುವಿರಿ. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿದರೆ ನಿರ್ಧಾರಗಳನ್ನು ಸರಿಯಾಗಿರುತ್ತವೆ. ನಿಮ್ಮನ್ನು ನೀವು ಸರಿಮಾಡಿಕೊಳ್ಳುವ ಯೋಚನೆ ಬರಲಿದೆ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ.

ಮಿಥುನ ರಾಶಿ :ನಿಮ್ಮ ಜೀವನದಲ್ಲಿ ಕೆಲವರ ಬಗ್ಗೆ ತಪ್ಪು ತಿಳುವಳಿಕೆ ಬರುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಆಲೋಚನೆಗಳಿಂದ ತುಂಬಿದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗಬಹುದು. ಯಾವುದನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ ಕಾನೂನಾತ್ಮಕ ತೊಂದರೆಗಳನ್ನು ಪರಿಹರಿಸಿಕೊಳ್ಳಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು.

ಕರ್ಕಾಟಕ ರಾಶಿ :ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸದಿದ್ದರೆ ಅದು ಬೇರೆ ಸ್ವರೂಪವನ್ನು ಪಡೆಯುವುದು. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಇದು ಉಡುಗೊರೆಯೂ ಆಗಿರಬಹುದು. ಅಮೂಲ್ಯವಾದ ವಸ್ತುವೂ ಆಗಿರಬಹುದು. ಅದನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಸ್ವಲ್ಪ ಸವಾಲಾಗುವುದು. ನಿಮ್ಮ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸುವುದು ಉತ್ತಮ. ನೀವು ಬಹಳ ವಿಳಂಬನೀತಿಯವರಾಗಿ ಕಾಣಿಸುವಿರಿ. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು.‌

ಸಿಂಹ ರಾಶಿ :ಮಾನಸಿಕವಾಗಿ ನೀವು ಗುದ್ದಾಟ ಮಾಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಶ್ರಮ ಸಫಲವಾಗದು. ನಿಮ್ಮ ಹೊಸ ಪ್ರೇಮಪ್ರಕರಣವು ಪ್ರಾರಂಭವಾಗಬಹುದು. ಪ್ರೀತಿಪಾತ್ರರೊಂದಿಗೆ ಉದ್ವಿಗ್ನತೆಗೆ ಒಳಗಾಗಿ ಮತನಾಡಬೇಡಿ. ಕೈ ಮೀರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿ. ಸಹೋದ್ಯೋಗಿಗಳೊಂದಿಗೆ ನೀವು ವಿವಾದವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸುವರು ಪ್ರಶಂಸೆಯೂ ಸಿಗಲಿದೆ. ಶತ್ರುಗಳು ನಿಮ್ಮನ್ನು ಗೆಲ್ಲಲು ಪ್ರಯತ್ನಿಸಬಹುದು.‌ ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ನಂಬಿಕೆ ಕಡಿಮೆಯಾಗುವುದು. ನಿಮಗೆ ಸಿಕ್ಕ ಅನಾದರದಿಂದ ಬೇಸರವಾಗಬಹುದು. ಮಕ್ಕಳ ಉದ್ಯಮಕ್ಕೆ ನೀವು ಸಹಾಯ ಮಾಡುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವು ಆಗಬಹುದು.

ಕನ್ಯಾ ರಾಶಿ :ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸಿಗೆ ನೀವು ಹೊಸ ಆಲೋಚನೆಗಳೊಂದಿಗೆ ಮುಂದುವರಿಯಬೇಕು. ಈ ವಿಷಯದಲ್ಲಿ, ಹಿರಿಯ ಅಧಿಕಾರಿಗಳ ಸಲಹೆಯು ನಿಮಗೆ ಪ್ರಯೋಜನಕಾರಿಯಾಗಿದೆ. ನಿಮಗೆ ಬರುವ ಅಲ್ಪ ಹಣ ಮಾತ್ರ ನಿಮ್ಮ ಕೈ ಸೇರುವುದು. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಕೆಲವು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ‌. ಇಂದು ನಿಮಗೆ ಇಷ್ಟವಾದವರ ಜೊತೆ ಕುಳಿತು ಹರಟೆ ಹೊಡೆಯುವಿರಿ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ವಾಹನವನ್ನು ಖರೀದಿಸಲು ನೀವು ಸಮಯದ ನಿರೀಕ್ಷೆಯಲ್ಲಿ ಇರುವಿರಿ.

ತುಲಾ ರಾಶಿ :ನಿಮ್ಮ ಇಂದಿನ ಸಾಂಸಾರಿಕ ಜೀವನ ಉತ್ತಮವಾಗಿರುತ್ತದೆ. ಸಣ್ಣಪುಟ್ಟ ಕಲಹಗಳಿದ್ದರೂ ಮನೆಯಲ್ಲಿ ಸುಖ, ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಕುಟುಂಬದಲ್ಲಿ ಪ್ರೀತಿಯ ಭಾವನೆ ಇರುತ್ತದೆ. ಈ ವಾರ ನೀವು ಹೊಸ ಮನೆ ನಿರ್ಮಾಣದ ಬಗ್ಗೆ ಯೋಚಿಸಬಹುದು. ಕೆಲವು ಒಳ್ಳೆಯ ಸುದ್ದಿಗಳು ಮನೆಯ ಸಂತೋಷಕ್ಕೆ ಬೆಳಕನ್ನು ತರುತ್ತವೆ. ಹೆಚ್ಚು ಖರ್ಚು ಮಾಡಿ ವಸ್ತುಗಳನ್ನು ಖರೀದಿಸುವಿರಿ. ಪೂರ್ವಜರ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆಗಳು ಹೆಚ್ಚಿರುವುದು. ಪ್ರೀತಿಯ ಜೀವನವು ಮಿಶ್ರವಾಗಿರಬಹುದು. ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವೂ ಇದೆ.

ವೃಶ್ಚಿಕ ರಾಶಿ :ನಿಮ್ಮ ಪ್ರೀತಿಪಾತ್ರರು ಯಾವಾಗಲೂ ಸಹಾಯ ಮಾಡಲು ಸಿದ್ಧರಾಗಿರುವರರು. ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತ್ವದಿಂದ ಇರಬೇಕಾಗುತ್ತದೆ. ನಕಾರಾತ್ಮಕ ಸಂದರ್ಭವನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಿ. ಇಲ್ಲವೇ ಆ ಕ್ರಮದಲ್ಲಿ ಯೋಚಿಸಿ. ಪೂರ್ವ ಮಾಡಿದ ಎಲ್ಲಾ ಶ್ರಮದ ಫಲವನ್ನು ನೀವು ಪಡೆಯಲಿದ್ದೀರಿ. ಇದು ತಾಳ್ಮೆಯಿಂದಿರಬೇಕಾದ ಸಮಯವಾಗಿದೆ. ನೀವು ಸಾಮಾಜಿಕ ವಿವಾದದಲ್ಲಿ ಸಿಲುಕಿಕೊಳ್ಳಬಹುದು. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಹೊಸ ಉದ್ಯೋಗವು ನಿಮಗೆ ಉತ್ತಮ ಅವಕಾಶಗಳನ್ನು ತರುತ್ತದೆ. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಂಗಲ ಕಾರ್ಯಕ್ಕೆ ಸಾಲವನ್ನು ಮಾಡಬೇಕಾಗುವುದು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು.

ಧನು ರಾಶಿ :ನಿಮಗೆ ಯಾವುದಾದರೂ ಒಂದು ರೀತಿಯಲ್ಲಿ ಭಯದ ವಾತಾವರಣ ಇರುವುದು. ನಿಮ್ಮ ಕೆಲಸವನ್ನು ಬದಿಗಿರಿಸಿ ನಿಮಗೆ ಸಿಕ್ಕ ಯಶಸ್ಸನ್ನು ಅನುಭವಿಸಿ. ಹಣದ ವಿಷಯದಲ್ಲಿ ಏರಿಳಿತಗಳು ಆಗಬಹುದು. ನಿಮ್ಮ ಮತ್ತು ಪ್ರೇಮಿಯ ನಡುವೆ ಇಗೋ ಉಂಟಾಗಿ ಘರ್ಷಣೆಯಾಗಲಿದೆ. ನಿಮ್ಮ ಹೆತ್ತವರ ಆಲೋಚನೆಗಳು ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಯಾವುದೇ ಹೊಸ ಹೆಜ್ಜೆಯನ್ನು ಇಡುವಾಗಲೂ ಆಲೋಚನೆ ದೃಢವಾಗಿರಲಿ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರಪಂಚದಿಂದ ಮರೆ ಮಾಡುವ ಅಗತ್ಯವಿಲ್ಲ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು.‌ ಆಕಸ್ಮಿಕವಗಿ ಉದ್ಯೋಗವು ನಿಮಗೆ ಸಿಗಲಿದೆ.

ಮಕರ ರಾಶಿ :ನೀವು ನಿಮ್ಮ ಆಸ್ತಿಯನ್ನು ಮಾರಾಟ ಮಾಡುವ ಯೋಚನೆಯಲ್ಲಿ ಇರುವಿರಿ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಲಾಭವಾದೀತು. ನಿಮ್ಮ ವರದತೆಯಿಂದ ನಿಮ್ಮ ಸ್ನೇಹಿತರು ಬೇಸರಗೊಂಡಾರು. ಶರೀರಕ್ಕೆ ಅತಿಯಾಗಿ ಆಯಾಸವಾಗುವ ಕೆಲಸಗಳನ್ನು ಮಾಡಬೇಡಿ, ಅಶಕ್ತತೆಯು ಉಂಟಾಗಬಹುದು. ಕಛೇರಿಯಲ್ಲಿ ಕೆಲಸವು ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ‌. ಹೊಸ ಪ್ರೇಮವು ಅಂಕುರಿಸು ಸಾಧ್ಯತೆ. ಪ್ರೇಮಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ‌ ಕೊರತೆ ಆಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು.

ಕುಂಭ ರಾಶಿ :ಇಂದು ನಿಮ್ಮ ಮನಸ್ಸು ಬಹಳ ಚಂಚಲವಾಗಿರಲಿದೆ. ಅನಗತ್ಯ ಖರ್ಚುಗಳು ಆಗಬಹುದಾಗಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ನಿಮ್ಮ ರಹಸ್ಯವು ಇಂದು ಬಯಲಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಕಲಹವಿದ್ದರೂ ದಿನಾಂತ್ಯದಲ್ಲಿ ಎಲ್ಲವೂ ಮರೆಯಾಗಿ ಸುಂದರವಾಗಿರಲಿದೆ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ದೂರದ ಪ್ರಯಾಣವು ಸುಖದಾಯಕವಲ್ಲ. ನಿಮ್ಮ‌ ಇಷ್ಟದ ವಸ್ತುಗಳು ಕಣ್ಮರೆಯಾಗಬಹುದು. ಅಗತ್ಯದ ಕಾರ್ಯವನ್ನು ಇತರರ ಸಹಾಯವನ್ನು ಪಡೆದು ಮುಗಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಸಂಗಾತಿಯ ಜೊತೆ ಕುಳಿತು ದುಃಖದಿಂದ ಸಮಾಧಾನ ಮಾಡುವಿರಿ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದಲೂ ದೂರವಿರಬೇಕು.

ಮೀನ ರಾಶಿ :ಇಂದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೊತ್ಸಾಹ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ಅದೃಷ್ಟವು ಜೊತೆಗಿರಲಿದೆ. ನೀವಿಂದು ಅಲ್ಪ ಪ್ರಯತ್ನದಿಂದ ಕೆಲಸವನ್ನು ಸಾಧಿಸಿಕೊಳ್ಳಬಹುದು. ಇಂದು ಬಂದಿರುವ ಕೆಲಸಗಳನ್ನು ಒಂದೊಂದಾಗಿಯೇ ಮುಗಿಸುತ್ತ ಬನ್ನಿ. ಒತ್ತಡದ ಕೆಲಸಗಳನ್ನು ನಿರ್ವಹಿಸಬೇಕಾಗಬಹುದು. ಮೆಚ್ಚುಗೆಯು ನಿಮ್ಮ ಕೆಲಸಕ್ಕೆ ಪ್ರಾಪ್ತವಾಗುವುದು. ಮೇಲಧಿಕಾರಿಗಳಿಂದ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ. ಉದ್ವಿಗ್ನತೆಗೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ.

-ಲೋಹಿತ ಹೆಬ್ಬಾರ್-8762924271 (what’s app only)