ದಿನ ಭವಿಷ್ಯ: ಇಂದು ಈ ರಾಶಿಯವರ ಹಣದ ಅಹಂಕಾರ ಇಳಿಯುವುದು
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಶನಿವಾರದಂದು ಯಂತ್ರದ ಜೊತೆ ಕೆಲಸ, ಹಿರಿಯರ ಆಶೀರ್ವಾದ, ಹಸಿರು ನಿಶಾನೆ, ಕಣ್ಣಿನ ತೊಂದರೆ, ಆಡಳಿತದಲ್ಲಿ ಹಿನ್ನಡೆ, ದೃಷ್ಟಿ ಬದಲಾವಣೆ, ಆಸ್ತಿ ಮಾರಾಟ, ರಾಜಿನಾಮೆ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶುಭ, ಕರಣ : ಬವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 21 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:13 – 10:44, ಯಮಗಂಡ ಕಾಲ 13:47 – 15:19, ಗುಳಿಕ ಕಾಲ 06:10 – 07:41
ಮೇಷ ರಾಶಿ: ನಿಮ್ಮ ವೇಗದ ಮಾತು ಇತರರಿಗೆ ಅರ್ಥವಾಗದೇ ಇರಬಹುದು. ವಿದ್ಯಾರ್ಥಿಗಳಿಗೆ ಆಭ್ಯಾಸಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾದೀತು. ಪೂರಕ ವಾತಾವರಣ ಕೊರತೆ ಕಾಣುವುದು. ಹೂಡಿಕೆಯನ್ನು ಇನ್ನೊಬ್ಬರ ಒತ್ತಾಯಕ್ಕೆ ಮಾಡುವಿರಿ. ಆಡಳಿತಾತ್ಮಕ ವಿಚಾರಕ್ಕೆ ನೀವು ಪೂರ್ಣವಾಗಿ ಒಗ್ಗಲಾರಿರಿ. ಪೂರ್ಣಮಾಹಿತಿಯ ಕೊರತೆಯನ್ನು ಇಟ್ಟುಕೊಂಡು ನೀವು ಕೆಲಸವನ್ನು ಮಾಡಬೇಕಾದೀತು. ಪದೋನ್ನತಿಗೆ ಗರ್ವ ಬೇಡ.
ವೃಷಭ ರಾಶಿ: ಒತ್ತಡ ಮಾಡಿಕೊಂಡು ಕಾರ್ಯವನ್ನು ಮಾಡುವುದು ಬೇಡ. ನೀವು ಕೆಲಸವನ್ನು ಕಳೆದುಕೊಂಡಿರುವುದು ದಾಯಾದಿಗಳಿಗೆ ಸಂತೋಷದ ಸಮಾಚಾರವಾಗಲಿದೆ. ಸಣ್ಣ ಸಣ್ಣ ಖರ್ಚುಗಳೇ ಕಷ್ಟವಾದೀತು. ಅಧಿಕ ಖರ್ಚಿನ್ನು ಇಂದು ಮಾಡಬೇಕಾಗಿಬರಬಹುದು. ಆರೋಗ್ಯದ ಸುದೃಢತೆಗೆ ಒಂದೊಂದೇ ಹಂತ ಏರುವುದು. ಸಿಕ್ಕಿದ್ದನ್ನು ಜೋಪಾನ ಮಾಡಿಕೊಳ್ಳಿ. ಕಲಾವಿದರಿಗೆ ಶಿಷ್ಯ ಬಳಗೆ ಹೆಚ್ಚಾಗುವುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಲೂಬಹುದು.
ಮಿಥುನ ರಾಶಿ: ಮನಸ್ಸು ಯಾವುದೋ ಕಾರಣಕ್ಕೆ ಭಾರವಾಗಬಹುದು. ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಕೋಪವು ನಿಮ್ಮ ಸಹಜತೆಯಾದರೂ ಅದರಿಂದ ಹೊರಬರುವ ತಂತ್ರವನ್ನು ತಿಳಿದುಕೊಳ್ಳಬೇಕು. ಸರಿಯಾದ ಸಂವಹನದ ಕೊರತೆಯಿಂದ ವ್ಯವಸ್ಥೆ ಹಾಳಾಗುವುದು. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಕೆಲಸವನ್ನು ಏಕಾಗ್ರತೆಯಿಂದ ಮಾಡುವಿರಿ. ನಿಮ್ಮದೇ ಆದ ಮಿತ್ರರ ವೃಂದವನ್ನು ಕಟ್ಟಿಕೊಳ್ಳುವಿರಿ.
ಕರ್ಕಾಟಕ ರಾಶಿ: ಅಪಾಯದ ಅನಂತರ ದುಃಖಿಸಿ ಪ್ರಯೋಜನವಾಗದು. ಏನನ್ನೂ ಮಾಡದೇ ಕರ್ತವ್ಯ ದೃಷ್ಟಿಯಿಂದ ಮಾಡಿದಾಗ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಅವಶ್ಯಕತೆ ಇಲ್ಲ. ಉತ್ತಮ ಭೂಮಿಯ ಲಾಭವಾಗಲಿದೆ. ಕೋಪದ ನಿಯಂತ್ರಣವನ್ನು ಮಾಡಲು ಕಷ್ಟವಾದೀತು. ಸಂಸಾರದಲ್ಲಿ ನಿರಾಸಕ್ತಿಯು ಇರಲಿದೆ. ನಿಮ್ಮ ಸಣ್ಣತನವೇ ದೊಡ್ಡ ಲಾಭಕ್ಕೆ ತೊಂದರೆಯಾಗುವುದು. ಕ್ಷಮೆಯನ್ನು ಕೇಳಿದರೆ ನಿರಾಕರಿಸುವುದು ಬೇಡ.
ಸಿಂಹ ರಾಶಿ: ಕಾರ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಅಸಾಧ್ಯವನ್ನು ಸಾಧಿಸುವ ಛಲವಿರಲಿದೆ. ಉದ್ಯಮದಲ್ಲಿ ಹಿನ್ನಡೆಯಾಗುವ ಸಂಭವವು ನಿಮಗೆ ಮೊದಲೇ ಗೊತ್ತಾಗಲಿದೆ. ಎಷ್ಟೇ ಪ್ರಯತ್ನಿಸಿದರೂ ಹಳೆಯ ನೆನಪುಗಳಿಗೆ ಕಡಿವಾಣ ಹಾಕಲಾಗದು. ಪಾಲುದಾರಿಕೆಯಲ್ಲಿ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಮಕ್ಕಳಿಂದ ಸೋಲನ್ನು ಒಪ್ಪಿಕೊಳ್ಳುವುದೇ ಸೂಕ್ತ. ಸಭ್ಯತೆಯನ್ನು ಇಟ್ಟುಕೊಂಡು ಇಂದಿನ ವ್ಯವಹಾರವನ್ನು ಮಾಡಿರಿ. ನೀವು ನಿಮ್ಮ ಸ್ಥಾನಕ್ಕಾಗಿ ಇನ್ನೊಬ್ಬರನ್ನು ದೂಷಿಸುವಿರಿ.
ಕನ್ಯಾ ರಾಶಿ: ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ಹಣದ ಹರಿವು ಇಂದು ಸ್ವಲ್ಪ ಕಡಿಮೆಯಾಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ನಿಮ್ಮ ಕಳವಳವು ಮಿತ್ರರಿಗೆ ಗೊತ್ತಾಗುವುದು. ಕಲಾವಿದರು ದೂರಪ್ರಯಾಣವನ್ನು ಮಾಡುವಿರಿ. ನಿದ್ರೆಯು ಕಡಿಮೆಯಾಗಿ ಕೆಲಸದಲ್ಲಿ ಉತ್ಸಾಹ ಕಡಿಮೆ ಇರಲಿದೆ. ಉದ್ಯೋಗದಲ್ಲಿ ನಿಶ್ಚಲತೆ ಕಾಣಿಸದು. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು.
ತುಲಾ ರಾಶಿ: ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಹೊಸ ಸಂಬಂಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಮಾತುಗಳಲ್ಲಿ ಇರುವ ಕೋಪವು ನಿಮಗೆ ಕಾಣಿಸುವುದು. ವಾಹನದ ದುರಸ್ತಿಯಿಂದ ಖರ್ಚಾಗಲಿದೆ. ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಲಿದೆ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ. ಸಮಯ ಇಂದು ಬೇಗನೆ ಕಳೆದಂತೆ ಅನ್ನಿಸಬಹುದು.
ವೃಶ್ಚಿಕ ರಾಶಿ: ನಿಮ್ಮ ಕಠಿಣ ಪರಿಶ್ರಮವು ಕೆಲಸಕ್ಕೆ ಬಾರದು. ಯುಕ್ತಿಯಿಂದ ನಿರ್ವಹಿಸುವ ಚಾಣಾಕ್ಷತೆ ಬೇಕು. ಸರ್ಕಾರದಿಂದ ಸೌಲಭ್ಯವನ್ನು ನೀವು ನಿರೀಕ್ಷಿಸುತ್ತಿರುವಿರಿ. ಯಶಸ್ಸನ್ನು ಒಡೆಯುವ ಹಂಬಲವು ಅಧಿಕವಾಗುವುದು. ನೌಕರರಿಂದ ಕೆಲಸವಾಗುತ್ತಿಲ್ಲ ಎಂಬ ಬೇಸರ ಬರುವುದು. ಅವಶ್ಯಕತೆಗೆ ಅನುಸಾರವಾಗಿ ಮುಂದುವರಿಯಿರಿ. ಸಮಯವನ್ನು ವ್ಯರ್ಥ ಮಾಡದೇ ಅಧಿಕಸಂಪಾದನೆಯನ್ನು ಮಾಡುವಿರಿ. ಮನೆಯಲ್ಲಿ ಒಂಟಿಯಾಗಿದ್ದು ನಿಮಗೆ ಭಯವು ಉಂಟಾಗಬಹುದು. ಕೆಲಸದಲ್ಲಿ ಆಸಕ್ತಿಯ ಕೊರತೆ ಕಾಣಿಸುವುದು.
ಧನು ರಾಶಿ: ನಿಮ್ಮ ಮನೆಯ ದುರಸ್ತಿಯ ಕಡೆ ಯೋಚಿಸುಬಿರಿ. ಸಂಗಾತಿಯನ್ನು ನೀವು ಅವಮಾನಸಲಿದ್ದೀರಿ. ಇದರಿಂದ ನಿಮಗೆ ಮುಂದೆ ತೊಂದರೆಯಾಗಬಹುದು. ಅತಿಥಿ ಸತ್ಕಾರವು ನಿಮಗೆ ಸಂತೋಷ ಕೊಡುವುದು. ಆರ್ಥಿಕಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಕುಟುಂಬದಲ್ಲಿ ಐಕಮತ್ಯವಿರಲಿ. ಭೂಮಿಯನ್ನು ವಶ ಮಾಡಿಕೊಳ್ಳಲು ಪ್ರಭಾವಿಗಳ ಸಂಗವನ್ನು ಮಾಡಬೇಕಾದೀತು. ಭೂಮಿಯ ಪ್ರಕರಣವು ನಿಮ್ಮನ್ನು ಚಿಂತೆಗೀಡುಮಾಡೀತು.
ಮಕರ ರಾಶಿ: ನಿಮ್ಮ ಪ್ರಮುಖ ದಾಖಲೆಗಳನ್ನು ಯಾರಿಗೂ ಹಸ್ತಾಂತರಿಸುವುದು ಬೇಡ. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಲಿದೆ. ಸಮಾಜಮುಖೀ ಕೆಲಸದಿಂದ ನಿಮಗೆ ಗೌರವವು ಸಿಗಲಿದೆ. ಮಕ್ಕಳ ಯಶಸ್ಸಿನಿಂದ ಪೋಷಕರಿಗೆ ಸಂತಸವಾಗಲಿದೆ. ವಾಹನ ಚಲಿಸುವಾಗ ಜಾಗರೂಕತೆ ಮುಖ್ಯವಾಗಲಿದೆ. ಶತ್ರುಗಳು ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಇರುವರು. ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡಿ. ಕೆಲವು ಉದ್ಯಮದ ರಿಸ್ಕ್ ನ್ನು ತೆಗೆದುಕೊಳ್ಳಬೇಕಾಗುವುದು.
ಕುಂಭ ರಾಶಿ: ಇಂದು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಕಾರ್ಯತತ್ಪರರಾಗುವಿರಿ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ವಿವಾಹದ ಮಾತುಕತೆಗಳು ಬಿರುಸಿನಿಂದ ನಡೆಯಲಿದೆ. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಪತ್ನಿಯ ಬಗ್ಗೆ ನಿಮಗೆ ಗೌರವವು ಕಡಿಮೆ ಆಗಬಹುದು. ಕೋಪಕ್ಕೆ ಕಾರಣವನ್ನು ನೀವು ವ್ಯಕ್ತಿಪಡಿಸಲು ಇಚ್ಛಿಸುವುದಿಲ್ಲ. ಸಂಪತ್ತಾಗಿ ಅನ್ಯ ವೃತ್ತಿಯನ್ನು ಆಶ್ರಯಿಸಬೇಕಾದೀತು. ಹೂಡಿಕೆಯನ್ನು ಅಲ್ಪ ಮೊತ್ತದಲ್ಲಿ ಮಾಡಿ.
ಮೀನ ರಾಶಿ: ಸರ್ಕಾರದ ಕೆಲಸವಾಗದೇ ಅಧಿಕ ಓಡಾಟವಾದೀತು. ಆರ್ಥಿಕ ನೆರವನ್ನು ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ನಿಮ್ಮ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ವೈವಾಹಿಕ ಜೀವನವು ಹಿರಿಯರ ಮಾರ್ಗದರ್ಶನದಲ್ಲಿ ಆಗುವುದು. ಮಕ್ಕಳಿಗೆ ಸಂಪತ್ತನ್ನು ಹಂಚುವ ಯೋಚನೆ ಇರಲಿದೆ. ನಾಯಕರ ಆಯ್ಕೆಯ ಪ್ರಕ್ರಿಯೆಯು ಗುಟ್ಟಾಗಿ ನಡೆಯುವುದು. ನೀವು ಯಾವುದನ್ನೂ ಪರೀಕ್ಷಿಸದೇ ಒಪ್ಪಿಕೊಳ್ಳುವುದು ಬೇಡ. ಶಿಸ್ತಿಗೆ ಹೆಚ್ಚು ಒತ್ತನ್ನು ಇಂದು ಕೊಡುವಿರಿ.
ಲೋಹಿತ್ ಹೆಬ್ಬಾರ್ – 8762924271 (what’s app only)




