Horoscope Today july 01, 2024: ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ತಪ್ಪುಗಳಿಂದ ಪಶ್ಚಾತ್ತಾಪ

2024 ಜುಲೈ 01 ದಿನ ಭವಿಷ್ಯ: ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today july 01, 2024: ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ತಪ್ಪುಗಳಿಂದ ಪಶ್ಚಾತ್ತಾಪ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 30, 2024 | 9:06 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಜುಲೈ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 07:46 ರಿಂದ ರಾತ್ರಿ 09:23ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ 12:37ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ.

ಮೇಷ ರಾಶಿ: ಇಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ಉಪಯೋಗಕ್ಕೆ ಬಾರದ ಕೆಲಸವನ್ನು ಬಿಟ್ಟುಬಿಡುವುದು ಒಳ್ಳೆಯದು. ಮಂಗಲಕರವಾದ ಕಾರ್ಯಗಳನ್ನು ಮಾಡಲಿದ್ದೀರಿ. ಮನೆಯಲ್ಲಿಯೇ ಇರುವ ನಿಮಗೆ ಮನೆಯವರ ಮಾತುಗಳು ಕಿರಿಕಿರಿ‌ ಎನಿಸಬಹುದು. ನಿಮ್ಮ ಮಾತು ಜೊತೆಗಾರರಿಗೆ ಮನನೋಯುವಂತೆ ಇರಲಿದೆ. ನೀವು ಇಂದು ನಡೆದಾಡಲೂ ಇಷ್ಟಪಡುವುದಿಲ್ಲ. ಒಂದು ಸಂದರ್ಭದಂತೆ ಮತ್ತೊಂದು ಸಂದರ್ಭವನ್ನು ಊಹಿಸಿಕೊಳ್ಳಬೇಡಿ. ನಿಮ್ಮ ವೇಗವನ್ನು ಹಿಮ್ಮೆಟ್ಟಿಸಲು ನಾನಾ ತಂತ್ರಗಳು ನಡೆಯಬಹುದು. ನಿಮ್ಮ ಕೆಲಸವೇ ಅವರಿಗೆ ಉತ್ತರವಾಗಲಿ. ಮಾತು ಆದಷ್ಟು ಕಡಿಮೆ ಇರುವುದೇ ಒಳ್ಳೆಯದು. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ‌ ಮಾಡಿಸಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಅಂತಃಕರಣದ ಒಪ್ಪಿಗೆಯಿಂದ ಕಾರ್ಯವನ್ನು ಮಾಡುವಿರಿ.

ವೃಷಭ ರಾಶಿ: ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗದು. ನಿಮ್ಮ‌ ಸಂತೋಷಕ್ಕೆ ಕಾರಣದ ಅವಶ್ಯಕತೆ ಇಲ್ಲ. ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ದಾಂಪತ್ಯವು ಸುಖವಾಗಿರಲು ಇಬ್ಬರೂ ಪ್ರಯತ್ನಿಸಬೇಕು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಜನರು ಬಹಳ ಪ್ರಯತ್ನಿಸಬಹುದು. ನಿಮ್ಮ ನಡೆಯು ಸುಲಭಕ್ಕೆ ತಿಳಿಯದು. ಐಷಾರಾಮಿಯಾಗಿ ಇರಲು ಈ ದಿನವನ್ನು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಧನಾಗಮನದಿಂದ ಸಂತೋಷ ಸಿಗಲಿದೆ. ಆರ್ಥಿಕತೆಯಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಸ್ನೇಹಿತರಿಗೆ ಸಹಾಯವನ್ನು ಮಾಡುವಿರಿ. ಕಾರ್ಯವು ನಿಧಾನವಾಗಿದೆ ಎಂದು ಕಂಡರೂ ಚಿಂತೆ ಬೇಡ.‌ ಪೂರ್ಣವಾಗಲಿ ಸರಿಯಾಗಿ. ನಿಮ್ಮ ಬಳಿ ಯಾರೂ ವಾದ‌ಮಾಡಬಾರದು ಎನ್ನವ ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಇನ್ನೊಬ್ಬರನ್ನು ಕೆರಳಿಸುವ ಸ್ವಭಾವವನ್ನು ಬಿಡುವುದು ಉತ್ತಮ.

ಮಿಥುನ ರಾಶಿ: ಮೇಲಧಿಕಾರಿಗಳು ತೋರಿಸುವ ಪಕ್ಷಪಾತದ ಧೋರಣೆಯು ನೀವು ಸಹಿಸಲಾರಿರಿ. ನಿಮಗೆ ಬೇಕಾದ ಸಲಹೆ ಸಹಕಾರಗಳು ಸಿಗಲಿವೆ. ಬಂಧುಗಳ ಮಾತು ಕಹಿ ಎನಿಸಬಹುದು. ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ಅಸಂಬದ್ಧ ಮಾತುಗಳನ್ನು ಕೇಳಿ ನಿಮಗೆ ಬೇಸರವಾದೀತು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸುವಿರಿ. ದುಷ್ಟ ಶಕ್ತಿಯಿಂದ ತೊಂದರೆಯಾಗುವ ಅನುಮಾನ ಕಾಡವುದು. ವಾಹನದಿಂದ ಆಗುವ ಅಪಘಾತವು ಸಣ್ಣ ಅಂತರದಿಂದ ರಕ್ಷಣೆಯಾಗುವಿರಿ. ಸ್ನೇಹಿತರ ಅಥವಾ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಸಂಗಾತಿಯನ್ನು ತಿದ್ದುವ ಮೂರ್ಖತನ ಬೇಡ. ಆರ್ಥಿಕವಾಗಿ ದುರ್ಬಲವಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಹಣವಂತೂ ಸಿಗದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.

ಕಟಕ ರಾಶಿ: ಎಲ್ಲ ಸಂದರ್ಭವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಕಷ್ಟವೇ ಆದೀತು. ಹಳೆಯ ಸಿಟ್ಟನ್ನು ನೆನಪಿಸಿಕೊಂಡು ದ್ವೇಷವನ್ನು ಸಾಧಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಹಳೆಯ ವಾಹನವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಉದ್ಯೋಗದ ನಿಮಿತ್ತ ನೀವು ಹೊರದೇಶಕ್ಕೆ ಹೋಗಬಹುದು. ಅನೇಕ ವರ್ಷಗಳ ಅನಂತರ ಆದ ಸಂತಾನದಿಂದ ಸಂತಸ ಆಗಲಿದೆ. ವಿವಾಹ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಹಳೆಯ ಸ್ನೇಹಿತರು ಸಿಕ್ಕಿ ಹಳೆಯ ವಿಚಾರಗಳನ್ನು ಸ್ಮರಿಸಿಕೊಳ್ಳುವಿರಿ. ಸ್ವಂತ ಉದ್ಯೋಗವಿದ್ದರೆ ಹೆಚ್ಚು ಶ್ರಮ ಆದೀತು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಕಾನೂನಾತ್ಮಕ ವಿಚಾರವು ನಿಮಗೆ ಅರ್ಥವಾಗದಿರಬಹುದು.

ಸಿಂಹ ರಾಶಿ: ಇಂದು ಮನೆಯ ನಿರ್ಮಾಣದ ಕಾರ್ಯಕ್ಕೆ ನಿಮ್ಮವರಿಂದ ತೊಂದರೆ ಬರಬಹುದು. ಯಾರಾದರೂ ನಿಮ್ಮ ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸದೇ ತೊಂದರೆಗಳನ್ನು ಕೊಡಬಹುದು. ತಾಯಿಯ ಸೇವೆಯನ್ನು ಮಾಡುವಿರಿ. ಸರ್ಕಾರಿ ಉದ್ಯೋಗದವರಿಗೆ ಕಛೇರಿಯಲ್ಲಿ ಕಿರಿಕಿರಿಯಾಗಬಹುದು. ಬಂಧುಗಳ ಮಾತಿನಿಂದ ಬೇಸರವಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ನಿಮ್ಮ ಮಕ್ಕಳು ನಿಮಗೇ ತಿರುಗಿ ಉತ್ತರ ನೀಡುವರು. ಒಳಿತು ಎರಡೂ ಕಡೆಯಲ್ಲಿದ್ದರೆ ಚೆಂದ. ಊಹೆಗೂ ಮೀರಿದ ಧನಲಾಭವು ಆಗಬಹುದು. ಇನ್ನೊಬ್ಬರ ಬಗ್ಗೆ ಚಿಂತಿಸುವ ಬದಲು ನಿಮ್ಮ ಬಗ್ಗಯೇ ಆಲೋಚಿಸಿ. ಒಂದಿಷ್ಟು ಬದಲಾವಣೆಗಳು ಆಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ವಿವಾಹದ ಬಗ್ಗೆ ಎಲ್ಲರೂ ನಿಮ್ಮನ್ನು ಪ್ರಶ್ನಿಸುವರು. ಮುಜುಗರಕ್ಕೆ ಸಿಕ್ಕಿಕೊಳ್ಳಬೇಕಾದೀತು.

ಕನ್ಯಾ ರಾಶಿ: ಇಂದು ನಿಮಗೆ ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ‌. ಸಂಗಾತಿಯಿಂದ ಅಪಮಾನವೂ ಆಗಬಹುದು. ಆಸ್ತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಆಗದ ಕೆಲಸಕ್ಕೆ ಸುಮ್ಮನೇ ಕೈ ಹಾಕಬೇಡಿ. ಅಧಿಕಾರಿಗಳಿಂದ ಏನಾದರೂ ತೊಂದರೆಯಾದೀತು. ಲೆಕ್ಕಪತ್ರದ ವಿಚಾರದಲ್ಲಿ ಸರಿಯಾಗಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕಾದೀತು. ಬಂಧುಗಳಿಂದ ದೂರವಿರುವ ಮನಸ್ಸು ಮಾಡುವಿರಿ. ಹಣಕಾಸಿನ ತೊಂದರೆಯಿಂದ ಕೆಲವು ಕೆಲಸಗಳನ್ನು ಮುಂದೂಡುವಿರಿ. ಖರೀದಿಯ ವಿಚಾರದಲ್ಲಿಯೂ ಹಿಂಜರಿಯುವಿರಿ. ನೇರವಾದ ಮಾತುಗಳು ನಿಮಗೆ ಒಪ್ಪಿಗೆ ಆಗದೇಹೋಗಬಹುದು. ಅಧಿಕ ಲಾಭಕ್ಕೆ ಯೋಜನೆಯನ್ನು ರೂಪಿಸುವುದು ಒಳ್ಳೆಯದು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಕೋಪದಿಂದ ಎಲ್ಲವನ್ನೂ ಸಾಧಿಸಲಾಗದು.

ತುಲಾ ರಾಶಿ: ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಸಿಟ್ಟೇ ನಿಮ್ಮ ಶತ್ರುವಾಗಿ ಕಾಡಬಹುದು. ಮಾಡುವ ಕೆಲಸದಲ್ಲಿ ನಿಧಾನವಾಗಿ ಜಯ ಸಿಗಲಿದೆ. ಆದರೆ ತಾಳ್ಮೆಯ ಅಗತ್ಯವಿದೆ. ಖರ್ಚು ಮಾಡುವಾಗ ಲೆಕ್ಕಾಚಾರ ಇರಲಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಸಬಹುದು. ಬೇಸರಗೊಳ್ಳುವಿರಿ. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು. ‌ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು.

ವೃಶ್ಚಿಕ ರಾಶಿ: ಇಂದು ನೀವು ಯಾರಿಗೂ ನೋವಾಗದಂತೆ ವರ್ತಿಸುವ ಯೋಚನೆ‌ ಮಾಡುವಿರಿ. ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ನಿಮ್ಮೊಳಗೆ ಇಂದು ವಿಚಿತ್ರವಾದ ಕೆಲವು ಆಲೋಚನೆಗಳು ಬರಲಿದ್ದು, ನಿಮಗೇ ಆಶ್ಚರ್ಯವೆನಿಸುವಂತೆ ಮಾಡುವುದು. ಹತ್ತಿರವರನ್ನು ನಿಮ್ಮ ಮಾತುಗಳಿಂದ ದೂರಮಾಡಿಕೊಳ್ಳುವಿರಿ. ಎಷ್ಟೋ ವರ್ಷದ ಸ್ನೇಹವು ಬೇರೆಯಾದೀತು. ಕಲ್ಪನೆಗಳಿಗೆ ರೂಪವನ್ನು ಕೊಡಲು ಹೋದರೆ ಅದು ಅಸಾಧ್ಯವಾದೀತು. ನಿಮ್ಮನ್ನು ನಡತೆಯ ಮೂಲಕ ಅಳೆಯುವರು. ಆರೋಗ್ಯವು ಕೆಡದಂತೆ ನೋಡಿಕೊಳ್ಳಿ. ಬಂಧುಗಳ ಮನೆಗೆ ಹೋಗಲಿದ್ದೀರಿ. ಕೆಲವನ್ನು ನೀವು ಬಿಡಲು ಸಾಧ್ಯವಾಗದು. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು. ಹೊಸ ವಸ್ತುಗಳನ್ನು ನೀವು ಯಾರದೋ ಮೂಲಕ ಪಡೆದುಕೊಳ್ಳುವಿರಿ. ಅಶ್ರದ್ಧೆಯನ್ನು ತೋರಿಸುವುದು ಬೇಡ.

ಧನು ರಾಶಿ: ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಖರ್ಚನ್ನು ಕಡಿಮೆಮಾಡಿಕೊಳ್ಳುವ ವಿಚಾರದಲ್ಲಿ ಚಿಂತಿಸುವುದು ಉತ್ತಮ. ನೀವಿಂದು ಸುಳ್ಳಾಡುವಿರೆಂದು ಅನ್ನಿಸಬಹುದು. ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವವರಿದ್ದಾರೆ. ಮಕ್ಕಳಿಂದ ಧನಸಹಾಯವನ್ನು ಪಡೆಯುವಿರಿ. ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ವಾಹನ ಖರೀದಿಯನ್ನು ಮಾಡಲೇಬೇಕು ಎಂಬ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳುವಿರಿ. ಮನಸ್ಸು ಸಂಕೋಚಗೊಂಡಿದ್ದು ಅದರ ವಿಕಾಸಕ್ಕೆ ಹೊರಗಡೆ ಸುತ್ತಾಟ ಮಾಡುವಿರಿ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ. ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು.

ಮಕರ ರಾಶಿ: ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಮಕ್ಕಳಿಂದ ನಿಮಗೆ ಖುಷಿಯಾಗಲಿದೆ. ನಿಮ್ಮ ಮಾತಿಗೆ ವಿರೋಧ ಉಂಟಾಗಬಹುದು. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ಕೆಲಸಗಳಿಂದ ಒತ್ತಡವು ಅತಿಯಾಗಬಹುದು, ಸಮಾಧಾನಚಿತ್ತದಿಂದ ಸ್ವೀಕರಿಸಿರಿ. ತಪ್ಪುಗಳಿಂದ ಪಶ್ಚಾತ್ತಾಪ ಆಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಕೆಲಸವು ಕಷ್ಟವೆಂದು ಕೈಬಿಡಬಹುದು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸವನ್ನು ಮಾಡಿ. ಅದನ್ನು ಹಾಗೇ ಸುಮ್ಮನೇ ಕಳೆಯಬೇಡಿ. ಉನ್ನತವಾದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆದಂತೆ ಅನಿಸುವುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ.

ಕುಂಭ ರಾಶಿ: ಕಷ್ಟಗಳು ನಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರಬೇಕು. ನಿಮ್ಮ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇರಲಿದೆ. ನಿಮ್ಮ ಬಗ್ಗೆ ಋಣಾತ್ಮಕವಾದ ಮಾತುಗಳು ಕೇಳಿ ಬರಬಹುದು. ಅದನ್ನು ಧನಾತ್ಮಕವಾಗಿ ಮಾಡುವ ಛಲವು ನಿಮಗೆ ಇರಬೇಕಿದೆ. ಪರಿಸ್ಥಿತಿಗಳು ನಮ್ಮ‌ಅನುಕೂಲಕ್ಕೆ ತಕ್ಕಂತೆ ಇರದು. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ನೀವು ಸ್ನೇಹಿತರ ಸಲಹೆಯನ್ನೂ ಪಡೆದರೆ ಒಳ್ಳೆಯದು‌. ಜ್ವರ ಬರುವ ಹಾಗಿದ್ದು ಬೇಕಾದ ಔಷಧವನ್ನು ಸ್ವೀಕರಿಸಿ. ಸುತ್ತಾಡುವ ಮನಃಸ್ಥಿತಿ ಇದ್ದರೂ ದೇಹವು ಸಹಕರಿಸದೇ ಹೋಗಬಹುದು. ವಾಹನವನ್ನು ನಿಧಾನವಾಗಿ ಚಲಾಯಿಸಿ. ಮನೆಯವರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು.

ಮೀನ ರಾಶಿ: ಸ್ವಂತಿಕೆಯನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ಅಡ್ಡಿಗಳು ಬರಬಹುದು. ಇರುವುದರಲ್ಲಿ ಖುಷಿಪಡುವುದು ಉತ್ತಮ. ಸಂಗಾತಿಯನ್ನು ಮುಚ್ಚಿಡಲು ಹೋಗಿ ಸೋಲುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಾಗೆ ದಿನವನ್ನು ರೂಪಿಸಿಕೊಳ್ಳಿ. ದುಸ್ಸಾಹಸವು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಟ್ಟರೂ ತಲೆಯ ಒಳಗೆ ಹೋಗದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಪತ್ತು ವ್ಯಯವಾಗುವ ಸಾಧ್ಯತೆ ಇದೆ. ಒಂದೇ ಕಡೆಯಲ್ಲಿ ಗಮನಹರಿಸಿದ ಕೆಲಸವು ಸರಿಯಾಗಿ ಹೋಗುವುದು.‌ ಸಮಯ ಮಿತಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು.

ಲೋಹಿತ ಹೆಬ್ಬಾರ್ – 8762924271 (what’s app only)

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ