Monthly Horoscope: ಜುಲೈ ತಿಂಗಳ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ ಪ್ರಪಂಚದಾದ್ಯಂತ ಜ್ಯೋತಿಷ್ಯವನ್ನು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಯವರಿಗೆ 2024 ಜುಲೈ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಮತ್ತು ಆರೋಗ್ಯ ಸ್ಥಿತಿ ಏನು? ಶುಭ ಅಶುಭ ಇದೆಯೇ? ಇತ್ಯಾದಿ ಮಾಹಿತಿ ಮಾಸಭವಿಷ್ಯ (Monthly Horoscope)ದಲ್ಲಿದೆ.

Monthly Horoscope:  ಜುಲೈ ತಿಂಗಳ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಮಾಸ ಭವಿಷ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jun 30, 2024 | 6:37 PM

ಈ ತಿಂಗಳಲ್ಲಿ (ಜುಲೈ, 2024) ಗ್ರಹಗಳ ಸ್ಥಾನವು ಬದಲಾಗಲಿದೆ. ಶುಕ್ರ, ಸೂರ್ಯ, ಬುಧರು ತಮ್ಮ ಸಂಚಾರದಲ್ಲಿ ಪರಿವರ್ತನೆಯನ್ನು ಮಾಡಿಕೊಳ್ಳಲಿದೆ. ಶುಭಾಶುಭ ಫಲವನ್ನು ಗ್ರಹರು ನಿಮಗೆ ನೀಡಲಿದ್ದು, ದೈವಾನುಗ್ರಹದಿಂದ ಎಲ್ಲರ ಬದುಕು ಬಂಗಾರವಾಗಲಿ. ಎಲ್ಲ ಗ್ರಹರೂ ಶುಭವನ್ನೇ ನೀಡಲಿ.

ಮೇಷ ರಾಶಿ :ರಾಶಿಯ ಅಧಿಪತಿಯಾದ ಹಾಗೂ ಅಷ್ಟಮಾಧಿಪತಿಯಾದ ಕುಜನು ಸ್ವಕ್ಷೇತ್ರದಲ್ಲಿ ಇರುವನು. ಯಾವುದಕ್ಕೂ ಧೈರ್ಯಗುಂದದೇ ಮುಂದಡಿ ಇಡುವಿರಿ. ದ್ವಿತೀಯದಲ್ಲಿ ಗುರುವು ನಿಮಗೆ ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಸಿಕೊಡುವನು. ಏಕಾದಶಾಧಿಪತಿಯೂ ದಶಮಾಧಿಪತಿಯೂ ಆದ ಶನಿಯು ಏಕಾದಶದಲ್ಲಿ ಇರವ ಕಾರಣ ವೃತ್ತಿಯಲ್ಲಿ ಉತ್ತಮ ಸ್ಥಾನ ಆದಾಯಗಳು ಇರಲಿದೆ. ಸಂಗಾತಿಯ ಬಗ್ಗೆ ಹೆಚ್ಚು ಅಸಮಾಧಾನ ಇರುವುದು.‌ ಸುಬ್ರಹ್ಮಣ್ಯನ ಉಪಾಸನೆಯನ್ನು ನಿತ್ಯವೂ ಮಾಡಿ.

ವೃಷಭ ರಾಶಿ :ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ತಿಂಗಳು ಮಿಶ್ರಫಲ. ರಾಶಿಯ ಅಧಿಪತಿ ಹಾಗೂ ಷಷ್ಠಾಧಿಪತಿಯು ದ್ವಿತೀಯದಲ್ಲಿ ಹಾಗೂ ತೃತೀಯದಲ್ಲಿ ಸಂಚರಿಸುವನು. ಸ್ತ್ರೀಯರಿಂದ ಸಂಕಟವು ಬರುವುದು. ನಿಮ್ಮ ರಾಶಿಯಲ್ಲಿ ಗುರುವಿರುವುದು ಅಪವಾದವನ್ನು ದೂರ ಮಾಡಿಕೊಳ್ಳಲು ದಾರಿಯನ್ನು ತೋರಿಸುವನು. ಬರಬೇಕಾದ ಸಂಪತ್ತು ನಿಧಾನವಾಗುವುದು. ವಾಹನದಿಂದ ಅಪಾಯ ಹೆಚ್ಚು. ಸಂಚಾರದಲ್ಲಿ ಜಾಗರೂಕತೆ ಮುಖ್ಯ. ತಂತ್ರಜ್ಞರಿಗೆ ಉತ್ತಮ ಸಮಯ. ಆದಾಯವನ್ನು ಬೇರೆ ಬೇರೆ ವಿಧಾನದಲ್ಲಿ ಪಡೆಯುವಿರಿ. ಲಲಿತಾಂಬಿಕೆಯ ಸ್ತೋತ್ರವನ್ನು ನಿತ್ಯವೂ ಪಠಿಸಿ.

ಮಿಥುನ ರಾಶಿ :ಜುಲೈ ತಿಂಗಳಲ್ಲಿ ನಿಮಗೆ ಅಶುಭವು ಅಧಿಕ. ರಾಶಿಯ ಅಧಿಪತಿಯೂ ಚತುರ್ಥಸ್ಥಾನಾಧಿಪತಿಯೂ ಪತಿಯೂ ಆದ ಬುಧನು ದ್ವಿತೀಯದಲ್ಲಿ ಇರುವನು. ತಾಯಿಯ ಸಂಪತ್ತು ಅಥವಾ ಸಹಕಾರವು ಸಿಗಲಿದೆ. ಗುರುವು ದ್ವಾದಶದಲ್ಲಿ ಇದ್ದು ಯಾವುದೇ ಅನುಕೂಲ ಫಲವನ್ನೂ ನೀಡಲಾರ. ಸೂರ್ಯನು ನಿಮ್ಮ ರಾಶಿಯಲ್ಲಿ ಇರುವುದರಿಂದ ಜ್ವರ ಮೊದಲಾದ ಖಾಯಿಲೆಗಳು ಕಾಣಿಸಿಕೊಳ್ಳುವುದು. ವೃತ್ತಿಯನ್ನು ಬಿಡಬೇಕಾದ ಸಂದರ್ಭವು ಬರಲಿದೆ. ಗೌರವವನ್ನು ಉಳಿಸಿಕೊಳ್ಳುವುದು ಕಷ್ಟ. ಮಾತಿನಲ್ಲಿ ಹಿತವಿರದು. ಎಲ್ಲ ಸಮಯದಲ್ಲಿ ಒಂದೇ ರೀತಿಯ ಮಾತು ನಡೆಯದು. ಗುರುಚರಿತ್ರೆಯ ಪಠನ ಮಾಡಿ.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ತಿಂಗಳು ಶುಭ. ಚಂದ್ರನು ರಾಶಿಯ ಅಧಿಪತಿಯಾದ ಕಾರಣ ಮನಸ್ಸು ಚಂದ್ರನಂತೆ ಚಂಚಲವಾಗಿರಲಿದೆ. ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ವಿರಳ. ನಿರ್ಧಾರವನ್ನು ತೆಗೆದುಕೊಂಡರೂ ಸ್ವಲ್ಪ ಸಮಯದಲ್ಲಿ ಅದು ಬದಲಾಗಬಹುದು. ಗುರುವು ಏಕಾದಶದಲ್ಲಿ ನಿಮಗೆ ಅನುಕೂಲನಾಗಿ ಎಲ್ಲ ಕಾರ್ಯಕ್ಕೂ ಶುಭಫಲವನ್ನೇ ಕೊಡುವನು ಮತ್ತು ಶುಭಕಾರ್ಯಕ್ಕೆ ಪ್ರೇರಿಸುವನು. ಆದರೆ ಅದನ್ನು ಮಾಡುವುದು ನಿಮ್ಮ ಆಯ್ಕೆಯಾಗಿರಲಿದೆ. ಬುಧನು ನಿಮ್ಮ ರಾಶಿಗೆ ಬರುವ ಕಾರಣ ತಾಯಿ ಮೇಲೆ ಅಸಮಾಧಾನ ಕಾಣಿಸಬಹುದು. ಇಷ್ಟದೇವರ ಉಪಾಸನೆಯನ್ನು ಅಗತ್ಯವಾಗಿ ಮಾಡಿ.

ಸಿಂಹ ರಾಶಿ :ಜುಲೈ ತಿಂಗಳಲ್ಲಿ ರಾಶಿಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲ. ರಾಶಿಯ ಅಧಿಪತಿಯಾದ ಸೂರ್ಯನು ಏಕಾದಶದಲ್ಲಿ ಮತ್ತು ದ್ವಾದಶದಲ್ಲಿ ಸಂಚರಿಸುವ ಕಾರಣ ನಿಮಗೆ ಮಿಶ್ರ ಫಲ. ಸರ್ಕಾರದ ಕಾರ್ಯಗಳಿಗೆ ಪ್ರಗತಿ ಇರಲಿದೆ. ಅನಂತರ ಕಷ್ಟವಾಗುವುದು. ಚತುರ್ಥ ಹಾಗೂ ಅಷ್ಟಮಾಧಿಪತಿಯಾದ ಗುರುವು ದಶಮದಲ್ಲಿ ಇರುವುದು ವೃತ್ತಿಯಲ್ಲಿ ಆದ ತೊಂದರೆಗಳಿಗೆ ಕುಟುಂಬವು ಜೊತೆಗಿರುವುದು. ಮಾನಸಿಕವಾಗಿ ಬಲವನ್ನು ಕೊಡುವರು. ನ್ಯಾಯಾಲಯದ ಕಾರ್ಯಗಳು ನಿಮಗೆ ಸಮಾಧಾನ ನೀಡುವುದು. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಶಿವನಿಗೆ ರುದ್ರಾಭಿಷೇಕ ಮಾಡಿ.

ಕನ್ಯಾ ರಾಶಿ :ರಾಶಿ ಚಕ್ರದ ಆರನೇ ರಾಶಿಯಾಗಿದ್ದು ರಾಶಿಯ ಅಧಿಪತಿಯೂ ದಶಮಾಧಿಪಯೂ ಆದ ಬುಧನು ಏಕಾದಶದಲ್ಲಿ ಇರುವನು. ಇದು ವಿದ್ಯಾದಾನ ಮಾಡುವವರಿಗೆ ಶುಭ.‌ ಅಥವಾ ವಿವಿಧ ಕೌಶಲವನ್ನು ಬಲ್ಲವರು ಅಧಿಕ ಲಾಭವನ್ನು ಹಾಗೂ ಕೀರ್ತಿಯನ್ನು ಪಡೆಯುವರು. ರಾಶಿಯಲ್ಲಿ ಕೇತುವು ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಯನ್ನು ಉಂಟುಮಾಡುವನು. ರಾಹುವಿನ ದೃಷ್ಟಿಯಿಂದ ಇನ್ನಷ್ಟು ಅಧಿಕವಾಗುವುದು. ದಶಮದಲ್ಲಿ ಸೂರ್ಯ ಹಾಗೂ ಶುಕ್ರರು ನಿಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಅವಕಾಶ ಮಾಡಿಕೊಡುವರು. ಕೌಟುಂಬಿಕ ಮನಸ್ತಾಪಗಳು ದೂರಾಗುವುದು.

ತುಲಾ ರಾಶಿ :ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ತಿಂಗಳು ಮಿಶ್ರಫಲ. ರಾಶಿಯ ಅಧಿಪತಿಯೂ ಅಷ್ಟಮಾಧಿಪತಿಯೂ ಆದ ಶುಕ್ರನು ನವಮ ಹಾಗೂ ದಶಮಸ್ಥಾನದಲ್ಲಿ ಸಂಚರಿಸುವ ಕಾರಣ ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸಲು ಸಮರ್ಥರು. ಕಲಾವಿದರು ಅಧಿಕ ಅವಕಾಶಗಳನ್ನು ಪಡೆಯುವರು. ವಿವಾಹಕ್ಕೆ ವಿಘ್ನಗಳು ಬಂದರೂ ಅದನ್ನು ನಿವಾರಿಸಿಕೊಂಡು ಮುನ್ನಡೆಯುವಿರಿ. ಹಲವು ದಿನದಿಂದ ಇರುವ ಅನಾರೋಗ್ಯವೂ ಸುಧಾರಿಸುವುದು. ಆದರೆ ಹೆಚ್ಚು ಹಣವನ್ನು ಖರ್ಚುಮಾಡುವ ಸ್ಥಿತಿ ಬರುವುದು. ಗುರುವೂ ಅಷ್ಟಮದಲ್ಲಿ ಇರುವ ಕಾರಣ ಗುರುಬಲವಿಲ್ಲದೇ ನಿಮ್ಮ ಕೈ ಕಟ್ಟಿದಂತಾಗುವುದು. ದುರ್ಗಾಮಾತೆಯನ್ನು ಪ್ರತಿ ವಾರವೂ ಉಪಾಸನೆ ಮಾಡಿ.

ವೃಶ್ಚಿಕ ರಾಶಿ :ಈ ತಿಂಗಳಲ್ಲಿ ಶುಭಫಲವು ಹೆಚ್ಚು ಇರಲಿದೆ. ರಾಶಿಯ ಅಧಿಪತಿಯೂ ಷಷ್ಠಾಧಿಪತಿಯೂ ಆದ ಕುಜನು ಸ್ವಸ್ಥಾನದಲ್ಲಿ ಇರುವುದು ಉತ್ತಮ. ಶತ್ರುಗಳಿಂದ ಅಥವಾ ಯಾವುದಾದರೂ ರೋಗಗಳಿಗೆ ಚಿಕಿತ್ಸೆ ನಡೆದು ಸ್ವಸ್ಥರಾಗಲು ಒಳ್ಳೆಯದು. ಇನ್ನು ಸಪ್ತಮದಲ್ಲಿ ಗುರುವಿರುವುದು ಸಂಗಾತಿಯ ಜೊತೆ ಉತ್ತಮ‌ಬಾಂಧವ್ಯ ಇರುವುದು. ಅವಿವಾಹಿತರಿಗೆ ಶುಭಕಾಲ. ಸಂಗಾತಿಯ ಅನ್ವೇಷಣೆ ಮಾಡಿಕೊಳ್ಳಬಹುದು. ತಾಯಿಯ ಕಡೆಯಿಂದ ಸಂಬಂಧವನ್ನು ಪ್ರೇಮದ ಮೂಲಕ ವಿವಾಹವಾಗುವಿರಿ. ಇನ್ನು ಸಂಗಾತಿಯ ಕಡೆಯಿಂದಲೂ ಸಂಪತ್ತು ಸಿಗುವುದು. ತಂತ್ರಜ್ಞರಿಗೆ ಹೆಚ್ಚು ಲಾಭದಾಯಕ ತಿಂಗಳು ಇದು. ಸರ್ಕಾರದ ಕಾರ್ಯವು ಸಲೀಸಾಗುವುದು.

ಧನು ರಾಶಿ :ಜುಲೈ ತಿಂಗಳಲ್ಲಿ ರಾಶಿಯ ಅಧಿಪತಿಯೂ ಚತುರ್ಥಾಧಿಪತಿಯೂ ಆದ ಗುರುವು ಷಷ್ಠದಲ್ಲಿ ಇರುವುದು ಶುಭವಲ್ಲ. ದೈಹಿಕ ಅನಾರೋಗ್ಯವೂ ಕುಟುಂಬದಲ್ಲಿ ಅಸಮಾಧಾನವೂ ಇರಲಿದೆ. ವೈವಾಹಿಕ ಸಂಬಂಧವು ಕೂಡಿ ಬಂದು ಅದೂ ಕೈ ತಪ್ಪಬಹುದು. ಕರ್ಮಸ್ಥಾನಾಧಿಪಯೂ ಕಳತ್ರಾಧಿಪತಿಯೂ ಆದ ಬುಧನು ಅಷ್ಟಮದಲ್ಲಿ ಇರುವನು. ಉದ್ಯೋಗದಲ್ಲಿಯೂ ಸಂಗಾತಿಯಿಂದಲೂ ತೊಂದರೆಯನ್ನು ಅನುಭವಿಸಬೇಕಾಗಬಹುದು. ತಿಂಗಳ ಕೊನೆಯಲ್ಲಿ ಸೂರ್ಯ ಹಾಗೂ ಶುಕ್ರರ ಸ್ಥಾನವು ಬದಲಾಗುವ ಕಾರಣ ಸ್ತ್ರೀಯರಿಂದಲೂ ಅಪವಾದವು ಬರಲಿದೆ. ತಾಯಿಯ ಆರೋಗ್ಯ ಅಥವಾ ಮನೆಯ ಹಿರಿಯರ ಆರೋಗ್ಯವು ಕೆಡಬಹುದು. ಗುರುಚರಿತ್ರೆಯ ಪಾರಾಯಣ ಮಾಡಿ.

ಮಕರ ರಾಶಿ :ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ಶುಭ ಫಲ. ರಾಶಿಯ ಅಧಿಪತಿಯಾದ ಶನಿಯು ಮೂಲ ತ್ರಿಕೋಣದಲ್ಲಿ ವ್ಯವಸ್ಥಿತನಿದ್ದಾನೆ ಮತ್ತು ಸಾಡೇ ಸಾಥ್ ನ ಕೊನೆಯ ಕಾಲವಾಗಿದ್ದು ನಿಮಗೆ ಸರಿವಿಲ್ಲದಂತೆ ಆದಾಯವನ್ನು ಹೆಚ್ಚಿಸುವನು ಅಥವಾ ಆದಾಯವು ಹೆಚ್ಚಾಗುವ ಕಾರ್ಯಗಳನ್ನೇ ನಿಮ್ಮಿಂದ ಮಾಡಿಸುವನು. ಏಕಾದಶಾಧಿಪತಿಯು ಲಾಭಾಧಿಪತಿಯೂ ಆದ ಕುಜನು ಚತುರ್ಥದಲ್ಲಿ ಇರುವುದು ಕೌಟುಂಬಿಕ ವಿಚಾರಕ್ಕೆ ಹಣವನ್ನು ಖಾಲಿ ಮಾಡಿಸುವನು. ತಿಂಗಳ ಕೊನೆಯಲ್ಲಿ ಸ್ಥಾನವನ್ನು ಬದಲಾಯಿಸಿದರೂ ಮಕ್ಕಳ ಕಾರಣಕ್ಕೆ ಖರ್ಚುಗಳನ್ನು ಮಾಡಬೇಕಾಗುವುದು. ಗುರುವು ಪಂಚಮದಲ್ಲಿ ಅನುಕೂಲನಾಗಿ ನಿಮ್ಮ ಕಾರ್ಯಗಳಿಗೆ ಪ್ರೋತ್ಸಾಹವನ್ನೂ ಕೊಡಿಸುವನು. ಅವಿವಾಹಿತರಿಗೆ ಉತ್ತಮ‌ಕುಲ ಹಾಗು ರೂಪವುಳ್ಳ ಸಂಗಾತಿ ಪ್ರಾಪ್ತವಾಗುವರು. ಹನುಮಾನ್ ಚಾಲೀಸಾವನ್ನು ಶನಿವಾರದಂದು ಬಿಡದೇ ಪಠಿಸಿ.

ಕುಂಭ ರಾಶಿ :ಜುಲೈ ತಿಂಗಳಲ್ಲಿ ನಿಮಗೆ ಮಿಶ್ರಫಲವಿರುವುದು. ರಾಶಿಯ ಅಧಿಪತಿಯಾದ ಶನಿಯು ನಿಮ್ಮ ರಾಶಿಯಲ್ಲಿಯೇ ಇರುವನು. ಇದು ಸಕಾರಾತ್ಮಕ ಅಂಶವಾದರೂ ಸಾಡೇ ಸಾಥ್ ನ‌ ಮಧ್ಯಭಾಗದಲ್ಲಿ ನೀವು ಇರುವಿರಿ. ಈ ರಾಶಿಯು ಶನಿಯ ಮೂಲ ತ್ರಿಕೋಣವೂ ಆಗಿದೆ. ಈ ಎಲ್ಲ ಕಾರಣಗಳಿಂದ ಅತಿಯಾದ ತೊಂದರೆ ಎನಿಸದದಿದ್ದರೂ ಪೂರ್ಣಪ್ರಮಾಣದಲ್ಲಿ ಕಾರ್ಯಸಿದ್ಧಿಯಾಗದು.‌ ಕಾರ್ಯವನ್ನು ಕೈ ಬಿಡುವ ಹಂತವು ಬರಲಿದೆ. ಆದರೆ ಅದನ್ನು ಮುನ್ನಡೆಸುವ ಹೊಣೆಗಾರಿಕೆ ಹೊತ್ತರೆ ಮುಂದೆ ಸುಮಾರ್ಗವು ತೆರೆಯುವುದು. ಗುರುವು ಚತುರ್ಥದಲ್ಲಿ ಅಲ್ಪಬಲನಾಗಿದ್ದಾನೆ. ದಶಮಾಧಿಪತಿಯು ತೃತೀಯದಲ್ಲಿ ಇರುವ ಕಾರಣ ಹೆಚ್ಚು ಶ್ರಮವನ್ನು ವಹಿಸಿ ಸಂಪಾದಿಸಬೇಕಾಗುವುದು. ಕುಟುಂಬದ ಜೊತೆ ಸೌಹಾರ್ದತೆ ಇರಲಿ. ತಿಲವನ್ನು ಕಪ್ಪು ವಸ್ತ್ರದಲ್ಲಿ ಇರಿಸಿ, ದಾನವಾಗಿ ನೀಡಿ.

ಮೀನ ರಾಶಿ :ಜುಲೈ ತಿಂಗಳಲ್ಲಿ ನಿಮಗೆ ಅಶುಭವೇ ಹೆಚ್ಚು ಕಾಣಿಸುವುದು. ರಾಶಿಯ ಅಧಿಪತಿಯೂ ಹಾಗೂ ದಶಮಾಧಿಪತಿಯಾದ ಗುರುವು ತೃತೀಯದಲ್ಲಿ ಇರುವನು. ಶತ್ರುವಿನ ರಾಶಿಯೂ ಆದ ಕಾರಣ ಗುರುವಿನ ಬಲವು ಕಡಿಮೆಯೇ. ಇನ್ನು ರಾಶಿಯಲ್ಲಿ ರಾಹುವಿದ್ದಾನೆ. ಕೇತುವಿನ ದೃಷ್ಟಿಯೂ ಇರುವುದು ಮಾನಸಿಕವಾಗಿ ದೈಹಿಕವಾಗಿ ದುರ್ಬಲರಾಗುವಿರಿ. ಸಾಡೇ ಸಾಥ್ ಕೂಡು ಇರುವುದು ನಿಮ್ಮ ಎಲ್ಲ ಕಾರ್ಯಗಳಿಗೂ ವಿಘ್ನ, ಕಿರಿಕಿರಿ, ಶ್ರಮಕ್ಕೆ ಸಿಗಬೇಕಾದ ಪೂರ್ಣಫಲವು ಸಿಗದೇ ಹೋಗುವುದು. ವೈವಾಹಿಕ ಜೀವನವನ್ನು ಬಹಳ ಸೂಕ್ಷ್ಮವಾಗಿ ನಡೆಸಬೇಕಾಗುವುದು. ಸೂರ್ಯ, ಶುಕ್ರ, ಬುಧರ ಆಲ್ಪ ಆನುಕೂಲ್ಯವೂ ನಿಮ್ಮ ಮೇಲೆ ಪರಿಣಾಮ ಬೀರಲಿದ್ದು, ಭವಿಷ್ಯದ ನಿರೀಕ್ಷೆಯಲ್ಲಿ ಮುನ್ನಡೆಯುವಿರಿ. ಹಿರಿಯರ ಮಾತುಗಳು ನಿಮಗೆ ಕಿರಿಕಿರಿ ಆದರೂ ಆದನ್ನು ಕೇಳುವುದೇ ಸದ್ಯಕ್ಕಿರುವ ದಾರಿ. ದೈವಾನುಗ್ರಹದ ಪ್ರಾರ್ಥನೆಯು ನಿತ್ಯವೂ ಇರಲಿ.

-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)

ತಾಜಾ ಸುದ್ದಿ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಬಸ್​ಗೆ ಚಾಲನೆ ನೀಡಿ ಜನರ ಕುಂದು-ಕೊರತೆ ಅಲಿಸಿದ ಶಾಸಕ ಸಿಮೆಂಟ್ ಮಂಜು
ಬಸ್​ಗೆ ಚಾಲನೆ ನೀಡಿ ಜನರ ಕುಂದು-ಕೊರತೆ ಅಲಿಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ
ಹಾಸನ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ