Horoscope Today June 28, 2024: ಶುಕ್ರವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

2024 ಜೂನ್ 28 ದಿನ ಭವಿಷ್ಯ: ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today June 28, 2024: ಶುಕ್ರವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಶುಕ್ರವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 27, 2024 | 9:02 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜೂನ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಆಯುಷ್ಮಾನ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:36ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:50 ರಿಂದ ಸಂಜೆ 05:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:45 ರಿಂದ 09:22ರ ವರೆಗೆ.

ಮೇಷ ರಾಶಿ: ವಿವಾಹಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳುವಿರಿ. ಬೇಡದ ವಿಚಾರಕ್ಕೆ ಮೂಗು ತೂರಿಸುವುದು ಬೇಡ. ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಚಿತ್ರಣವಿರಲಿ. ಇಲ್ಲವಾದರೆ ನೀವು ಮಾಡಲು ಹೊರಟ ಕೆಲಸವು ಅಪೂರ್ಣವಾಗುವುದು ಅಥವಾ ಆಗದೇಯೂ ಹೋಗಬಹುದು. ತಂತ್ರಜ್ಞಾನವು ನಿಮ್ಮ ಉಪಯೋಗಕ್ಕೆ ಬರಲಿದೆ. ನಿಮ್ಮ ಕರ್ತವ್ಯಗಳನ್ನು ಮಾಡಲು ಹಿಂಜರಿಯಬೇಡಿ. ಸಂಗಾತಿಯ ಜೊತೆಗಿನ‌ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು. ಅವಾಕಶಗಳನ್ನು ಬಳಸಿಕೊಳ್ಳಲು ಹಿಂದೆಟುಹಾಕುವ ಅವಶ್ಯಕತೆ ಇಲ್ಲ. ಬೇಕಾದಷ್ಟು ಸಮಯವು ನಿಮ್ಮ ಪಾಲಿಗೆ ಇರಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಿಮ್ಮಲ್ಲಿರಲಿ. ಹೊಸ ವಸ್ತುಗಳನ್ನು ಖರೀದಸಲು ಹೋಗಿ ಸಮಯ ವ್ಯರ್ಥವಾಗುವುದು.‌ ಯಾರನ್ನೂ ಅಶಕ್ತರು ಎಂದು ಭಾವಿಸುವುದು ಬೇಡ.

ವೃಷಭ ರಾಶಿ: ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಹೊಂದಾಣಿಕೆಯಿಂದ ಹೋಗುವುದು ಉತ್ತಮ. ಮಾತನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾಗುವುದು. ನೀವು ಇಂದು ಶತ್ರುಗಳನ್ನು ಹೆಡೆಮುರಿ ಕಟ್ಟುತ್ತೇನೆ ಎಂಬ ಮನಃಸ್ಥಿತಿಯನ್ನು ಬಿಟ್ಟು ಶಾಂತರಾಗಿ. ನಿಮಗೆ ಕಾಲವು ಬರಲಿದೆ. ಆತುರದಿಂದ ಏನನ್ನಾದರೂ ಮಾಡಲು ಹೋದೀರಿ. ಕೈ ಹಾಕಿದ ಕೆಲಸವೆಲ್ಲ ಚಿನ್ನವಾಗದು. ಆದರೆ ಕಬ್ಬಿಣವಾದರೂ ಆಗುತ್ತದೆ. ಅದು ನಿಮಗೆ ಬಳಕೆ ಬರಲಿದೆ. ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ವಿದ್ಯಾಭ್ಯಾಸವೂ ಕುಂಠಿತವಾಗುವುದು. ಸತತ ಪ್ರಯತ್ನವು ಬೇಕಾಗಿದೆ. ಯಾರದೋ ಕೆಲಸವನ್ನು ನೀವು ಮಾಡಬೇಕಾಗಿಬರಬಹುದು. ಅವರೂ ನಿಮ್ಮ ಯಶಸ್ಸಿನ ಪಾಲುದಾರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಸೌಂದರ್ಯ ಪ್ರಜ್ಞೆಯ ಕಡೆಗೆ ಹೆಚ್ಚು ಆಸಕ್ತಿ ಬರುವುದು.

ಮಿಥುನ ರಾಶಿ: ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಆಪ್ತರ ಜೊತೆ ವಿವಾದ ಆಗಲಿದೆ. ನಾನು ಮಾಡಿದ್ದೇ ಸರಿ ಎಂಬ ಹುಂಬುತನ ಇರಲಿದೆ. ಮುಖವನ್ನೇ ನೋಡದ ವ್ಯಕ್ತಿಯೋರ್ವ ನಿಮಗೆ ಹೂಡಿಕೆಯನ್ನು ಮಾಡಲು ಹೇಳಿ ಅದರ ವಿಧಾನವನ್ನು ತಿಳಿಸಿ ಹಣವನ್ನು ಪಡೆಯಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೋಲಾಗಬಹುದು. ದುಃಖಿಸುವ ಅವಶ್ಯಕತೆ ಇಲ್ಲ. ಉನ್ನತಸ್ಥಾನಕ್ಕೆ ಹೋಗಲು ಅವಕಾಶವನ್ನು ಹುಡುಕುತ್ತೀದ್ದೀರಿ. ತಾಳ್ಮೆ ಇರಲಿ. ಆತುರದಿಂದ‌‌ ಏನನ್ನಾದರೂ ಮಾಡಲು ಹೋಗಬೇಡಿ. ಭೂಮಿಯ ವಿಚಾರವನ್ನು ಸದ್ಯ ಕೈಬಿಡುವುದು ಒಳ್ಳೆಯದು. ನಿಮ್ಮ ಮಾತು ಕಿರಿಕಿರಿ ಆಗಬಹುದು. ಹಿರಿಯರ ಎದುರು ವಿನಯದಿಂದ ಮಾತನಾಡಿ. ಸಾಧ್ಯವಾದರೆ ಅವರ ಸೇವೆ ಮಾಡಿ. ಮಾತಿಗೆ ತಪ್ಪಿ ನಡೆಯುವಿರಿ ಎಂಬ ಮಾತು ಕೇಳಬಹುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ.

ಕಟಕ ರಾಶಿ: ಇಂದು ನಿಮ್ಮ ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಒಂದೇ ರೀತಯ ಕೆಲಸದಿಂದ ನೀವು ಬೇಸರಗೊಂಡು ಬೇರೆ ರೀತಿಯಲ್ಲಿ ಬೇರೆ ಕೆಲಸವನ್ನು ಮಾಡಲು ಆಲೋಚಿಸುವಿರಿ. ಹೊಸತನ್ನು ಕಲಿಯುವ ಉತ್ಸುಕತೆಯೂ ನಿಮ್ಮಲ್ಲಿ ಇರಲಿದೆ. ದುರಭ್ಯಾಸದಿಂದ ಅಪಕೀರ್ತಿ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವಿಂದು ಮನೆಯನ್ನು ಬಿಡಬೇಕಾಗಿಬರಬಹುದು. ಹಂಚಿಕೆಯ ವ್ಯವಹಾರ ನಿಮಗೆ ಹಿಡಿಸಿದ್ದಲ್ಲ. ಸುಮ್ಮನೇ ಕಲಹಕ್ಕೆ ಕಾರಣವಾಗುವುದು. ಜನರು ಹತ್ತಿರವಾದಷ್ಟು ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು. ಅಕಸ್ಮಾತ್ ದೂರ ಪ್ರಯಾಣವು ಅನಿವಾರ್ಯವಾದೀತು. ಸರಿಯಾದ ಸಿದ್ಧತೆಯ ಜೊತೆ ಹೋಗಿ. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಏಕಾಂತದಲ್ಲಿ ಇರಲು ಇಷ್ಟವಾಗುವುದು. ಯಾರ ಅಪವಾದವನ್ನೂ ಗಂಭೀರವಾಗಿ ತೆಗೆದುಕೊಳ್ಳಲಾರಿರಿ.

ಸಿಂಹ ರಾಶಿ: ಇಂದು ನಿಮಗೆ ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡಲು ಮುಂದಾಗುವಿರಿ. ನಿಮ್ಮ ಹಿತೈಷಿಗಳ ಸಹಕಾರದಿಂದ ನಿಮ್ಮ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯ. ಒಂದಿಲ್ಲೊಂದು ಆರೋಪದಿಂದ ನೀವು ಬೇಸತ್ತು ಹೋಗಬಹುದು. ಮನಸ್ಸಿಗೆ ಒದು ಬಹಳ ಕಿರಿಕಿರಿಯ ವಿಚಾತವಾಗಿ ಪರಿಣಮಿಸುವುದು. ನಿಮಗೆ ಇಂದು ಸುಮ್ಮನೇ ಕುಳಿತಿರಲು ಸಾಧ್ಯವಾಗದು. ಇಂದು ನೀವು ನಿದ್ರೆಯನ್ನು ಹೆಚ್ಚು ಇಷ್ಟಪಡುವರು. ವಿವಾಹವು ಕೂಡಿಬರುವ ಸಾಧ್ಯತೆ ಇದೆ. ನಿರಾಕರಿಸದೇ ಒಪ್ಪಿಕೊಳ್ಳಿ. ಸಮೃದ್ಧವಾದ ಭೋಜನ ಸಿಗಲಿದೆ. ಸಾಲಬಾಧೆಯಿಂದ ಮುಕ್ತರಾಗುವ ತಂತ್ರವನ್ನು ಮಾಡುವಿರಿ. ಆಪ್ತರೇ ನಿಮ್ಮನ್ನು ಕೆಡಗಲು ಸಂಚನ್ನು ರೂಪಿಸಬಹುದು. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಇಂದಿನ ಆರ್ಥಿಕತೆಯಿಂದ ನಿಮಗೆ ತೃಪ್ತಿಯು ಇರಲಿದೆ.

ಕನ್ಯಾ ರಾಶಿ: ಇಂದು ನಿಮ್ಮ ಆಸೆಗಳಿಗೆ ಪೂರಕವಾದ ಸನ್ನಿವೇಶಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಯಾವುದೋ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಸರಿಯಾದ ಅಭ್ಯಾಸವಿಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಸೋಲವ ಸಾಧ್ಯತೆ ಇದೆ. ಸ್ಥಳದಲ್ಲಿಯೇ ಸಿಕ್ಕ ಕೆಲಸವನ್ನು ಚೆನ್ನಾಗಿ ಮಾಡಿ. ನಿಮ್ಮ ಕಾಪಾಡುವ ಶಕ್ತಿ ಇನ್ನೊಂದಿದೆ ಎಂದು ಧೈರ್ಯವಾಗಿ ಸತ್ಕಾರ್ಯದಲ್ಲಿ ಮುನ್ನುಗ್ಗುವಿರಿ. ಹಠವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಧನಾತ್ಮವಾದ ಪರಿಣಾಮವನ್ನು ಪಡೆಯಿರಿ. ದಾಂಪತ್ಯದಲ್ಲಿ ಸುಖವು ಇರಲಿದೆ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಮಕ್ಕಳ‌ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು. ಹೂಡಿಕೆಯಲ್ಲಿ ಅತಿಯಾದ ನಿರೀಕ್ಷೆ ಬೇಡ. ಕಲಾವಿದರಿಗೆ ಹೊಸ ಅವಕಾಶಗಳು ತೆರೆಯುವುದು.

ತುಲಾ ರಾಶಿ: ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ಹಣಕಾಸಿನ ಸಂಗತಿಗಳನ್ನು ಸಂಗಾತಿ ಜತೆಗೆ ಚರ್ಚಿಸಿ, ಅನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸಿದರೂ ಅದು ಅಕಾಲದಲ್ಲಿ ಪ್ರಕಟವಾಗುವುದು. ಸಾಲವನ್ನು ಹಿಂದಿರುಗಿಸಲು ಕಷ್ಟವಾಗಬಹುದು. ನಿಮ್ಮಿಂದಾದ ಕೆಲಸವನ್ನು ನೀವೇ ಹೊಗಳಿಕೊಳ್ಳಬೇಡಿ. ನಿಮ್ಮ ವೃತ್ತಿಯನ್ನು ನೀವು ಸರಿಯಾಗಿ ನಿಭಾಯಿಸುತ್ತೀರಿ ಎನ್ನುವುದಕ್ಕೆ ನಿಮಗೆ ಇಂದು ಬರುವ ಜವಾಬ್ದಾರಿಯೇ ಕಾರಣವಾಗಿರುತ್ತದೆ. ಸಂಗಾತಿಯ ಮಾತಿನಿಂದ ಮನಸ್ತಾಪ‌ ಉಂಟಾಗಬಹುದು. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಎಲ್ಲವನ್ನೂ ಸಮರಸದಿಂದ ಮಾಡುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂಬಂಧಪಟ್ಟರ ಜೊತೆ ಮಾತನಾಡುವಿರಿ. ವಿಶ್ವಾಸಕ್ಕೆ ಘಾಸಿಯಾಗುವ ಘಟನೆಗಳು ನಿಮಗೆ ಹೊಸದಲ್ಲದಿದ್ದರೂ ಮತ್ತೆ ಮತ್ತೆ ನೆನಪಾಗಿ ದುಃಖವು ಬರಬಹುದು. ನಿಮ್ಮ ಹಿಂದಿನ‌ ಜೀವನವನ್ನು ನೆನೆದು, ಈಗಿನ ಸಮೃದ್ಧಿಯನ್ನು ಕಂಡು ಬಹಳ ಆನಂದವಾಗುವುದು. ಯಾರದೋ ಕಾರಣಕ್ಕೆ ನೀವು ತಲೆತಗ್ಗಿಸಬೇಕಾಗಬಹುದು. ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ಸ್ವಲ್ಪ ಆಲೋಚಿಸಿ. ಪರರನ್ನು ನಿಂದಿಸುವ ದುರಭ್ಯಾಸದಿಂದ ದೂರವಿರುವುದು ಒಳ್ಳೆಯದು. ಒಳ್ಳೆಯ ಕಡೆಯಿಂದ ಒಳ್ಳೆಯದನ್ನೇ ನಿರೀಕ್ಷಿಸಿ. ಎಲ್ಲವನ್ನೂ ನೀವು ನಿಶ್ಚಯ ಮಾಡಿಕೊಳ್ಳಲು ಆಗದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ನೀವು ಕೊಟ್ಟಿದ್ದೇ ನಿಮಗೆ ಸಿಗುವುದು ಎಂಬುದು ವಿಧಿ ನಿಯಮ.

ಧನು ರಾಶಿ: ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಅಧಿಕ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಇಂದಿನ ಕೆಲಸವನ್ನು ಮಾಡಬೇಕಾಗುತ್ತದೆ. ಉದ್ಯೋಗದಲ್ಲಿ ಭಡ್ತಿಗಾಗಿ ಬಹಳ ಶ್ರಮವಹಿಸುವಿರಿ. ನಿಮ್ಮನ್ನು ಹಿಂದೆಳೆಯಲು ಅನೇಕರು ಪ್ರಯತ್ನಿಸಿದರೂ ನಿಮ್ಮ ಕೆಲಸವು ನಿಮ್ಮನ್ನು ಮುಂದಕ್ಕೆ ತಂದಿರುತ್ತದೆ. ನಿಮಗೆ ನಿಮ್ಮ ಬಗ್ಗೆ ಕಾಳಜಿ ಮಾಡುವವರು ಬೇಕು ಎನಿಸಬಹುದು. ವಿದ್ಯಾವಂತರೊಬ್ಬರ ಪರಿಚಯವು ನಿಮಗೆ ಇಂದಿನ‌ ಮಹಾಲಾಭದಲ್ಲಿ ಒಂದಾಗಿದೆ. ನಿಮ್ಮಲ್ಲಿ ಹಣವನ್ನು ಕೇಳಿ ಯಾರಾದರೂ ಬರಬಹುದು, ಇಲ್ಲವೆನ್ನದೇ ಎಷ್ಟೋ ಒಂದಿಷ್ಟನ್ನು ಇದಂ‌ ನ ಮಮ ಎಂಬ ಭಾವದಿಂದ ಕೊಡಿ. ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಂಭವವು ಬರಬಹುದು. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು.

ಮಕರ ರಾಶಿ: ಇಂದು ನಿಮ್ಮವರು ಎಂದು ಯಾರನ್ನು ನೀವು ಭಾವಿಸಿದ್ದೀರೋ ಅವರಿಂದಲೋ ಬಹಳ ನೋವಾಗಬಹುದು. ಹಸಿದವರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಮಕ್ಕಳ ವಿಷಯಕ್ಕೆ ಖರ್ಚು ಮಾಡುವ ಸ್ಥಿತಿ ಬರಲಿದೆ. ದೈನಿಂದನ ಕೆಲಸಗಳು ನಿಶ್ಚಿಂತೆಯಿಂದ ನಡೆಯುವುವು.‌ ಕುಟಂಬದ ಜೊತೆ ನೀವು ಇನ್ನಷ್ಟು ಆಪ್ತರಾಗುವಿರಿ. ದಾಂಪತ್ಯದಲ್ಲಿ ನಗುವಿದ್ದರೂ ಸುಖದ ಕೊರತೆ ನಿಮ್ಮನ್ನು ಕಾಡಬಹುದು. ನಿಮ್ಮ ಕೆಲಸವನ್ನು ಸಕಾಲಕ್ಕೆ ಮುಗಿಸಿ ಎಲ್ಲರಿಂದ‌ ಮೆಚ್ಚುಗೆ ಗಳಿಸುವಿರಿ. ಅದಕ್ಕಾಗಿ ಹಣವು ವ್ಯಯವಾಗಲಿದೆ. ಹಳೆಯ‌ ಕೆಲಸವನ್ನು ಮರೆಯುವ ಸ್ವಭಾವವು ಇರಲಿದೆ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು.‌ ಕಲಾವಿದರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವರು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಸಂಗಾತಿಯ ಎದುರು ಏನನ್ನೂ ಹೇಳದೇ ಸುಮ್ಮನಿರುವಿರಿ.

ಕುಂಭ ರಾಶಿ: ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ. ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗಿ ಬರುವುದು. ವಾಹನಸಂಚಾರವು ನಿಮಗೆ ಬೇಡವೆನಿಸವುದು. ನಿಮ್ಮನ್ನು ತರತರದ ಮಾತುಗಳಿಂದ ನಿಮ್ಮ ಉತ್ತೇಜಿಸಬಹುದು. ಅದು ಸರಿ ಎನಿಸಿ ನೀವು ಮಾಡಿ ಸಮಸ್ಯೆಗಳನ್ನು ತಂದುಕೊಳ್ಳಬೇಕಾದೀತು. ಆಪ್ತಮಿತ್ರರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮದಾದ ಗುರಿಯನ್ನು ಹಾಕಿಕೊಳ್ಳಲು ಗೊಂದಲವಾಗಬಹುದು. ಭೂಮಿಯ ಖರೀದಿಗೆ ಯೋಚಿಸಿದ್ದರೆ ನೀವು ಸ್ವಲ್ಪ ಸಮಯವನ್ನು ಬಿಡುವುದು ಒಳ್ಳೆಯದು. ಸಮಯ ಬಂದಾಗ ಅವು ಮತ್ತೆ ಮನೋಭೂಮಿಯಲ್ಲಿ ಮೊಳಕೆ ಒಡೆದೀತು. ಅಪರಿಚಿತರ ಜೊತೆ ಅನುಚಿತ ವರ್ತನೆ ಬೇಡ. ನಂಬಿಕೆಯು ಹುಸಿಯಾಗುವುದು. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.

ಮೀನ ರಾಶಿ: ಇಂದು ನಿಮ್ಮ ಮಾತಿನ ಮೋಡಿಗೆ ಯಾರಾದರೂ ಮರುಳಾಗಬಹುದು. ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ಮನೆಗೆ ಅಗತ್ಯವಿರುವ ಯಂತ್ರೋಪಕರಣವನ್ನು ಖರೀದಿಸುವಿರಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸಗಳು ಆಗಬಹುದು. ಸರ್ಕಾರಿ ಕೆಲಸವು ಪ್ರಗತಿಯಲ್ಲಿ ಇರಲಿದೆ. ಸಂಗಾತಿಯು ಇಂದು ನಿಮ್ಮ ಮಾತನ್ನು ಅನುಸರಿಸುವಳು. ಹೆಚ್ಚಿನ ಸಂಪಾದನೆಗೆ ಅನ್ಯ ಮಾರ್ಗವನ್ನು ಹಿಡಿದುಕೊಳ್ಳಬೇಕಾಗುವುದು. ಮಾತಮಾಡುವಾಗ ಗಮನವಿರಲಿ. ನಿಮ್ಮೆದುರಿನವರಿಗೆ ಬೈಯ್ಯುತ್ತಿದ್ದುದೆಂದು ಅನಂತರ ಗೊತ್ತಾಗಿ ಇಸರುಮುರುಸಾದೀತು. ಮನೆಯವರ ಮನ ನೋಯಿಸಿ ಕಾರ್ಯ ಮಾಡಲಾಗದು. ಮನಸ್ಸಿನ ಆಲಸ್ಯವನ್ನು ಹೋಗಲಾಡಿಸಿಕೊಂಡು ಕಾರ್ಯಪ್ರವೃತ್ತರಾಗಿ. ಪ್ರತಿಯೊಂದು ಕ್ಷಣವನ್ನೂ ಆನಂದಿಸುವಿರಿ. ಸಜ್ಜನರ ಸಹವಾಸ ನಿಮಗೆ ಸಿಕ್ಕಿ ಮಾರ್ಗದರ್ಶನವೂ ಆಗಕಿದೆ. ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು.

ಲೋಹಿತ ಹೆಬ್ಬಾರ್ – 8762924271 (what’s app only)

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ