AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ; ದುರಭ್ಯಾಸಗಳ ಕಡೆ ಗಮನ, ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು ಎಚ್ಚರ!

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 17 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ; ದುರಭ್ಯಾಸಗಳ ಕಡೆ ಗಮನ, ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Mar 17, 2024 | 12:10 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12 ರಿಂದ ಮಧ್ಯಾಹ್ನ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:41 ರಿಂದ ಸಂಜೆ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12 ರ ವರೆಗೆ.

ಮೇಷ ರಾಶಿ: ಇಂದು ನಿಮ್ಮ ಆತ್ಮವಿಶ್ವಾಸದ ನಿರೀಕ್ಷೆಗಳು ನಿಮ್ಮ ಭರವಸೆಗಳನ್ನು ಪೂರೈಸುವುವು. ಹೆಚ್ಚು ಖರೀದಿಸಲು ಧಾವಿಸುವ ಮೊದಲು ನಿಮ್ಮ ಬಳಿ ಇರುವುದನ್ನು ಬಳಸಿ. ನೀವು ಇಂದು ಏನು ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನಿಮ್ಮ ಕುಟುಂಬದ ಸದಸ್ಯರು ನಿರ್ಧರಿಸಬಹುದು.. ಪ್ರೀತಿಯ ವ್ಯವಹಾರಗಳಲ್ಲಿ ಬಲವಂತ ಬೇಡ. ಇಂದು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ಇನ್ನೊಬ್ಬರ ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗುವುದು.

ವೃಷಭ ರಾಶಿ: ಇಂದು ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಹಣಗಳಿಕೆಯ ಹೊಸ ಮಾರ್ಗವು ಆಶಾದಾಯಕ ಆಗಿರುತ್ತದೆ. ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಮುಖ್ಯವಾಗುವಿರಿ. ಇಂದು ನಿಮ್ಮ ಪ್ರೇಮಿಯು ಅನಗತ್ಯ ಬೇಡಿಕೆಯನ್ನು ಇಡಬಹುದು. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ಹಾಗಾಗಿ ನಿಮ್ಮ ಮನಃಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಅಸತ್ಯವಾದ ನಿಮ್ಮ ಮಾತನ್ನು ನಂಬುವವರಿದ್ದಾರೆ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ವ್ಯಾಪಾರವನ್ನು ನಮ್ರರಾಗಿ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ.

ಮಿಥುನ ರಾಶಿ: ಕ್ರಿಯಾತ್ಮಕವಾದ ಯೋಜನೆಯ ಬಗ್ಗೆ ಆಸಕ್ತಿಯು ಹೆಚ್ಚುವುದು. ಸೋಮಾರಿಯಾಗಿ ಕುಳಿತುಕೊಳ್ಳುವ ನಿಮ್ಮ ಅಭ್ಯಾಸದಿಂದ‌ ಮಾನಸಿಕ ಶಾಂತಿಯೂ ಹಾಳಾಗುವುದು. ನಿಮ್ಮ ತಂದೆಯ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಹಣದ ಪ್ರಯೋಜನವನ್ನು ನೀಡುತ್ತದೆ. ಕೌಟುಂಬಿಕ ಕಾರ್ಯಗಳು ಮತ್ತು ಪ್ರಮುಖ ಸಮಾರಂಭಗಳಿಗೆ ಪವಿತ್ರ ದಿನ. ಕೆಲಸದಲ್ಲಿ ತಲೆನೋವು ಕಾಣಸಿಕೊಳ್ಳಲಿದ್ದು ಎಲ್ಲ ಕಾರ್ಯಗಳೂ ವ್ಯತ್ಯಾಸ ಆಗಬಹುದು. ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ ಕಾನೂನಾತ್ಮಕ ತೊಂದರೆಗಳನ್ನು ಪರಿಹರಿಸಿಕೊಳ್ಳಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು. ನಿಮ್ಮ ಕಾರ್ಯದ ಪರಿಶೀಲನೆಗೆ ಅಧಿಕಾರಿಗಳು ಬರಬಹುದು. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡಲಡುವರು. ಶುಭ ಕಾರ್ಯಗಳಿಗೆ ನೀವು ಪ್ರೇರಣೆ ಕೊಡುವಿರಿ.

ಕರ್ಕಾಟಕ ರಾಶಿ: ಇಂದು ನಿಮ್ಮ ಆರೋಗ್ಯದ ವಿಚಾರದಲ್ಲಿ ಅನಾದರ ಬೇಡ. ದುರಭ್ಯಾಸಗಳ ಕಡೆ ಗಮನವು ಬರಬಹುದು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಖರ್ಚಾಗಬಹುದು. ಮಕ್ಕಳ ಅಭ್ಯಾಸದ ಮಟ್ಟವು ತಿಳಿಯುವುದು. ದಿನದ ಮಧ್ಯದಲ್ಲಿ ವಿಶ್ರಾಂತಿಯ ಅವಶ್ಯಕತೆ ಬರಬಹುದು. ಇತರ ಚಟುವಟಿಕೆಗಳು ನಿಮ್ಮನ್ನು ದಿನವಿಡೀ ಬಿಡುವಿಲ್ಲದಂತೆ ಇರುತ್ತವೆ. ನಿಮ್ಮ ಮಾತು ಅರ್ಥಪೂರ್ಣವಾಗಿ ಇರಲಿ. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಸ್ವಪ್ರತಿಷ್ಠೆಯನ್ನು ಬಿಡುವುದು ಉತ್ತಮ. ಧನವ್ಯಯವಾದರೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು.‌ ನೆಮ್ಮದಿಯ ಸೂತ್ರವನ್ನು ನೀವೇ ಕಂಡುಕೊಳ್ಳಬೇಕು.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ