Daily Horoscope 04 October 2024: ಈ ರಾಶಿಯವರು ಇಂದು ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಇರಿ
ಇಂದು ನವರಾತ್ರದ ಎರಡನೇ ದಿನ ಬ್ರಹ್ಮಚಾರಿಣೀ ದುರ್ಗೆಯನ್ನು ಆರಾಧಿಸುವ ದಿನ. ಕೈಯಲ್ಲಿ ಜಪಮಾಲೆ, ಕಮಂಡಲುವನ್ನು ಧರಿಸಿ ತಪಸ್ವಿನಿಯಂತೆ ಕಾಣಿಸುವವಳು. ಮಹಾಕಾಳಿಯ ಸ್ವರೂಪಿಣಿ ಈಕೆ ಸಕಲರ ಸಕಲಮನೋರಥವನ್ನೂ ಈಡೇರಿಸಲಿ. ಹಾಗಾದರೆ ಇಂದಿನ (2024 ಅಕ್ಟೋಬರ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದು ನವರಾತ್ರದ ಎರಡನೇ ದಿನ ಬ್ರಹ್ಮಚಾರಿಣೀ ದುರ್ಗೆಯನ್ನು ಆರಾಧಿಸುವ ದಿನ. ಕೈಯಲ್ಲಿ ಜಪಮಾಲೆ, ಕಮಂಡಲುವನ್ನು ಧರಿಸಿ ತಪಸ್ವಿನಿಯಂತೆ ಕಾಣಿಸುವವಳು. ಮಹಾಕಾಳಿಯ ಸ್ವರೂಪಿಣಿ ಈಕೆ ಸಕಲರ ಸಕಲಮನೋರಥವನ್ನೂ ಈಡೇರಿಸಲಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:52 ರಿಂದ 12:21, ಯಮಘಂಡ ಕಾಲ ಮಧ್ಯಾಹ್ನ 03:20ರಿಂದ 04: 49ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ 09:22 ರವರೆಗೆ.
ಮೇಷ ರಾಶಿ : ನೀವು ತೊಡಗಿಕೊಳ್ಳುವ ವ್ಯವಹಾರದಲ್ಲಿ ಅನುಭವ ಅಥವಾ ಅನುಭವಿಗಳ ಮಾರ್ಗದರ್ಶನ ಇರಲಿ. ವೈವಾಹಿಕ ಜೀವನಕ್ಕೆ ಯಾರಿಂದಲೂ ಪೂರ್ಣ ಒಪ್ಪಿಗೆ ಸಿಗದು. ಸ್ಥಿರಾಸ್ತಿಯ ಉಳಿಸಿಕೊಳ್ಳಲು ನೀವು ಬಹಳ ಹೋರಾಟವನ್ನು ಮಾಡಬೇಕಾದೀತು. ಬಂಧುಗಳ ಬಳಿ ನೀವು ಸಾಲಕ್ಕೆ ಕೈ ಚಾಚಬೇಕಾಗಬಹುದು. ನಿಮ್ಮ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು. ಇಂದು ಹೇಗಾದರೂ ಮಾಡಿ ಕಲಿತ ವಿಚಾರವನ್ನು ಪ್ರಯೋಗಕ್ಕೆ ತರುವಿರಿ. ಮಾತನ್ನು ನೀವು ಸಾವಧಾನವಾಗಿ ಹೇಳುವಿರಿ. ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಇರಿ. ದುರಭ್ಯಾಸದಿಂದ ಆರೋಗ್ಯವು ಕೆಡಬಹುದು. ಹೆಚ್ಚು ಲಾಭವನ್ನು ಗಳಿಸುವ ತುಡಿತವು ಅಧಿಕವಾಗುವುದು. ಭೂಮಿಯ ಉತ್ಪನ್ನದಿಂದ ಕೃಷಿಯ ಉತ್ಪಾದನೆಯಿಂದ ಲಾಭ ಸಿಗಲಿದೆ. ನಿಮ್ಮ ಕಾರ್ಯಕ್ಕೆ ಸಮ್ಮಾನವು ಸಿಗಬಹುದು. ಯಾರನ್ನೂ ಇಂದು ಸುಲಭವಾಗಿ ಹತ್ತಿರ ಸೇರಿಸಿಕೊಳ್ಳಲಾರಿರಿ.
ವೃಷಭ ರಾಶಿ : ಇಂದು ಅಸ್ಥಿರತೆಯು ನಿಮ್ಮನ್ನು ಅಧಿಕವಾಗಿ ಕಾಡಬಹುದು. ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ಬಂಧುಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವಿರಿ. ಕಳೆದುಕೊಂಡಿದ್ದನ್ನು ಮರೆಯುವುದು ಉತ್ತಮ. ಅಭಿವೃದ್ಧಿಯ ಕೆಲಸಗಳು ನಿಧಾನವಾಗಿ ಸಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸುವಿರಿ. ಇಂದು ನಿಮ್ಮ ಆತುರದ ತೀರ್ಮಾನಗಳು ಹಲವು ಗೊಂದಲೆಗಳಿಗೆ ಕಾರಣವಾಗುವುದು. ಸ್ಥಿರಾಸ್ತಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರಲಿ. ನಿಮ್ಮ ಸಾಲವು ಮರಳಿಬರಬಹುದು. ನಿಮ್ಮ ಮನೋಗತವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ ಮಾಡಲು ಸಂಗಾತಿಗೆ ಸೂಚಿಸುವಿರಿ. ನಕಾರಾತ್ಮಕ ಧೋರಣೆಗಳು ಅಧಿಕವಾಗಿ ಇರಬಹುದು. ನೂತನ ಗೃಹದ ಖರೀದಿಯಲ್ಲಿ ಆಸಕ್ತಿ ಇರುವುದು. ಇಂದು ನಿಮಗೆ ಚೆನ್ನಾಗಿ ಕಾಣಿಸಿಕೊಳ್ಳುವುದು ಇಷ್ಟವಾಗದು.
ಮಿಥುನ ರಾಶಿ : ವ್ಯವಹಾರದ ಮಧ್ಯದಲ್ಲಿ ನೀವು ಕಳೆದುಹೋಗಬಹುದು. ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ಆರ್ಥಿಕತೆಯು ಅಭಿವೃದ್ಧಿಯ ಕಡೆಗೆ ಸಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಕುಟುಂಬದಿಂದ ನಿಮಗೆ ಶುಭ ವಾರ್ತೆಯು ಬರಬಹುದು. ಜಾಣತನವೂ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟ ಹಣವು ಸಾಕಾಗದು. ಇಂದು ನೀವು ಅಂದುಕೊಂಡಷ್ಟು ಕೆಕಸವು ಆಗುವತನಕ ನಿಮ್ಮ ಹಠವು ಇರಲಿದೆ. ದೈವವನ್ನು ನಂಬಿ ನಿಮ್ಮ ಕಾರ್ಯವನ್ನು ಮುನ್ನಡಸುವಿರಿ. ಚಿತ್ರಕಾರರಿಗೆ ಉತ್ತಮ ಅವಕಾಶಗಳು ಸಿಗಬಹುದು. ಭವಿಷ್ಯದ ಬಗ್ಗೆ ನಿಮಗೆ ಹತ್ತಾರು ಕನಸುಗಳನ್ನು ಇಟ್ಟುಕೊಳ್ಳುವಿರಿ. ಧಾರ್ಮಿಕ ಕರ್ಮಗಳನ್ನು ಶ್ರದ್ಧೆಯಿಂದ ಪೂರೈಸುವಿರಿ.
ಕರ್ಕಾಟಕ ರಾಶಿ : ಹೂಡಿಕೆಯಿಂದ ಆದ ಲಾಭವನ್ನು ಪರೀಕ್ಷಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ನಿಮ್ಮ ಉದ್ಯಮಕ್ಕೆ ಯಾರಾದರೂ ಬೆನ್ನೆಲುಬಾಗಿ ಬರಬಹುದು. ವಿಳಂಬವಾಗಿಯಾದರೂ ವಿವಾಹವು ನಡೆಯಲಿದ್ದು, ನಿಮಗೆ ಸಂತೋಷವಾಗಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ತಿಳಿವಳಿಕೆಯ ಕೊರತೆ ಕಾಣಿಸುವುದು. ನಾಚಿಕೆಯ ಸ್ವಭಾವದಿಂದ ನೀವು ಹಲವು ವಿಚಾರವನ್ನು ಕಳೆದುಕೊಳ್ಳುವಿರಿ. ಕೆಲವರ ಮಾತುಗಳನ್ನು ನೀವು ವಿರೋಧಿಸುವಿರಿ. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಹಾಗೆಯೇ ಇರಲಿದೆ. ಸಾಮಾಜಿಕ ಗೌರವವನ್ನು ನೀವು ಬಯಸುವಿರಿ. ಸಂಗಾತಿಯ ಇಂಗಿತವನ್ನು ಅರಿಯಲು ಅಸಮರ್ಥರಾಗಬಹುದು. ಹಳೆಯ ಪ್ರೇಮವು ನಿಮಗೆ ತೊಂದರೆಯನ್ನು ಕೊಡಬಹುದು. ಚಾಲಕವೃತ್ತಿಯರಿಗೆ ಶುಭ ಸುದ್ದಿಯು ಇರಲಿದೆ. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅದೇ ಉತ್ತಮವಾದುದೂ ಕೂಡ. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ.
ಸಿಂಹ ರಾಶಿ : ರಾಜಕಾರಣದ ದಿಕ್ಕು ನಿಮಗೆ ಅರ್ಥವಾಗುವುದು ಕಷ್ಟ. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ನಿಮ್ಮ ಅಸಹಜ ವರ್ತನೆಯು ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಎಲ್ಲರನ್ನೂ ನೀವು ಸಮಾನಭಾವದಿಂದ ಕಾಣಬೇಕಾಗುವುದು. ಮಹಿಳೆಯರನ್ನು ಸಿಕ್ಕ ಗೌರವವನ್ನು ಅತಿಯಾಗಿ ಭಾವಿಸುವುದು ಬೇಡ. ಪ್ರಯಾಣದಲ್ಲಿ ಸುಖವಿರಲಿದೆ. ನಿಮಗೆ ಇಂದು ನೇರವಾಗಿ ಕೆಲಸಗಳನ್ನು ಮಾಡಲು ಕಷ್ಟವಾದೀತು. ಇನ್ನೊಬ್ಬರ ಮೂಲಕ ಎಲ್ಲ ಕೆಲಸಗಳನ್ನು ಮಾಡಿಸುವಿರಿ. ಅಪರಿಚಿತರ ಸಂಪರ್ಕದಿಂದ ನಿಮ್ಮ ಸ್ನೇಹಿತರ ನಡುವಿನ ಆತ್ಮೀಯತೆ ದೂರಾಗುವುದು. ಬೇರೆಯವರ ಜೊತೆ ನಿಮ್ಮ ವರ್ತನೆಯು ಸರಿಯಾಗಿರಲಿ. ಯಾರ ಮೇಲೂ ಅತಿಯಾಗಿ ಸಿಟ್ಟಾಗುವುದು ಬೇಡ. ಶುದ್ಧ ವಸ್ತ್ರಕ್ಕೆ ಸಣ್ಣ ಚುಕ್ಕೆಯೂ ದೊಡ್ಡದೇ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಂಡು ಅವರಿಂದ ದೂರವೂ ಆಗಬಹುದು. ವಾಹನ ಖರೀದಿಸಲು ನಿಮಗೆ ಯಾರಾದರೂ ಒತ್ತಾಯಮಾಡಬಹುದು. ಅಸಹಾಯಕರಾಗಿ ಕುಳಿತು ಮತ್ತಷ್ಟು ಹತಾಶರಾಗುವ ಅವಶ್ಯಕತೆ ಇಲ್ಲ.
ಕನ್ಯಾ ರಾಶಿ : ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ವಿನ್ಯಾಸಕಾರರಿಗೆ ಪೂರಕವಾದ ಕಾರ್ಯವು ಸಿಗುವುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಪ್ರಶ್ನಿಸಲಾರರು. ಹಣದ ವ್ಯವಹಾರವನ್ನು ಒಬ್ಬರೇ ಮಾಡುವುದು ಬೇಡ. ನಂಬಿಕಸ್ಥರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಇನ್ನೊಬ್ಬರನ್ನು ಹಗುರಾಗಿ ಕಾಣುವುದು ನಿಮಗೆ ಅಭ್ಯಾಸವಾಗಿದ್ದು, ಅದನ್ನು ಬಿಡುವುದು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಕಂಡು ಯಾರೂ ಸಾಲವನ್ನು ಕೊಡಲಾರರು. ನಿಮ್ಮ ಮಾತುಗಳು ಕುಟುಂಬದ ಗೌರವವನ್ನು ಕಡಿಮೆ ಮಾಡೀತು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಮನಸ್ಸು ಇಲ್ಲವಾಗಬಹುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ಯಾವುದಾದರೂ ಕಲೆಯು ನಿಮ್ಮನ್ನು ಸೆಳೆಯಬಹುದು. ವಿದೇಶದಲ್ಲಿ ಉನ್ನತ ಅಭ್ಯಾಸಕ್ಕೆ ಅವಕಾಶ ಸಿಗುವುದು. ನಿಮ್ಮ ಅಯ್ಕೆಯ ಉದ್ಯೋಗವೇ ನಿಮ್ಮನ್ನು ಪ್ರಯಾಣ ಮಾಡಿಸೀತು.
ತುಲಾ ರಾಶಿ : ನಿಮ್ಮ ಪದಾಧಿಕಾರವು ತಪ್ಪುವ ಸಾಧ್ಯತೆ ಇದೆ. ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಸತ್ಯವನ್ನು ನೀವು ಬಿಡುವ ಸಾಧ್ಯತೆ ಇದೆ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ನೆಮ್ಮದಿಯ ಕೊರತೆ ಅಧಿಕವಾಗಿ ಇರಿಲಿದೆ. ನೀವು ಕೃತಜ್ಞತೆಯನ್ನು ಮರೆತುವಿರಿ. ಕೈಲಾದ ಸಹಾಯವನ್ನು ಮಾಡಿ. ಸಂಬಂಧಗಳ ಮಹತ್ತ್ವವನ್ನು ನೀವು ಕಳೆದುಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಲಾಗದು. ಅಧಿಕಾರವರ್ಗದಿಂದ ನಿಮಗೆ ಮಾನಸಿಕ ಕಿರಿಕಿರಿ ಆಗಬಹುದು. ಉಡುಗೊರೆಯನ್ನು ನೀವು ಆಪ್ತರಿಂದ ಪಡೆಯುವಿರಿ. ನಿಮ್ಮ ಬಗ್ಗೆ ಸರಿಯಾದ ಪರಿಚಯವನ್ನು ಇತರರಿಗೆ ಕೊಡಿ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಬಹುದು. ನಿಮ್ಮ ವಿವಾಹವು ದೈವದ ಇಚ್ಛೆಯಂತೆ ಆಗಿದ್ದು ಅದನ್ನು ನಂಬಿ ನಡೆಯಿರಿ. ಆರ್ಥಿಕ ವಹಿವಾಟಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ವಿಶ್ವಾಸಕ್ಕೆ ಉಳಿಸಿಕೊಳ್ಳುವುದು ಕೆಲಸವನ್ನು ಮಾಡುವುದು ಸೂಕ್ತ.
ವೃಶ್ಚಿಕ ರಾಶಿ : ನೋವಾಗುವಂತೆ ಇಂದು ಮಾತನಾಡಿ ಅನಂತರ ಕ್ಷಮೆಯನ್ನು ಕೇಳುವ ನಟನೆ ಮಾಡುವಿರಿ. ದುಸ್ಸಾಹಸಗಳು ನಿಮ್ಮ ಧೈರ್ಯವನ್ನು ಕೆಡಿಸಬಹುದು. ಎಷ್ಟೇ ಪ್ರಯತ್ನಪಟ್ಟರೂ ನೀವು ಮಕ್ಕಳನ್ನು ಸರಿಮಾಡಲು ಆಗಲು ಎಂಬ ಹಂತಕ್ಕೆ ಬರುವಿರಿ. ಆರ್ಥಿಕ ವ್ಯವಹಾರದವರಿಗೆ ಅಲ್ಪ ಬಿಡುವು ಸಿಗಬಹುದು. ಉದ್ಯೋಗದ ಕಾರಣಕ್ಕೆ ನೀವು ಯಾರಿಗೋ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಒಳ್ಳೆಯದು. ಯಾವ ಕಾರ್ಯವನ್ನೂ ನೀವು ನೀರಸವಾಗಿ ಮಾಡುವುದು ಬೇಡ. ಕೂಡಿಬರುವ ವಿವಾಹಭಾಗ್ಯವನ್ನು ನೀವು ನಿರಾಕರಿಸುವುದು ಬೇಡ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು. ಅಂದಾಜಿನ ವ್ಯವಹಾರದಲ್ಲಿ ಸೋಲಾಗುವುದು. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಸೇವಾ ಮನೋಭಾವದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಅಧಿಕಾರಿಗಳಿಂದ ಅಪಮಾನವೂ ಆದೀತು.
ಧನು ರಾಶಿ : ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ. ದುರಭ್ಯಾಸವಿಲ್ಲದೇ ಇರುವುದೇ ದೊಡ್ಡ ಯೋಗ್ಯತೆ. ಅವರನ್ನು ಕಳೆದುಕೊಳ್ಳುವುದು ಬೇಡ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎನಿಸಬಹುದು. ಕೆಲಸದಲ್ಲಿ ನಿಮಗೆ ಬೆಂಬಲವು ಕಡಿಮೆ ಸಿಗಬಹುದು. ನಿಮ್ಮ ದುರಾಲೋಚನೆಗೆ ನೀವೇ ಪೂರ್ಣವಿರಾಮವನ್ನು ಹಾಕಿಕೊಳ್ಳಬಹುದು. ಅಸಭ್ಯ ಮಾತುಗಳು ನಿಮ್ಮ ನಡವಳಿಕೆಯನ್ನು ಹೇಳೀತು. ಅಧಿಕಾರವು ಬರುವಹಾಗೆ ಇದ್ದರೂ ಅದನ್ನು ತಪ್ಪಿಸಬಹುದು. ಸರಿಯಾದ ಆಲೋಚನೆಯನ್ನು ಮಾಡದೇ ಕೆಲಸವನ್ನು ಮಾಡಿದ ಕಾರಣ ತೊಂದರೆಗಳು ಬರಬಹುದು. ನಿಮ್ಮನ್ನು ಹೊಗಳಿಕೊಳ್ಳುವುದು ಸರಿ ಕಾಣಿಸದು. ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಅರಿವಾಗಬಹುದು. ತಾಳ್ಮೆಯನ್ನು ನೀವು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.
ಮಕರ ರಾಶಿ : ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗಲಿದೆ. ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ನಿಮ್ಮ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ತೋರಿಸುವರು. ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಮನಸ್ಸಿನಲ್ಲಿ ಒಂದಿಲ್ಲೊಂದು ಭೀತಿಯು ಕಾಡಬಹುದು. ಅತಿಯಾದೆ ಆಸೆಯಿಂದ ನಿಮಗೆ ದುಃಖವು ಬರಬಹುದು. ನಿಮ್ಮ ಆದಾಯವನ್ನು ಯಾರಿಗೂ ಬಿಟ್ಟುಕೊಡಲಾರಿರಿ. ನಿಮ್ಮ ಬಗ್ಗೆ ನೀವು ಅವಲೋಕನ ಮಾಡಿಕೊಳ್ಳುವ ಅಗತ್ಯ ಇರಲಿದೆ. ಎಲ್ಲವನ್ನೂ ನೀವು ಅತಿಯಾಗಿ ವೈಭವೀಕರಿಸುವಿರಿ. ಅದರಷ್ಟಕ್ಕೆ ಬಿಡುವುದು ಒಳ್ಳೆಯದು. ವ್ಯಕ್ತಿಗತವಾದ ಭಾವವನ್ನು ಇಟ್ಟುಕೊಳ್ಳುವುದು ಬೇಡ. ಯಾರೋ ಮಾಡಿದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾದೀತು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಆರ್ಥಿಕತೆಯ ಬೆಳವಣಿಗೆಯಿಂದ ನಿಮಗೆ ಸಂತೋಷವಿದೆ.
ಕುಂಭ ರಾಶಿ : ಆಹಾರವನ್ನು ಕೇಳಿದರಿಗೆ ಏನು ಕೊಟ್ಟರೂ ಆಗುತ್ತದೆ ಎಂದು ಏನಾದರೂ ಕೊಟ್ಟುಬಿಡಬೇಡಿ. ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಅಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಂಗಾತಿಯ ಜೊತೆ ವಾದಕ್ಕೆ ಇಳಿಯುವಿರಿ. ಕಛೇರಿಯಲ್ಲಿ ಆದ ಜಗಳವು ಉದ್ಯೋಗವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು. ಸಂಗಾತಿಯನ್ನು ನೀವು ಹಳೆಯ ಘಟನೆಗಳ ಜೊತೆಗೆ ಟೀಕಿಸಬಹುದು. ನಿಮಗೆ ಪ್ರೀತಿಯ ಕೊರತೆ ಕಾಣಿಸುವುದು. ಜೀವನೋಪಾಯಕ್ಕಾಗಿ ಹೆಚ್ಚು ದುಡಿಮೆಯನ್ನು ಮಾಡಬೇಕಾದೀತು. ಇಷ್ಟವಿಲ್ಲದ ಕಾರ್ಯವನ್ನು ಮಾಡಲು ನೀವು ಹಿಂಜರಿಯುವಿರಿ. ತಾಯಿಯ ಜೊತೆ ಎಲ್ಲವನ್ನೂ ಹೇಳಬೇಕು ಎನಿಸಬಹುದು. ವ್ಯವಹಾರಕ್ಕೆ ಬೇಕಾದ ಬಂಡವಾಳವನ್ನು ಇಟ್ಟುಕೊಂಡೇ ಹೊರಡಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು.
ಮೀನ ರಾಶಿ : ಹಲವು ದಿನಗಳ ಹೋರಾಟದ ಫಲವಾಗಿ ನಿಮ್ಮ ಸ್ಥಳವನ್ನು ಪುನಃ ಪಡೆದುಕೊಳ್ಳುವಿರಿ. ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಏಕಾಂಗಿಯಾಗಿ ಇರಲು ನೀವು ಬಯಸಬಹುದು. ವಿದ್ಯಾಭ್ಯಾಸದಿಂದ ಸ್ವಲ್ಪ ಬಿಡುಗಡೆಯನ್ನು ಬಯಸುವಿರಿ. ಬಯಸಿದ್ದನ್ನು ಪಡೆಯಲು ಹೆಚ್ಚು ಪ್ರಯತ್ನ ಪಡಬೇಕಾದೀತು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡಕ್ಕೆ ಹೋಗಲಾಗದು. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ನೀವು ಬೇರೆ ಮಾರ್ಗಗಳನ್ನು ಅನುಸರಿಸುವಿರಿ. ಮಕ್ಕಳಿಂದ ನಿಮಗೆ ಸಂತೋಷವು ಸಿಗುವುದು. ಸಿಕ್ಕ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ಮುಳುಗುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)