Horoscope 07 Jan: ವೃತ್ತಿಯಲ್ಲಿ ಕಿರಿಕಿರಿ, ಬದುಕು‌ ಬಂಧನದಂತೆ ಅನ್ನಿಸಬಹುದು

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.

Horoscope 07 Jan: ವೃತ್ತಿಯಲ್ಲಿ ಕಿರಿಕಿರಿ, ಬದುಕು‌ ಬಂಧನದಂತೆ ಅನ್ನಿಸಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 07, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ​​​​ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:52 ರಿಂದ 06:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:28 ರಿಂದ 04:52ರ ವರೆಗೆ.

ಮೇಷ ರಾಶಿ: ಮನಸ್ಸನ್ನು ನಿಯಂತ್ರಿಸುವ ಕಡೆಗೆ ಗಮನವಿರಲಿ.‌ ಧಾರ್ಮಿಕ ಕರ್ಮವು ನಿಮ್ಮ ಇಷ್ಟಾರ್ಥದ ಸಿದ್ಧಿಗಾಗಿ ಮಾಡುವಿರಿ. ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇದ್ದರೂ ಸಮಯವು ಮಾತ್ರ ಸಿಗದೇಹೋದೀತು. ಆಪ್ತರನ್ನು ಅಸೂಯೆಯಿಂದ ಕಾಣುವುದು ನಿಮಗೆ ಶೋಭೆ ತರದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಆಲಸ್ಯದ ಪಟ್ಟದಿಂದ ಕೆಳಗಿಳಿಯುವುದು ಅಸಾಧ್ಯ. ಅನಿರೀಕ್ಷಿತ ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ. ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆಯಾಗಬಹುದು. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಎಲ್ಲವನ್ನೂ ತಿಳಿದು ಸುಮ್ಮನಿರುವುದೇ ಲೇಸು ಎಂದೆನಿಸುವುದು.

ವೃಷಭ ರಾಶಿ: ಒಂದರ‌ಮೇಲೆ‌ ಒಂದರಂತೆ ಅನಾರೋಗ್ಯವು ನಿಮ್ಮನ್ನು ಪೀಡಿಸಬಹುದು‌. ಸಂಗಾತಿಯ ಮಾತಿಗೆ ವಿರೋಧವನ್ನು ವ್ಯಕ್ತಪಡಿಸುವಿರಿ. ಆದಾಯಕ್ಕೆ ಅನ್ಯ ಮಾರ್ಗಗಳನ್ನು ಹುಡುಕಬೇಕು ಎಂದೆನಿಸುವುದು. ಇನ್ನೊಬ್ಬರ ಮಾತುಗಳನ್ನು ನೀವು ಸಹನೆಯಿಂದ ಆಲಿಸುವಿರಿ. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ.‌ ನಿಮ್ಮ ಸಂಯಮ ಕೆಡಬಹುದು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಯಬಹುದು. ಆರೋಗ್ಯದ ಬಗ್ಗೆ ಆತಂಕ ಬೇಡ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ಪಶ್ಚಾತ್ತಾಪವು ನಿಮ್ಮ ನೋವನ್ನು ಪರಿಹರಿಸೀತು. ನಿಮ್ಮ‌ ಚಿಂತನೆಯು ಸಫಲವಾಗಲು ಅಧಿಕ ಸಮಯವು ಬೇಕಾದೀತು.‌ ಬದುಕು‌ ಬಂಧನದಂತೆ ಅನ್ನಿಸಬಹುದು. ಮನಸ್ಸೂ ಸಂಕುಚಿತವಾಗಬಹುದು.

ಮಿಥುನ ರಾಶಿ: ವಿವಾಹದ ನಿಶ್ಚಯಕ್ಕೆ ಇಂದು ನೀವು ತೆರಳುವಿರಿ. ಸಾಲದ ಮರುಪಾವತಿಗೆ ಸ್ನೇಹಿತರ‌ ಸಹಕಾರವನ್ನು ಪಡೆಯುವಿರಿ. ದೂರ ಪ್ರಯಾಣ ಹೊರಟ ನಿಮಗೆ ಅಡೆತಡೆಗಳು ಬರಬಹುದು. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸಾಮಾಜಿಕ‌ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು. ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಯುವಿರಿ. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ಗಮನ ಇರಲಿ. ನೀವು ವೃತ್ತಿಯನ್ನು ಮಾಡುತ್ತಲೇ ಉನ್ನತ ಪದವಿಯನ್ನು ಪಡೆಯುವಿರಿ. ಯಶಸ್ಸು ನಿಮ್ಮ ಹಿಂದೆ ತಾನಾಗಿಯೇ ಬರುವುದು. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಸಹೋದರರು ನಿಮಗೆ ಧನ ಸಹಾಯವನ್ನು ಕೇಳಿದರೆ ಮಾಡಬಹುದು. ಬೇಡ ವಿಚಾರಗಳನ್ನು ಅತಿಯಾಗಿ ಆಲೋಚಿಸಿ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ.

ಕಟಕ ರಾಶಿ: ಸಂಸ್ಥೆಯ ಮುಖ್ಯಸ್ಥರಾಗಿ ನಿಮ್ಮನ್ನು ಆಯ್ಕೆ ಮಾಡಬಹುದು. ಆಕಸ್ಮಿಕ ಸುದ್ದಿಯಿಂದ ವಿಚಲಿತರಾಗುವಿರಿ. ಹೂಡಿಕೆಯ ಬಗ್ಗೆ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರುವುದು.‌ ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ನಿಮ್ಮ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿರಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸಿನಲ್ಲಿ ತಳಮಳವಾಗುವುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಆಗಬೇಕಾದ ಕಾರ್ಯಗಳ ಪರಿಶೀಲನೆ ಮಾಡುವಿರಿ. ಉತ್ತಮ ಸ್ನೇಹವನ್ನು ನೀವು ಕಳೆದುಕೊಳ್ಳುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಯೋಗ್ಯ ಚಿಕಿತ್ಸೆಯ ಅವಶ್ಯಕತೆ ಇರುಬುದು. ಎಲ್ಲ ಜವಾಬ್ದಾರಿಯನ್ನೂ ಮಕ್ಕಳಿಗೆ ವಹಿಸಿ ನೀವು ನಿಶ್ಚಿಂತರಾಗುವಿರಿ. ಮಿತವಾದ ಮಾತಿನಿಂದ ನಿಮಗೇ ಒಳ್ಳೆಯದು.

ಸಿಂಹ ರಾಶಿ: ಹಿತಶತ್ರುಗಳ ಬಗ್ಗೆ ಪೂರ್ಣ ನಂಬಿಕೆಯನ್ನು ಇಟ್ಟು ಅವರ ಬಳಿಯಲ್ಲಿಯೇ ಆಪ್ತ ಕಾರ್ಯಗಳನ್ನು ಮಾಡಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಸಹಜ ಕುತೂಹಲವಿರುವುದು. ನಿಮ್ಮನ್ನು ಮೆಚ್ಚಿಸಿ ಕೆಲಸಗಳನ್ನು ಇಂದು ಮಾಡಿಸಿಕೊಳ್ಳುವರು. ನಿಮಗೆ ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ. ಗುರಿಯನ್ನು ಯಾರಾದರೂ ತಪದಪಿಸಬಹಿದಿ. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು. ನಿಮ್ಮ ಹಿಂದಿನ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ಹಣವು ಸಿಗದೇ ನಿಮಗೆ ನಿರಾಸೆಯಾಗುವುದು. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗುವಿರಿ. ಯಾರ ಮಾತನ್ನು ನಂಬುವುದು ಎಂಬ ಗೊಂದಲದಲ್ಲಿ ನೀವು ಇರುವಿರಿ.

ಕನ್ಯಾ ರಾಶಿ: ಸಹೋದರನಿಂದ ನಿಮಗೆ ಉತ್ತಮ ಪಾರಿತೋಷಕವು ಅನಿರೀಕ್ಷಿತವಾಗಿ ಸಿಗಬಹುದು. ಹೂಡಿಕೆಯಿಂದ ಅಧಿಕ ಲಾಭವನ್ನು ನೀವು ನಿರೀಕ್ಷಿಸಬಹುದು. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವುದು ಸರಿಯಾಗದು. ನೂತನ ಗೃಹ ನಿರ್ಮಾಣದ ಬಗ್ಗೆ ನುರಿತವರ ಜೊತೆ ಚರ್ಚೆಯನ್ನು ನಡೆಸುವು ಯೋಚನೆ ಇರುವುದು. ವಾಹನ ಓಡಾಡವು ಸುಖಕರವಲ್ಲ. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೇ ಹೋದೀತು. ಇಂದು ವಾಸದ ಮನೆಯನ್ನು ಬದಲಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ಕೂಡಿಟ್ಟ ಹಣವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಿದ್ದೀರಿ.

ತುಲಾ ರಾಶಿ: ವ್ಯಾಪಾರದಲ್ಲಿ ತೊಡಕು ಬರಬಹುದು. ಆದರೆ ಇದನ್ನು ನಿವಾರಿಸಿಕೊಳ್ಳುವ ತಂತ್ರವು ನಿಮಗೆ ಅನುಭವದಿಂದ‌ ಸಿದ್ಧವಾಗಿರುವುದು. ಕ್ರೀಡಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ವೃತ್ತಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆಯುವಿರಿ. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮ್ಮ‌ ಮೇಲೆ ಅಪೂರ್ಣವಾದ ವಿವರದ ಕಾರಣ ತಪ್ಪು ಕಲ್ಪನೆಯನ್ನು ಇಟ್ಟುಕೊಳ್ಳುವರು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಸಂಗಾತಿಯ ಜೊತೆ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು. ಚರಾಸ್ತಿಯ ದಾಖಲೆಯನ್ನು ಪರಿಶೀಲಿಸುವಿರಿ.

ವೃಶ್ಚಿಕ ರಾಶಿ: ನಟನೆಯಲ್ಲಿ ಆಸಕ್ತಿ ಇರುವವರಿಗೆ ಅಂದುಕೊಂಡಷ್ಟು ಅವಕಾಶಗಳು ಸಿಗದೇ ಇರುವುದು ಬೇಸರವಾಗುವುದು. ಎಲ್ಲರಿಂದ ದೂರವಿದ್ದು ನಿಮ್ಮ ಹಳೆಯ ಎಲ್ಲ ಘಟನೆಗಳನ್ನು ಪುನಃ ಅವಲೋಕನ ಮಾಡುವಿರಿ. ನಿಮ್ಮವರ ಆರೋಗ್ಯದ ವ್ಯತ್ಯಾಸದಿಂದ ಹಣವನ್ನು ಖರ್ಚುಮಾಡಬೇಕಾಗುವುದು. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು.‌ ಮಕ್ಕಳ ವಿಚಾರದಲ್ಲಿ ನಿಷ್ಪಕ್ಷಪಾತಿಯಾಗುವುದು ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು.

ಧನು ರಾಶಿ: ಸ್ನೇಹಿತರ ಜೊತೆ ಸಮಾರಂಭದಲ್ಲಿ ಭಾಗಿಯಾಗುವಿರಿ. ನೆಚ್ಚಿನ ವ್ಯಕ್ತಿಗಳ ಭೇಟಿಯೂ ಆಗಲಿದ್ದು, ಸಂತೋಷದಿಂದ ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶವು ಅನಿರೀಕ್ಷಿತವಾಗಿ ಸಿಗಲಿದ್ದು, ಅದನ್ನು ಕಡೆಗಣಿಸುವುದು ಬೇಡ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ಸುಲಭಕ್ಕೆ ಸಿಗದ ವಸ್ತುಗಳನ್ನು ಬಲದಿಂದ ಪಡೆಯುವತ್ತ ಚಿಂತಿಸುವಿರಿ.

ಮಕರ ರಾಶಿ: ಆತ್ಮವಿಶ್ವಾಸವೇ ನಿಮ್ಮ ಎಲ್ಲ ಕೆಲಸಗಳನ್ನು ನಿಶ್ಚಿಂತೆಯಿಂದ ಮಾಡಲು ಅನುವುಮಾಡುಕೊಡುವುದು. ನಿಮ್ಮ ಯೋಜನೆಯು ಪೂರ್ಣ ವ್ಯತ್ಯಾಸವಾದ ಕಾರಣ ಮನೆಯಲ್ಲಿ ಕಲಹವಾಡುವಿರಿ. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಸೂಕ್ತ ಪರಿಹಾರದ ಕಡೆ ಗಮನವಿರಲಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ‌ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ವಿನೋದಕ್ಕೆಂದು ಆಡಿದ ಮಾತು ಗಂಭೀರಸ್ವರೂಪವನ್ನು ಪಡೆದೀತು. ನಿಮ್ಮವರೇ ನಿಮ್ಮ‌ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ.

ಕುಂಭ ರಾಶಿ: ಸಾಧಕರ ಸಹವಾಸವು ನಿಮಗೆ ಸಿಗಲಿದೆ. ಅವರಿಂದ ಪ್ರೇರಣೆಯನ್ನು ಪಡೆದು ಹೊಸತನ್ನು ಏನನ್ನಾದರೂ ಆರಂಭಿಸುವಿರಿ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದ್ದು ಉತ್ಸಾಹದಿಂದ ಇರುವಿರಿ. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ನಿಮ್ಮನ್ನು ಯಾರಿಗಾದರೂ ಹೋಲಿಸುವುದು ನಿಮಗೆ ಇಷ್ಟವಾಗದು. ನೌಕರರಿಲ್ಲದೇ ಉದ್ಯಮಕ್ಕೆ ಅಡ್ಡಿಯಾದೀತು. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು.

ಮೀನ ರಾಶಿ: ಹೊಸತನಕ್ಕೆ ನೀವು ತೆರೆದುಕೊಳ್ಳುವಿರಾದರೂ ಗೊಂದಲಗಳು ನಿವಾರಣೆಯಾಗದೇ ಇರಬಹುದು. ಹಳೆಯ ಮಾತುಗಳನ್ನು ಮರೆತುಬಿಡುವಿರಿ.‌ ಕೊಟ್ಟ ಮಾತನ್ನು ಯಾರಾದರೂ ನೆನಪಿಸಬೇಕಾದೀತು. ದಾಂಪತ್ಯದ ವಾಗ್ವಾದವು ಅತಿರೇಕಕ್ಕೆ ಹೋಗಬಹುದು. ‌ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು.‌ ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿ. ದೇಹವನ್ನು ಬೆಳೆಸುವ ಬಗ್ಗೆ ಕಾಳಜಿ ಬರುವುದು.

ಲೋಹಿತ ಹೆಬ್ಬಾರ್ – 8762924271 (what’s app only)

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ