Daily Horoscope 14 September 2024: ಪ್ರಮುಖ ತೀರ್ಮಾನವನ್ನು ಒಬ್ಬರೇ ಮಾಡುವುದು ಬೇಡ

ಸೆಪ್ಟೆಂಬರ್​ 14,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಅಪವಾದದ ಮೂಲವನ್ನು ತಡಕಾಡುವ ಪ್ರಯತ್ನ ಮಾಡುವಿರಿ. ನೀವು ಯಾರೊಂದಿಗಾದರೂ ಹೊಸ ವ್ಯವಹಾರವನ್ನು ಮಾಡಲು ಯೋಚಿಸುತ್ತಿದ್ದರೆ, ಈ ದಿನವು ಅವರಿಗೆ ಉತ್ತಮವಾಗಿಲ್ಲ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 14 September 2024: ಪ್ರಮುಖ ತೀರ್ಮಾನವನ್ನು ಒಬ್ಬರೇ ಮಾಡುವುದು ಬೇಡ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶೋಭನ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:33 ಗಂಟೆ, ರಾಹು ಕಾಲ ಬೆಳಿಗ್ಗೆ 09:25 ರಿಂದ 10:56, ಯಮಘಂಡ ಕಾಲ ಮಧ್ಯಾಹ್ನ 01:59 ರಿಂದ 03:30ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:53ರ ವರೆಗೆ.

ಮೇಷ ರಾಶಿ: ಪ್ರೇಮ ಜೀವನ ನಡೆಸುವ ಜನರು ಇಂದು ಸ್ವಲ್ಪ ಒತ್ತಡವನ್ನು ಎದುರಿಸಬಹುದು. ಅರ್ಹರ ಮೇಲೆ ಇಟ್ಟ ನಂಬಿಕೆ ಹುಸಿಯಾಗದು. ನೀವು ಕುಟುಂಬದ ಸದಸ್ಯರ ಬಗ್ಗೆ ಸ್ವಲ್ಪ ಚಿಂತಿತರಾಗಬಹುದು. ಈ ಸಂಬಂಧದ ಜೊತೆ ಮುಂದುವರಿಯುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಆಲೋಚನೆಗಳನ್ನು ಸುಗಮಗೊಳಿಸುತ್ತದೆ. ವೇಗವಾಗಿ ಕಾರ್ಯವನ್ನು ಮಾಡುವ ಭರದಲ್ಲಿ ತಪ್ಪು ಮಾಡಿಕೊಂಡು, ಕಷ್ಟದಲ್ಲಿ ಸಿಕ್ಕಿಬೀಳುವಿರಿ. ನೀವು ಇನ್ನೊಬ್ಬರ ಮಾತನ್ನು ಧನಾತ್ಮಕವಾಗಿ ತೆಗೆದುಕೊಳ್ಳಬಹುದು. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ. ಇಂದು ಕುಟುಂಬದ ಯಾವುದೇ ಸದಸ್ಯರ ಮದುವೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದು ಕೊನೆಗೊಳ್ಳುತ್ತದೆ. ನಿಮ್ಮ ನಿರ್ಧಾರಗಳಿಗೆ ಸಂಗಾತಿ ಉತ್ತಮವಾದ ಸಲಹೆ ನೀಡಬಹುದು.

ವೃಷಭ ರಾಶಿ: ಇಂದು ನೀವು ಕಳೆದುಕೊಂಡ ವಸ್ತುವಿನಿಂದ ಚಿಂತೆಗೀಡಾಗಿ, ಪುನಃ ಪಡೆದು ಸಂತೋಷಗೊಳ್ಳುವಿರಿ. ನಿಮಗೆ ಕೆಲವು ಹೊಸ ಅವಕಾಶಗಳು ದೊರೆಯುವುದು. ಈ ದಿನ ನೀವು ಹೆಚ್ಚಿನ ಪ್ರೀತಿಯನ್ನು ಅನುಭವಿಸುವಿರಿ. ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. ಅದೇ ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ಕೆಲವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಾರಿರಿ. ತುಂಬಾ ಸಂತೋಷವನ್ನು ಅನುಭವಿಸುವಿರಿ. ನೀವು ಬಯಸಿದ್ದನ್ನು ಸಂಗಾತಿಯು ಸಾಧಿಸುತ್ತಾರೆ. ನಿಮ್ಮ ಪ್ರಗತಿಯ ಬಗ್ಗೆ ಸಿಂಹಾವಲೋಕನ ಮಾಡುವ ಅವಶ್ಯಕತೆ ಇದೆ. ಪ್ರಮುಖ ತೀರ್ಮಾನವನ್ನು ಒಬ್ಬರೇ ಮಾಡುವುದು ಬೇಡ. ಆರ್ಥಿಕ ದೃಷ್ಟಿಯಿಂದಲೂ ದಿನವು ಉತ್ತಮವಾಗಿರುತ್ತದೆ. ಬಯಸಿದ ಫಲಿತಾಂಶವನ್ನು ಪಡೆದ ಅನಂತರ ಮನಸ್ಸು ಸಂತೋಷವಾಗುತ್ತದೆ. ಸ್ನೇಹಿತರಿಂದಲೂ ನಿಮಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಕಲಾವಿದರಿಗೆ ಉತ್ತಮ ದಿನವಾಗಿದೆ.

ಮಿಥುನ ರಾಶಿ: ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲವು ಹೊಸ ವ್ಯವಹಾರಗಳಿಗೆ ಅವಕಾಶಗಳು ಸಿಗಲಿದ್ದು, ಇದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ಉತ್ತಮ ಬೆಳವಣಿಗೆಗಳ ಮೂಲಕ ಮನಸಿಗೆ ನೆಮ್ಮದಿ ದೊರೆಯುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಿಗುತ್ತಿರುವ ಬೆಂಬಲದ ಕೊರತೆಯಿಂದ ನೀವು ಸಿಟ್ಟಾಗುವಿರಿ. ಈ ದಿನದ ಆರಂಭದಲ್ಲಿ ನಿಮ್ಮ ಪ್ರೀತಿಯ ಜೀವನವು ತುಂಬಾ ಅಸಮಾಧಾನವನ್ನು ಅನುಭವಿಸುತ್ತದೆ. ನಿಮ್ಮ ಯೋಜನೆಯನ್ನು ಅನ್ಯರು ಬದಲಿಸಬಹುದು. ಕೆಲಸದ ವಿಷಯಕ್ಕೆ ಬಂದಾಗ ನೀವು ಬಹಳ‌ ಕಠೋರರಾಗುವಿರಿ. ಕನಸುಗಳನ್ನು ಸ್ನೇಹಿತರ ಜತೆಗೆ ಹಂಚಿಕೊಳ್ಳುವಿರಿ. ನಾಯಕತ್ವದ ಕೌಶಲ್ಯಗಳು ಯಾವುದೇ ತೊಂದರೆಗಳನ್ನು ಅನಾಯಾಸವಾಗಿ ದಾಟಲು ಸಹಾಯ ಮಾಡುತ್ತದೆ. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಅದು ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಕರ್ಕಾಟಕ ರಾಶಿ: ಇಂದು ನೀವು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಪೂರ್ಣ ಉತ್ಸಾಹದಿಂದ ಮಾಡುವಿರಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ನೀವು ಧನಾತ್ಮಕ ಹಾದಿಯಲ್ಲಿ ಸಾಗುತ್ತಿರುವಂತೆ ತೋರಿಸುತ್ತದೆ. ನೀವು ಅನುಭವಿಸುತ್ತಿರುವ ಧನಾತ್ಮಕ ಶಕ್ತಿಯನ್ನು ಆನಂದಿಸಿ. ಸಂಶೋಧನಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಇದೀಗ ಸೂಕ್ತ ಸಮಯ. ಉದ್ಯಮಿಗಳ ಒಡನಾಟವು ನಿಮ್ಮ ಉದ್ಯಮಕ್ಕೆ ಪೂರಕ. ನಿಮ್ಮ ಸಂಬಂಧವನ್ನು ಒಂದು ಹಂತ ಮೇಲಕ್ಕೆ ಇಡಲು ಯೋಚಿಸುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಗುರಿಯನ್ನು ತಲುಪಬಹುದು. ದೂರದೃಷ್ಟಿಯಿಂದ‌ ಕೆಲಸವನ್ನು ಮಾಡಿ. ಯಾರಿಗಾದರೂ ಹೇಳುವುದು ಅವರ ಪೂರ್ಣಗೊಳಿಸುವಿಕೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮಗೆ ಹತ್ತಿರವಿರುವವರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಕೇಳಬಹುದು. ನಿಮ್ಮ ಅನುಪಮ ಜ್ಞಾನವು ಸದುಪಯೋಗ ಆಗಬಹುದು.

ಸಿಂಹ ರಾಶಿ: ವಿದೇಶದಲ್ಲಿರುವ ಸಂಬಂಧಿಕರಿಂದ ಶುಭ ಸುದ್ದಿಯು ಬರುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ನೀವು ಸ್ವಲ್ಪ ಸಮಯದಲ್ಲಿ ಭೂ ವ್ಯವಹಾರವನ್ನು ಮಾಡಲು ಉತ್ತಮ ಗ್ರಾಹಕರು ಸಿಗಲಿದ್ದಾರೆ. ಬೇಡದ ಸಂಗತಿಗಳನ್ನು ಹೊರಗೆ ಕಳುಹಿಸಿ. ನೆಮ್ಮದಿ ಅನ್ನಿಸೀತು. ಇಂದು ನಿಮಗೆ ಸಾಕಷ್ಟು ಸಮಯವಿರುವಂತೆ ಭಾಸವಾದೀತು. ನಿಮ್ಮ ಮಾತುಗಳೇ ದ್ವೇಷಕ್ಕೆ ಕಾರಣವಾಗುವುದು. ಅದಕ್ಕೆ ಘಾಸಿಯಾಗಂತೆ ನೋಡಿಕೊಳ್ಳುತ್ತೀರಿ ಕೂಡ. ಈ ದಿನ ತಪ್ಪುಯಿಂದ‌ ಹೊರಬರುವಿರಿ. ವಾಸ್ತವದಲ್ಲಿ ಇರುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ವ್ಯಾಪಾರದಲ್ಲಿ ಮಾಡಿದ ಬದಲಾವಣೆಗಳು ಉತ್ತಮ ಲಾಭವನ್ನು ನೀಡಬಹುದು. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಕನ್ಯಾ ರಾಶಿ: ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಜೀವನ ಸಂಗಾತಿಯ ಸಲಹೆ ನಿಮಗೆ ಬೇಕಾಗುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸೇರಿಸಲು ಕಷ್ಟವಾದೀತು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲೇ ಬೇಕು ಎಂಬ ಮಹದಾಸೆ ನಿಮ್ಮಲ್ಲಿ ಇರಲಿದೆ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಸಂಗಾತಿಯ ಜೊತೆ ಸಮಯವನ್ನು ಇಂದು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆ ಉಂಟಾಗಬಹುದು.‌ ಇಂದು ನಿಮಗೆ ಇಷ್ಟವಾದವರ ಜೊತೆ ಹರಟೆ ಹೊಡೆಯುವಿರಿ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ನೀವು ಸಂಜೆ ನಿಮ್ಮ ಸಂಬಂಧಿಕರ ಮನೆಗೆ ಹೋಗಬಹುದು. ಹಿರಿಯರ ಸಹಕಾರದಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು.

ತುಲಾ ರಾಶಿ: ಇಂದು ವಿದ್ಯಾರ್ಥಿಗಳು ಸ್ಪರ್ಧಾ ಪರೀಕ್ಷೆಯ ತಯಾರಿಯ ಕಡೆ ಗಮನ ಕೊಡಬೇಕು. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಕಾರ್ಯದ ಒತ್ತಡವಿರಲಿದೆ. ಇಂದು ನಿಮ್ಮ ಕಾರ್ಯವು ನಿಮಗೆ ಸಂತೋಷವನ್ನು ತರಬಹುದು. ನಿಮ್ಮ ಕೆಲಸವು ಮೇಲಧಿಕಾರಿಗಳ ಬೆಂಬಲಕ್ಕೆ ಪೂರಕವಾಗುವುದು‌. ಅಥವಾ ಅನ್ಯ ಮಾರ್ಗವೆಂದರೆ ಕಂಡುಕೊಳ್ಳಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನಿಮ್ಮ ಅನಗತ್ಯ ವ್ಯವಹಾರವನ್ನು ನಿಯಂತ್ರಿಸಬೇಕು. ನಿಮ್ಮ ಸ್ನೇಹಿತರ ಜೊತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕೆಲಸದ ಒತ್ತಡದಿಂದ ಪ್ರಮುಖ ಕಾರ್ಯವನ್ನು ಮರೆಯುವ ಸಾಧ್ಯತೆಯಿದೆ. ವ್ಯಾಪಾರಿಗಳಿಗೆ ಆದಾಯದ ದಿನವಾಗಲಿದೆ. ಉದ್ಯಮಿಗಳ ಆರ್ಥಿಕ ಪರಿಸ್ಥಿತಿಯು ಸ್ವಲ್ಪ ದುರ್ಬಲವೆನಿಸುವುದು.

ವೃಶ್ಚಿಕ ರಾಶಿ: ನಿಮ್ಮ ಕೆಲಸದಲ್ಲಿ ಆಗುತ್ತಿದ್ದ ಸಮಸ್ಯೆಗಳು ಇಂದು ಕೊನೆಗೊಳ್ಳಲಿವೆ. ನಿಮ್ಮ ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ನಿಮ್ಮ ಕೋಪವನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಮುಖ್ಯ. ಅಪಾಯದ ಮುನ್ಸೂಚನೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಿರಿ. ನಿಮ್ಮ ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಬಿಸಿ ತುಪ್ಪದಂತೆ ಆಗಬಹುದು. ನಿಮಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸಿ. ವಿದೇಶಿ ವ್ಯಾಪಾರದಿಂದ ತೊಂದರೆ ಎದುರಾಗಬಹುದು. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಆದ್ದರಿಂದ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಅದೇ ಕೆಲಸವನ್ನು ಇಂದೇ ಮಾಡಿ. ಹಿರಿಯರನ್ನು ನಿಷ್ಠುರ ಮಾಡಿಕೊಳ್ಳುವಿರಿ. ಅವಿವಾಹಿತರಿಗೆ ಇಂದು ಸಂಬಂಧ ಕೂಡಿಬರುವುದನ್ನು ಒಪ್ಪಿಕೊಳ್ಳುವಿರಿ.

ಧನು ರಾಶಿ: ನೀವು ಕೌಟುಂಬಿಕ ಆಸ್ತಿಗೆ ಸಂಬಂಧಿಸಿದ ಕಾನೂನು ವಿವಾದವನ್ನು ಹೊಂದಿದ್ದರೆ. ಇಂದು ಪರಿಸ್ಥಿತಿಯು ನಿಮ್ಮ ಪರವಾಗಿ ತಿರುಗಬಹುದು. ನಿಮ್ಮ ಪ್ರತಿ ಮಾತಿನ್ನೂ ಇನ್ನೊಬ್ಬರು ಗಮನಿಸುವರು.‌ ಸಂಗಾತಿಯ ಬಗ್ಗೆ ಸಂದೇಹವು ಹೆಚ್ಚಿರುವುದು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಯೋಚನೆಗಳು ಇದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದೇ ಇರದಬಹುದು. ಇತರರಲ್ಲಿ ನಿಮ್ಮ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ಅನ್ಯಾಯದ ಮಾರ್ಗದಲ್ಲಿ ನೀವಿದ್ದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಉದ್ಯೋಗದಲ್ಲಿರುವ ಜನರು ಇಂದು ಹೊಸ ಕೊಡುಗೆಯನ್ನು ಪಡೆಯಬಹುದು. ಆದಾಯ ಕಡಿಮೆ ಖರ್ಚು ಹೆಚ್ಚಾಗಲಿದ್ದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ಇರದು.

ಮಕರ ರಾಶಿ: ಇಂದು ರಾಜಕೀಯದಲ್ಲಿ ತೊಡಗಿಕೊಂಡವರಿಗೆ ಸಂತೋಷಕರವಾದ ಸುದ್ದಿ ಸಿಗಲಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಮುಂದಿನ ಕಾರ್ಯವು ಸೂಚಿಸದೇ ಬಹಳ ಜಡರಂತೆ ಆಗುವಿರಿ‌. ಇಂದು ನೀವು ಮನೆಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯಿಂದ ಪ್ರಯತ್ನಿಸಬೇಕಾದೀತು. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಆಭಾಸವೆನಿಸುವುದು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆಗ ನಿರ್ಧಾರಗಳು ಸರಿಯಾಗಿರುತ್ತವೆ. ಹಳೆಯ ವಸ್ತುವನ್ನೇ ದುರಸ್ತಿ ಮಾಡುತ್ತ ಬಳಸುವಿರಿ. ಇಂದು ನೀವು ನಿಮ್ಮ ಮಗುವಿನ ಶಿಕ್ಷಣದ ಬಗ್ಗೆ ಚಿಂತಿತರಾಗಬಹುದು, ಇದರಲ್ಲಿ ನಿಮ್ಮ ಸಂಗಾತಿಯ ಸಲಹೆಯ ಅಗತ್ಯವಿರುತ್ತದೆ. ದೇವರ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ.

ಕುಂಭ ರಾಶಿ: ನಿಮ್ಮ ಸಾಮಾಜಿಕ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಬಹುದು. ಇಂದು ನೀವು ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಿ, ಆನಂದಿಸುವಿರಿ. ಕೆಲವು ಸವಾಲಿನ ಪರಿಸ್ಥಿತಿಗಳು ಬರುವ ಸಾಧ್ಯತೆ ಇದೆ. ಇದು ಕೆಲಸಕ್ಕೆ ಉತ್ತೇಜನವನ್ನು ಕೊಡುವುದು. ಇಂದು ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸುವಲ್ಲಿ ಸೋಲುವಿರಿ. ಕೆಲ ಕಾಲ ಹೊಸ ಉದ್ಯಮಕ್ಕೆ ಪಾಲುದಾರರಾಗುವುದು ಬೇಡ. ಅನುಭವಸ್ಥರ ಮಾತನ್ನು ಕೇಳುವ ವ್ಯವಧಾನವಿರಲಿ. ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ನಿಮಗೆ ಅಪೂರ್ವವಾದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅಡೆತಡೆಗಳನ್ನು ನಿವಾರಿಸಲು ತಮ್ಮ ಪೋಷಕರನ್ನು ಸಂಪರ್ಕಿಸಬೇಕಾಗುತ್ತದೆ. ಸೇಡನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ.

ಮೀನ ರಾಶಿ: ನಿಮ್ಮ ಗೃಹ ನಿರ್ಮಾಣ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ಆದರೆ ವ್ಯವಹಾರದಲ್ಲಿ ಉತ್ತಮ ಲಾಭದಿಂದಾಗಿ ನೀವು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಾಯಕ ಸ್ಥಾನದಿಂದ ನೀವು ಕೆಳಗಿಳಿಯುವ ಆಲೋಚನೆ ಮಾಡುವಿರಿ. ಇಂದು ಸಾಮಾಜಿಕ ಕೆಲಸವು ನಿಮಗೆ ಬೇಸರ ತರಿಸಬಹುದು. ನೆಮ್ಮದಿಗಾಗಿ ಎಲ್ಲಿಗಾದರೂ ಹೋಗುವ ಮನಸ್ಸು ಮಾಡುವಿರಿ. ಕಛೇರಿಯಲ್ಲಿ ಎಂದಿನ ಉತ್ಸಾಹವು ಇರುವುದಿಲ್ಲ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಸ್ಥಾನವು ಸಿಗಬಹುದು. ಮಕ್ಕಳ‌ ಮನಸ್ಸು ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ಸೋಲುವಿರಿ. ನಿಮ್ಮ ಮೂಗಿನ ನೇರದ ವಿಷಯಕ್ಕೆ ಜನ ಕುಟುಂಬದಲ್ಲಿ ಬೆಂಬಲ ಸಿಗದು. ನಿಮ್ಮ ಇಂದಿನ ಒತ್ತಡವನ್ನು ನೋಡಿ ಮಾತುಕೊಡಿ. ಅಪವಾದದ ಮೂಲವನ್ನು ತಡಕಾಡುವ ಪ್ರಯತ್ನ ಮಾಡುವಿರಿ. ನೀವು ಯಾರೊಂದಿಗಾದರೂ ಹೊಸ ವ್ಯವಹಾರವನ್ನು ಮಾಡಲು ಯೋಚಿಸುತ್ತಿದ್ದರೆ, ಈ ದಿನವು ಅವರಿಗೆ ಉತ್ತಮವಾಗಿಲ್ಲ. ಹಾಗಾಗಿ ಮುಂದುವರಿಯುವುದು ಬೇಡ. ಇಂದು ನೀವು ನಿಮ್ಮ ಸಂಗಾತಿಗೆ ಉಡುಗೊರೆಯನ್ನು ಖರೀದಿಸಬಹುದು. ಅದನ್ನು ನೋಡಿ ಅವರು ಸಂತೋಷವಾಗಿರುತ್ತಾರೆ.

ಲೋಹಿತ ಹೆಬ್ಬಾರ್ – 8762924271 (what’s app only)