ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯ ನಕ್ಷತ್ರ: ಭರಣೀ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ09:24 ರಿಂದ 10:55, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:23 ರಿಂದ 07:53ರ ವರೆಗೆ.
ಮೇಷ ರಾಶಿ : ಇಂದು ನೀವು ಸಂಗಾತಿಯ ವಿಚಾರಕ್ಕೆ ಖರ್ಚು ಮಾಡಬೇಕಾಗುವುದು. ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ದಾಂಪತ್ಯದಲ್ಲಿ ಮಾತುಕತೆಗಳು ವಿವಾದವಾಗಿ ಬದಲಾಗಬಹುದು. ವಿದ್ಯುತ್ ಉಪಕರಣಗಳ ಉದ್ಯಮವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯಲಿದ್ದೀರಿ. ಕೊರತೆಗಳನ್ನು ಅತಿಯಾಗಿ ಆಲೋಚಿಸಿದರೆ ಇಂದಿನ ದಿನ ಕಷ್ಟವಾಗುವುದು. ನಿಮ್ಮ ಉಪಕ್ರಮವು ಸರಿಯಾಗಿರದೇ ಇರುವುದರಿಂದ ಗುರಿಯೂ ತಪ್ಪಬಹುದು. ಪ್ರವಾಸ ಮಾಡುವುದು ನಿಮಗೆ ಇಷ್ಟವಾಗುವುದು. ಮನೆಯ ವಾತಾವರಣವೂ ನಿಮಗೆ ಇಷ್ಟವಾಗಲಿದೆ. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ಯಾರಾದರೂ ನಿಮ್ಮ ಜೊತೆ ವಾದಕ್ಕೆ ಬಂದರೆ ನಿಮ್ಮ ನಿಲುವನ್ನು ಸ್ಪಷ್ಟವಾಗಿಸುವಿರಿ. ನೀವು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಇಂದು ಆಗದು.
ವೃಷಭ ರಾಶಿ : ನಿಮ್ಮ ಯಶಸ್ಸಿಗೆ ಯಾರಾದರೂ ಕಪ್ಪುಚುಕ್ಕೆ ಇಡಬಹುದು. ಇಂದು ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ತಯಾರಿ ಮಾಡುವಿರಿ. ಬಂಧುಗಳು ನಿಮಗೆ ಕಿರಿಕಿರಿ ಆಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲಿದ್ದೀರಿ. ಸಂಗಾತಿಯ ಜೊತೆ ವಿರಸವು ಇರಲಿದೆ. ಸಜ್ಜನರ ಸಹವಾಸವನ್ನು ಬಯಸುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುವಿರಿ. ನಿಮ್ಮ ಹೇಳಿಕೆಯನ್ನು ನೀವೇ ಒಪ್ಪಿಕೊಳ್ಳಲಾರಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಲಿದೆ. ಅಸ್ಥಿರ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಬೇಸರವನ್ನು ಹೇಗಾದರೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳು ಗೊತ್ತಾಗಲಿದೆ. ಎಲ್ಲರೆದುರು ಮಾತನಾಡಲು ನಿಮಗೆ ಭಯವಾಗಲಿದೆ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು. ಆಸ್ತಿಯನ್ನು ಮಾರಾಟ ಮಾಡಲು ಇಚ್ಛಿಸುವಿರಿ. ಇಂದು ನಿಮ್ಮ ಸ್ನೇಹಿತರು ಮನೆಗೆ ಬರಬಹುದು. ಕೆಲವು ಪೆಟ್ಟುಗಳು ನಿಮ್ಮನ್ನು ರೂಪಿಸುವುದು.
ಮಿಥುನ ರಾಶಿ : ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗವುದು. ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ಆರ್ಥಿಕದಿಂದ ನೀವು ಬಲವಾಗುವಿರಿ. ಸಹೋದರಿಯ ಜೊತೆ ಸಂತೋಷದಿಂದ ನೀವು ಮಾತನಾಡಿ ಸಂತೋಷಗೊಳಿಸುವಿರಿ. ಹಿತಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಆಕಸ್ಮಿಕ ಒತ್ತಡವನ್ನು ಸುಲಭವಾಗಿ ಸ್ವೀಕರಿಸಲಾರಿರಿ. ಸ್ಥಿರಾಸ್ತಿಯ ವಿಷಯದಲ್ಲಿರುವ ಗೊಂದಲು ನಿವಾರಣೆ ಆಗಬಹುದು. ಪ್ರತ್ಯೇಕವಾಗಿ ಇರಲು ಬಯಸುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ತಿಳಿಯದಾಗಿದೆ. ರಾಜಕಾರಿಣಿಗಳ ಒಡನಾಟವು ನಿಮಗೆ ಹೊಸ ಮಾರ್ಗವನ್ನು ತೋರಿಸಬಹುದು. ಕಾರ್ಯದಲ್ಲಿ ಕ್ರಮಬದ್ಧ ಇದ್ದರೆ ಬೇಗ ಮುಕ್ತಾಯವಾಗುವುದು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಪ್ರಯಾಣದಲ್ಲಿ ನಿಮಗೆ ಸುರಕ್ಷತೆಯ ಅವಶ್ಯಕತೆ ಇರಲಿದೆ. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಭೋಗ್ಯದ ಮನೆಯನ್ನು ಬದಲಾಯಿಸುವಿರಿ.
ಕರ್ಕಾಟಕ ರಾಶಿ : ಯಾರಾದರೂ ಸರಿಯಾದ ಮಾರ್ಗವನ್ನು ತೋರಿಸಿದರೆ ಮಾತ್ರ ಮುನ್ನಡೆಯುವಿರಿ. ನೂತನ ಉದ್ಯೋಗವು ನಿಮಗೆ ಪ್ರಾಪ್ತವಾಗಲಿದೆ. ಅಧಿಕಾರಿಯ ಜೊತೆ ನಿಮ್ಮ ಮಾತುಕತೆಗಳು ಮಿತಿಮೀರಲಿದೆ. ದಿನಬಳಕೆಯ ವಸ್ತುವನ್ನು ಮಾರಾಟ ಮಾಡುವವರು ಲಾಭವನ್ನು ಗಳಿಸುವರು. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಅದನ್ನು ಕೈ ಬಿಡುವಿರಿ. ಅಧಿಕ ವೆಚ್ಚವನ್ನು ನೀವು ಮಾಡಲಿದ್ದೀರಿ. ಮೇಲಧಿಕಾರಿಗಳಾಗಿದ್ದರೆ ಪಕ್ಷಪಾತ ತೋರದೇ ನೌಕರರಿಗೆ ಕಾರ್ಯವನ್ನು ಹಂಚುವಿರಿ. ನಟರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಸಂಬಂಧಗಳು ನಿಮಗೆ ಸಹಕಾರವಾಗಲಿದೆ. ಸಾಹಸಕ್ಕೆ ಹೋಗುವಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಸಮಯವನ್ನೂ ಮಾರ್ಗವನ್ನೂ ಬದಲಾಯಿಸಬಹುದು. ಉನ್ನತ ಹುದ್ದೆಗೆ ಏರುವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು. ಮಕ್ಕಳ ಮೇಲೆ ನಿಮ್ಮ ಅನುಕಂಪವು ಹೆಚ್ಚಾಗುವುದು.
ಸಿಂಹ ರಾಶಿ : ತಂದೆಯ ಕಾರಣದಿಂದ ನಿಮಗೆ ಗೌರವವು ಸಿಗುವುದು. ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉದ್ಯೋಗದ ಕಾರಣಕ್ಕೆ ನಿಮಗೆ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಬರಬೇಕಾದ ಹಣವನ್ನು ನೀವು ಪಡೆಯಲಿದ್ದೀರಿ. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಉದ್ಯೋಗಕ್ಕೆ ಸೇರಲು ಮಾನಸಿಕವಾಗಿ ನೀವು ಸಿದ್ಧರಾಗುವಿರಿ. ನಿಮ್ಮನ್ನು ವಿರೋಧಿಸುವವರ ಮುಂದೆ ಸಮಾನವಾಗಿ ನಿಲ್ಲಬೇಕು ಎಂಬ ಹಠ ಬರಬಹುದು. ಗೃಹನಿರ್ಮಾಣಕ್ಕೆ ತಕ್ಕಂತೆ ನಿಮ್ಮ ನಿರ್ಧಾರಗಳು ಬದಲಾಗಲಿದೆ. ಕಣ್ಣಿನ ತೊಂದರೆಯಿಂದ ಕಷ್ಟಪಡುವಿರಿ. ಸಮಯೋಚಿತ ಸ್ಫುರಣೆಯ ನಿಮಗೆ ಯಶಸ್ಸನ್ನು ತರಲಿದೆ. ಇಂದಿನ ಅಧಿಕ ಲಾಭವನ್ನು ಹೂಡಿಕೆ ಮಾಡಬಹುದು. ಉದ್ಯೋಗಕ್ಕೆ ಬೇರೆ ಪ್ರದೇಶಕ್ಕೆ ಹೋಗುವಿರಿ. ದೌರ್ಬಲ್ಯವನ್ನು ಮೆಟ್ಟಿ ಸಾಧಿಸಬೇಕಾದುದು ಇದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ಯಾರದ್ದಾದರೂ ಪ್ರಭಾವವನ್ನು ಬಳಸಿಕೊಂಡು ಅಧಿಕಾರವನ್ನು ಪಡೆಯುವಿರಿ.
ಕನ್ಯಾ ರಾಶಿ : ಇಂದು ಇನ್ನೊಬ್ಬರಿಗೆ ಬರುವ ಧನಕ್ಕೆ ಸಹಾಯ ಮಾಡುವಿರಿ. ನಿಮ್ಮ ಅಪರೂಪದ ವಸ್ತುವನ್ನು ಕಳೆದುಕೊಳ್ಳುವಿರಿ. ಹೊಸ ಸ್ಥಳಗಳನ್ನು ನೀವು ನೋಡಲು ನಿಮಗೆ ಇಷ್ಟವಾಗಲಿದೆ. ಸಮಯಪಾಲನೆಗೆ ನೀವು ಹೆಚ್ಚು ಒತ್ತನ್ನು ಕೊಡುವಿರಿ. ನೀರಿನಿಂದ ಇಂದು ಭಯವಾಗುವ ಸಾಧ್ಯತೆ ಇದೆ. ನೀವು ಸುಳ್ಳು ಹೇಳುತ್ತಿರುವುದನ್ನು ನಿಮ್ಮ ಮುಖ ಹೇಳುವುದು. ವಾಹನ ಚಾಲಕರು ಎಚ್ಚರಿಕೆಯಿಂದ ಚಲಾವಣೆ ಮಾಡಬೇಕಾಗುವುದು. ವೃತ್ತಿಯನ್ನು ಆನಂದಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ವಿಷಯದಲ್ಲಿ ನಿಮಗೆ ಇಷ್ಟ ಕಡಿಮೆಯಾಗಲಿದೆ. ಕಾಲು ನೋವಿನಿಂದ ಬಳಲುವಿರಿ. ಇಂದಿನ ದಿನ ಒತ್ತಡದಿಂದ ಇರಲಿದೆ. ವಿದ್ಯಾರ್ಥಿಗಳು ಖುಷಿಯಿಂದ ಇರಲಿದ್ದು, ಇದಕ್ಕೆ ಸಾಧನೆಯು ಕಾರಣವಾಗಲಿದೆ. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಬಹುದು. ರಹಸ್ಯವನ್ನು ಬಿಟ್ಟುಕೊಡಲು ಇಚ್ಛಿಸುವಿರಿ. ಉದ್ಯೋಗಕ್ಕೆ ನಿಮ್ಮ ಮನಸ್ಸು ಸ್ಥಿರವಾಗಿ ಇರದು. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.
ತುಲಾ ರಾಶಿ : ಯಾರದೋ ಮಾತಿಗೆ ಅನದಯರನ್ನು ದೂಷಿಸುವ ಕೆಲಸದಲ್ಲಿ ತೊಡಗುವಿರಿ. ನೀವು ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ಮಾನಸಿಕವಾಗಿ ಬಳಲಲಿದ್ದೀರಿ. ದೈಹಿಕ ಸಾಮರ್ಥ್ಯದಿಂದ ಕುಗ್ಗಿರುವಿರಿ. ಜೀವನದಲ್ಲಿ ಬದಲಾವಣೆಯನ್ನು ಬಯಸುವಿರಿ. ಆಯ ತಪ್ಪದಂತೆ ನಡೆಯುವುದು ಅವಶ್ಯಕ. ನಿಮ್ಮ ಹೆಜ್ಜೆಯನ್ನೂ ಗಮನಿಸುವವರು ಇರುವರು. ಭೂಮಿಯ ವ್ಯವಹಾರದಲ್ಲಿ ಗೊಂದಲವಿರಲಿದೆ. ಸಂಬಂಧಗಳಲ್ಲಿ ನಿಮಗೆ ಅಪನಂಬಿಕೆ ಉಂಟಾಗಬಹುದು. ನಿಮ್ಮ ಮೇಲೆ ಅಪವಾದಗಳು ಬರುವ ಸಾಧ್ಯತೆ ಇದೆ. ರಾಜಕೀಯದಲ್ಲಿ ನೀವು ಸಿಕ್ಕಿಕೊಳ್ಳುವಿರಿ. ನೀರಿನ ಕಾರಣದಿಂದ ನಿಮ್ಮ ಆರೋಗ್ಯ ಕೆಡುವುದು. ವಿದೇಶದಲ್ಲಿ ಇದ್ದವರಿಗೆ ಸಂಕಡವಾಗಲಿದೆ. ನೂತನ ವಾಹನವನ್ನು ಖರೀದಿಸುವಿರಿ. ವಾತಾವರಣದಿಂದ ನಿಮಗೆ ಮನಸ್ಸು ಹಾಳಾಗಬಹುದು. ಯಾರನ್ನೋ ಹೆದರಿಸಿ ಕೆಲಸ ಮಾಡಿಸಿಕೊಳ್ಳುವ ವಿಚಾರಕ್ಕೆ ಹೋಗುವುದು ಬೇಡ.
ವೃಶ್ಚಿಕ ರಾಶಿ : ಯಾವ ವೈಯಕ್ತಿಕ ಜೀವನವನ್ನು ಸುಮ್ಮನೆ ಪ್ರವೇಶಿಸವುದು ಬೇಡ. ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚನೆಗಳು ಬರಬಹುದು. ಚರಾಸ್ತಿಯನ್ನು ಕಳೆದುಕೊಳ್ಳುವಿರಿ. ನಿಮ್ಮ ನಿಗದಿತ ಸಮಯವು ವ್ಯತ್ಯಾಸವಾಗಿ ಕಾರ್ಯಕ್ರಮವೂ ಬದಲಾಗಲಿದೆ. ಉದ್ವಿಗ್ನತೆಗೆ ಎಡಮಾಡಿಕೊಡದೇ ಸಮಾಧಾನಚಿತ್ತದಿಂದ ಇರುವುದನ್ನು ಕಲಿಯಬೇಕಾದೀತು. ನೌಕರರ ವಿಷಯದಲ್ಲಿ ಸಿಟ್ಟಾಗುವ ಸಾಧ್ಯತೆ ಇದೆ. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ. ಪ್ರಯತ್ನವನ್ನು ಮಾಡಿ, ಫಲವನ್ನು ಪಡೆಯುವಿರಿ. ಕರೆದಲ್ಲಿಗೆ ಹೋಗುವುದು ಇಷ್ಟವಾದರೂ ಇಂದು ಅದು ಸಾಧ್ಯವಾಗದು. ಸಮಯೋಚಿತ ಉತ್ತರಗಳು ನಿಮಗೆ ಧನಾತ್ಮಕ ಅಂಕಗಳನ್ನು ತಂದುಕೊಡುವುದು. ನಿಮ್ಮ ವರ್ತನೆಗಳು ಇತರರಿಗೆ ಮಾದರಿಯಾಗಬಹುದು. ನಿಮ್ಮ ಭೂಮಿಯು ನಿಮಗೆ ಸಿಗಲಿದೆ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಗೃಹನಿರ್ಮಾಣದಲ್ಲಿ ಗೊಂದಲವು ಬರಬಹುದು. ದಿನದ ಕೊನೆಯಲ್ಲಿ ಅಶುಭ ಸಮಾಚಾರ ಬರಬಹುದು.
ಧನು ರಾಶಿ : ಮಹಿಳೆಯರಿಗೆ ಕೊಡಬೇಕಾದ ಗೌರವವನ್ನು ಕೊಡುವಿರಿ. ಇಂದು ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿಮ್ಮ ಸ್ವಭಾವಗಳು ಇಷ್ಟವಾಗದು. ನಿಮ್ಮ ಮಾತುಗಳನ್ನು ನಿರಾಸಕ್ತಿಯಿಂದ ಪಾಲಿಸುವರು. ನಿಮ್ಮ ಪ್ರಭಾವವನ್ನು ತೋರಿಸಲು ಹೋಗಿ ಅಪಮಾನಗೊಳ್ಳುವಿರಿ. ಸಂಬಂಧವನ್ನು ಮತ್ತಷ್ಟು ಆತ್ಮೀಯವಾಗಿಸಲು ಪ್ರಯತ್ನಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ನಿರೀಕ್ಷೆ ಇರಲಿದೆ. ಯಾರನ್ನೂ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾದ ಕಾರಣ ನಿಮಗೆ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಕುಳಿತು ಸರಿಮಾಡಿಕೊಳ್ಳಿ. ಚಲಿಸುತ್ತಿದ್ದರೆ ಯಾವುದಾದರೂ ಒಂದು ಸ್ಥಾನವನ್ನು ತಲುಪಲು ಸಾಧ್ಯ. ನಿಮ್ಮಲ್ಲಿ ಇರುವುದನ್ನು ದಾನಮಾಡುವಿರಿ. ಮಕ್ಕಳ ವಿವಾಹದ ಚಿಂತೆಯು ಕಾಡಲಿದೆ. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ನಿಮ್ಮ ಬಂಡವಾಳಕ್ಕೆ ತಕ್ಕ ಮನೆಯು ಸಿಗಲಿದೆ.
ಮಕರ ರಾಶಿ : ನೀವು ವಿಶ್ವಾಸ ಯೋಗ್ಯರ ಜೊತೆ ಹೆಚ್ಚು ಬೆರೆಯುವಿರಿ. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಯಾರಾದರೂ ನಿಮ್ಮ ಹಾದಿಯನ್ನು ತಪ್ಪಿಸಬಹುದು. ದೈವೀಕ್ಷೇತ್ರದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ವಿವಾಹದಲ್ಲಿ ಆಸಕ್ತಿಯು ಕಡಿಮೆಯಾಗಲಿದೆ. ಸ್ವತಂತ್ರವಾಗಿರಲು ಬಯಸುವಿರಿ. ಮನೆಯವರ ವರ್ತನೆಯು ನಿಮಗೆ ಹಿಡಿಸದೇಹೋದೀತು. ಸಂಪತ್ತು ಕ್ಷಣಿಕ ಎಂದೆನಿಸಬಹುದು. ಸ್ತ್ರೀಯರಿಂದ ಸಹಾಯವನ್ನು ಪಡೆಯಲು ಇಚ್ಛಿಸುವಿರಿ. ಮಕ್ಕಳನ್ನು ಮನೆಯಿಂದ ಆಚೆ ಇಟ್ಟು ಓದಿಸುವ ಆಲೋಚನೆ ಇರಲಿದೆ. ನಿಮ್ಮ ನಡತೆಯಲ್ಲಿ ಅನುಮಾನ ಕಾಣಬಹುದು. ಸಮಯವು ಅಮೂಲ್ಯ ಎಂದು ಅನ್ನಿಸಬಹುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಬಯಸುವಿರಿ. ನಿಮಗೆ ಧನಸಹಾಯ ಸಿಕ್ಕರೂ ಅದನ್ನು ಪಡೆಯಲು ಮನಸ್ಸು ಒಪ್ಪದು. ಹೊಂದಾಣಿಕೆಯಿಂದ ಮನಸ್ಸಿನ ಕ್ಲೇಶವು ಸುಧಾರಿಸಬಹುದು. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ.
ಕುಂಭ ರಾಶಿ : ಕಳೆದ ಕಷ್ಟದ ದಿನಗಳು ನಿಮಗೆ ಇಂದು ಖುಷಿ ಎನಿಸಬಹುದು. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ನಂಬಿಕೆಗೆ ದ್ರೋಹವಾಗಬಹುದು. ಸಂಗಾತಿಯ ಮಾತುಗಳು ನಿಮಗೆ ಅಜೀರ್ಣವಾಗುವುದು. ಅಕಾರಣ ಪ್ರೀತಿಯನ್ನು ಒಪ್ಪಿಕೊಳ್ಳುವಿರಿ. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವಿರಿ. ನೀವು ಬಯಸಿದ ವಸ್ತುಗಳು ನಿಮ್ಮನ್ನು ಬಂದು ಸೇರಲಿದೆ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಸರ್ಕಾರದ ಕೆಲಸದಿಂದ ನಿಮಗೆ ಬೇಸರವಾಗಬಹುದು. ವ್ಯರ್ಥ ಓಡಾಟವು ನಿಮಗೆ ಬೇಸರ ತರಿಸಬಹುದು. ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯಲು ಇಚ್ಛಿಸುವಿರಿ. ನಿಮ್ಮವರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇಹೋಗಬಹುದು. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.
ಮೀನ ರಾಶಿ : ನೀವು ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಬಹುದು. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ವಿನಾಕಾರಣ ಎಲ್ಲದಕ್ಕೂ ಎಲ್ಲರಮೇಲೂ ಸಿಟ್ಟಾಗುವಿರಿ. ಶಿಕ್ಷಣ ತಜ್ಞರ ಭೇಟಿಯಿಂದ ನಿಮ್ಮ ಓದು ಇನ್ನಷ್ಟು ಸುಗಮವಾಗುವುದು. ಮನೆಯವರ ಜೊತೆ ಕಾಲ ಕಳೆಯುವಿರಿ. ಕೂಡಿಟ್ಟ ಹಣದಿಂದ ಉಪಯುಕ್ತವಾದ ವಸ್ತುವನ್ನು ಖರೀದಿಸುವಿರಿ. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಪಡಿಸುವಿರಿ. ಗೆಳೆತನದ ವಿಚಾರದಲ್ಲಿ ಮಿತಿಯಿರಲಿದೆ. ಸಂತರ ಭೇಟಿಯಾಗಿ ನಿಮಗೆ ನೆಮ್ಮದಿಯು ಸಿಗಲಿದೆ. ಪ್ರಯಾಣವನ್ನು ಮಾಡುವ ಉತ್ಸಾಹದಲ್ಲಿ ಇರುವಿರಿ. ಕೃಷಿಯಲ್ಲಿ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚಾಗುವುದು.
-ಲೋಹಿತ ಹೆಬ್ಬಾರ್-8762924271 (what’s app only)