Astrology: ನಿಮ್ಮ ಕೆಲಸವು ಮುಂದಿನ ಅನೇಕರಿಗೆ ಉಪಯೋಗವಾಗುವುದು

ರಾಶಿ ಭವಿಷ್ಯ ಶುಕ್ರವಾರ(ಸೆ.20): ಏನನ್ನಾದರೂ ಮಾಡಬೇಕು ಎಂಬ ನಿಮ್ಮ ಹಂಬಲ ಅತಿಯಾಗಿರುವುದು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸುವಿರಿ. ಮಾತು ಕೊಟ್ಟಿದ್ದನ್ನು ಸ್ನೇಹಿತರು ನೆರವೇರಿಸಲಾರರು. ವೃತ್ತಿಯನ್ನು ಬಹಳ ಹಗುರಾಗಿ ಭಾವಿಸಿ ಕೆಲಸವನ್ನು ಮಾಡುವಿರಿ.‌ ಹಾಗಾದರೆ ಸೆಪ್ಟೆಂಬರ್​ 20ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ನಿಮ್ಮ ಕೆಲಸವು ಮುಂದಿನ ಅನೇಕರಿಗೆ ಉಪಯೋಗವಾಗುವುದು
ನಿಮ್ಮ ಕೆಲಸವು ಮುಂದಿನ ಅನೇಕರಿಗೆ ಉಪಯೋಗವಾಗುವುದು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 20, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ / ರೇವತೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:55 ರಿಂದ 12:26, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:58ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ ಮಧ್ಯಾಹ್ನ 09:24ರ ವರೆಗೆ.\

ಧನು ರಾಶಿ: ಹಿಂದೆ ಮಾಡಿದ ಖರ್ಚಿನ ತಪ್ಪಿಗೆ ಇಂದು ತಿಳಿವಳಿಕೆ ಬರಬಹುದು. ಇಂದು ನೀವು ಅಂದುಕೊಂಡಿದ್ದನ್ನು ಸಾಧಿಸಿಕೊಂಡು ನೆಮ್ಮದಿಯಿಂದ ನಿದ್ರಿಸುವಿರಿ. ಮಹಿಳೆಯರು ತಾಯಿಯಿಂದ ಲಾಭವನ್ನು ನಿರೀಕ್ಷಿಸುವರು. ಏನನ್ನಾದರೂ ಮಾಡಬೇಕು ಎಂಬ ನಿಮ್ಮ ಹಂಬಲ ಅತಿಯಾಗಿರುವುದು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸುವಿರಿ. ಮಾತು ಕೊಟ್ಟಿದ್ದನ್ನು ಸ್ನೇಹಿತರು ನೆರವೇರಿಸಲಾರರು. ವೃತ್ತಿಯನ್ನು ಬಹಳ ಹಗುರಾಗಿ ಭಾವಿಸಿ ಕೆಲಸವನ್ನು ಮಾಡುವಿರಿ.‌ ಸಮಯಕ್ಕೆ ಬೆಲೆ ಕೊಡುವುದು ಬಾರದು. ಕೆಲವನ್ನು ನೀವು ಸರಳೀಕರಿಸಿಕೊಳ್ಳುವುದು ಉತ್ತಮ. ಮಾತನ್ನು ಅಹಂಕಾರದಿಂದ ಮಾತನಾಡಿದಂತೆ ಕೇಳುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ ಅತಿಯಾಗಿ ಇರಲಿದೆ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಬೇಡ. ಅಧಿಕಾರಿಗಳಿಂದ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು.

ಮಕರ ರಾಶಿ: ಇಂದಿನ ನಿಮ್ಮ ಅನಾರೋಗ್ಯದಿಂದ ವ್ಯಾಪಾರದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮವರ ಪ್ರೀತಿಯಲ್ಲಿ‌ ನೀವು ಮನಸೋಲುವಿರಿ. ನಿಮ್ಮ ಕೆಲಸವು ಶಿಸ್ತಿನದ್ದಾಗಿದ್ದು ಪ್ರಶಂಸೆಯೂ ಸಿಗಲಿದೆ. ನೀವು ಎಲ್ಲರ‌ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರವನ್ನು ನಡೆಸುವಿರಿ. ವಿದ್ಯಾಭ್ಯಾಸದ ತೊಂದರೆಯನ್ನು ಇನ್ನೊಬ್ಬರ ಮೂಲಕ ಸರಿಮಾಡಿಕೊಳ್ಳುವಿರಿ. ಬಂಧುಗಳ ಭೇಟಿಯಾಗಿ ಸಂತೋಷಪಡುವಿರಿ. ಕಷ್ಟವಾದರೂ ಕೆಲಸವನ್ನು ಮಾಡುವ ನಿಮ್ಮ ಒಪ್ಪಂದಕ್ಕೆ ಮೆಚ್ಚಿಗೆ ಸಿಗಲಿದೆ. ಹೂಡಿಕೆಯ ಹಣವನ್ನು ಪಡೆದುಕೊಳ್ಳುವಿರಿ. ನಿಮ್ಮ‌ ಕೆಲಸಕ್ಕೆ ಮತ್ತಾರಿಗೋ ಹೆಸರು ಸಿಗಬಹುದು. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ನೀವೇ ಅಸಹಕಾರ ತೋರಿದರೆ ನಿಮ್ಮ ಜೊತೆಗಾರರೂ ಹಿಂದೇಟು ಹಾಕುವರು.

ಕುಂಭ ರಾಶಿ: ನಿಮ್ಮ ಭಾವನೆಗಳನ್ನು ಇತರರು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ನೀವು ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಬದಿಗೊತ್ತಿ ಏನೂ ಇಲ್ಲದವರ ತೋರುವಿರಿ. ಹೊಸ ವಿಚಾರವನ್ನು ಹುಡುಕುವುದು ನಿಮಗೆ ಪ್ರಿಯವಾದುದಾಗಿದೆ. ನೇರ ಮಾತುಗಳು ನಿಮಗೆ ಸಹಿಸಲು ಅಶಕ್ಯವಾದ ನೋವನ್ನು ಕೊಡಲಿದೆ. ನಿಮ್ಮ ದೌರ್ಬಲ್ಯಗಳನ್ನು ನೀವು ಮೀರುವುದು ಅಸಾಧ್ಯವಾಗಲಿದೆ. ನೀವು ಊಹಿಸದಷ್ಟು ಸಂಗಾತಿಯ ಸ್ವಭಾವವು ಇರುವುದಿಲ್ಲ.‌ ಇದು ನಿಮಗೆ ಅನಂತರ ಬೇಸರವನ್ನು ತರಿಸಬಹುದು. ನಿಮ್ಮ ಕೆಲಸವು ಮುಂದಿನ ಅನೇಕರಿಗೆ ಉಪಯೋಗವಾಗುವುದು. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ತಾಳ್ಮೆಯಿಂದ ನೀವು ಜಯಗಳಿಸುವಿರಿ. ಅಧಿಕ ಒತ್ತಡವನ್ನು ಇಂದು ನೀವು ಮಾಡಿಕೊಳ್ಳಲಾರಿರಿ. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ಯಂತ್ರೋಪಕರಣಗಳು ದುರಸ್ತಿಗೆ ಬರಬಹುದು. ಯಾರಿಂದಲಾದರೂ ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ.

ಮೀನ ರಾಶಿ: ಸಾಲದಿಂದ ಸ್ವಲ್ಪ ಸಮಾಧಾನ ಸಿಗಲಿದೆ. ಇದು ನಿಮ್ಮ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವನ್ನು ಕೊಡುವುದು. ನೀವು ಉತ್ತಮ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಆದಾಯಕ್ಕಿಂತ ಅಧಿಕವಾದ ಖರ್ಚನ್ನು ನೀವು ತೋರಿಸುವಿರಿ. ನಿಮ್ಮ‌ ಪರೀಕ್ಷೆಯ ಕಾಲವು ಇದಾಗಿದ್ದು ಎಚ್ಚರಿಕೆಯಿಂದ ಮಾತನಾಡಿ. ಗುರುಹಿರಿಯರಲ್ಲಿ ಶ್ರದ್ಧೆ, ಗೌರವದ ಅಗತ್ಯವಿದೆ. ನೇರ ನುಡಿಯಿಂದ ಶತ್ರುಗಳು ಹುಟ್ಟಿಕೊಂಡಾರು. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ದುರಭ್ಯಾಸದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ಮನೆಯ ಸೇವಕನಿಂದ ನಿಮಗೆ ಕೆಲವು ನಷ್ಟವಾಗಲಿದೆ. ಸಂಗಾತಿಯ ಜೊತೆ ವಾಯುವಿಹಾರವನ್ನು ಮಾಡಿ ಸುಖಪಡುವಿರಿ. ಕರ್ತವ್ಯದ ವಿಚಾರದಲ್ಲಿ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು.

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್