Horoscope Today 25 December : ಇಂದು ಈ ರಾಶಿಯವರಿಗೆ ಯಾವುದೂ ಸುಲಭವಾಗಿ ಸಿಗಲ್ಲ
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ ಗುರುವಾರ ಪ್ರಚೋದನೆ, ವೈರಾಗ್ಯಭಾವ, ಧಾರ್ಮಿಕ ನಂಬಿಕೆ, ವಂಚನೆ, ಅಧಿಕ ಸಂಚಾರ, ಒತ್ತಡ ಕಾರ್ಯ, ಆದಾಯದ ಯೋಚನೆ, ಅನಾರೋಗ್ಯ ಪೀಡೆ, ಪರಿಹಾರೋಪಾಯ ಇವೆಲ್ಲ ಇಂದಿನ ಭವಿಷ್ಯ.

ಮೇಷ ರಾಶಿ : ನಿಮ್ಮ ಸೂಕ್ಷ್ಮ ಮನಸ್ಸಿಗೆ ಭೇದಭಾವ ಬಿಸಿ ಬೇಗ ತಟ್ಟಬಹುದು. ಧಾರ್ಮಿಕತೆಯಲ್ಲಿ ಅಚಲವಾದ ಶ್ರದ್ಧೆ ಶಾಂತಿಯನ್ನು ತಾನಾಗಿಯೇ ನೀಡುತ್ತದೆ. ಆಸ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಕೆಲವು ಬದಲಾವಣೆಯು ಇರಲಿದೆ. ಸ್ನೇಹಿತನ ಮಾತಿನಿಂದ ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಬೇಸರವಾಗಬಹುದು. ಬಂಧುಗಳು ಪ್ರೀತಿಯನ್ನು ತೋರಿಸುವರು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ಗೃಹನಿರ್ಮಾಣ ಸದ್ಯ ಕನಸಾಗಿ ಮುಂದುವರಿಯುವುದು. ನಿಮಗೆ ನ್ಯಾಯ ಸತ್ಯಕ್ಕಿಂತ ಹೆಚ್ಚಾಗಿ ಕರುಣೆಯಿಂದ ಲಭಿಸುತ್ತದೆ. ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಮಾಡುವಿರಿ. ಸುಳ್ಳು ಹೇಳುವ ಸಂದರ್ಭವೂ ಬರಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.
ವೃಷಭ ರಾಶಿ : ನೀವು ಮಂಡಿಸುವ ವಿಚಾರದಲ್ಲಿ ಭಿನ್ನತೆ ಕಾಣಿಸಲಿದ್ದು ಭೇದಭಾವುಂಡಾಗಬಹುದು. ಧಾರ್ಮಿಕ ಮುಖಂಡತ್ವವನ್ನು ವಹಿಸಕೊಳ್ಳಬೇಕಾಗುವುದು. ಸೇವಾ ಕಾರ್ಯಗಳು ಸಮಾಜದಲ್ಲಿ ಗುರುತಿಸಲ್ಪಡುತ್ತವೆ. ನಿಮ್ಮ ಒಳ ಜಗಳವು ಬೀದಿಗೆ ಬರಬಹುದು. ಕೆಲವರನ್ನು ನೀವು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ಬಂಧುಗಳ ಸ್ವಭಾವವು ಇಷ್ಟವಾಗಸೇ ಅವರ ಬಗ್ಗೆ ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಆಸ್ತಿ ವಿಷಯದಲ್ಲಿ ಹೊಸ ನಿರ್ಧಾರ ಮಾಡುವುದೇ ಉಚಿತ. ಹೂಡಿಕೆಯನ್ನು ಪ್ರತಿಷ್ಠೆಗಾಗಿ ಮಾಡುವಿರಿ. ಸ್ಪರ್ಧೆಯಲ್ಲಿ ತಂತ್ರಗಾರಿಕೆ ಫಲಿಸುವುದು. ಹಣದ ಆಮಿಷದಲ್ಲಿ ಸಿಕ್ಕಿಕೊಳ್ಳುವಿರಿ. ಯಾರಾದರೂ ಭೂಮಿಯನ್ನು ವಶಪಡಿಸಿಕೊಳ್ಳಲು ಯೋಚಿಸಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ಪರಿಹಾರವನ್ನು ಕಂಡುಕೊಳ್ಳಿ.
ಮಿಥುನ ರಾಶಿ : ದೀರ್ಘಕಾಲದ ಹೂಡಿಕೆಯ ಬಗ್ಗೆ ಗಮನವಿರುವುದು. ಗೃಹನಿರ್ಮಾಣ ಯೋಜಿತವಾಗಿ ನಡೆಯುತ್ತದೆ. ಸ್ಪರ್ಧೆಯಲ್ಲಿ ನೀವು ಹಾಕಿದ ಶ್ರಮಕ್ಕೆ ತಕ್ಕ ಫಲ. ಸತ್ಯ ಪ್ರಕಟವಾಗಲು ಸಮಯ ತೆಗೆದುಕೊಳ್ಳುತ್ತದೆ. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. ಯಂತ್ರಜ್ಞರು ಇಂದು ಒತ್ತಡದಲ್ಲಿ ಇರುವರು. ಭೂಮಿಯ ವ್ಯವಹಾರದಲ್ಲಿ ಲಾಭವಾಗಲು ತಿರುಗಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಕಾರ್ಯಸ್ಥಳದ ಭೇದಭಾವ ಕಾಡಬಹುದು. ಧಾರ್ಮಿಕ ಆಚರಣೆ ಮನಸ್ಸಿಗೆ ನೆಮ್ಮದಿ. ಸೇವೆಯಿಂದ ವಿಶ್ವಾಸ ಗಳಿಸಿಕೊಳ್ಳುವಿರಿ. ಸ್ಥಿರಾಸ್ತಿ ಚೂರಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕಾಟಕ ರಾಶಿ : ಕುಟುಂಬದಲ್ಲಿ ವಿಚಾರಭೇದದಿಂದ ಅಸಮಾಧಾನ. ಧಾರ್ಮಿಕ ನಂಬಿಕೆಗಳು ದಾರಿ ತೋರಿಸುತ್ತವೆ. ಸೇವೆಯಲ್ಲಿ ನಿಮಗೆ ಸಂತೋಷ ಸಿಗುವುದು. ಆಸ್ತಿ ಸ್ಥಿರತೆಯ ಬಗ್ಗೆ ನಿಶ್ಚಯವಿರಲಿ. ಹೂಡಿಕೆ ವಿಸ್ತರಣೆ ಯೋಚನೆ ಮಾಡಬಹುದು. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ನಿಮ್ಮವರ ಮೇಲೆ ಅನುಮಾನ ಸಕಾರಣಕ್ಕೆ ಆಗಿರಲಿ. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಗೃಹನಿರ್ಮಾಣ ಶುಭಾರಂಭ. ವಿಳಂಬವಾದರೂ ಸ್ಪರ್ಧೆಗೆ ಅವಕಾಶ. ನ್ಯಾಯ ವಿಷಯದಲ್ಲಿ ಸತ್ಯದ ಪಕ್ಷವನ್ನು ಬಿಡುವುದು ಬೇಡ. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ. ಹೆದರಿಸಿ ವಸ್ತುವನ್ನು ಪಡೆಯುವಿರಿ. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು.
ಸಿಂಹ ರಾಶಿ : ಗುಪ್ತ ವಿರೋಧದಿಂದ ನಿಮಗೆ ಬೇಸರ. ಧಾರ್ಮಿಕ ಕಾರ್ಯದಿಂದ ಮನೋಬಲ ಹೆಚ್ಚಿಸುತ್ತದೆ. ಸೇವೆ ಆತ್ಮಶಕ್ತಿ ಜಾಗೃತಗೊಳಿಸುತ್ತದೆ. ಆಸ್ತಿ ರಕ್ಷಣೆಗೆ ಇನ್ನೊಬರಿಂದ ಎಚ್ಚರಿಕೆ ಬರಲಿದೆ. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಪಕ್ಷಪಾತ ಸ್ವಭಾವದಿಂದ ಒಂಟಿಯಾಗುವ ಸಾಧ್ಯತೆ ಇದೆ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವನ್ನು ಚೆನ್ನಾಗಿಟ್ಟುಕೊಳ್ಳಿ. ನಿಮ್ಮ ಇಂದಿನ ಗುರಿಯನ್ನು ಸ್ಪಷ್ಟ ಮಾಡಿಕೊಂಡಿರಿ. ಇಂದಿನ ಹೂಡಿಕೆ ಅಪಾಯಕಾರಿ ಅನುಭವ ಕೊಡುವುದು. ಗೃಹನಿರ್ಮಾಣ ವಿಳಂಬ. ಸ್ಪರ್ಧೆಯಲ್ಲಿ ತೀವ್ರತೆ. ನ್ಯಾಯ ಕಠಿಣ ಪರಿಶ್ರಮದಿಂದ ಸಿಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವಿರಿ. ನಿಮ್ಮದೇ ಕೆಲಸವಾದರೂ ನಿಮಗೆ ಅದರ ಸಂಪೂರ್ಣ ಯಶಸ್ಸು ಸಿಗದು. ಮುಖಪ್ರೇಕ್ಷಕತ್ವ ಒಳ್ಳೆಯದಲ್ಲ.
ಕನ್ಯಾ ರಾಶಿ : ಆಸ್ತಿ ವಿಚಾರದಲ್ಲಿ ಸಂಧಾನ ಸಾಧ್ಯ. ಹೂಡಿಕೆಯಿಂದ ಸಮಾಧಾನಕರ ಲಾಭ. ಗೃಹನಿರ್ಮಾಣ ಬಗ್ಗೆ ಚರ್ಚೋಪಚರ್ಚೆಗಳು ನಡೆಯುವುದು. ಸ್ಪರ್ಧೆಯಲ್ಲಿ ಸಮಾನ ಪೈಪೋಟಿ. ಸ್ನೇಹಿತರ ವಿವಾಹವನ್ನು ನೀವೇ ಮುಂದೆ ನಿಂತು ಮಾಡಿಸುವಿರಿ. ಮಾನಸಿಕವಾಗಿ ಯಾರನ್ನೂ ಕೊಲ್ಲುವುದು ಬೇಡ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ಸಮತೋಲನ ಕಳೆದುಕೊಂಡರೆ ಭೇದಭಾವ ಅನುಭವ. ಧಾರ್ಮಿಕ ಚಿಂತನೆ ಸಮಾಧಾನ. ಸೇವೆ ಮಾನ ಹೆಚ್ಚಿಸುತ್ತದೆ. ನ್ಯಾಯ ಸಮಾಧಾನದಿಂದ ಸಿಗುತ್ತದೆ. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಹಣಕಾಸಿನ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು.
ತುಲಾ ರಾಶಿ : ಸಣ್ಣ ವಿಷಯಗಳಿಂದ ಮನಸ್ತಾಪ ಮೂಡಬಹುದು. ಧಾರ್ಮಿಕ ಶಿಸ್ತಿನಿಂದ ಗೌರವ ಪ್ರಾಪ್ತಿ. ಸೇವಾ ಮನೋಭಾವದಿಂದ ಪ್ರಶಂಸೆ ತರುತ್ತದೆ. ಆಸ್ತಿ ಲೆಕ್ಕಾಚಾರ ಮುಖ್ಯ. ಕಛೇರಿಯ ಕಾರ್ಯವು ಕುಂಟುತ್ತ ಸಾಗುವುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಅಡಚಣೆ ಆಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯು ಇರಬೇಕಾಗುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ಕ್ಷಮಾದಾನವೂ ಇಂದು ಅಸ್ತ್ರವಾಗಬಹುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು. ಹೂಡಿಕೆಯಲ್ಲಿ ವಿವರ ಪರಿಶೀಲನೆ. ಗೃಹ ಯೋಜನೆ ನಿಧಾನಗತಿಯಲ್ಲಿ ಸಾಗುವುದು. ಸ್ಪರ್ಧೆಯಲ್ಲಿ ತಂತ್ರಗಾರಿಕೆಯಿಂದ ಜಯ. ನ್ಯಾಯಕ್ಕೆ ತಾಳ್ಮೆ ಅಗತ್ಯ. ಆಮಿಷಕ್ಕೆ ಒಳಗಾಗಿ ಸಿಕ್ಕಿಬೀಳಬಹುದು. ವಿದೇಶೀ ವ್ಯಾಪಾರದಿಂದ ಅಲ್ಪ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮಗೆ ಮನಸ್ಸು ಖಿನ್ನವಾಗುವುದು. ಇಂದು ನೀವು ಹಣವನ್ನು ಉಳಿಸಿಕೊಳ್ಳಲು ಸಮಸ್ಯೆಯೇ ಆಗಬಹುದು.
ವೃಶ್ಚಿಕ ರಾಶಿ : ಸೇವೆಯಿಂದ ನಾಯಕತ್ವ ಪ್ರಾಪ್ತಿಯಾಗಲಿದೆ. ಹೂಡಿಕೆಯಲ್ಲಿ ಲಾಭದ ಸೂಚನೆ. ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುವಿರಿ. ನ್ಯಾಯ ವಿಷಯದಲ್ಲಿ ಧೈರ್ಯ ಅಗತ್ಯ. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಹಳೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವಿರಿ. ದೇಹದೊಳಗೆ ಆದ ಗಾಯವು ಹೊರಗೆ ಕಾಣಿಸಿಕೊಳ್ಳುವುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗುವುದು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ನಿಮ್ಮ ಅಹಂಕಾರದಿಂದ ಭೇದಭಾವ ಉಂಟಾಗದಂತೆ ಎಚ್ಚರ. ಧಾರ್ಮಿಕ ವಿಧಿಗಳು ಶಾಂತಿ ತರುತ್ತವೆ. ಸಾಮಾಜಿಕ ಕಾರ್ಯದಿಂದ ನಿಮಗೆ ಹೆಸರು ಬರಲಿದೆ. ನಂಬಿಕೆಗಳನ್ನು ಮೀರಿ ಏನನ್ನೂ ಮಾಡಲಾರಿರಿ. ನಿಮ್ಮ ಉತ್ಸಾಹವನ್ನು ಶತ್ರುಗಳು ನಿರುತ್ಸಾಹಗೊಳಿಸುವೆರು.
ಧನು ರಾಶಿ : ಆಸ್ತಿಗೆ ರಕ್ಷಣೆ ಕ್ರಮವಹಿಸುವುದು ಸೂಕ್ತ. ಹೂಡಿಕೆ ದೀರ್ಘಾವಧಿಗೆ ಒಳ್ಳೆಯದು. ಗೃಹನಿರ್ಮಾಣ ಅರ್ಧಕ್ಕೆ ತಾತ್ಕಾಲಿಕವಾಗಿ ನಿಲ್ಲುವುದು. ಸ್ಪರ್ಧೆಯಲ್ಲಿ ಆತ್ಮವಿಶ್ವಾಸ ಹೊರಗಿನಿಂದ ಬರಲಿದೆ. ನ್ಯಾಯ ನಿಧಾನವಾಗಿ ಸಿಗುತ್ತದೆ. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಚಿಂತಕರ ಜೊತೆ ಮಂಥನ ಮಾಡುವುದಕ್ಕೆ ಈ ದಿನ ಆಗುವುದು. ಎಷ್ಟೋ ಕಾಲದ ಅನಂತರ ನೀವು ಮಿತ್ರನನ್ನು ಭೇಟಿಯಾಗುವಿರಿ. ಅನ್ನಿಸಿದ್ದನ್ನು ನೇರವಾಗಿ ಹೇಳುವುದು ಬೇಡ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಭಾವನಾತ್ಮಕವಾಗಿ ಭೇದಭಾವ ನೋವು ಕೊಡಬಹುದು. ಧಾರ್ಮಿಕ ಆಚರಣೆ ಧೈರ್ಯ ನೀಡುತ್ತದೆ. ಸೇವೆಯಿಂದ ಹೃದಯ ಹಗುರ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಹಣಕಾಸಿನ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುವುದು ಸೂಕ್ತ. ಅರ್ಧ ಪ್ರಯಾಣ ಮಾಡಿ ಮನೆಗೆ ಹಿಂದಿರುಗುವಿರಿ.
ಮಕರ ರಾಶಿ : ಮಾತಿನಲ್ಲಿ ನಿಮಗೆ ಭೇದಭಾವ ಮಾಡುವ ಅನುಭವವಾಗಲಿದೆ. ಧಾರ್ಮಿಕ ಚಿಂತನೆಯ ಗೊಂದಲವನ್ನು ಮನಸ್ಸು ಸರಿಪಡಿಸುತ್ತದೆ. ಸೇವಾಭಾವದಿಂದ ಸ್ನೇಹ ವೃದ್ಧಿ. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ಇರುವ ಸಾಲವನ್ನು ತೀರಿಸಿಕೊಳ್ಳಲುಬೇಕಾದ ಯೋಜನೆ ಮಾಡಿ. ಪ್ರೇಮವನ್ನು ಮತ್ತಾವುದೋ ರೀತಿಯಲ್ಲಿ ಪಡೆಯುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಆಸ್ತಿ ಹಾಗೂ ದಾಖಲೆಯ ಪರಿಶೀಲನೆ ಅಗತ್ಯ. ಹೂಡಿಕೆಯಲ್ಲಿ ಅಪಾಯ ತಪ್ಪಿಸಿ. ಗೃಹನಿರ್ಮಾಣ ಯೋಚನೆ ಅಧಿಕವಾಗಲಿ. ನ್ಯಾಯ ವಿಚಾರದಲ್ಲಿ ಸಂಯಮ ಅವಶ್ಯಕ. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ ನಡೆಸಲು ಇಷ್ಟಪಡುವಿರಿ. ಸುಖವಾದ ಜೀವನಕ್ಕೆ ಸರಳ ಸೂತ್ರವನ್ನು ಬಳಸಿ.
ಕುಂಭ ರಾಶಿ : ಸೇವೆಯಿಂದ ಮನಸ್ಸಿಗೆ ನಿಶ್ಚಲತೆ. ಆಸ್ತಿ ವಿಷಯದಲ್ಲಿ ಕುಟುಂಬದ ಬೆಂಬಲ. ಹೂಡಿಕೆ ನಿಧಾನವಾಗಿರಲಿ. ಗೃಹ ಯೋಜನೆ ರೂಪುಗೊಳ್ಳುತ್ತದೆ. ಸ್ಪರ್ಧೆಯಲ್ಲಿ ಸ್ಥೈರ್ಯ ಬೇಕು. ನಿಮ್ಮ ನಿರೀಕ್ಷೆಯು ಹುಸಿಯಾಗುವುದು. ಧನಸಂಪಾದನೆಯ ಚಿಂತೆ ಇರಲಿದೆ. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಇನ್ನೊಬ್ಬರ ಮೇಲೆ ದೂರು ಹಾಕಲು ಮುಜುಗರವಾಗದು. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಏಕಮುಖವಾದ ನಿರ್ಧಾರದಿಂದ ಸಫಲತೆಯು ಇರದು. ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ವೇತನದ ಅಸಮಾನತೆ ಕಂಡು ಬೇಸರವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದರೆ ಸಮಾಧಾನ. ನ್ಯಾಯ ನಿಮ್ಮತ್ತ ವಾಲುವ ಸೂಚನೆ. ಅಪರಿಚಿತರ ಸಹವಾಸವು ನಿಮ್ಮಲ್ಲಿ ಬೇಡದ ಭಾವವನ್ನು ಕೊಡಬಹುದು. ಎಲ್ಲವನ್ನೂ ಒಬ್ಬರೇ ಮಾಡುವ ಉತ್ಸಾಹವು ಇದ್ದರೂ ಮತ್ತೊಬ್ಬರ ಸಹಕಾರವನ್ನು ಪಡೆದು ಕಾರ್ಯವನ್ನು ಪೂರ್ಣಗೊಳಿಸಿ.
ಮೀನ ರಾಶಿ : ಭೇದಭಾವದ ಅನುಭವದಿಂದ ಮನಸ್ಸು ಕಲುಷಿತವಾಗಬಹುದು. ಧಾರ್ಮಿಕ ಆಚರಣೆ ಶಾಂತಿ ನೀಡುತ್ತದೆ. ಸೇವಾಮನೋಭಾವದಿಂದ ಗೌರವ ಸಿಗುತ್ತದೆ. ಆಸ್ತಿ ರಕ್ಷಣೆ ಅಗತ್ಯ. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಮನೋವಿಕಾರಕ್ಕೆ ಆಸ್ಪದ ಕೊಡುವುದು ಬೇಡ. ನಿಮಗೆ ಸೂಚಿತ ದಿಕ್ಕಿನಲ್ಲಿ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಸುಮ್ಮನೇ ಒತ್ತಡವಿದ್ದಂತೆ ತೋರಿಸುವಿರಿ. ಕೆಲವು ಸಾಧನೆಗೆ ನಿಯಂತ್ರಣ ಅವಶ್ಯಕ. ಅತಿಥಿಗಳ ಸತ್ಕಾರವನ್ನು ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಕಾಲ ಕಳೆಯುವಿರಿ. ಮಕ್ಕಳ ಕಾರ್ಯವು ಹೆಮ್ಮೆ ಎನಿಸುವುದು. ಹೂಡಿಕೆಯಲ್ಲಿ ಜಾಗರೂಕತೆ ವಹಿಸಿ. ಗೃಹನಿರ್ಮಾಣ ಚಿಂತನೆ ಮೂಡುತ್ತದೆ. ಸ್ಪರ್ಧೆಯಲ್ಲಿ ಶ್ರಮ ಫಲಿಸುತ್ತದೆ. ನ್ಯಾಯ ವಿಳಂಬವಾದರೂ ಸತ್ಯ ಜಯಿಸುತ್ತದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ. ಮುಂದಿನದ್ದರ ಬಗ್ಗೆ ಆಲೋಚಿಸಿ. ನಿಮ್ಮ ಮಾತಿನಿಂದ ಕುಟುಂಬದ ಕೆಲವು ಸಮಸ್ಯೆಯು ದೂರಾಗುವುದು.
24 ಡಿಸೆಂಬರ್ 2025ರ ಪಂಚಾಂಗ:
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಧನಿಷ್ಠ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:49 – 15:13, ಯಮಗಂಡ ಕಾಲ 06:47 – 08:11, ಗುಳಿಕ ಕಾಲ 09:36 – 11:00
-ಲೋಹಿತ ಹೆಬ್ಬಾರ್ – 8762924271 (what’s app only)




