AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

44,000 ಕೆಜಿ ತುಪ್ಪದಿಂದ ನಿರ್ಮಾಣವಾಗಿದೆ 550 ವರ್ಷ ಹಳೆಯ ಈ ದೇವಸ್ಥಾನ!

ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಭಂಡಾಶಾ/ ಭಂಡಾಸರ ಜೈನ ದೇವಾಲಯ ತನ್ನ ವಿಶಿಷ್ಟ ಇತಿಹಾಸ, ಅದ್ಭುತ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಮಹತ್ವದಿಂದ ಭಾರತದ ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ಆಕರ್ಷಣೆಗಳಲ್ಲಿ ಒಂದಾಗಿದೆ. ರಾಜಸ್ಥಾನದ ಬಿಕಾನೇರ್​​ನಲ್ಲಿರುವ 550 ವರ್ಷ ಪುರಾತನವಾದ ಈ ದೇವಸ್ಥಾನವನ್ನು ಜೈನ ಧರ್ಮದ 5ನೇ ತೀರ್ಥಂಕರರಾದ ಶ್ರೀ ಸುಖಿನಾಥಜೀ (ಸುಮತಿನಾಥ) ಅವರಿಗೆ ಅರ್ಪಿಸಲಾಗಿದೆ. ವಿಶೇಷವೆಂದರೆ ಈ ದೇವಾಲಯವನ್ನು ನೀರಿನ ಬದಲು ತುಪ್ಪ ಹಾಕಿ ನಿರ್ಮಿಸಿದ್ದಾರಂತೆ.

44,000 ಕೆಜಿ ತುಪ್ಪದಿಂದ ನಿರ್ಮಾಣವಾಗಿದೆ 550 ವರ್ಷ ಹಳೆಯ ಈ ದೇವಸ್ಥಾನ!
Bhandasar Jain TempleImage Credit source: Getty Image
ಸುಷ್ಮಾ ಚಕ್ರೆ
|

Updated on: Jul 25, 2026 | 8:27 PM

Share

ಜೈಪುರ, ಜುಲೈ 25: ರಾಜಸ್ಥಾನದ ಬಿಕಾನೇರ್‌ನಲ್ಲಿರುವ 550 ವರ್ಷ ಹಳೆಯ ಜೈನ ದೇವಾಲಯವೊಂದು (Temple) ತನ್ನ ಅಸಾಧಾರಣ ಇತಿಹಾಸ ಮತ್ತು ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಬೆರಗುಗೊಳಿಸುತ್ತಿದೆ. ಇಲ್ಲಿನ ಭಂಡಾಸರ ಜೈನ ದೇವಾಲಯದ ನಿರ್ಮಾಣದ ಸಮಯದಲ್ಲಿ ಸಿಮೆಂಟ್ ಅಥವಾ ಗಾರೆ ಮಿಶ್ರಣಕ್ಕೆ ನೀರಿನ ಬದಲಾಗಿ ಸುಮಾರು 40,000 ಕೆಜಿ ಶುದ್ಧ ತುಪ್ಪವನ್ನು ಬಳಸಲಾಗಿದೆ ಎಂದು ನಂಬಲಾಗಿದ್ದು, ಇದು ಭಾರತದ ಅತ್ಯಂತ ಕುತೂಹಲಕಾರಿ ವಾಸ್ತುಶಿಲ್ಪದ ಪವಾಡಗಳಲ್ಲಿ ಒಂದಾಗಿದೆ.

ಗೋಡೆಯಲ್ಲಿ ತುಪ್ಪ ಒಸರುತ್ತದೆ:

ಈ ದೇವಾಲಯ ನಿರ್ಮಾಣದ ಗಾರೆ ಮಿಶ್ರಣಕ್ಕೆ ನೀರಿನ ಬದಲಾಗಿ ಸುಮಾರು 40,000 ಕೆಜಿ ಶುದ್ಧ ತುಪ್ಪವನ್ನು ಬಳಸಲಾಗಿದೆ ಎಂಬುದು ಇಲ್ಲಿನ ಪ್ರಸಿದ್ಧ ನಂಬಿಕೆ. ಕಡು ಬೇಸಿಗೆಯಲ್ಲಿ ಇಲ್ಲಿನ ಕಲ್ಲಿನ ನೆಲ ಹಾಗೂ ಗೋಡೆಗಳಿಂದ ಬೆಣ್ಣೆ ಅಥವಾ ತುಪ್ಪದ ಅಂಶ ಒಸರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯಕ್ಕೆ ಅವಿವಾಹಿತ ಜೋಡಿ ಒಟ್ಟಿಗೆ ಭೇಟಿ ನೀಡಬಾರದು ಯಾಕೆ? ಇಲ್ಲಿದೆ ನಿಗೂಢ ರಹಸ್ಯ!

ವಾಸ್ತುಶಿಲ್ಪ ಮತ್ತು ವರ್ಣಚಿತ್ರಗಳು:

ಮೂರು ಅಂತಸ್ತುಗಳ ಈ ಬೃಹತ್ ದೇವಾಲಯವು ಕೆಂಪು ಮರಳುಕಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿತವಾಗಿದೆ. ಇದರ ಗೋಡೆಗಳು ಮತ್ತು ಮೇಲ್ಛಾವಣಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಕಲ್ಲಿನ ಕೆತ್ತನೆಗಳು, ವರ್ಣರಂಜಿತ ಜಾನಪದ ಚಿತ್ರಗಳು, ಗಾಜಿನ ಕುಸುರಿ ಹಾಗೂ 24 ತೀರ್ಥಂಕರರ ಜೀವನವನ್ನು ಬಿಂಬಿಸುವ ಚಿನ್ನದ ಎಲೆಯ ಚಿತ್ರಕಲೆಗಳಿವೆ. ಈ ದೇವಾಲಯದ ಮೇಲ್ಭಾಗಕ್ಕೆ ತೆರಳಿದರೆ ಇಡೀ ಬಿಕಾನೇರ್ ನಗರದ ಸುಂದರ ನೋಟ ಹಾಗೂ ಹತ್ತಿರದ ಜೂನಾಗಢ್ ಕೋಟೆಯ ದೃಶ್ಯಾವಳಿ ಕಾಣುತ್ತದೆ. ಪ್ರಸ್ತುತ ಈ ಐತಿಹಾಸಿಕ ತಾಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಸಂರಕ್ಷಿತ ಸ್ಮಾರಕವಾಗಿ ನಿರ್ವಹಿಸುತ್ತಿದೆ.

ಇದನ್ನೂ ಓದಿ: Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ!

ದೇವಾಲಯದ ಇತಿಹಾಸ:

ಕ್ರಿ.ಶ. 1468ರಲ್ಲಿ ಭಂಡಾಸಾ ಓಸ್ವಾಲ್ ಎಂಬ ಶ್ರೀಮಂತ ಜೈನ ವರ್ತಕನ ನೇತೃತ್ವದಲ್ಲಿ ಈ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಈ ಕಾರಣದಿಂದಲೇ ಇದಕ್ಕೆ ‘ಭಂಡಾಸರ’ ಅಥವಾ ‘ಭಂಡಾಶಾ’ ಜೈನ ದೇವಾಲಯ ಎಂದು ಹೆಸರು ಬಂದಿತು. ಆ ಸಮಯದಲ್ಲಿ ಬಿಕಾನೇರ್ ತೀವ್ರ ನೀರಿನ ಅಭಾವ ಎದುರಿಸುತ್ತಿದ್ದರಿಂದ, ಗಾರೆಯ ಮಿಶ್ರಣಕ್ಕೆ ನೀರಿನ ಬದಲಾಗಿ ತುಪ್ಪವನ್ನು ಬಳಸಲಾಯಿತು ಎಂಬುದು ಸ್ಥಳೀಯ ನಂಬಿಕೆ.

ಜಾನಪದ ಕಥೆಯೊಂದರ ಪ್ರಕಾರ, ಕೆಳಗೆ ಚೆಲ್ಲಿದ ಒಂದು ಹನಿ ತುಪ್ಪವನ್ನು ಭಂಡಾಸಾ ಉಳಿಸಿದ್ದನ್ನು ನೋಡಿ ಶಿಲ್ಪಕಾರರೊಬ್ಬರು ಅವರನ್ನು ಗೇಲಿ ಮಾಡಿದ್ದರಂತೆ. ಈ ಮಾತು ಮನಸ್ಸಿಗೆ ತಗಲಿ, ಭಂಡಾಸಾ ಇಡೀ ದೇವಾಲಯವನ್ನೇ ತುಪ್ಪದಲ್ಲಿ ನಿರ್ಮಿಸುವುದಾಗಿ ಶಪಥ ಮಾಡಿ, ಈ ಅದ್ಭುತವನ್ನು ಸಾಕಾರಗೊಳಿಸಿದರು ಎನ್ನಲಾಗುತ್ತದೆ. ವರ್ತಕ ಭಂಡಾಸಾ ಅವರು 1518ರಲ್ಲಿ ದೇವಾಲಯ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ನಿಧನರಾದರು. ಆದರೆ, ನಿರ್ಮಾಣ ಕಾರ್ಯವು ನಿಲ್ಲದೆ ಸುಮಾರು 86 ವರ್ಷಗಳ ಕಾಲ ದಶಕಗಳ ಕಾಲ ಮುಂದುವರಿದು, ಅಂತಿಮವಾಗಿ ಕ್ರಿ.ಶ. 1554ರ ವೇಳೆಗೆ ಪೂರ್ಣಗೊಂಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?
ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ
ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ
ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?
ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!