Horoscope: ನಿಮ್ಮ‌ ಮೇಲೆ‌ ಕೆಟ್ಟ ಕಣ್ಣುಗಳು ಬೀಳಬಹುದು, ಇತರರನ್ನು ಸುಲಭವಾಗಿ ನಂಬುಹುದಿಲ್ಲ

ಸೆಪ್ಟೆಂಬರ್​ 20,​ 2024ರ​​ ನಿಮ್ಮ ರಾಶಿಭವಿಷ್ಯ: ಅಶುಭ ಸೂಚನೆಗಳನ್ನು ಗಮನಿಸಿಯೂ ಉದ್ಧಟತನದಿಂದ ಮುನ್ನುಗ್ಗುವಿರಿ. ಯಾರಾದರೂ ನಿಮ್ಮನ್ನು ಪೀಡಿಸಬಹುದು. ಆಪ್ತಬಂಧುವನ್ನೊಬ್ಬರನ್ನು ಕಳೆದುಕೊಳ್ಳಲೂಬಹುದು. ಎಲ್ಲರೆದುರು ಮುಖಭಂಗವಾಗಬಹುದು. ವೈವಾಹಿಕ ಜೀವನದ ಕನಸನ್ನು ನೀವು ಕಾಣುವಿರಿ. ಹಾಗಾದರೆ ಸೆಪ್ಟೆಂಬರ್​ 20ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮ‌ ಮೇಲೆ‌ ಕೆಟ್ಟ ಕಣ್ಣುಗಳು ಬೀಳಬಹುದು, ಇತರರನ್ನು ಸುಲಭವಾಗಿ ನಂಬುಹುದಿಲ್ಲ
ನಿಮ್ಮ‌ ಮೇಲೆ‌ ಕೆಟ್ಟ ಕಣ್ಣುಗಳು ಬೀಳಬಹುದು, ಇತರರನ್ನು ಸುಲಭವಾಗಿ ನಂಬುಹುದಿಲ್ಲ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 20, 2024 | 6:37 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯ ನಕ್ಷತ್ರ: ರೇವತೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:55 ರಿಂದ 12:26, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:58ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ ಮಧ್ಯಾಹ್ನ 09:24ರ ವರೆಗೆ.

ಮೇಷ ರಾಶಿ: ಯಾವುದನ್ನೇ ಒಪ್ಪಿಕೊಳ್ಳುವುದಾದರೂ ನಿಮಗೆ ಬಲವಾದ ಕಾರಣ ಬೇಕಾಗುತ್ತದೆ. ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವಿರಿ. ಕುಟುಂಬವು ನಿಮ್ಮ ಶ್ರೇಯಸ್ಸನ್ನು ಹಾರೈಸಲಿದೆ. ಪಾಲುದಾರಿಕೆಯಲ್ಲಿ ಹಣಕಾಸಿನ ವಿಚಾರವು ವಿವಾದಕ್ಕೆ ಕಾರಣವಾಗಲಿದೆ. ಕಾರ್ಯಗಳಲ್ಲಿ ಉಂಟಾದ ವಿಘ್ನವನ್ನು ಪುರುಷಪ್ರಯತ್ನದಿಂದ ಸಾಧಿಸುವಿರಿ. ದಾಂಪತ್ಯದ ಭಿನ್ನಾಭಿಪ್ರಾಯಗಳು ಅಲ್ಪಕಾಲದಲ್ಲಿಯೇ ಸರಿಯಾಗುವುದು. ಸಂಗಾತಿಯನ್ನು ಬೇಸರದಲ್ಲಿದ್ದು ನೀವು ಸಮಾಧಾನ ಮಾಡುವಿರಿ. ನಿಮಗೆ ಸಾಕಷ್ಟು ಸಮಯವುವ ಇಂದು ಇರಲಿದ್ದು ಏನನ್ನೂ ಮಾಡದೇ ಕಾಲವನ್ನು ಕಳೆಯುವಿರಿ. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವ ಹಂಬಲವಿರುವುದು. ನಿಮ್ಮನ್ನು ನೀವು ಪ್ರಕಟಮಾಡಿಕೊಳ್ಳು ತಯಾರಾಗುವಿರಿ. ನಿಮ್ಮ‌ ಮೇಲೆ‌ ಕೆಟ್ಟ ಕಣ್ಣುಗಳು ಬೀಳಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ.

ವೃಷಭ ರಾಶಿ: ಯಾವುದನ್ನೇ ಪಡೆಯುವುದಿದ್ದರೂ ಸುಲಭಕ್ಕೆ ಸಿಕ್ಕುವುದಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ಇಂದಿನ ಸುತ್ತಾಟ ವ್ಯರ್ಥವಾಗುವುದು. ಅಶುಭ ಸೂಚನೆಗಳನ್ನು ಗಮನಿಸಿಯೂ ಉದ್ಧಟತನದಿಂದ ಮುನ್ನುಗ್ಗುವಿರಿ. ಯಾರಾದರೂ ನಿಮ್ಮನ್ನು ಪೀಡಿಸಬಹುದು. ಆಪ್ತಬಂಧುವನ್ನೊಬ್ಬರನ್ನು ಕಳೆದುಕೊಳ್ಳಲೂಬಹುದು. ಎಲ್ಲರೆದುರು ಮುಖಭಂಗವಾಗಬಹುದು. ವೈವಾಹಿಕ ಜೀವನದ ಕನಸನ್ನು ನೀವು ಕಾಣುವಿರಿ. ನಿಮ್ಮ‌ ದೂರಾಲೋಚನೆಯು ವಾಸ್ತವಕ್ಕಿಂತ ದೂರವಿರುವುದು. ಇಂದು ನಿಮಗೆ ಒಂಟಿಯಾಗಿ ಇರುವುದು ಹೆಚ್ಚು ಇಷ್ಟವಾಗುವುದು. ಸದಭಿರುಚಿಯು ನಿಮಗೆ ವರವಾಗಬಹುದು. ನಿಮ್ಮ‌ ಭಾವವನ್ನು ಪ್ರಕಟಗೊಳಿಸಿ. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ನಿಮ್ಮ ದುಃಖವನ್ನು ಹಂಚಿಕೊಳ್ಳಲು ವ್ಯಕ್ತಿಯನ್ನು ಹುಡುಕುವಿರಿ.

ಮಿಥುನ ರಾಶಿ: ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ಮಾಡಬೇಕಾಗುವುದು. ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಸಹೋದರನ ಸಹಾಕಾರವು ಸ್ವಲ್ಪಮಟ್ಟಿಗೆ ಅನುಕೂಲವಾಗುವುದು. ನೂತನ ವಾಹನದ‌ ಖರೀದಿಯನ್ನು ಮಾಡುವ ಬಯಕೆಯು ಇಂದು ಪೂರ್ಣಗೊಳ್ಳಬಹುದು. ಹಿತಶತ್ರು ನಿಮ್ಮ‌ ಪತನವನ್ನೇ ನಿರೀಕ್ಷಿಸುತ್ತ ಅದಕ್ಕೆ ಬೇಕಾದುದನ್ನು ಮಾಡುವರು.‌ ನಿಮ್ಮ ಕೈಗೆ ಸಿಕ್ಕ ಹಣವು ಗೊತ್ತಾಗದಹಾಗೆ ಖರ್ಚಾಗುವುದು. ಇಂದಿನ‌ ಕಾರ್ಯದ ಯಾದಿ ಮಾಡಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಂಪೂರ್ಣ ತಲ್ಲೀನತೆಯು ಕಾರ್ಯವನ್ನು ಮುಗಿಸಲು ಸಹಾಯಕವಾಗಲಿದೆ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಇಂದು ನೀವು ತಾಳ್ಮೆಯನ್ನು ಅಭ್ಯಾಸದಿಂದ ಗಳಿಸಬೇಕಾಗುವುದು. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಆಸ್ತಿಯ ವಿಚಾರಕ್ಕೆ ದಾಯಾದಿ ಕಲಹವಾಗಬಹುದು. ನಿಮ್ಮವರ ಪ್ರೀತಿಗೆ ನೀವು ಮನಸೋಲುವಿರಿ.

ಕರ್ಕಾಟಕ ರಾಶಿ: ಪಾಲುದಾರಿಕೆಯನ್ನು ಬಿಡುವ ಆಲೋಚನೆ ಬರಬಹುದು. ಇಂದು ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯವನ್ನು ಬಿಡದೇ ಎದುರಿಸಬೇಕು. ನಿಮ್ಮ ಮನೆಯ ಕೆಲಸವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭವಾಗಲಿದೆ. ಇದು ನಿಮಗೆ ಅನಿರೀಕ್ಷಿತ ಆನಂದವನ್ನು ತರಬಹುದು. ಬಹಳ ದಿನಗಳ ಅನಂತರ ತಂದೆಯ ಜೊತೆ ಮಾತನಾಡಿ ಅವರ್ಣನೀಯ ನೆಮ್ಮದಿಯು ಪಡೆಯುವಿರಿ. ಅಪರಿಚಿತರಿಂದ ನಿಮಗೆ ಗೌರವ ಪ್ರಾಪ್ತವಾಗುವುದು. ಇನ್ನೊಬ್ಬರ‌ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಹಲವವರಿಗೆ ಮೆಚ್ಚುಗೆಯಾಗಬಹುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಸಾಹಸದ ಪ್ರವೃತ್ತಿಯು ಸದ್ಯಕ್ಕೆ ಬೇಡ. ನಿಮಗೆ ತಾಳ್ಮೆಯು ಕಡಿಮೆ ಇರುವುದು ಗೊತ್ತಾಗುವುದು. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ನಂಬಿಕೆ ದ್ರೋಹವು ನಿಮಗೆ ಕಷ್ಟವಾದೀತು. ನಿಮ್ಮ ಕೋಪಕ್ಕೆ ಒಂದು ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಕೋಪಕ್ಕಿಂತ ತಾಳ್ಮೆಯೇ ನಿಮಗೆ ಸುಖವೆನಿಸಬಹುದು.

Published On - 12:05 am, Fri, 20 September 24

ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ