Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 25ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 25ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಅತ್ಯಂತ ಕ್ರಿಯಾಶೀಲವಾದ ದಿನ ಇದಾಗಿರುತ್ತದೆ. ಉದ್ಯೋಗಕ್ಕೆ ರಜೆಯ ದಿನವಾಗಿದ್ದರೂ ನಿಮ್ಮ ಮನಸ್ಸು ಮುಂದಿನ ಗುರಿಗಳ ಬಗ್ಗೆ ಯೋಚಿಸುತ್ತಾ ಇರಲಿದೆ. ಕೌಟುಂಬಿಕವಾಗಿ ಸಂಭ್ರಮದ ಸಮಯವನ್ನು ಕಳೆಯಲಿದ್ದೀರಿ. ಮನೆಯ ಹಿರಿಯರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಹಾಗೂ ಬದಲಾವಣೆ ಕಂಡುಬರಲಿದ್ದು, ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಲಿದೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಪ್ರಮಾಣದ ಲಾಭ ನಿರೀಕ್ಷೆ ಮಾಡಬಹುದು. ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಸಂಗಾತಿಯ ಮನ ಗೆಲ್ಲುವಿರಿ. ಮಕ್ಕಳೊಂದಿಗೆ ಸಮಯ ಕಳೆಯುವುದು ನಿಮಗೆ ಮಾನಸಿಕ ಒತ್ತಡದಿಂದ ಮುಕ್ತಿ ನೀಡಲಿದೆ. ಸಂಬಂಧಗಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಲಿವೆ. ಅತಿಯಾದ ಕೆಲಸದ ಒತ್ತಡ ಮೈ ಮೇಲೆ ಹಾಕಿಕೊಳ್ಳಬೇಡಿ, ವಿಶ್ರಾಂತಿಗೂ ಸಮಯವನ್ನು ಮೀಸಲಿಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಭಾವನಾತ್ಮಕವಾಗಿ ಸಮತೋಲನದಿಂದ ಕೂಡಿರುವ ದಿನ ಇದಾಗಿರಲಿದೆ. ಮನಸ್ಸು ಶಾಂತವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವಿರಿ. ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ. ನಿಮ್ಮ ಮೃದುವಾದ ಹಾಗೂ ಮನವೊಲಿಸುವ ರೀತಿಯ ಮಾತುಗಳು ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಹಾಯ ಮಾಡಲಿವೆ. ಸಂಗಾತಿಯಿಂದ ಅನಿರೀಕ್ಷಿತ ಬೆಂಬಲ- ಪ್ರೀತಿ ದೊರೆಯಲಿದೆ. ಪ್ರವಾಸದ ಯೋಜನೆಗಳಿದ್ದರೆ ಅವು ಕಾರ್ಯಗತವಾಗಲಿವೆ. ಹಣಕಾಸಿನ ವಿಚಾರದಲ್ಲಿ ತೃಪ್ತಿದಾಯಕ ವಾತಾವರಣವಿರುತ್ತದೆ. ಕಲೆ ಅಥವಾ ಸಾಹಿತ್ಯದ ಮೇಲೆ ಒಲವು ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಿಂದ ಲಘು ಆಹಾರ ಸೇವನೆ ಮಾಡುವುದು ಉತ್ತಮ. ನಿಮ್ಮ ಆಪ್ತ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಹೊಸ ಚೈತನ್ಯ ಸಿಗಲಿದೆ. ಸಣ್ಣಪುಟ್ಟ ಏರುಪೇರಾದಂಥ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ದಿನವನ್ನು ಆನಂದಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಜ್ಞಾನ ವೃದ್ಧಿಯಾಗುವ ದಿನ. ಅಂದರೆ ಈ ದಿನ ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದೆ ಏನಾದರೂ ಹೊಸ ವಿಷಯ ಕಲಿಯಲು ಪ್ರಯತ್ನಿಸುವಿರಿ. ಮನೆಯಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬಹುದು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಜೀವನದ ಗೊಂದಲಗಳು ದೂರವಾಗಲಿವೆ. ಆರ್ಥಿಕವಾಗಿ ಸ್ಥಿತಿ ಸುಧಾರಿಸಲಿದ್ದು, ಸ್ಥಗಿತ ಆಗಿದ್ದ ಹಣಕಾಸಿನ ವ್ಯವಹಾರಗಳು ಚೇತರಿಕೆ ಕಾಣಲಿವೆ. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ನಿಮ್ಮಲ್ಲಿ ಕೆಲವರಿಗೆ ಗೌರವ- ಸನ್ಮಾನಗಳು ಆಗಬಹುದು. ಸಂಬಂಧಿಕರು ನಿಮ್ಮನ್ನು ಭೇಟಿ ಆಗುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಮಹತ್ವದ ಯೋಜನೆ ರೂಪಿಸುವಿರಿ. ನಿಮ್ಮ ನೇರ ನಡೆ- ನುಡಿ ಎಲ್ಲರಿಗೂ ಇಷ್ಟವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೈಹಿಕ ವ್ಯಾಯಾಮ ಮರೆಯಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಹಲವು ಅನಿರೀಕ್ಷಿತ ಘಟನೆಗಳು ಈ ದಿನ ನಡೆಯಲಿವೆ. ಬಿಡುವಾಗಿ ಇರೋಣ ಅಥವಾ ವಿಶ್ರಾಂತಿ ಪಡೆಯೋಣ ಎಂದು ನೀವು ಅಂದುಕೊಂಡರೂ ಹಠಾತ್ ಪ್ರಯಾಣ ಅಥವಾ ಅತಿಥಿಗಳ ಆಗಮನ ಆಗಬಹುದು. ಮನೆಯಲ್ಲಿ ಕೆಲವು ತಾಂತ್ರಿಕ ಬದಲಾವಣೆ ಅಥವಾ ದುರಸ್ತಿ ಕೆಲಸಗಳಲ್ಲಿ ಮಗ್ನರಾಗುವಿರಿ. ನಿಮ್ಮ ಶಿಸ್ತುಬದ್ಧ ಜೀವನಶೈಲಿಯಿಂದ ಕುಟುಂಬದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕ ವಿಚಾರದಲ್ಲಿ ಇಂದು ಸ್ವಲ್ಪ ಎಚ್ಚರಿಕೆಯಿಂದ ಇರಿ, ಅನಗತ್ಯ ವೆಚ್ಚಗಳು ಬಜೆಟ್ ಏರುಪೇರು ಮಾಡಬಹುದು. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕಬೇಡಿ, ಅದು ನಿಮ್ಮ ನೆಮ್ಮದಿ ಕೆಡಿಸಬಹುದು. ಹಳೆಯ ಹವ್ಯಾಸಗಳನ್ನು ಪುನರಾರಂಭಿಸಲು ಇದು ಸಕಾಲ. ಸಂಗಾತಿಯೊಂದಿಗೆ ಸಣ್ಣಪುಟ್ಟ ವಾದಗಳು ಬರಬಹುದು, ತಾಳ್ಮೆಯಿಂದ ವರ್ತಿಸಿ. ಹೊಸ ವಸ್ತುಗಳನ್ನು ಖರೀದಿಸುವ ಆಸೆ ಉಂಟಾಗಲಿದೆ. ದಿನದ ಕೊನೆಗೆ ಮಾನಸಿಕ ತೃಪ್ತಿ ಸಿಗುವಂತಹ ಕೆಲಸ ಮಾಡುವಿರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಂತೋಷದ ಸುದ್ದಿ ಬರುವುದರಿಂದ ಅಥವಾ ನಿಮ್ಮದೇ ಸ್ವಭಾವದ ಕಾರಣಕ್ಕಾಗಿ ಅತ್ಯಂತ ಲವಲವಿಕೆಯ ದಿನ ಇದಾಗಿರುತ್ತದೆ. ಹಳೆಯ ಸ್ನೇಹಿತರೊಂದಿಗೆ ಮಾತುಕತೆ ನಡೆಸುವಿರಿ ಅಥವಾ ಅವರನ್ನು ಭೇಟಿ ಮಾಡುವಿರಿ. ನಿಮ್ಮ ಹಾಸ್ಯಪ್ರವೃತ್ತಿ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸಲಿದೆ. ವ್ಯಾಪಾರಸ್ಥರಿಗೆ ಕೆಲವು ಲಾಭದಾಯಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಶುಭದಿನವಾಗಿದ್ದು, ಹಣದ ಹರಿವು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳ ಬಗ್ಗೆ ಆಲೋಚಿಸಲು ಮತ್ತು ಅವುಗಳನ್ನು ರೂಪಿಸಲು ಸೂಕ್ತ ಸಮಯ. ಪ್ರಯಾಣದ ಯೋಗವಿದ್ದು, ಅದು ನಿಮಗೆ ಉಲ್ಲಾಸ- ಉತ್ಸಾಹ ನೀಡಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಇರಲಿ, ಇಲ್ಲದಿದ್ದರೆ ಆತ್ಮೀಯರ ಮನಸ್ಸಿಗೆ ನೀವಾಡುವ ಮಾತು- ಬಳಸುವ ಶಬ್ದಗಳಿಂದ ನೋವಾಗಬಹುದು. ಇನ್ನು ಹೊಸ ಹವ್ಯಾಸಗಳಿಗೆ ಸಮಯವನ್ನು ಮೀಸಲಿಡುತ್ತೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಐಷಾರಾಮಿ ಮತ್ತು ಸುಖವಾಗಿ ದಿನ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ಮನೆಯನ್ನು ಸುಂದರಗೊಳಿಸಲು ಅಥವಾ ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ. ಪ್ರೀತಿಯಲ್ಲಿ ಇರುವವರಿಗೆ ರೋಮ್ಯಾಂಟಿಕ್ ಕ್ಷಣಗಳು ಕಳೆಯುವಂಥ ಅವಕಾಶ ದೊರೆಯಲಿದೆ. ನಿಮ್ಮ ಆಕರ್ಷಕ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗಲಿದ್ದಾರೆ. ಕೌಟುಂಬಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ರುಚಿಕರವಾದ ಭೋಜನದ ಸವಿಯನ್ನು ಕುಟುಂಬದವರೊಂದಿಗೆ ಸವಿಯುವಿರಿ. ಆರ್ಥಿಕವಾಗಿ ಸ್ಥಿತಿ ಉತ್ತಮವಾಗಿದ್ದರೂ ಉಳಿತಾಯದ ಕಡೆಗೂ ಗಮನವಿರಲಿ. ಸ್ತ್ರೀಯರಿಂದ ನಿಮಗೆ ವಿಶೇಷ ಸಹಕಾರ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದ್ದು, ಮನಸ್ಸು ಉತ್ಸಾಹದಿಂದ ಇರಲಿದೆ. ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವ್ಯಕ್ತಿಯ ಪರಿಚಯ ಆಗಲಿದೆ. ಈ ದಿನ ನೀವು ಎಲ್ಲವನ್ನೂ ಪ್ರೀತಿಯ ಕಣ್ಣಿನಿಂದಲೇ ನೋಡುವಿರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಆತ್ಮಾವಲೋಕನದ ದಿನ ಇದಾಗಿರಲಿದೆ. ಮುಂದಿನ ಯೋಜನೆಗಳು, ದೀರ್ಘಾವಧಿ ಕಾರ್ಯಗಳ ಅನುಷ್ಠಾನದ ಬಗ್ಗೆ ಚಿಂತಿಸುವುದಕ್ಕೆ ಏಕಾಂತದಲ್ಲಿ ಸಮಯ ಕಳೆಯಲು ಬಯಸುವಿರಿ. ದಿನದ ಎರಡನೇ ಭಾಗದಲ್ಲಿ ಆಧ್ಯಾತ್ಮಿಕ ಮತ್ತು ತಾತ್ವಿಕ ವಿಷಯಗಳ ಬಗ್ಗೆ ಓದಲು ಅಥವಾ ಚರ್ಚಿಸಲು ಆಸಕ್ತಿ ತೋರುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ, ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಅಂತಃಪ್ರಜ್ಞೆ ಇಂದು ಬಹಳ ತೀಕ್ಷ್ಣವಾಗಿರಲಿದ್ದು, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅದು ಸಹಾಯ ಮಾಡಲಿದೆ. ಮನೆಯಲ್ಲಿನ ಹಿರಿಯರೊಬ್ಬರ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಹಳೆಯ ನೆನಪುಗಳು ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಟ್ರಾಫಿಕ್ ಮತ್ತಿತರ ಗದ್ದಲದಿಂದ ದೂರವಿದ್ದು ನಿಮ್ಮ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಪಾರದರ್ಶಕ- ನೇರವಂತಿಕೆಯಿಂದ ಮಾತನಾಡಲು ಪ್ರಯತ್ನಿಸಿ, ಅದು ನಿಮಗೆ ಗೌರವ ತರಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಶಿಸ್ತು ಮತ್ತು ಜವಾಬ್ದಾರಿಗಾಗಿ ಇತರರ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ಮನೆಯಲ್ಲಿನ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮ ಹಾಕಲಿದ್ದೀರಿ. ನ್ಯಾಯ ಮತ್ತು ಧರ್ಮದ ಬಗ್ಗೆ ನಿಮ್ಮ ನಿಲುವು ಕಟ್ಟುನಿಟ್ಟಾಗಿರಲಿವೆ. ಆಸ್ತಿ ಖರೀದಿ ಅಥವಾ ಹೂಡಿಕೆಯ ಬಗ್ಗೆ ಮನೆಯವರೊಂದಿಗೆ ಪ್ರಮುಖ ಚರ್ಚೆ ನಡೆಸುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕೆಲಸದ ಒತ್ತಡದಿಂದ ಬೆನ್ನು ನೋವು ಅಥವಾ ಕತ್ತಿನ ನೋವು ಕಾಣಿಸಿಕೊಳ್ಳಬಹುದು, ಜಾಗರೂಕರಾಗಿರಿ. ಹಿರಿಯರ ಆಶೀರ್ವಾದ ಪಡೆಯುವುದರಿಂದ ಈ ತನಕ ನೀವು ಎದುರಿಸುತ್ತಾ ಬಂದಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ನಿಮ್ಮ ಸಂಯಮ ಮತ್ತು ಗಾಂಭೀರ್ಯವು ಮನೆಯ ಕಿರಿಯರಿಗೆ ಮಾದರಿಯಾಗಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಮಾನಸಿಕ ತೃಪ್ತಿ ಪಡೆಯುವಿರಿ. ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿತ ಲಾಭ ದೊರೆಯುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಯಾವುದೇ ಕಾರ್ಯದಲ್ಲಿ ತೊಡಗಿಕೊಳ್ಳಲು ಶಕ್ತಿ, ಉತ್ಸಾಹ ನಿಮ್ಮಲ್ಲಿ ಇರುತ್ತದೆ. ದೈಹಿಕ ಚಟುವಟಿಕೆಗಳ ಮೂಲಕವಾಗಿ ಸಕ್ರಿಯರಾಗಿರುವಿರಿ. ಮನೆಯಲ್ಲಿನ ಹಳೆಯ ವಿವಾದಗಳನ್ನು ಬಗೆಹರಿಸಲು ಈ ದಿನ ಸೂಕ್ತವಾಗಿದೆ. ಭೂಮಿಗೆ ಸಂಬಂಧಿಸಿದ ಅಥವಾ ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ನಿಮ್ಮ ನಿರ್ಧಾರಗಳು ಲಾಭ ತರಲಿವೆ. ಕೋಪವನ್ನು ನಿಯಂತ್ರಿಸದಿದ್ದರೆ ಮನೆಯಲ್ಲಿನ ವಾತಾವರಣ ಹಾಳಾಗಬಹುದು, ಹಾಗಾಗಿ ಸಂಯಮದಿಂದಿರಿ. ಕ್ರೀಡೆ ಅಥವಾ ಸಾಹಸಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಹೋದರರೊಂದಿಗೆ ಬಾಂಧವ್ಯ ಸುಧಾರಿಸಲಿದ್ದು, ಅವರ ಸಹಕಾರದಿಂದ ನಿಮ್ಮ ಕಾರ್ಯಗಳು ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ಲಾಭದಾಯಕ ದಿನ ಇದಾಗಿರಲಿದೆ. ಹೊಸ ಉದ್ಯಮಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಧೈರ್ಯ ಮತ್ತು ಸಂಕಲ್ಪ ಶಕ್ತಿಯ ಕಾರಣದಿಂದ ನೀವು ಎಲ್ಲರಿಗಿಂತ ಮುಂದೆ ಇರಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ




