Daily Horoscope 30 October 2024: ಯಾರ ಮಾತನ್ನೂ ನಂಬಲಾರಿರಿ, ಉದ್ಯೋಗದಲ್ಲಿ ತೊಂದರೆ ಸಾಧ್ಯತೆ

Daily Horoscope 30 October 2024: ಅಕ್ಟೋಬರ್ 30,​ 2024ರ​​ ನಿಮ್ಮ ಭವಿಷ್ಯ ಹೇಗಿದೆ? ಬುಧವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ ,ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 30 October 2024: ಯಾರ ಮಾತನ್ನೂ ನಂಬಲಾರಿರಿ, ಉದ್ಯೋಗದಲ್ಲಿ ತೊಂದರೆ ಸಾಧ್ಯತೆ
ಯಾರ ಮಾತನ್ನೂ ನಂಬಲಾರಿರಿ, ಉದ್ಯೋಗದಲ್ಲಿ ತೊಂದರೆ ಸಾಧ್ಯತೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 30, 2024 | 12:02 AM

ಮೇಷ ರಾಶಿ: ಇನ್ನೊಬ್ಬರ ಹಿತ ಚಿಂತನೆಯನ್ನು ಕಡಿಮೆ‌ ಮಾಡಿ, ನಿಮ್ಮ ಬಗ್ಗೆ ಯೋಚಿಸುವಿರಿ. ಕೆಲವು ಸಂಗತಿಗಳ ವಿಚಾರದಲ್ಲಿ ನೀವು ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಕಾರವೂ ಸಿಗದೇ ಇರುವುದು ಬೇಸರವಾಗಬಹುದು. ನಿರಂತರ ಕೆಲಸದಿಂದ ನಿಮಗೆ ಮುಕ್ತಿಯ ಅವಶ್ಯಕತೆ ಇದೆ. ಸಾಮರಸ್ಯದ ಕೊರತೆಯಿಂದ ದ್ವೇಷವೂ ಹುಟ್ಟಿಕೊಳ್ಳಬಹುದು. ನೀವು ಬಯಸದೇ ಇದ್ದರೂ ಆಪತ್ತಿಗೆ ಸಹಾಯ ದೊರೆಯುವುದು. ವಿದ್ಯಾಭ್ಯಾಸದ ವಿಷಯದಲ್ಲಿ ನಿಮಗೆ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಯೋಗ್ಯವಾದ ರೀತಿಯಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಕಡೆಗಣಿಸಿದ್ದು ನಿಮಗೆ ಪ್ರೇರಣೆಯಾಗಬಹುದು. ಕೆಲಸಗಳನ್ನು ಮುಂದೂಡುತ್ತ ಇರುವುದು ನಿಮ್ಮ ನಿರಾಸಕ್ತಿಯನ್ನು ತೋರಿಸುವುದು. ವಹಿಸಿಕೊಂಡ ಕಾರ್ಯವನ್ನು ಸಕಾಲಕ್ಕೆ ಮಾಡಿ ಮುಗಿಸಿ. ಯಾವುದನ್ನೇ ಆದರೂ ನಿರಂತರ ಮಾಡಿದರೆ ನಿಮ್ಮ ವಶವಾಗುವುದು. ಭಿನ್ನಾಭಿಪ್ರಾಯಗಳು ಪರಸ್ಪರ ಮಾತುಕತೆಯ ಮೂಲಕ‌ ಪರಿಹಾರವಾಗುವುದು.

ವೃಷಭ ರಾಶಿ: ಯಾರ ಮಾತನ್ನೂ ಒಮ್ಮೆಲೇ ನಂಬಲಾರಿರಿ. ನಿಮಲ್ಲಿ ಎಲ್ಲವೂ ಇದ್ದರೂ ಕೊರತೆ ಎಂಬಂತೆ ಇರುವಿರಿ. ಹಣವನ್ನು ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಿಗೆ ಹಣವನ್ನು ಕೊಡುವರು. ಹೇಳಬೇಕಾದುದನ್ನು ಹೇಳುವ ಕ್ರಮದಲ್ಲಿ ಹೇಳಿ. ಆಪ್ತರನ್ನು ನೀವು ಕಳೆದುಕೊಳ್ಳುವ ಸಂಭವವಿದೆ. ಉದ್ಯೋಗದಲ್ಲಿ ಉಂಟಾದ ಸಣ್ಣ ಅಡ್ಡಿಯನ್ನೇ ದೊಡ್ಡದಾಗಿ ಬಿಂಬಿಸುವಿರಿ. ನಿಮ್ಮವರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಾತೀತ ನಿಲುವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಹಂತದ ಕೆಲಸಗಳು ಮಂದಗತಿಯಲ್ಲಿ ಇರಲಿದೆ. ವಿವಾದವು ಕಲಹವಾಗಿ ಮಾರ್ಪಡುವುದು. ಮೊದಲೇ ತೀರ್ಮಾನವಾದ ನಿಮ್ಮ ಪ್ರಯಾಣವು ಮುಂದೆ ಹೋಗಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ಅನ್ಯರ ಜೊತೆ ಸಮಾನಸ್ಥಾನವನ್ನು ಗಳಿಸುವುದು ಕಷ್ಟವಾಗುವುದು.

ಮಿಥುನ ರಾಶಿ: ಎಂತಹದ್ದೇ ನೋವಿದ್ದರೂ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಸೂಕ್ತ. ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ವ್ಯಾಪಾರದಲ್ಲಿ ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಅಹಂಕಾರದ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವುದು ಅನಿವಾರ್ಯವಾದೀತು. ನಿಮ್ಮ ಮಾತು ಬೇರೆಯದೇ ಅರ್ಥವನ್ನು ಕೊಟ್ಟು, ಸಂಬಂಧವನ್ನು ಕೆಡಿಸುವುದು. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಭೇಟಿಯಾಗವರು. ದೊಡ್ಡ ಅಪಾಯದಿಂದ ನಿಮಗೆ ರಕ್ಷಣೆಯಾಗುವುದು. ಸಂಗಾತಿಯ ಇಂಗಿತವನ್ನು ತಿಳಿದುಕೊಳ್ಳುವುದು ನಿಮಗೆ ಕಷ್ಟವಾಗುವುದು. ಎಂದು ಆಡಿದ ಮಾತಿಗೆ ಇಂದು ಪಶ್ಚಾತ್ತಾಪಪಡಬೇಕಾದೀತು.‌ ಒಂಟಿಯಾಗಿ ಎಲ್ಲಿಗಾದರೂ ಹೋಗಬೇಕು ಎಂದು ಅನ್ನಿಸುವುದು. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ. ನಿಮಗಾದ ಒಳ್ಳೆಯದನ್ನು ನೆನಪಿಸಿಕೊಳ್ಳುವಿರಿ.

ಕರ್ಕಾಟಕ ರಾಶಿ: ನಿಮಗೆ ಅವಶ್ಯಕ ವಸ್ತುಗಳ ಬಗ್ಗೆ ಅತಿಯಾದ ಇಚ್ಛೆ ಇರಲಿದೆ. ನಿಮಗಾಗದವರು ನಿಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವರು. ಇಂದಿನ ಎಲ್ಲ ಪರಿಸ್ಥಿತಿಯೂ ನಿಮ್ಮ ಪರವಾಗಿ ಇರುತ್ತದೆ ಎನ್ನಲಾಗದು. ಬುದ್ಧಿವಂತರೆಂಬಂತೆ ತೋರಿಸಿಕೊಳ್ಳುವಿರಿ. ಅಧಿಕಾರದ ಮಾತುಗಳು ನಿಮ್ಮ ಕೆಲಸಕ್ಕೆ ಬಾರದು. ನಿಮ್ಮ ಸ್ವಭಾವದ ಬದಲಾವಣೆಯು ಎಲ್ಲರಿಗೂ ಅಚ್ಚರಿಯನ್ನು ತಂದೀತು. ಉದ್ಯೋಗದಲ್ಲಿ ವಿರಾಮವನ್ನು ತೆಗೆದುಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದೇ ವಾದಿಸುವಿರಿ. ತಾಯಿಯ ಜೊತೆ ವಾಗ್ವಾದ ನಡೆಸುವಿರಿ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ತೆಗೆಯಬಹುದು. ನಿಮ್ಮ ಲಾಭಕ್ಕೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಇಂದಿನ ಕಛೇರಿಯ ಕೆಲಸಕ್ಕೆ ಸಮಯ ಮಿತಿ ಇರುವುದು. ಕೆಲಸವನ್ನು ಮುಗಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಕೊನೆಯ ಹಂತದಲ್ಲೂ ವ್ಯತ್ಯಾಸವಾಗಬಹುದು.

ಸಿಂಹ ರಾಶಿ; ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಆಗುವುದು. ಉದ್ಯಮದ ವಿಸ್ತಾರ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುವಿರಿ. ನೀವು ಪ್ರೀತಿಸುವವರ ಮಾತನ್ನು ತೆಗದುಹಾಕದಿರಿ. ಆರ್ಥಿಕ ನಷ್ಟದ ಆತಂಕವೂ ಇರಲಿದೆ. ಅಪರಿಚಿತರ ವಿದ್ಯಾಭ್ಯಾಸಕ್ಕೆ ನೀವು ಸಹಾಯ ಮಾಡುವಿರಿ. ವೃತ್ತಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವಿರಿ. ಒತ್ತಾಯದಿಂದ ಯಾರ ಸ್ನೇಹವನ್ನೂ ಬಯಸುವುದು ಬೇಡ. ಒಳ್ಳೆಯ ಕುಲದ ಸಂಗಾತಿಯನ್ನು ಪಡೆಯುವಿರಿ. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆರ್ಥಿಕ ಯೋಜನೆಯನ್ನು ತಯಾರಿಸಿಕೊಳ್ಳುವಿರಿ. ಒಂದೇ ಸ್ನೇಹವನ್ನು ಬಹಳ ಕಾಲ ಇಟ್ಟುಕೊಳ್ಳಲಾರಿರಿ. ವ್ಯಾಪರಕ್ಕೆ ಸಂಬಂಧಿಸಿದಂತೆ ನಿಮಗೆ ಆದಾಯ ಕಡಿಮೆ ಆಗಬಹುದು.ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ.

ಕನ್ಯಾ ರಾಶಿ: ನಿಮ್ಮ ಮೇಲೆ ಕಳ್ಳತನದ ಆರೋಪ ಅಕಸ್ಮಾತ್ ಆಗಿಬರಬಹುದು. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ‌ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಟ್ಟು ಪಶ್ಚಾತ್ತಾಪಪಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಏಳ್ಗೆಗೆ ಘಾಸಿ ನೀಡಬಹುದು. ಹೊಗಳಿಕೆಯ ಮೂಲಕ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಗೊಂದಲ ಇರಲಿದೆ. ನಿಮ್ಮ ಗೌಪ್ಯ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವರು. ಮನೆಯ ಪರಿಸರವು ಏಕಾಗ್ರತೆಯನ್ನು ಹಾಳುಮಾಡಬಹುದು. ಆದಾಯಕ್ಕೆ ತಕ್ಕಹಾಗೆ ಖರ್ಚಿಗೂ ಸಿದ್ಧವಾಗಿರಬೇಕಾಗುವುದು. ನಿಮ್ಮ ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು. ಉತ್ತಮ ಭೂಮಿಯ ಲಾಭಕ್ಕಾಗಿ ಓಡಾಟ ಮಾಡುವಿರಿ. ಒತ್ತಡದಿಂದ ನಿಮ್ಮ ಎಲ್ಲ ಚಿಂತೆಗಳೂ ಕಾಣಿಸಿಕೊಳ್ಳದು. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ. ನೌಕರರಿಂದ ನಿಮಗೆ ಕಷ್ಟವಾಗಲಿದೆ.

ತುಲಾ ರಾಶಿ: ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗಬಹುದು. ತುರ್ತು ಹಣಕಾಸಿನ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ನಿಮ್ಮ ಬಗ್ಗೆ ನಿಂದನೆಯ ಮಾತುಗಳು ಕೇಳಿಬರಬಹುದು. ದುರ್ವಿಚಾರಗಳನ್ನು ಯೋಚಿಸಿಬಾರದು ಎಂದುಕೊಂಡರೂ ಅದೇ ಬಂದು ನಿಮ್ಮನ್ನು ಹಿಂಸಿಸಬಹುದು.‌ ಬರಹಗಾರಿಗೆ ಹಿನ್ನಡೆಯಾಗಲಿದೆ. ವ್ಯಾಪಾರಿಗಳಿಗೆ ಅಪೇಕ್ಷಿತ ಲಾಭ ಸಿಗುವ ಸಾಧ್ಯತೆ ಕಡಿಮೆ. ಇಂದು ಬಹಳ ದಿನಗಳಿಂದ ಉಳಿಸಿಕೊಂಡ ಸ್ವಂತ ಕಾರ್ಯವನ್ನು ನೀವು ಮಾಡಿ ಮುಗಿಸುವಿರಿ. ಸಮಾಜದ‌ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ವಾತಾವರಣದ ವ್ಯತ್ಯಾಸದ ಕಾರಣ ನೀವು ಉದ್ವೇಗದಲ್ಲಿ ಇರುವಂತೆ ಕಾಣಿಸುವುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ನೇಹಿತರಿಗಾಗಿ ನಿಮ್ಮ ಕಡೆಯಿಂದ ಸಾಲವನ್ನು ಕೊಡಿಸಿದ್ದು ಈಗ ನಿಮ್ಮ ತಲೆಗೇ ಅದು ಸುತ್ತಿಕೊಳ್ಳಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನ ಮಾನಗಳು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಇಷ್ಟಪಡುವುದಿಲ್ಲ. ಅಗ್ನಿಯ ಭೀತಿಯು ನಿಮ್ಮನ್ನು ಕಾಡಬಹುದು. ಎಲ್ಲ ವಿಚಾರಗಳಿಗೆ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವುದು ಯೋಗ್ಯವಾಗದು. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯಲೇ ಬೇಕು. ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಮಗೆ ತೊಂದರೆಗಳು ಬರಬಹುದು. ಸಂಗಾತಿಯ ನಡುವೆ ನಂಬಿಕೆಯನ್ನು ಪುನಃ ನಿರ್ಮಿಸಲು ಇಂದು ಒಳ್ಳೆಯ ಅವಕಾಶ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ.

ಧನು ರಾಶಿ: ಇಂದು ಆರ್ಥಿಕ ಲಾಭದ ಹೊಸ ಮೂಲಗಳು ಗೊತ್ತಾಗುವುದು. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಎಲ್ಲ ವಿಚಾರದಲ್ಲಿಯೂ ಕಿರಿಕಿರಿ ಆಗಲಿದೆ. ಇಂದು ಸಮಾಧಾನದಿಂದ ಆಲೋಚಿಸುವುದು ನಿಮಗೆ ಬಾರದು.‌ ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಸತ್ಕರಿಸುವರು. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಬಹುದು. ಸಹೋದರರ ನಡುವೆ ಸಹಬಾಳ್ವೆ ಇರಲಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವಿರಿ. ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುವುದು. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಿಮ್ಮ ಆತ್ಮೀಯರೊಂದಿಗೆ ಪ್ರವಾಸಕ್ಕೆ ಹೋಗುವ ಖುಷಿ ಇರುವುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಮಾತನಾಡುವಾಗ ಜಾಣತನದ ಅವಶ್ಯಕತೆ ಇರುವುದು.

ಮಕರ ರಾಶಿ: ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು. ಪ್ರಮುಖ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ ಅಮೂಲ್ಯವಾದ ಸಲಹೆಗಳನ್ನು ಪಡೆಯಬಹುದು‌. ನೀವು ಖರೀದಿಸಿದ ಸ್ಥಿರಾಸ್ತಿ ದಾಖಲೆಗಳನ್ನು ಸರಿಯಾಗಿ ಆಪ್ತರ ಜೊತೆ ಚರ್ಚಿಸಿ. ಇನ್ನೊಬ್ಬರ ಸಂಕಷ್ಟವನ್ನು ಪರಿಹರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಸಂಗಾತಿಯ‌ ಆರೋಗ್ಯವು ಕೆಡಲಿದ್ದು ನಿಮಗೆ ತಿರುಗಾಡವು ಇರಲಿದೆ. ಸರ್ಕಾರಿ ಕೆಲಸದಲ್ಲಿ ತೊಡಕಾಗಬಹುದು. ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಉನ್ನತ ಅಧ್ಯಯನಕ್ಕೆ ನೀವು ಬೇರೆ ಕಡೆಗೆ ಹೋಗುವ ಸ್ಥಿತಿಯು ಬರಬಹುದು. ನಿಮ್ಮ ಪ್ರಣಯ ಜೀವನದಲ್ಲಿನ ಆಕರ್ಷಣೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಣ್ಣವರ ವಿಚಾರದಲ್ಲಿ ಕಾಳಜಿ ಇರಲಿ. ತಂದೆಯ ಪ್ರೀತಿ ಸಿಗಲಿದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಬರುವುದು. ಕೊನೆಗೆ ಅನುಭವಿಸುವವರು ತಾವೇ ಆಗಿರುತ್ತೀರಿ.

ಕುಂಭ ರಾಶಿ: ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಸಹಜವಾಗಿ ಇರಬೇಕಾಗುವುದು. ಕಚೇರಿಯಲ್ಲಿ ಕೆಲವು ಪ್ರಮುಖ ಯೋಜನೆಗಳು ನಿಮ್ಮ ಹೆಗಲೇರಬಹುದು. ಹಿರಿಯ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗುರುತಿಸುವರು. ಮನೆಯ ಸದ್ಯರ ಜೊತೆ ಕಾಲಹರಣ ಮಾಡುವಿರಿ. ಶತ್ರುಗಳನ್ನು ನೀವು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಾತು ಹಾಸ್ಯದಿಂದ ಗಂಭೀರರೂಪಕ್ಕೆ ಹೋಗುವುದು. ಅತಿಥಿಸತ್ಕಾರವನ್ನು ನೀವು ಮಾಡುವಿರಿ. ದೈವರಾಧನೆಗೆ ಸ್ವಲ್ಪ ಸಮಯವನ್ನು ಕೊಡುವಿರಿ. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ಜಗಳವಾಡಬೇಕೆಂದು ನಿಮಗೆ ಅನ್ನಿಸುವುದು. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ.

ಮೀನ ರಾಶಿ: ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಇರಲಿದೆ. ಸೋತರೂ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಸಾಧಿಸುವುದು ಸುಲಭವಾಗುತ್ತದೆ. ಇತ್ತೀಚೆಗೆ ಭೇಟಿಯಾಗದ ಕುಟುಂಬ ಸದಸ್ಯರೊಬ್ಬರು ಸಿಗಬಹುದು. ಆರ್ಥಿಕ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲಬೇಕಾಗಬಹುದು. ಕುಟುಂಬದ ಜೊತೆ ನಿಮ್ಮ ಭವಿಷ್ಯವನ್ನು ಹಂಚಿಕೊಳ್ಳುವಿರಿ. ಅದೃಷ್ಟವನ್ನು ನಂಬಿಕೆ ಕುಳಿತುಕೊಳ್ಳುವುದು ಪ್ರಯೋಜನವಾಗದು. ಸಾಲಗಾರರ‌ ಉಪಟಳ ಹೆಚ್ಚಿರಲಿದೆ. ಬೇಡವಾದ ಸಂಗತಿಗಳನ್ನು ಯಾರಾದರೂ ನಿಮ್ಮ ತಲೆಗೆ ಹಾಕುವರು. ಮನೋಗತವನ್ನು ಹೇಳಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ನಿಮ್ಮ ಇಚ್ಛೆಯಂತೆ ಕೆಲಸಗಳು ನಡೆಯಬಹುದು. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ
ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ