Horoscope: ಏನನ್ನಾದರೂ ಮಾಡುತ್ತೇನೆ ಎಂಬ ಧೈರ್ಯ, ಆದರೆ ಅದು ಹುಂಬುತನವಾದೀತು ಎಚ್ಚರ!
ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, ಫೆಬ್ರವರಿ 23, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಶೋಭನ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:18 ರಿಂದ 12:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ 05:10ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:22 ರಿಂದ 09:50ರ ವರೆಗೆ.
ಮೇಷ ರಾಶಿ: ಇಂದು ನೀವು ಎಲ್ಲರ ಮಾತನ್ನು ಕೇಳುವುದು ಸೂಕ್ತವಾದರೂ ಅದನ್ನು ಪಾಲಿಸುವ ಬಗ್ಗೆ ಪೂರ್ಣ ಮನಸ್ಸು ಇರದು. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸಲು ದಾರಿ ಸುಲಭವಾಗುವುದು. ಆಸ್ತಿಗೆ ಸಂಬಂಧಿಸಿದ ಕೆಲಸಗಳಿಗೆ ಓಡಾಟ ಮಾಡಬೇಕಾದೀತು. ಮಹಿಳೆಯರು ವ್ಯವಹಾರವನ್ನು ಆರಂಭಿಸಲು ಇಷ್ಟಪಡುವರು. ತಂದೆಯು ನಿಮ್ಮ ಪ್ರಗತಿಯನ್ನು ನಿರೀಕ್ಷಿಸುವಿರಿ. ಯೋಜನೆಯು ಮಸುಕಾಗಿದ್ದು ಮುಂದಿನ ದಾರಿ ಸರಿಯಾಗಿ ಗೊತ್ತಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ. ಸಣ್ಣ ಕಾರಣಕ್ಕೆ ನೆರೆಯವರ ಜೊತೆ ಕಲಹವಾಗಬಹುದು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಇಂದು ಮಾತುಗಳನ್ನು ಕಡಿಮೆ ಆಡುವಿರಿ.
ವೃಷಭ ರಾಶಿ: ನಿಮಗೆ ಏನನ್ನಾದರೂ ಮಾಡುತ್ತೇನೆ ಎಂಬ ಧೈರ್ಯವು ಹೆಚ್ಚಿರುವುದು. ಆದರೆ ಅದು ನಿಮ್ಮ ಹುಂಬುತನವಾದೀತು. ಈ ದಿನ ಉದ್ಯಮಿಗಳಿಗೆ ತಮ್ಮ ಜಾಣತನದಿಂದ ಪ್ರಯೋಜನವನ್ನು ಪಡೆಯುವರು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಜೊತೆ ಖರ್ಚನ್ನು ಮಾಡುವ ಮನಃಸ್ಥಿತಿಯೂ ಬರಬಹುದು. ಹೊಸ ಕೆಲಸದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ನೂತನ ಉದ್ಯೋಗದ ಅನ್ವೇಷಣೆಯನ್ನು ನೀವು ಮಾಡಬೇಕಾಗುವುದು. ಸಾಲವನ್ನು ದಿನದ ಮೊದಲೇ ತೀರಿಸಿ ಪ್ರಶಂಸೆ ಗಳಿಸುವಿರಿ. ಎರಡೆರಡು ಕಾರ್ಯವನ್ನು ಮಾಡುವ ಸಂದರ್ಭವು ಬರಬಹುದು. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಸದಾ ಉತ್ಸಾಹದಿಂದ ಇರಲು ನೀವು ನಿಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುವುದು ಉತ್ತಮ. ಕುಟುಂಬದ ಪ್ರೀತಿಯು ಸಿಗಲಿದೆ.
ಮಿಥುನ ರಾಶಿ: ಇಂದು ನೀವು ಮಾತನಾಡುವಾಗ ಅಳೆದು ತೂಗಿ ಮಾತನಾಡುವುದು ಉಚಿತ. ಹಣದ ವಿಚಾರದಲ್ಲಿ ಅತಿಯಾದ ಮುಂದಾಲೋಚನೆಯನ್ನು ಮಾಡುವಿರಿ. ಹೊಸ ಕಲಿಕೆಯ ಬಗ್ಗೆ ಆಸಕ್ತಿ ಉಂಟಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ವಾಹನವನ್ನು ಚಲಾಯಿಸುವ ಬೇರೆಯ ಯಾವ ಚಟುವಟಿಕೆಗಳನ್ನು ಮಾಡುವುದು ಬೇಡ. ಭೂಮಿಯ ವ್ಯವಹಾರದಲ್ಲಿ ಅನುಭವಿಗಳನ್ನು ಜೊತೆಯಲ್ಲಿ ಇರಿಸಿಕೊಳ್ಳಿ. ಆಹಾರದಿಂದ ಆರೋಗ್ಯವು ಕೆಡಲಿದೆ. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ವ್ಯವಹಾರದಲ್ಲಿ ಮಧ್ಯಪ್ರವೇಶವನ್ನು ಮಾಡಲಾರಿರಿ.
ಕರ್ಕ ರಾಶಿ: ಎಲ್ಲದಕ್ಕೂ ಇಂದೇ ಉಪಾಯವಿರದು. ಕಷ್ಟವಾಗದ ಮಾರ್ಗದ ಕಡೆ ಸೆಳೆತ ಇರುವುದು. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಪ್ರಭಾವಿತರಾಗುವರು. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವರು. ಸಹೋದರರ ಕೊಡುಗೆಯನ್ನು ನಿರಾಕರಿಸುವಿರಿ. ನಿಮ್ಮ ವಿಚಾರವನ್ನು ಇತರರ ಮುಂದೆ ಬಹಿರಂಗವಾಗಿ ಇರಿಸಿ. ನೀವು ನಿಮ್ಮವರನ್ನು ಗ್ರಹಿಸುತ್ತ ಇರುವಿರಿ. ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ನಿಮ್ಮ ಅದೃಷ್ಟದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಪ್ತರ ಒಡನಾಟವು ಖುಷಿಯನ್ನು ಕೊಡಬಹುದು.