Horoscope: ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ, ಆಪಾಯದ ಸೂಚನೆ ಇದೆ
ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 24 ಫೆಬ್ರವರಿ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮಘಾ, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:50 ರಿಂದ 11:18ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:54 ರಿಂದ 08:22ರ ವರೆಗೆ.
ಮೇಷ ರಾಶಿ: ನಿಮ್ಮ ಅನವರತ ಪ್ರಯತ್ನದ ಹಾಗೂ ಕುಟುಂಬದ ಸದಸ್ಯರ ಸಮಯೋಚಿತ ಬೆಂಬಲದ ಫಲವಾಗಿ ನಿಮಗಮ ಆಸೆಯನ್ನು ಈಡೇರಿಸಿಕೊಳ್ಳುವಿರಿ. ನೀವು ಪ್ರವಾಸ ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ಸಂಪತ್ತುಗಳ ಬಗ್ಗೆ ವಿಶೇಷ ಎಚ್ಚರಿಕೆ ಇರಲಿ. ನಿಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಗಮನಹರಿಸಿ. ನಿಮ್ಮ ವಿಚಾರಕ್ಕೆ ಕೋಪಗೊಂಡಿದ್ದರೆ, ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿ. ವಿವಿಧ ವೃತ್ತಿಗಳು ನಿಮ್ಮನ್ನು ಕರೆಯಬಹುದು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು.
ವೃಷಭ ರಾಶಿ: ನೀವು ಶಾರೀರಿಕವಾದ ಸೌಂದರ್ಯದ ಕಡೆ ಗಮನ ಅತಿಯಾಗುವುದು. ಸಹೋದರ ಪ್ರೀತಿಯಿಂದ ನಿಮಗೆ ಖಷಿಯಾಗಲಿದೆ. ಎಲ್ಲರಿಂದ ನಿರ್ಮಲ ಪ್ರೀತಿಯನ್ನು ಅನುಭವಿಸಿ. ನೀವು ಕೆಲಸದಲ್ಲಿ ಇಂದು ನಿಜವಾಗಿಯೂ ಯಾವುದಾದರೂ ಅದ್ಭುತವಾದದ್ದನ್ನು ಸಾಧಿಸಬಹುದು. ಈ ದಿನ ಶ್ರೇಷ್ಠವಾಗಿದೆ, ಇತರರೊಂದಿಗೆ ನೀವು ನಿಮಗಾಗಿ ಸಹ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗತಿ ಇಂದು ಸ್ವರ್ಗದ ಮೇಲೆ ಇದೆ, ಇಂದು ಅದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಹೇಳಬೇಕಾದ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ. ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ಮಿತಿಮೀರಿದ ಆಸೆಗೆ ಕಡಿವಾಣದ ಅಗತ್ಯವಿದೆ.
ಮಿಥುನ ರಾಶಿ: ಇಂದು ಯಾರನ್ನಾದರೂ ಸೆಳೆಯುವ ಪ್ರಯತ್ನ ಮಾಡುವಿರಿ. ನೀವು ನಿಮ್ಮ ಯೋಜನೆಗಳನ್ನು ಜಾರಿಗೊಳಿಸಿದರೆ, ಇಂದು ಕೊಂಚ ಹೆಚ್ಚಿನ ಹಣವನ್ನು ಗಳಿಸುವಿರಿ. ದೂರವಾದ ಸಂಬಂಧಿಯೊಬ್ಬರಿಂದ ಬರುವ ಅನಿರೀಕ್ಷಿತ ಸಂದೇಶವು ಸಂಪೂರ್ಣ ಕುಟುಂಬಕ್ಕೆ ಉಲ್ಲಾಸ ಬರುವುದು. ನೀವು ಯಾವುದೇ ಹೊಸ ಉದ್ಯಮವನ್ನು ಆರಂಭಿಸುವ ಮುನ್ನ ಎರಡು ಸಲ ಚಿಂತಿಸಿ. ಖಾಲಿ ಸಮಯದ ಸದುಪಯೋಗವನ್ನು ನೀವು ಕಲಿತುಕೊಳ್ಳಬೇಕು. ಇಲ್ಲವಾದರೆ, ಜೀವನದಲ್ಲಿ ಅನೇಕರಿಂದ ನೀವು ಹಿಂದೆ ಬೀಳುತ್ತೀರಿ. ಇದು ನಿಮ್ಮ ಜೀವನಸಂಗಾತಿಯೊಂದಿಗಿನ ಅದ್ಭುತ ದಿನವಾಗಿದೆ. ನಿಮ್ಮ ಕಾಳಜಿಯು ಇತರರಿಗೆ ಮುಜುಗರವನ್ನು ತಂದೀತು. ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸುಳ್ಳು ಮಾತುಗಳನ್ನು ಯಾರೂ ಕೇಳಲು ಇಷ್ಟ ಪಡರು.
ಕಟಕ ರಾಶಿ: ಇಂದು ನಿಮ್ಮ ಕಚೇರಿಯ ಸಹಪಾಠಿ ನಿಮ್ಮ ಮೌಲ್ಯವಾದ ಸಂಪತ್ತನ್ನು ಅಡಗಿಸಬಹುದು. ನೀವು ಹೆಚ್ಚು ಪ್ರಯತ್ನಿಸಿದರೂ ಮಕ್ಕಳ ಜೊತೆಯಲ್ಲಿ ನಿಮ್ಮ ವಿಶ್ರಾಂತಿಯ ಕಾಲವನ್ನು ಕಳೆಯಲು ಪ್ರಯತ್ನಿಸಬೇಕು. ಏಕಾಂತದಲ್ಲಿ ಸಮಯ ಕಳೆಯುವುದು ಒಳ್ಳೆಯದು. ಆದರೆ ನಿಮ್ಮ ಬುದ್ಧಿಗೆ ಏನಾದರೂ ಕೆಲಸವನ್ನು ಕೊಡಿ. ಜನರಿಂದ ದೂರವಾಗುವುದಕ್ಕಿಂತ ಅನುಭವಿಯಾದ ವ್ಯಕ್ತಿಯೊಂದಿಗೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವುದು ಮೇಲು ಎಂದು ನಿಮಗೆ ನಮ್ಮ ಸೂಚನೆ ನೀಡಲಾಗಿದೆ. ಕೃಷಿಯ ಉತ್ಪನ್ನದಿಂದ ಅಧಿಕಲಾಭವಿರಲಿದೆ. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕವಾಗಿ ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ.