ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 29ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಆದಾಯದಲ್ಲಿ ಇಳಿಮುಖ ಆಗುತ್ತಿದೆ ಎಂಬುದು ಆತಂಕಕ್ಕೆ ಕಾರಣ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಯೋಜನೆ ರೂಪಿಸುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ನಿರೀಕ್ಷಿತ ಮಟ್ಟದಲ್ಲಿ ವೇತನ ಏರಿಕೆ ಮಾಡದ ಕಾರಣಕ್ಕೆ ಬೇಸರ ಮೂಡಬಹುದು. ದೂರ ಪ್ರಯಾಣ ಮಾಡಬೇಕು ಎಂದಿರುವವರು ಸರಿಯಾದ ಸಿದ್ಧತೆ ಮಾಡಿಕೊಂಡ ನಂತರ ಮುಂದುವರಿಯಿರಿ.
ಏಕಾಂಗಿತನ ನಿಮ್ಮನ್ನು ಈ ದಿನ ಕಾಡಬಹುದು. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಮನೆಯಿಂದ ದೂರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳನ್ನು ಮಾಡದಿರಿ.
ಮಕ್ಕಳ ಯಶಸ್ಸಿನಿಂದ ಮನಸ್ಸಿಗೆ ಸಂತೋಷ, ಸಮಾಧಾನ ದೊರೆಯಲಿದೆ. ಮನೆಯ ವಿಸ್ತರಣೆ ಅಥವಾ ದುರಸ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರ ಜತೆಗೆ ಚರ್ಚೆಯನ್ನು ನಡೆಸಲಿದ್ದೀರಿ. ಇದೇ ಮೊದಲ ಬಾರಿಗೆ ಹೊಸ ಪ್ರದೇಶಗಳಿಗೆ ತೆರಳುತ್ತಿದ್ದಲ್ಲಿ ಅಲ್ಲಿ ನಿಮ್ಮ ಹವ್ಯಾಸಕ್ಕೆ, ವ್ಯವಹಾರಕ್ಕೆ ಅಥವಾ ಕೆಲಸಕ್ಕೆ ಅನುಕೂಲವಾಗುವಂಥ ಬೆಳವಣಿಗೆಗಳು ಆಗಲಿವೆ. ಬಹಳ ಸಮಯದಿಂದ ಹುಡುಕುತ್ತಿದ್ದ ದಾಖಲೆಗಳು ದೊರೆಯುವ ಯೋಗ ಇದೆ.
ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಸೂಕ್ತ ಅವಕಾಶಗಳು ಕಾಣಿಸಿಕೊಳ್ಳಲಿವೆ. ಹೊಸದಾಗಿ ಪರಿಚಯ ಆಗುವವರು ಅಥವಾ ಸ್ನೇಹಿತರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ. ಮನೆ ದೇವರ ಪೂಜೆ ಮಾಡಿದಲ್ಲಿ ಮನಸ್ಸಿಗೆ ಸಮಾಧಾನ ದೊರೆಯಲಿದೆ. ರಾಜಕಾರಣಿಗಳಿಗೆ ವೃಥಾ ಸುತ್ತಾಟ ಆಗಬಹುದು. ನಿಮ್ಮ ನಿರೀಕ್ಷೆಯಂತೆ ಬೆಳವಣಿಗೆಗಳು ಆಗದೆ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಬೇಸರ ಕಾಡಲಿದೆ. ದೇಹಾಯಾಸ ಹೆಚ್ಚಾಗಲಿದೆ.
ನೀವು ಈ ಹಿಂದೆ ಯಾರಿಗೆ ಸಹಾಯ ಮಾಡಿದ್ದೀರೋ ಈ ದಿನ ಅವರು ನಿಮಗೆ ಸಹಾಯ ಮಾಡುವಂಥ ಯೋಗ ಇದೆ. ಬೆನ್ನು ನೋವು ಕಾಡುವಂಥ ಸಾಧ್ಯತೆ ಇದ್ದು, ಒಂದು ವೇಳೆ ಈ ಮುಂಚೆಯೂ ನೋವನ್ನು ಅನುಭವಿಸಿದ್ದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಹೊಸ ಜವಾಬ್ದಾರಿ ವಹಿಸುವಂಥ ಯೋಗ ಇದೆ. ಇದರಿಂದಾಗಿ ಹೆಚ್ಚು ಒತ್ತಡದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ.
ರುಚಿಕಟ್ಟಾದ ಊಟ- ತಿಂಡಿ ಮಾಡುವಂಥ ಯೋಗ ಇದೆ. ನಿಮ್ಮ ಮಾತಿನ ಮೂಲಕ ಅಥವಾ ಪರಿಚಯಸ್ಥರ ಮೂಲಕ ಇತರರಿಗೆ ನೆರವು ನೀಡಲಿದ್ದೀರಿ. ನೀರಿನ ಮಾರಾಟದ ವ್ಯವಹಾರದಲ್ಲಿ ಇರುವಂಥವರು ವಿಸ್ತರಣೆಗಾಗಿ ಪ್ರಯತ್ನ ಮಾಡಲಿದ್ದೀರಿ. ಬಲಗಣ್ಣಿಗೆ ಪೆಟ್ಟಾಗುವಂಥ ಸಾಧ್ಯತೆ ಇದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಮುಖ್ಯ. ಈಗಾಗಲೇ ಯಾರಿಗಾದರೂ ಸಾಲ ನೀಡಿ, ಅವರಿಂದ ಮರಳಿ ಪಡೆಯುವುದಕ್ಕೆ ಶ್ರಮಿಸುತ್ತಿದ್ದಲ್ಲಿ ಈ ದಿನ ದೊರೆಯುವ ಸೂಚನೆ ದೊರೆಯಲಿದೆ.
ಈ ದಿನ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವವಾದ ತೀರ್ಮಾನವೊಂದನ್ನು ಮಾಡಲಿದ್ದೀರಿ. ಉದ್ದೇಶಿತ ಗುರಿಯನ್ನು ತಲುಪುವ ಕಡೆಗೆ ಯೋಜನೆಯನ್ನು ರೂಪಿಸಲಿದ್ದೀರಿ. ಸ್ವಂತ ಉದ್ಯೋಗ, ವ್ಯವಹಾರವನ್ನು ಮಾಡುತ್ತಿರುವವರು ನಿರ್ಧಾರ ಕೈಗೊಳ್ಳುವಾಗ ಸ್ಪಷ್ಟತೆ ಇರಲಿ. ಸಂಕೋಚಕ್ಕೆ ಅಥವಾ ದಾಕ್ಷಿಣ್ಯಕ್ಕೆ ಬಿದ್ದು ತೀರ್ಮಾನ ಕೈಗೊಂಡಲ್ಲಿ ಆ ನಂತರ ಪರಿತಪಿಸುವಂತೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಸಂತೋಷವಾಗಿ ದಿನ ಕಳೆಯುವಂತಹ ಯೋಗ ಇದೆ.
ಹೂಡಿಕೆ ವಿಚಾರದಲ್ಲಿ ಇತರರ ಸಲಹೆಯನ್ನು ಅನುಸರಿಸುವ ಮುಂಚೆ ಸರಿಯಾದ ಆಲೋಚಿಸಿ, ನಿರ್ಧಾರವನ್ನು ಕೈಗೊಳ್ಳಿ. ಈ ದಿನ ಪೂರ್ಣಗೊಳಿಸಬೇಕಾದ ಜವಾಬ್ದಾರಿಗಳು ಏನೇನಿವೆ ಎಂಬ ಬಗ್ಗೆ ಒಂದು ಪಟ್ಟಿ ಮಾಡಿಕೊಂಡು, ಆದ್ಯತೆ ಮೇಲೆ ಮಾಡುತ್ತಾ ಹೋಗಿ. ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿರುವವರಿಗೆ ನಿಮ್ಮಿಂದಲೇ ಕೆಲಸಗಳು ಆಗಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇತರರ ವೈಯಕ್ತಿಕ ವಿಚಾರಗಳಿಗೆ ನಿಮ್ಮ ಅಭಿಪ್ರಾಯ ಹೇಳದಿರಿ.
ಉದ್ಯೋಗದ ಒತ್ತಡ ಹೆಚ್ಚಿರುತ್ತದೆ. ನೀವು ಯಾರೋ ಒಬ್ಬ ವ್ಯಕ್ತಿಯನ್ನೇ ನಂಬಿಕೊಂಡು, ಕೆಲಸಗಳ ಅನುಷ್ಠಾನದ ಕುರಿತು ಆಲೋಚಿಸುವುದು ಬೇಡ. ಸಂಗಾತಿಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಅದನ್ನು ಬಳಕೆ ಮಾಡುವಾಗ ಬಹಳ ಜಾಗ್ರತೆಯಿಂದ ಇರಬೇಕು. ಊಟ- ತಿಂಡಿ, ಮಾತು ಹೀಗೆ ನಾಲಗೆ ವಿಚಾರದಲ್ಲಿ ನಿಯಂತ್ರಣ ಬಹಳ ಮುಖ್ಯವಾಗುತ್ತದೆ.
ಲೇಖನ- ಎನ್.ಕೆ.ಸ್ವಾತಿ