Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 20ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 20ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 20ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಧಾನಕ್ಕೆ ಎಲ್ಲವೂ ಸರಿಹೋಗುತ್ತದೆ ಎಂಬ ಭಾವನೆ ಮೂಡಲಿದೆ. ಸಣ್ಣ- ಪುಟ್ಟ ಯೋಜನೆಗಳು ರೂಪಿಸುವುದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದಕ್ಕೆ ಶುರು ಮಾಡುತ್ತೀರಿ. ಊಟ- ತಿಂಡಿ ವಿಚಾರದಲ್ಲಿ ಪೊಗದಸ್ತಾದ ಆತಿಥ್ಯ ಸವಿಯುವಂಥ ಯೋಗ ಇದೆ. ದೂರದ ಊರಿನಿಂದ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ನಿಮ್ಮ ಕೈಯಿಂದ ಹಣ ಹಾಕಿ, ಇತರರಿಗೆ ಅನುಕೂಲ ಮಾಡಿಕೊಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈ ಹಿಂದೆ ನೀವು ಮಾಡಿದ ಕೆಲಸ, ಆಡಿದ ಮಾತುಗಳಿಗೆ ಇಂದು ಬಹಳ ಬೇಸರ ಮೂಡುತ್ತದೆ. ನಿಮ್ಮಿಂದ ಮಾಡಲಿಕ್ಕೆ ಆಗುವಂಥ ಕೆಲಸಗಳನ್ನು ಮಾತ್ರ ಒಪ್ಪಿಕೊಳ್ಳಿ. ಸಾಮರ್ಥ್ಯಕ್ಕೆ ಮೀರಿದ, ಸಮಯದೊಳಗೆ ಮಾಡಲಾಗದ್ದನ್ನು ಒಪ್ಪಿಕೊಂಡಲ್ಲಿ ಅದು ಪೂರ್ಣಗೊಳಿಸಲಿಕ್ಕೆ ಆಗದೆ ಒತ್ತಡ ಸೃಷ್ಟಿ ಆಗಲಿದೆ. ಸಂಗೀತ, ನಾಟಕ, ಚಿತ್ರ ಪ್ರದರ್ಶನದಂಥ ಕಾರ್ಯಕ್ರಮಗಳಲ್ಲಿ ಭಾಗೀ ಆಗುವಂಥ ಯೋಗ ಇದೆ. ಮನೆಗೆ ಪೀಠೋಪಕರಣಗಳನ್ನು ಖರೀದಿಸುವ ಯೋಗ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ವಾಹನ ಚಾಲನೆ ಮಾಡುವವರಿಗೆ ಆಯಾಸ ಹೆಚ್ಚಾಗಲಿದೆ. ಕೆಲವರಿಗೆ ಕಣ್ಣು ಮಂಜಾಗುವಂತೆ ಆಗಬಹುದು. ರಕ್ತದೊತ್ತಡದಂಥ ಸಮಸ್ಯೆಗಳು ಇರುವವರು ಸೂಕ್ತ ವೈದ್ಯೋಪಚಾರಗಳನ್ನು ಮಾಡಿಕೊಳ್ಳುವುದು ಮುಖ್ಯ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಸಾಲದ ಅಗತ್ಯ ಕಂಡುಬರಲಿದೆ. ನಿಮಗೆ ತೀರಾ ಅಗತ್ಯ ಇಲ್ಲ ಎಂದಾದಲ್ಲಿ ಈ ದಿನ ಪ್ರಯಾಣ ಮಾಡದಿರುವುದು ಉತ್ತಮ. ವಿನಾಕಾರಣವಾಗಿ ವ್ಯಾಜ್ಯಗಳು ಆಗಬಹುದು, ಎಚ್ಚರ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಧಾನವಾಗಿ ಆರಂಭವಾಗಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಹಣಕಾಸು ಹೊಂದಿಕೆ ಆಗದೆ ನಿಂತುಹೋಗಿದ್ದ ಕೆಲಸಗಳಿಗೆ ಅಗತ್ಯವಿರುವ ಹಣ ದೊರೆಯುವ ಮಾರ್ಗ ಗೋಚರಿಸಲಿದೆ. ನೀವು ಒಪ್ಪಿಕೊಂಡಿದ್ದ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವ ಕಡೆಗೂ ಗಮನ ನೀಡಿ. ಇನ್ನು ಬರಬೇಕಾದ ಹಣ ಇದ್ದಲ್ಲಿ ಗಟ್ಟಿಯಾಗಿ ಪ್ರಯತ್ನಿಸಿ, ಬರುವ ಸಾಧ್ಯತೆ ಇರುತ್ತದೆ ಅಥವಾ ಇಂಥ ಸಮಯದಲ್ಲಿ ಕೊಡುವುದಾಗಿ ಒಪ್ಪಿಕೊಳ್ಳಲಿದ್ದಾರೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ದಿರಿಸು ಇರಬಹುದು ಅಥವಾ ಆಲೋಚನೆ ಇರಬಹುದು, ಬದಲಾವಣೆ ಮಾಡಿಕೊಳ್ಳುವ ಕಡೆಗೆ ಆಲೋಚನೆ ಮಾಡಲಿದ್ದೀರಿ. ಇದೊಂದು ರೀತಿಯಲ್ಲಿ ಮುಂದೆ ದೊರೆಯಲಿರುವ ಹೊಸ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಂತೆಯೇ ಆಗುತ್ತದೆ. ಅಂದರೆ ಅದಕ್ಕೆ ಬೇಕಾದಂತೆ ರೆಸ್ಯೂಮೆ, ಹೊಸ ದಿರಿಸು, ಶೂ ಖರೀದಿ ಇತ್ಯಾದಿಗಳೊಂದಿಗೆ ಸಿದ್ಧ ಆಗಲಿದ್ದೀರಿ. ತಾಯಿ ಕಡೆಯ ಸಂಬಂಧಿಕರು ಮನೆಗೆ ಬರುವಂಥ ಯೋಗ ಇದೆ. ನವವಿವಾಹಿತರು ಸಂತೋಷವಾಗಿ ಕಾಲ ಕಳೆಯಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ತುಂಬ ಗಹನವಾದ ವಿಚಾರವೊಂದು ಸಮಸ್ಯೆಯಾಗಿ ಪರಿಣಮಿಸಲಿದೆ. ಕೌಟುಂಬಿಕ ವಿಚಾರದಲ್ಲಿ ಮನಸ್ತಾಪ ಎದುರಾಗಲಿದೆ. ಕಾಲು ನೋವಿನ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗುವ ಸಾಧ್ಯತೆ ಇದೆ. ಅಧ್ಯಾತ್ಮ ಚಿಂತಕರು, ವೇದ ಪಂಡಿತರು, ಪ್ರವಚನಕಾರರಿಗೆ ಬಹಳ ಮುಖ್ಯವಾದ ದಿನ ಇದು. ಏಕೆಂದರೆ ನಿಮ್ಮ ಸಾಮರ್ಥ್ಯವನ್ನು ಗುರುತಿಸಿ ಸನ್ಮಾನ ಮಾಡುವುದಕ್ಕೆ ಸಂಘ- ಸಂಸ್ಥೆಗಳು ನಿರ್ಧಾರ ಮಾಡಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಅಚಾನಕ್ ಆಗಿ ಅಥವಾ ದಿಢೀರ್ ಎಂದು ತೀರ್ಮಾನ ಮಾಡಿ ಕೆಲವು ಖರೀದಿಗಳನ್ನು ಮಾಡಲಿದ್ದೀರಿ. ಇಎಂಐ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯ ಇಲ್ಲದನ್ನೂ ಖರೀದಿ ಮಾಡುವುದಕ್ಕೆ ಹೋಗದಿರಿ. ಇನ್ನು ತಂದೆ ಅಥವಾ ತಂದೆ ಸಮಾನರಾದವರಿಗೆ ಆರೋಗ್ಯ ತಪಾಸಣೆ ಮಾಡಬೇಕಾದಂಥ ಸನ್ನಿವೇಶ ಎದುರಾಗಲಿದೆ. ಭುಜ ಅಥವಾ ಬೆನ್ನಿನ ಸಮಸ್ಯೆ ಇರುವುದಾದಲ್ಲಿ ಅದು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಆ ಬಗ್ಗೆ ಎಚ್ಚರಿಕೆಯನ್ನು ವಹಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ದಿನ ಅತಿಯಾದ ಆಲೋಚನೆ ನಿಮ್ಮನ್ನು ಕಾಡಲಿದೆ. ಬಹುಶಃ ಇತರರನ್ನು, ಇತರರ ಮನೆಯನ್ನು ಹೋಲಿಕೆ ಮಾಡಲಿದ್ದೀರಿ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಈ ದಿನ ಹಲವು ಜನರ ಮಧ್ಯೆ ಇದ್ದರೂ ಒಂಟಿತನ ನಿಮ್ಮನ್ನು ಕಾಡುತ್ತದೆ, ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ಇದೆ. ವಿನಾಕಾರಣವಾಗಿ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಆಗಿದ್ದೇ ನಿಮಗೂ ಆಗಲಿದೆ. ಅದಕ್ಕೆ ಗಾಬರಿ ಏಕೆ? ಆತ್ಮವಿಶ್ವಾಸ ಇದ್ದಲ್ಲಿ ಎಂಥ ಸವಾಲನ್ನಾದರೂ ದಾಟಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಭಾವನಾತ್ಮಕ ವಿಚಾರಗಳು ಈ ದಿನ ಮುನ್ನೆಲೆಗೆ ಬರಲಿವೆ. ನೀವು ಹೇಳಬೇಕಾದ್ದನ್ನು ಮುಲಾಜಿಲ್ಲದೆ ಹೇಳುವುದು ಬಹಳ ಕಷ್ಟವಾಗಲಿದೆ. ನಿಮ್ಮ ಬಲ ಎಂದೆನಿಸಿಕೊಂಡ ಕೆಲವು ನಿರ್ಧಾರಗಳು ಸಹಾಯಕ್ಕೆ ಬರಲಿವೆ. ಹೊಸದಾಗಿ ಏನನ್ನಾದರೂ ಕಲಿಯುವುದಕ್ಕೆ ಆರಂಭಿಸುತ್ತಿದ್ದೀರಿ ಎಂದಾದರೆ ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕುವುದು ಅತ್ಯಗತ್ಯ. ಭೂಮಿ, ವಾಹನ, ದೊಡ್ಡ ಸರಕುಗಳ ಸಾಗಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುಂಚಿತವಾಗಿ ಇದು ನಿಮ್ಮ ಶ್ರಮವನ್ನು ಎಷ್ಟು ನಿರೀಕ್ಷಿಸುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಳ್ಳಿ.
ಲೇಖನ- ಎನ್.ಕೆ.ಸ್ವಾತಿ