Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 28ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 28ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Oct 28, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಣ ಹೂಡಿಕೆ ಮಾಡಿರುವವರಿಗೆ ಉತ್ತಮವಾದ ಲಾಭ ದೊರೆಯುವಂತಹ ಅವಕಾಶಗಳು ಸೃಷ್ಟಿಯಾಗಲಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳು ಅಂತಿಮಗೊಳ್ಳಲಿವೆ. ಹೋಟೆಲ್ ಉದ್ಯಮಿಗಳಿಗೆ ವ್ಯಾಪಾರ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಈ ದಿನ ನಿಮ್ಮ ಪ್ರಭಾವ ವಿಸ್ತರಣೆ ಆಗಲಿದೆ. ಈ ಹಿಂದೆ ನೀವು ಯಾರಿಗೆ ನೆರವು ನೀಡಿದ್ದಿರೋ ಅವರೇ ನಿಮಗೆ ಸಹಾಯ ಮಾಡಲಿದ್ದಾರೆ. ಹೊಸ ಲ್ಯಾಪ್ ಟಾಪ್, ಗ್ಯಾಜೆಟ್, ಮೊಬೈಲ್ ಫೋನ್ ಇಂಥವುಗಳನ್ನು ಖರೀದಿ ಮಾಡುವಂತಹ ಯೋಗ ಈ ದಿನ ನಿಮಗೆ ಇದೆ. ಸ್ನೇಹಿತರು, ಸಂಬಂಧಿಕರು ತರುವಂತಹ ಯೋಜನೆಗಳಿಂದ ಉತ್ತಮ ಲಾಭ ದೊರೆಯುವಂತಹ ಯೋಗ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಣಕಾಸಿನ ಒತ್ತಡ ತೀವ್ರವಾಗಲಿದೆ. ನೀವು ಒಂದು ವೇಳೆ ಈಗಾಗಲೇ ಸಾಲ ಪಡೆದಿದ್ದೀರಿ ಎಂದಾದಲ್ಲಿ ಅದನ್ನು ಹಿಂತಿರುಗಿಸಬೇಕು ಎಂದು ಒತ್ತಾಯ ಕೇಳಿ ಬರುತ್ತದೆ. ಮಕ್ಕಳ ಶಿಕ್ಷಣದ ವಿಚಾರವೂ ಪ್ರಾಮುಖ್ಯ ಪಡೆಯಲಿದೆ. ಈ ಹಿಂದೆ ನೀವು ಯಾರ ಜೊತೆ ಮನಸ್ತಾಪ ಮಾಡಿಕೊಂಡಿದ್ದಿರೋ ಅವರ ಜೊತೆಗೆ ಕೆಲಸ ಮಾಡುವಂತಹ ಸನ್ನಿವೇಶ ಸೃಷ್ಟಿಯಾಗಲಿದೆ. ಸಂಗಾತಿ ನೀಡುವಂತಹ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಯಾರದೋ ಮೇಲಿನ ಪ್ರತಿಷ್ಠೆಗಾಗಿ ನಿಮ್ಮ ಸಾಮರ್ಥ್ಯವನ್ನು ಮೀರಿದಂತಹ ಖರ್ಚುಗಳನ್ನು ಒಪ್ಪಿಕೊಳ್ಳಲು ಹೋಗದಿರಿ. ನಿಮಗೆ ಅರ್ಧಂಬರ್ಧ ತಿಳಿದ ವಿಷಯಗಳನ್ನು ಹಾಗೂ ಪೂರ್ತಿ ಮಾಹಿತಿ ಇಲ್ಲದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ನಿಮ್ಮ ಮೇಲೆ ಇತರರು ಇಟ್ಟಿರುವಂತಹ ನಿರೀಕ್ಷೆಗಳನ್ನು ಮುಟ್ಟುವುದು ನಿಮಗೆ ಬಹಳ ಕಷ್ಟವಾಗಲಿದೆ. ಈ ಪ್ರಯತ್ನದಲ್ಲಿ ನಿಮ್ಮಿಂದ ಕೆಲವು ತಪ್ಪುಗಳು ಸಹ ಆಗುವ ಸಾಧ್ಯತೆಗಳಿವೆ. ಇತರರ ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ನಾನಾಯಿತು, ನನ್ನ ಪಾಡಾಯಿತು ಎಂದು ಈ ದಿನ ನೀವಿದ್ದರೂ ಸಹ ಒಂದಿಲ್ಲೊಂದು ವಿವಾದವನ್ನು ಮಾಡಿಕೊಳ್ಳುವಂತಹ ಸಾಧ್ಯತೆಗಳಿವೆ. ದೇವತಾ ಕಾರ್ಯವನ್ನು ನಡೆಸುವ ವಿಚಾರವಾಗಿ ತಂದೆ ತಾಯಿಗಳ ಜೊತೆಗೆ ಅಥವಾ ತಂದೆ ತಾಯಿ ಸಮಾನರಾದವರ ಜೊತೆಗೆ ಅಭಿಪ್ರಾಯ ಭೇದಗಳು ಸೃಷ್ಟಿಯಾಗಲಿವೆ. ಆತುರಾತುರವಾಗಿ ಪ್ರಯಾಣ ಮಾಡಬೇಕಾಗುತ್ತದೆ, ಇದರಿಂದ ನಿರೀಕ್ಷಿತವಾದಂತಹ ಫಲಿತಾಂಶಗಳು ದೊರೆಯುವುದಿಲ್ಲ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಸವಾಲಾಗಿ ಸ್ವೀಕರಿಸಿದಂತಹ ಕೆಲಸ- ಕಾರ್ಯ, ಜವಾಬ್ದಾರಿಗಳನ್ನು ತುಂಬಾ ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ನಿಮ್ಮ ಸ್ನೇಹಿತರು ಕೆಲವು ಉದ್ಯೋಗಾವಕಾಶಗಳನ್ನು ಹೇಳಬಹುದು. ಮಾರ್ಕೆಟಿಂಗ್ ಹಾಗೂ ಮಾರಾಟ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಗೆ ಗುರುಗಳನ್ನು ಸುಲಭವಾಗಿ ಮುಟ್ಟಬಹುದಾಗಿರುತ್ತದೆ. ದೊಡ್ಡ ಅಳತೆಯ ಟಿವಿ ಮ್ಯೂಸಿಕ್ ಸಿಸ್ಟಮ್ ಮೊದಲಾದಂತಹ ಗೃಹಪಯೋಗಿ ವಸ್ತುಗಳನ್ನ ಖರೀದಿಸಿ ತರುವಂತಹ ಯೋಗ ಈ ದಿನ ಇದೆ. ದೀರ್ಘಕಾಲದಿಂದ ನೀವು ತೆರಳಬೇಕು ಅಂದುಕೊಂಡಿದ್ದ ಪ್ರವಾಸದ ಯೋಜನೆಯೊಂದು ಕೈಗೂಡುವ ಎಲ್ಲಾ ಸಾಧ್ಯತೆಗಳಿವೆ. ಉಷ್ಣ ಪದಾಾರ್ಥಗಳಿಂದ ದೂರವಿದ್ದಷ್ಟು ಉತ್ತಮ, ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಇತರರ ಮಾತುಗಳನ್ನು ಕೇಳಿಕೊಂಡು, ಅವರಿಗೆ ಹೊಂದಿಕೊಂಡು ಹೋಗೋದು ಈ ದಿನ ನಿಮಗೆ ಕಷ್ಟವಾಗಲಿದೆ. ನಿಮ್ಮ ಬಳಿ ಇರುವ ಹಣಕ್ಕಷ್ಟೇ ಬಜೆಟ್ ಮಾಡಿಕೊಂಡು ಮುಂದುವರಿಯಬೇಕು ಎಂಬ ಉದ್ದೇಶ ಈಡೇರುವುದು ಅಸಾಧ್ಯವಾಗಲಿದೆ. ನಿಮಗೆ ಉದ್ದೇಶವೇ ಇಲ್ಲದೆ ಕೆಲವು ಗೃಹೋಪಯೋಗಿ ವಸ್ತುಗಳನ್ನು ಮತ್ತು ಬ್ರಾಂಡೆಡ್ ಪದಾರ್ಥಗಳನ್ನು ಖರೀದಿ ಮಾಡಲಿದ್ದೀರಿ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡುತ್ತೀರಿ ಅಂತಾದರೆ ಖರ್ಚಿನ ಮೇಲೆ ಹಿಡಿತ ಇರಲಿ. ಸ್ನೇಹಿತರು ಸಂಬಂಧಿಕರ ಹಣಕಾಸು ವ್ಯವಹಾರದಲ್ಲಿ ಜಾಮೀನಾಗಿ ನಿಂತುಕೊಂಡಲ್ಲಿ ಸಮಸ್ಯೆಗಳನ್ನು ಎದುರಿಸುತ್ತೀರಿ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳಲು ಹೋಗದಿರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ದಿನ ಇತರರಿಂದ ತುಂಬಾ ಚೆನ್ನಾಗಿ ಕೆಲಸವನ್ನು ತೆಗೆಸಲಿದ್ದೀರಿ. ಶುಭ ಕಾರ್ಯಗಳಿಗೆ ಹಣ ಹೊಂದಿಸಬೇಕು ಎಂಬ ಪ್ರಯತ್ನ ಸಫಲವಾಗಲಿದೆ. ಸೋದರ ಸಂಬಂಧಿಗಳು ನಿಮ್ಮಿಂದ ನೆರವನ್ನು ಬಯಸಿ ಬರಲಿದ್ದಾರೆ. ಬಹಳ ಸಮಯದಿಂದ ಕಾಡುತ್ತಿದ್ದ ಚಿಂತೆಯೊಂದು ನಿವಾರಣೆಯಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಪಡುವವರಿಗೆ ಈ ದಿನ ಶುಭ ಸುದ್ದಿ ದೊರೆಯಲಿದೆ. ಮನೆ ಕಟ್ಟಿಸುತ್ತಿರುವವರಿಗೆ ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ಕುಟುಂಬ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನೀವು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳ ಬಗ್ಗೆ ಸಹೋದ್ಯೋಗಿಗಳು, ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಒಂದೇ ಸಮಯಕ್ಕೆ ಹಲವು ಕೆಲಸಗಳು ನಿಮ್ಮ ಮೈ ಮೇಲೆ ಬೀಳಲಿವೆ. ಒತ್ತಡದಲ್ಲಿ ನೀವು ತೆಗೆದುಕೊಂಡ ತೀರ್ಮಾನಗಳು ಕೆಲವು ಬೂಮ್ ರಾಂಗ್ ಆಗಬಹುದು. ಒಂದು ವೇಳೆ ಅನುಭವಿಗಳು, ಹಿರಿಯರ ಮಾರ್ಗದರ್ಶನ ಅಗತ್ಯವಿದೆ ಎಂದಾದಲ್ಲಿ ಯಾವುದೇ ಸಂಕೋಚ ಪಡೆದಂತೆ ಕೇಳಿ ಪಡೆಯಿರಿ. ಆಹಾರ ನೀರು ಸೇವನೆ ಮಾಡುವಾಗ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನವಿರಲಿ. ವಾಹನ ಪಾರ್ಕಿಂಗ್ ಮಾಡುವಾಗ ನೋ ಪಾರ್ಕಿಂಗ್ ಬಗ್ಗೆ ಲಕ್ಷವಿರಲಿ. ನಿಮ್ಮದಲ್ಲದ ತಪ್ಪನ್ನು ತಪ್ಪು ಎಂದು ನೀವೇ ಒಪ್ಪಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಬ್ಯಾಂಕಿಂಗ್ ವ್ಯವಹಾರ ಮಾಡುವಂಥವರು ಪ್ರಮುಖ ದಾಖಲೆಗಳು ಜೊತೆಯಲ್ಲಿವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಲೆಕ್ಕಾಚಾರ, ಯೋಜನೆಗಳು ಫಲ ನೀಡಲು ಆರಂಭಿಸುತ್ತವೆ. ಉದ್ಯೋಗ ಅಥವಾ ವೃತ್ತಿ ಸ್ಥಳದಲ್ಲಿ ನಿಮ್ಮ ಪ್ರಾಮುಖ್ಯತೆ ತುಂಬಾ ಹೆಚ್ಚಾಗುತ್ತದೆ. ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಬಿಟ್ಟ ಕೆಲಸವನ್ನು ನೀವು ಮಾಡಿ ಮುಗಿಸಲಿದ್ದೀರಿ. ವಿದೇಶದಲ್ಲಿ ವ್ಯಾಸಂಗ ಅಥವಾ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರಭಾವಿಗಳು ಮತ್ತು ಅನುಭವಿಗಳ ನೆರವು ಅಥವಾ ಸಹಾಯ ದೊರೆಯಲಿದೆ. ವಿವಾಹಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಡುವ ಮುನ್ನ ದುರ್ಗಾದೇವಿಯನ್ನು ಮನಸ್ಸಿನಲ್ಲಿ ಸ್ಮರಿಸಿರಿ. ಕೋರ್ಟು ಕಚೇರಿ ವ್ಯಾಜ್ಯಗಳಿದ್ದಲ್ಲಿ ಅದನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಒಂದು ಅವಕಾಶ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಬಾಯಿತಪ್ಪಿ ಬರುವಂತಹ ಮಾತಿನಿಂದ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳಲಿದ್ದೀರಿ. ನೀವಿರುವ ಸ್ಥಳ, ಸಮಯ ಹಾಗೂ ಜನರನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡುವ ಕಡೆಗೆ ಲಕ್ಷ್ಯ ಕೊಡಿ. ಕೆಲವು ವ್ಯಕ್ತಿಗಳು ಈ ದಿನ ಮಾತನಾಡಿದ್ದನ್ನೇ ಮಾತನಾಡಿ ನಿಮಗೆ ರೇಜಿಗೆ ಹುಟ್ಟಿಸಲಿದ್ದಾರೆ. ಇನ್ನೇನು ಕೆಲಸವೆಲ್ಲ ಮುಗಿದೇ ಹೋಯಿತು, ಕೈಗೆ ಹಣ ಬರುತ್ತದೆ ಅಂದುಕೊಂಡಿದ್ದ ಪ್ರಾಜೆಕ್ಟ್ ಒಂದು ಬಹಳ ದೂರದವರೆಗೂ ಮುಂದುವರೆಯುತ್ತದೆ. ನೀವು ಬಹಳ ನಂಬಿಕೆ ಇಟ್ಟುಕೊಂಡಿದ್ದ ಸ್ನೇಹಿತರೊಬ್ಬರ ವರ್ತನೆಯಿಂದ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ನಿಮ್ಮಲ್ಲಿ ಕೆಲವರು ಮಕ್ಕಳ ಶಿಕ್ಷಣದ ಸಲುವಾಗಿ ಸಾಲ ಮಾಡಬೇಕಾಗಿ ಬರುತ್ತದೆ. ಈ ದಿನ ಸಾಧ್ಯವಾದಲ್ಲಿ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ