Horoscope 28 Oct: ದಿನಭವಿಷ್ಯ, ಈ ರಾಶಿಯವರಿಗೆ ಸಂಗಾತಿಯಿಂದ ತೊಂದರೆ ಆಗಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ರೇವತೀ, ಯೋಗ: ವಜ್ರ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:49 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:43 ರಿಂದ 15:11 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:28 ರಿಂದ 07:55ರ ವರೆಗೆ.
ಮೇಷ ರಾಶಿ: ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು. ತಂದೆಯಿಂದ ಮಾನಸಿಕವಾಗಿ ನೋವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ. ಕಾರ್ಯಕ್ಷೇತ್ರದಿಂದ ಹೆಚ್ಚುವರಿ ಆದಾಯ ಬರುವುದು. ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂಪತ್ತಿನ ಮೂಲವು ಹೆಚ್ಚಾಗುತ್ತವೆ. ಸಾಮಾಜಿಕ ಚಟುವಟಿಕೆಗಳಿಗೆ ಸಮಯವನ್ನು ಕೊಡಲಾಗದೇ ಜನರು ನಿಮ್ಮಿಂದ ದೂರವಿರಬಹುದು. ಒಬ್ಬರು ಉತ್ತಮ ಆಹಾರವನ್ನು ಸೇವಿಸಿ ಮನೆಯವರ ಸಂತೋಷದ ಸಮಯ ಕಳೆಯುವಿರಿ.
ವೃಷಭ ರಾಶಿ: ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ಇಂದು, ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ಹಣ ಗಳಿಸುವ ಬಯಕೆ ಅಪೂರ್ಣವಾಗಬಹುದು. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ಅನೇಕ ಲಾಭದ ಅವಕಾಶಗಳು ಸಿಗುತ್ತವೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಸಾಮಾಜಿಕ ಗೌರವವನ್ನು ಪಡೆಯುತ್ತೀರಿ. ಬಿಡುವು ಮಾಡಿಕೊಂಡರೆ ಸಾಮಾಜಿಕ ಸಂಬಂಧಗಳು ಪ್ರಯೋಜನಕಾರಿಯಾಗುವುದು.
ಮಿಥುನ ರಾಶಿ: ಮಾನಸಿಕ ಅಸಮತೋಲನದಿಂದ ಎಲ್ಲ ಕಾರ್ಯವೂ ಅಸ್ತವ್ಯಸ್ತ ಆಗಬಹುದು. ಸ್ನೇಹಿತರಿಂದ ಸಹಾಯದ ನಿರೀಕ್ಷೆ ಇದ್ದು, ಹುಸಿಯಾಗುವುದು. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುತ್ತದೆ. ಸಹೋದರಿಯರು ಮತ್ತು ಸಂಗಾತಿಯ ಬೆಂಬಲ ಪಡೆಯುವಿರಿ. ಆರೋಗ್ಯವು ಅನುಕೂಲಕರವಾಗಿದ್ದರೂ ಆಹಾರದಲ್ಲಿ ಮಿತಿ ಇರಲಿ.
ಕಟಕ ರಾಶಿ: ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ಅಧಿಕಾರಿ ವರ್ಗದವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ದೈನಂದಿನ ವ್ಯಾಪಾರಿಗಳು ಹೆಚ್ಚು ಶ್ರಮಿಸಬೇಕು. ಲೇಖನ ಸಾಮಗ್ರಿಗಳು ಅಥವಾ ಮುದ್ರಣ ಕೆಲಸಕ್ಕೆ ಸಂಬಂಧಿಸಿದ ಜನರು ಹೊಸ ಉದ್ಯೋಗಗಳನ್ನು ಪಡೆಯುವರು. ನೀವು ಕುಟುಂಬಕ್ಕಾಗಿ ಹೊಸದನ್ನು ಮಾಡುತ್ತೀರಿ. ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ಹೊಂದಿಸುವಿರಿ.
ಸಿಂಹ ರಾಶಿ: ಸ್ವಯಂಕೃತ ಅಪರಾಧಗಳಿಂದ ಕಿಂಚಿತ್ತೂ ಬೇಸರವಾಗದು. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ದೈಹಿಕ ದೋಷಗಳನ್ನು ಸಕಾರಾತ್ಮಕವಾಗಿ ಎದುರಿಸುವಿರಿ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸ ಕಾರ್ಯಗಳಲ್ಲಿ ತೊಡಗುವಿರಿ. ಸ್ವಲ್ಪ ಕುಟುಂಬದ ಸಮಸ್ಯೆಗಳಿಂದಾಗಿ, ಮನಸ್ಸು ಚಂಚಲವಾಗಿರುತ್ತದೆ. ಮನೆಯಲ್ಲಿ ಸಣ್ಣ ವಿಚಾರವೂ ವಿವಾದವಾಗುವ ಸಾಧ್ಯತೆಯಿದೆ. ಪೂರ್ವಾಹ್ಣದಲ್ಲಿಯೇ ಮುಖ್ಯ ಕೆಲಸವನ್ನು ಮಾಡಿ ಮುಗಿಸಿ.
ಕನ್ಯಾ ರಾಶಿ: ತಾಯಿಯಿಂದ ಆರ್ಥಿಕ ಸಹಾಯವನ್ನೂ ಸಿಗಲಿದ್ದು ತೃಪ್ತಿದಾಯಕವಾಗಲಿದೆ. ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುತ್ತವೆ. ಮನಸ್ಸು ಅನೈತಿಕ ಚಟುವಟಿಕೆಗಳಿಂದ ವಿಮುಖವಾಗಬಹುದು. ಮನೆಯವರ ಸಮಸ್ಯೆ ಬಗೆಹರಿಯಲಿದ್ದು, ಮುಖಂಡರ ಸಹಾಯವನ್ನೂ ಪಡೆಯಬೇಕಾಗುವುದು. ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಕೋಪವನ್ನು ನಿಯಂತ್ರಿಸಿ.
ತುಲಾ ರಾಶಿ: ಭಾವನಾತ್ಮಕ ಚಿಂತನೆಗಳು ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮವನ್ನು ನೀಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಂದು ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ. ಆದರೆ ಕೆಲವು ತಪ್ಪುಗ್ರಹಿಕೆಯಿಂದಾಗಿ ಅಸಮಾಧಾನ ಇರಲಿದೆ. ಇಂದಿನ ಉದ್ಯಮವು ನಿಮ್ಮ ಹಿಡಿತದಲ್ಲಿ ಇರುತ್ತದೆ. ಲಾಭವೂ ಹೆಚ್ಚಾಗುವುದು. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಇಂದಿನ ಲಾಭ ಪಡೆಯಲು ಆಲಸ್ಯವನ್ನು ತಪ್ಪಿಸುವುದು ಅವಶ್ಯಕ. ಕಾರ್ಯಕ್ಷೇತ್ರದ ಗೆಳೆಯರು ನಿಮ್ಮ ನಡವಳಿಕೆಯಿಂದ ಸಂತೋಷವಾಗಿರುತ್ತಾರೆ. ಇದರಿಂದ ಅವರು ತಮ್ಮ ಕೆಲಸವನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಪೂರ್ಣವಾಗುವುದು.
ವೃಶ್ಚಿಕ ರಾಶಿ: ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ಈ ದಿನ ನೀವು ತಾಳ್ಮೆಯನ್ನು ಅಭ್ಯಾಸ ಮಾಡುವುದರ ಮೂಲಕ ನಿರೀಕ್ಷೆಗಿಂತ ಹೆಚ್ಚಿನದನ್ನು ಗಳಿಸಬಹುದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ಇಂದು, ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಈ ಕಾರಣದಿಂದಾಗಿ ಜನರು ನಿಮ್ಮನ್ನು ಕಂಡು ನಗುವರು. ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತದೆ. ದೇಶೀಯ ಸಂತೋಷ ಮತ್ತು ಆನಂದದ ಸಾಧನಗಳನ್ನು ಪ್ರದರ್ಶನಕ್ಕಾಗಿ, ಹವ್ಯಾಸಗಳಿಗಾಗಿ ಖರ್ಚು ಮಾಡಲಾಗುವುದು.
ಧನು ರಾಶಿ: ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ಮಕ್ಕಳಿಂದ ಧನಸಹಾಯದ ನಿರೀಕ್ಷೆ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಈ ದಿನ ನೀವು ಸಂತೋಷವಾಗಿರುವಿರಿ. ಆದರೆ ಅಸಭ್ಯ ವರ್ತನೆಯು ಕೆಲವರಿಂದ ಮಾತುಗಳು ಕೇಳಿಬರಬಹುದು. ಕೆಲಸದ ಬಿಡುವಿಲ್ಲದಿದ್ದರೂ ಇನ್ನಿತರ ಚಟುವಟಿಕೆಯಲ್ಲಿ ಭಾಗ ವಹಿಸುವಿರಿ. ಇಂದು ನೀವು ಯಾವುದೇ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದು. ನಿಮ್ಮ ನೆಮ್ಮದಿಯನ್ನು ಇತರರು ಕಂಡು ಅಸೂಯೆಪಡಬಹುದು.
ಮಕರ ರಾಶಿ: ದೀರ್ಘಕಾಲದ ರೋಗದಿಂದ ಬಳಲಿಕೆಯು ನಿಮಗೆ ಅಭ್ಯಾಸವಾಗಲಿದೆ. ನ್ಯಾಯಾಲಯಕ್ಕೆ ಅಲೆದಾಟವು ಇರಲಿದೆ. ಶತ್ರುಗಳ ಕಾಟಗಳು ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಕೈ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಂಡು ದೈನಂದಿನ ಕೆಲಸಗಳೂ ಕಷ್ಟವಾದೀತು. ಇಂದು ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನು ವಿಳಂಬದಿಂದ ಬರುವುದು. ಕುಟುಂಬ ವಾತಾವರಣವು ಇಂದು ಹೆಚ್ಚು ಭಾವನಾತ್ಮಕವಾಗಿ ಇರುತ್ತದೆ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಕಾಣಿಸಿಕೊಳ್ಳುವುದು. ಹಿರಿಯ ಅಧಿಕಾರಿಗಳ ಜೊತಡ ವೈಮಸ್ಸು ಬರಬಹುದು, ಎಚ್ಚರದಿಂದಿರಿ.
ಕುಂಭ ರಾಶಿ: ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ಪರಸ್ಥಳದಲ್ಲಿ ವಾಸ ಮಾಡುವ ಸಂದರ್ಭವು ಬರಲಿಸೆ. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಖಾಸಗಿ ಸಂಸ್ಥೆ ದೂರದೃಷ್ಟಿಯ ಯೋಜನೆಯು ಪ್ರಯೋಜನವಾದೀತು. ಇಂದು ಮನೆಯ ಸದಸ್ಯರ ಮನವೊಲಿಸುವುದು ಕಷ್ಟವಾಗದು. ನಿರಾಶೆಯನ್ನು ಉಂಟುಮಾಡವ ಆಲೋಚನೆಗಳನ್ನು ತಪ್ಪಿಸಿ. ಬೇಗನೆ ಹಣವನ್ನು ಸಂಪಾದಿಸಲು ಅನ್ಯ ಮಾರ್ಗವನ್ನು ಹಿಡಿಯಬಹುದು. ಹೊಸ ಸಂಪರ್ಕದಿಂದ ಅದೃಷ್ಟ ಬದಲಾಗುತ್ತದೆ.
ಮೀನ ರಾಶಿ: ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು. ಮರಣ ಭಯವು ಕಾಡಬಹುದು. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳುವಿರಿ. ಯಾರ ಮೇಲೂ ಅವಮಾನ ಬೇಡ. ಇಂದು ಕೆಲಸದಲ್ಲಿ ಯಾವುದೇ ಅನಾನುಕೂಲತೆ ಇರುವುದಿಲ್ಲ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು. ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಕೆಲವು ವಿಷಯಗಳ ಬಗ್ಗೆ ಮನೆಯ ಹಿರಿಯರಿಂದ ವ್ಯತ್ಯಾಸಗಳು ಆಗಬಹುದು. ಕೆಲವು ಸಮಯದಲ್ಲಿ ಪರಿಸ್ಥಿತಿ ಸಹ ಸಾಮಾನ್ಯವಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಆರ್ಥಿಕವಾಗಿ ಉತ್ತಮ ದಿನವಾಗಿದೆ.
ಲೋಹಿತಶರ್ಮಾ – 8762924271 (what’s app only)