Horoscope: ದಿನಭವಿಷ್ಯ, ಆಕಸ್ಮಿಕ ಧನಲಾಭವು ಈ ರಾಶಿಯವರಿಗೆ ನೆಮ್ಮದಿ ತರಬಹುದು
ಸಿಂಹ, ಕನ್ಯಾ, ತುಲ, ವೃಶ್ಚಿಕ ರಾಶಿಯವರ ಜುಲೈ 23ರ ಭಾನುವಾರದ ಭವಿಷ್ಯದ ಮಾಹಿತಿ ಇಲ್ಲಿದೆ. ಸಿಂಹ ರಾಶಿಯವರು ನೇರ ಮಾತು ಆಡುತ್ತಾರೆ. ಇದು ಸರಿಯಲ್ಲ. ಸಹನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ವೃಶ್ಚಿಕ ರಾಶಿಯವರು ಭವಿಷ್ಯದ ದೃಷ್ಟಿಯಿಂದ ಹಣ ಕೂಡಿಡಲು ಪ್ರಾರಂಭಿಸಲಿದ್ದಾರೆ.

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 23 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಪರಿಘ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಸಂಜೆ 05:27 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ.
ಸಿಂಹ: ಶತ್ರುಗಳ ಬಲವರ್ಧನೆ ಆಗಲಿದೆ. ನೀವು ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ದುರ್ಬಲ್ಯವನ್ನು ಬಳಸಿಕೊಂಡು ಆಡಿಕೊಳ್ಳಬಹುದು. ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ. ಸಹನೆಯನ್ನು ನೀವು ಬೆಳೆಸಿಕೊಳ್ಳಬೇಕಾಗಿದೆ. ದೇಹಕ್ಕೆ ಬಲವಾದ ಹೊಡೆತ ಬೀಳಬಹುದು. ಅಪರಿಚಿತರ ಜೊತೆ ಮಾತನಾಡಲು ಮುಜುಗರಪಟ್ಟುಕೊಳ್ಳಬಹುದು. ಮನೆ ಕೆಲಸದಲ್ಲಿ ನೀವು ವ್ಯಸ್ತರಾಗುವಿರಿ. ಆರಾಮದಿಂದ ದಿನ ಕಳೆಯಬೇಕು ಎಂದು ಅನ್ನಿಸಬಹುದು. ಸಮೀಪದ ದೇವಾಲಯಕ್ಕೆ ಹೋಗಿ ಮನಸ್ಸಿಗೆ ಶಾಂತಿಯನ್ನು ಪಡೆದುಕೊಂಡು ಬರುವಿರಿ.
ಕನ್ಯಾ: ಮಿತ್ರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಆಕಸ್ಮಿಕ ಧನಲಾಭವು ನಿಮಗೆ ನೆಮ್ಮದಿಯನ್ನು ತರಬಹುದು. ಉದ್ಯೋಗದಲ್ಲಿ ಅವಘಡವು ಸಂಭವಿಸಬಹುದು. ಆಕರ್ಷಕವಾಗಿ ನೀವು ಕಾಣಲಿದ್ದೀರಿ. ನಿಮ್ಮ ನಿರ್ಧಾರವನ್ನು ಬದಲಿಸಲು ನೀವು ಒಪ್ಪಲಾರಿರಿ. ಅಸ್ಪಷ್ಟವಾದ ಆಲೋಚನೆಯು ನಿಮ್ಮ ನಿರ್ಧಾರವನ್ನು ಬದಲಿಸೀತು. ವಿದ್ಯಾರ್ಥಿಗಳಿಗೆ ಪಾಲಕರು ಭವಿಷ್ಯದ ಬಗ್ಗೆ ತಿಳಿಸುವರು. ಮಾತನ್ನು ಆಡುವಾಗ ಗಮನವಿರಲಿ. ನಿಮ್ಮ ಅನುಭವವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ. ಶ್ರದ್ಧೆಯು ಕಡಿಮೆ ಆಗಲಿದೆ. ಕುಲದೇವರ ಸ್ತುತಿಯನ್ನು ಮಾಡಿ.
ತುಲಾ: ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಬಂಧುಗಳು ಆಡುವರು. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ಹಿತವಚನಗಳನ್ನು ಅನುಭವಿಗಳು ಹೇಳುವರು. ಸರಳವಾಗಿರಲು ಇರುವುದು ಇಷ್ಟವಾಗಲಿದೆ. ನಂಬಿಕೆಯನ್ನು ಇಟ್ಟುಕೊಂಡು ವ್ಯವಹಾರವನ್ನು ಮುಂದುವರಿಸಿ. ನೆಮ್ಮದಿಯನ್ನು ಏಕಾಂತದಲ್ಲಿ ನೀವು ಕಾಣುವಿರಿ. ಮನೆಗೆ ಬೇಕಾದ ಧನವನ್ನು ನೀವು ಕೊಡುವಿರಿ. ಪತ್ನಿಯ ಮಾತಿನಂತೆ ನಡೆಯುವುದು ಕಷ್ಟವಾಗಿ ಬಿರುಸು ಮಾತುಗಳು ಬರಬಹುದು. ಸಹಾಯವನ್ನು ಕೇಳಿದಾಗ ನೀರೀಕ್ಷಿಸಿದಂತೆ ನಿಮ್ಮವರಿಂದ ಉತ್ತರ ಬರಲಿದೆ. ದುರ್ಗಾದೇವಿಯನ್ನು ಸ್ತುತಿಸಿ.
ವೃಶ್ಚಿಕ: ಕುಟುಂಬದ ಕೆಲಸಕ್ಕೆ ಸಹಕಾರವನ್ನು ನೀಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಇರಲಿದೆ. ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವಿರಿ. ಪತ್ನಿಯ ಕಡೆಯವರಿಂದ ನಿಮಗೆ ಕೆಲವು ಅಸಂಬದ್ಧ ಮಾತುಗಳು ಕೇಳಿಬರಬಹುದು. ಭವಿಷ್ಯದ ಹಣವನ್ನು ನೀವು ಗೌಪ್ಯವಾಗಿ ಕೂಡಿಡುವಿರಿ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವಿರಿ. ಸ್ಥಾನಮಾನವನ್ನು ಪಡೆಯಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಕಾಲವನ್ನು ವ್ಯರ್ಥ ಮಾಡಲು ಮನಸ್ಸು ಇಲ್ಲದಿದ್ದರೂ ಅನಿವಾರ್ಯವಾಗಿ ಕಳೆಯಬೇಕಾದೀತು. ಗುರುಚರಿತ್ರೆಯ ಪಠಣವನ್ನು ಮಾಡಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ