AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ, ಆದಾಯದಲ್ಲಿ ಏರಿಕೆ

Daily Horoscope: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ, ಆದಾಯದಲ್ಲಿ ಏರಿಕೆ

ಪ್ರಸನ್ನ ಹೆಗಡೆ
|

Updated on: Oct 15, 2026 | 6:18 AM

Share

ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ, ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 15.10.2026ರ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನದ ಗ್ರಹಗಳ ಸಂಚಾರ, ಶುಭ-ಅಶುಭ ಕಾಲಗಳು ಹಾಗೂ ಸ್ಕಂದಮಾತೆಯ ಆರಾಧನೆಯ ಮಹತ್ವವನ್ನು ತಿಳಿಸಿದ್ದಾರೆ. ಜೊತೆಗೆ, ಪ್ರತಿ ರಾಶಿಯವರಿಗೆ ಆರ್ಥಿಕ, ಕೌಟುಂಬಿಕ ಹಾಗೂ ಆರೋಗ್ಯದ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.

ಈ ದಿನ ಪರಾಭವನಾಮ ಸಂವತ್ಸರ, ಆಶ್ವೀಜ ಮಾಸದ ಶುಕ್ಲಪಕ್ಷದ ಪಂಚಮಿ ತಿಥಿ, ಜೇಷ್ಠಾ ನಕ್ಷತ್ರದ ವಿಶೇಷತೆಗಳಿಂದ ಕೂಡಿದೆ. ಗುರುವಾರದ ಈ ಶುಭದಿನ ಸ್ಕಂದಮಾತೆಯ ಆರಾಧನೆಗೆ ಮೀಸಲಾಗಿದ್ದು, ನವರಾತ್ರಿಯ ಸಂದರ್ಭದಲ್ಲಿ ಸ್ಕಂದಮಾತೆಯ ಅನುಗ್ರಹ ಪಡೆಯುವುದು ಅತಿ ಮುಖ್ಯವಾಗಿದೆ. ತಾಯಿ ಸ್ಕಂದಮಾತೆಗೆ ಮೊಸರನ್ನ ಮತ್ತು ಪೊಂಗಲ್​​ ಅನ್ನು ನೈವೇದ್ಯವಾಗಿ ಅರ್ಪಿಸುವುದು ಶ್ರೇಷ್ಠ ಎಂದು ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ, ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More