ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರಾಮಾಣಿಕತೆಯನ್ನು ಬಿಟ್ಟುಬಿಡುವರು…

Horoscope Today 29 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಶನಿವಾರದಂದು ಆರ್ಥಿಕವಾಗಿ ನಿಮ್ಮ ಅಲ್ಪ ವೃದ್ಧಿಯು ಸಂತಸ, ಪ್ರೇಮಬಂಧನ, ಆತ್ಮಗೌರವಕ್ಕೆ ಧಕ್ಕೆ, ಬದ್ಧತೆ, ನಿರ್ಮಾಣ ಅತಂತ್ರ, ದೂರ ಪ್ರವಾಸ, ಅತಿಯಾದ ಆಸೆ, ನೋವು ಇವೆಲ್ಲ ಇಂದಿನ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರಾಮಾಣಿಕತೆಯನ್ನು ಬಿಟ್ಟುಬಿಡುವರು...
ದಿನ ಭವಿಷ್ಯ
Edited By:

Updated on: Aug 29, 2026 | 12:28 AM

ಮೇಷ ರಾಶಿ:

ನೀವು ಬೆಳೆಸಿದ ವ್ಯಕ್ತಿಗಳು ನಿಮ್ಮ ವಿರುದ್ಧವಾಗಬಹುದು. ನಿರುದ್ಯೋಗವು ನಿಮ್ಮ ಮನಸ್ಸಿಗೆ ಬಹಳ‌ ಕಿರಿಕಿರಿಯಾಗಲಿದೆ. ಆಸಕ್ತಿಕರ ವಿಚಾರವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ‌ ಕೆಲವು ಆಕ್ಷೇಪಗಳು ಬರಬಹುದು. ಹಿತಶತ್ರುಗಳಿಂದ ಕೆಲವು ವಿಚಾರಕ್ಕೆ ತೊಂದರೆಯಾಗಲಿದೆ. ಆರ್ಥಿಕವಾಗಿ ನಿಮ್ಮ ಅಲ್ಪ ವೃದ್ಧಿಯು ಸಂತಸವನ್ನು ಕೊಡಲಿದೆ. ಉದ್ವೇಗದ ವಾರ್ತೆ ಇದ್ದರೂ ಅದನ್ನು ತಾಳ್ಮೆಯಿಂದ ಪಡೆಯುವಿರಿ.

ವೃಷಭ ರಾಶಿ:

ದೇವರ ಉಪಾಸನೆಯಲ್ಲಿ ಆಲಸ್ಯವು ಅಧಿಕವಾಗುವುದು. ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ‌ ಮಾಡಿ ದಂಡ ತುಂಬುವಿರಿ. ನಿವೃತ್ತಿಯ ಮೊದಲ ವೇತನ ಕೈಸೇರುವುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಸಾಮಾನ್ಯರಂತೆ ಅಸಾಮಾನ್ಯತೆಯನ್ನು ತೋರಿಸುವಿರಿ.

ಮಿಥುನ ರಾಶಿ:

ಇಂದು ಸರಿ‌ ಮಾಡಲು ಸಾಧ್ಯವಾಗದಷ್ಟು ನಿಮ್ಮ‌ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಸುಮ್ಮನೇ ಇಲ್ಲದ ನೆಪವನ್ನು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವಿರಿ. ಇಂದಿನ ಕೆಲಸವನ್ನು ಮುಗಿಸುವಾಗ ಸಂತೃಪ್ತಿ ಇರಲಿದೆ. ಭೂ ವ್ಯವಹಾರದಲ್ಲಿ ನಿಮ್ಮ ಯೋಜನೆಯ ಫಲಿಸುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು.

ಕರ್ಕಾಟಕ ರಾಶಿ:

ನೀವು ಯಾರದ್ದಾದರೂ ಬಾಯಿಗೆ ವಿಷಯವಾಗಬಹುದು. ಮನಸ್ಸಿಗೆ ಬಂದಂತೆ ಮಾತಮಾಡದೇ ಅರ್ಥವತ್ತಾದ ಮಾತುಗಳನ್ನು ಅಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಅನಾದರವು ಸಿಗಲಿದೆ. ರಾಜಕೀಯ ಮಾಡುವವರೆಗೆ ಆತುರತೆ ಇರುವುದು ಕಷ್ಟ. ಸೊಂಟ ಭಾಗದ ಪೀಡೆಯಿಂದ ನಿಮಗೆ ಕಷ್ಟವಾದೀತು. ನಿಮಗೆ ಇಷ್ಟವಲ್ಲದ ವಿಷಯವನ್ನು ಒತ್ತಾಯಿಸಿದರೂ‌ ಮಾಡಲು ಹೋಗುವುದಿಲ್ಲ. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು.

ಸಿಂಹ ರಾಶಿ:

ನಿಮಗೆ ಕೇಳಿದ ಬಂದು ಮಾತುಗಳು ಅಪಮಾನಕರವಾಗಿದ್ದು ಏನನ್ನಾದರೂ ಮಾಡಬೇಕು ಎಂಬ ಹಂಬಲ‌ವು ಅತಿಯಾಗುವುದು. ವಯೋಮಾನದ ಮಿತಿ ಇದ್ದರೂ ನೀವು ಗೊತ್ತಾಗದೇ ಉದ್ಯೋಗಕ್ಕೆ ಅರ್ಜಿ ಹಾಕುವಿರಿ. ಹಿರಿಯರ ಹಿತಕ್ಕಾಗಿ ನೀವು ನಿಮ್ಮ ಕಾರ್ಯಗಳನ್ನು ಬದಲಿಸಬೇಕಾಗುವುದು. ನಿಮ್ಮ‌ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟವಾದೀತು. ಅತಿಯಾದ ನಂಬಿಕೆಯಿದ ನಿಮ್ಮ ಇಂದಿನ‌ ಕೆಲಸವು ಬೇರೆ ರೂಪ ಪಡೆದುಕೊಳ್ಳುವುದು.

ಕನ್ಯಾ ರಾಶಿ:

ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳಿ. ಸಿಗದೇ ಇರುವುದರ ಬಗ್ಗೆ ನಿಮಗೆ ಮೋಹ‌ ಬೇಡ. ಇನ್ನೂ ಉತ್ತಮವಾದುದು ಸಿಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳಿ.‌ ನ್ಯಾಯಾಲಯದ ಬಗ್ಗೆ ಗಂಭೀರ ಕಲ್ಪನೆ ನಿಮ್ಮೊಳಗೆ ಇರದು. ಅತಿಥಿಗಳಿಗೆ ಸತ್ಕಾರವನ್ನು ನೀವು ಮಾಡುವಿರಿ. ಮನಸ್ಸು ಶಾಂತವಾಗುವುದು. ನಿಮ್ಮಿಂದ ಆಗದ್ದು ಯಾರಿಂದಲೂ ಆಗದು ಎಂಬ ತೀರ್ಮಾನ‌ಬೇಡ. ದಿನವನ್ನು ಬೇರೆ ರೀತಿಯಲ್ಲಿ ಕಳೆಯಲು ಬಯಸುವಿರಿ.

ತುಲಾ ರಾಶಿ:

ಇಷ್ಟವಿಲ್ಲದಿದ್ದರೂ ಕೆಲವನ್ನು ನೀವು ಮಾಡಬೇಕಾಗಿಬರಬಹುದು. ಎಲ್ಲ ನಿರರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ. ಮಹಿಳಾ ಸಾಧಕರಿಗೆ ಉನ್ನತ ಗೌರವ. ನಿಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಳ್ಳಲಾರಿರಿ. ಎಷ್ಟು ಹೇಳಿದರೂ ಅರ್ಥವಾಗದ ವಿಷಯವು ಒಂದು‌ ಘಟನೆಯ ಮೂಲಕ ಅರ್ಥವಾದೀತು.

ವೃಶ್ಚಿಕ ರಾಶಿ:

ಮಕ್ಕಳ ಮೇಲೆ‌ ಅಪರೂಪಕ್ಕೆ ಅಕ್ಕರೆ ಬಂದೀತು. ವಿರೋಧಿಗಳ ನಡೆಯೇ ನೀವು ನಿಮ್ಮ ನಡೆಯನ್ನು ಬಿಡಲು ಒಪ್ಪುವುದಿಲ್ಲ. ಕಾರ್ಯಗಳನ್ನು ಹಂಚಿಕೆ ಮಾಡಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಪರಸ್ಪರರ ಮೇಲಿನ ನಂಬಿಕೆ ಹಾಳಾಗಿ ಉದ್ಯಮ ಕಳೆಗುಂದುವುದು. ಎಲ್ಲವೂ ನಿಮ್ಮಿಂದಲೇ ಆಗಿದೆ ಎಂಬ ಭಾವವಿರುವುದು. ನೀವು ಕಳೆದ ದಿನಗಳನ್ನು ಅವಲೋಕನ‌ ಮಾಡಿ ಸಂತಸಗೊಳ್ಳುವಿರಿ.

ಧನು ರಾಶಿ:

ಬಹಳ ದಿನಗಳ ಅನಂತರ ನಿಮಗೆ ಒಳ್ಳೆಯ ಪ್ರೀತಿ ದೊರೆಯಲಿದೆ. ನಿಮಗೆ ಮಾಡಲು ಸಮಯವಿಲ್ಲದ ಕಾರ್ಯವನ್ನು ಅನ್ಯರ ಬಳಿಯಿಂದ ಮಾಡಿಸುವಿರಿ. ಇದು ನಿಮ್ಮ ಸಂತೋಷವನ್ನು ಹೆಚ್ಚು ಮಾಡುವುದು. ಕುಟುಂಬ ಹಲವಾರು ಕೆಲಸಗಳಿದ್ದರೂ ಅತ್ತ ಗಮನ ಹೋಗುವುದು ಕಷ್ಟವಸದೀತು. ಅಧಿಕಾರಯುತವಾದ ಮಾತುಗಳನ್ನು ಕಡಿಮೆ‌ ಮಾಡಿ, ಸಹಜವಾಗಿ ಮಾತನಾಡಿ ಕೆಲಸವನ್ನು ಮಾಡಿಸಿಕೊಳ್ಳಿ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿವೆ.

ಮಕರ ರಾಶಿ:

ನಿಮ್ಮ ಸಣ್ಣ ಕಾರ್ಯವನ್ನೂ ದೊಡ್ಡದಾಗಿ ಬಿಂಬಿಸುವಿರಿ. ಭಾವಪರಶವಾರಾಗಿ ಇಂದು ನಿಮ್ಮ ಸುಖ, ದುಃಖಗಳನ್ನು ಹೇಳಿಕೊಳ್ಳುವಿರಿ. ದಿನವನ್ನು ಉತ್ತಮವಾಗಿಸಿಕೊಳ್ಳಲು ನೀವು ಬಯಸುವಿರಿ. ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಲು ಇಷ್ಟಪಡುವಿರಿ. ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ಭಯವಾಗಬಹುದು. ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳಲು ಮಾರ್ಗವನ್ನು ಹುಡುಕಿಕೊಳ್ಳಿ. ಮಕ್ಕಳ ಸಾಧನೆಯು ಖುಷಿ ಕೊಡುವುದು.

ಕುಂಭ ರಾಶಿ:

ಸಂಗಾತಿಯನ್ನು ಬಿಟ್ಟು ಇರುವುದು ನಿಮಗೆ ಕಷ್ಟಕರವಾದೀತು. ನಿಮ್ಮನ್ನು ಮಾತುಗಳಿಂದ ಪೀಡಿಸಬಹುದು. ಆದರೆ ಇಂದು ಮೌನವೇ ಹೆಚ್ಚು ಪ್ರಿಯವಾದೀತು. ನಿಮ್ಮ ಎರಡು ಬಗೆಯ ಮನಃಸ್ಥಿತಿಯು ಕೆಲವರಿಗೆ ಇಷ್ಟವಾಗದೇ ಹೋದೀತು. ಗುಂಪುಗಾರಿಕೆಯಿಂದ ನಿಮ್ಮಲ್ಲಿ‌ ಕಲಹವಾಗುವುದು. ಕಾನೂನಿಗೆ ಸಂಬಂಧಿಸಿದ ವಿಚಾರಕ್ಕೆ ನಿಮಗೆ ಕೆಲವು ಸಂದೇಶಗಳನ್ನು ನಿವಾರಿಸಿಕೊಳ್ಳುವಿರಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೂ ಸಮಾಧಾನವಂತೂ ಸಿಗಲಿದೆ.

ಮೀನ ರಾಶಿ:

ಕಡಿಮೆ ಸ್ನೇಹಿತರನ್ನು ಹೊಂದಿದ್ದರೂ ಅವರನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳುವಿರಿ. ವಿದ್ಯೆಯೇ ನಿಮಗೆ ನೆರವಾಗುವುದು. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋದರೂ ಮತ್ತೆ ಕಾರ್ಯದಲ್ಲಿ ಮಗ್ನರಾಗಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ಮತ್ತೆ ನೆನಪಿಸಿ ಮುಜುಗರವನ್ನು ಉಂಟುಮಾಡುವಳು. ಪ್ರಣಯದ ವಿಚಾರವನ್ನು ನೀವು ನಿರ್ಲಜ್ಜೆಯಿಂದ ಹೇಳಿಕೊಳ್ಳುವಿರಿ. ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದು ಕಷ್ಟವಾದೀತು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಸುಕರ್ಮ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:05 – 10:48, ಯಮಗಂಡ ಕಾಲ 13:53 – 15:26, ಗುಳಿಕ ಕಾಲ 06:10 – 07:42

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us