ದಿನ ಭವಿಷ್ಯ: ಇಂದು ಈ ರಾಶಿಯವರು ಬಯಸಿದ್ದನ್ನು ಹಣದಿಂದ ತೀರಿಸಿಕೊಳ್ಳುವರು..

Horoscope Today July 04: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಶನಿವಾರದಂದು ಪರನಿಂದೆಯಿಂದ ಹಾನಿ, ಕೆಲವರಿಗೆ ಶಿಪಾರಸ್ಸು, ಆಸ್ತಿಯ ಮಾರಟಕ್ಕೆ ಹಿನ್ನಡೆ, ಬದಲಾವಣೆಗೆ ಸಕಾರಣ, ಹಣಸಂಗ್ರಹ, ಷರತ್ತಿಗೆ ಕಟ್ಟುಬೀಳುವುದು ಇದು ಈ ದಿನ ಸ್ಥಿತಿ.

ದಿನ ಭವಿಷ್ಯ: ಇಂದು ಈ ರಾಶಿಯವರು ಬಯಸಿದ್ದನ್ನು ಹಣದಿಂದ ತೀರಿಸಿಕೊಳ್ಳುವರು..
ದಿನ ಭವಿಷ್ಯ
Edited By:

Updated on: Jul 04, 2026 | 12:33 AM

ಮೇಷ ರಾಶಿ:

ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಭೂಮಿಯ ವ್ಯವಹಾರವನ್ನು ಒಬ್ಬರೇ ಮಾಡಬೇಡಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು. ಜನಪ್ರಿಯತೆಯಿಂದ ಹೊರಬರಲು ಕಷ್ಟವಾಗುವುದು.

ವೃಷಭ ರಾಶಿ:

ಬಹಳ ವರ್ಷಗಳ ಅನಂತರ ಆದ ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಕಛೇರಿಯ ಕೆಲಸದಲ್ಲಿ ತೊಡಗಿಕೊಂಡು ವೈಯಕ್ತಿಕ ಕೆಲಸವು ಮರೆತುಹೋದೀತು. ಇನ್ನೊಬ್ಬರನ್ನು ಕಂಡು ಅಸೂಯೆಪಡುವಿರಿ. ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ. ಅಧಿಕಾರಿವರ್ಗದಿಂದ ನಿಮ್ಮ‌ ಮೇಲೆ ಒತ್ತಡ ಬರಬಹುದು. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಾಡುವಿರಿ.

ಮಿಥುನ ರಾಶಿ:

ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ‌ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಕಲಹವು ಸಣ್ಣದೇ ಆಗಿರಬಹುದು ಆ‌ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ಬೆನ್ನು ನೋವು ಉಂಟಾಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ.

ಕರ್ಕಾಟಕ ರಾಶಿ:

ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ನೀವು ಇಂದು ನಿಮ್ಮ ಸ್ಥಿತಿಯನ್ನು ನೋಡಿ ಪಶ್ಚಾತ್ತಾಪ ಪಡಬೇಕಿಲ್ಲ. ಮನಸ್ತಾಪದಿಂದ ಒಳ್ಳೆಯ ಸಮಯ ಹಾಳಾಗಬಹುದು. ಮನಸ್ಸಿಗೆ ಸಮಾಧಾನವಾದೀತು. ತಾಳ್ಮೆಯಿಂದ ಕಾರ್ಯವನ್ನು ಮುನ್ನಡೆಸಿ. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ.

ಸಿಂಹ ರಾಶಿ:

ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಎಲ್ಲ ಕೆಲಸಗಳನ್ನೂ ನೀವು ಒಬ್ಬರೇ ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡು ಕೆಲಸಗಳು ಅಪೂರ್ಣವಾಗಲಿದೆ. ವಸ್ತ್ರಗಳನ್ನು ಮಾರಾಟ ಮಾಡುವವರು ನೀವು ಆಗಿದ್ದರೆ ಅಲ್ಪ‌ ಲಾಭವನ್ನೂ ಪಡೆಯುವಿರಿ. ಒಂದೇ ರೀತೀಯ ಕೆಲಸದಿಂದ ಬೇಸರವಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಸುತ್ತಾಟ ನಡೆಸುವಿರಿ. ಎಲ್ಲರೆದುರೂ ನಿಮ್ಮ ಸಾಹಸಪ್ರದರ್ಶನ ಬೇಡ.

ಕನ್ಯಾ ರಾಶಿ:

ನೀವು ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಂಡು ಯೋಜನೆ ಮಾಡುವಿರಿ.‌ ಧಾರ್ಮಿಕ ಕಾರ್ಯಗಳನ್ನು ಮಾಡಲು‌ ಮನಸ್ಸಾಗಲಿದೆ. ಅಪರಿಚಿತ ಕರೆಗೆ ನೀವು ಸ್ಪಂದಿಸಬೇಕಾಗಿಲ್ಲ. ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದು ನಿಮ್ಮ ಸ್ವಭಾವವಾಗಬಹುದು. ದ್ವಷದಿಂದ ಒಳ್ಳೆಯ ಸಂಬಂಧ ದೂರಾಗಲಿದೆ. ನಿಮ್ಮ ಇಷ್ಟದವರನ್ನು ನೀವು ಭೇಟಿಯಾಗಲಿದ್ದೀರಿ. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ಕಲಾವಿದರಿಗೆ ಮನ್ನಣೆ ಸಿಗಲಿದೆ.

ತುಲಾ ರಾಶಿ:

ಅಧಿಕ ಸುತ್ತಾಟದ ಸುಸ್ತು ನಿಮ್ಮಲ್ಲಿ ಇದ್ದರೂ ಅದನ್ನು ಲೆಕ್ಕಿಸಲಾರಿರಿ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ನಿಮಗೆ ಅನ್ನಿಸಿದ್ದನ್ನು ಮಾಡುವುದಾದರೂ ಹಿರಿಯರ ಒಪ್ಪಿಗೆ ಪಡೆಯಿರಿ. ಕೃಷಿಗೆ ಸಂಬಂಧಪಟ್ಟ ಚಟುವಟಿಯಲ್ಲಿ ಭಾಗವಹಿಸುವಿರಿ. ನಿಮ್ಮ ಸೋಲಿನ ಜೊತೆ ನೀವೇ ಇರಬೇಕಾಗುವುದು. ಭೂಮಿಯ ಖರೀದಿಯಲ್ಲಿ ನಿಮ್ಮ ಪಾಲೂ ಇರುವುದು. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ.

ವೃಶ್ಚಿಕ ರಾಶಿ:

ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಕಂಡಿದ್ದನ್ನು ಕಂಡಂತೆ ಹೇಳುವವರಾದರೂ ತಾಳ್ಮೆ ಇಟ್ಟುಕೊಳ್ಳುವು ಒಳ್ಳೆಯದು. ಕಂಡಿದ್ದು ಮಾತ್ರ ಸತ್ಯವೆನ್ನಲು ಬಾರದು. ಉದ್ಯೋಗದ ನಿಮಿತ್ತ ದೂರ ಇದ್ದವರಿಗೆ ತೊಂದರೆಗಳು ಬರಬಹುದು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. ಹೂಡಿಕೆಯ ಬಗ್ಗೆ ಸ್ವತಂತ್ರ ಆಲೋಚನೆ ಇರಲಿ. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಧನು ರಾಶಿ:

ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಿಸಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ನಿಮಗೆ ಹಿನ್ನಡೆಯಾದಂತೆ ತೋರುವುದು. ಜವಾಬ್ದಾರಿಯನ್ನು ವಹಿಸಿ ನಿರಾಳತೆಯಲ್ಲಿ ಇರುವಿರಿ. ವಿದ್ಯಾರ್ಥಿಗಳು ಸಂತೋಷದಿಂದ ಈ ದಿನವನ್ನು ಕಳೆಯುವರು. ನಿಮಗೆ ಯಾರಾದರೂ ಕೆಟ್ಟವರು ಎಂದು ಅನಿಸಿದರೆ ಅವರ ಸಹವಾಸದಿಂದ ದೂರವಿರಿ.‌ ಇಲ್ಲವಾದರೆ ಅಪತ್ತು ತಂದುಕೊಳ್ಳಬಹುದು. ನೀರಿನ ವಿಚಾರದಲ್ಲಿ ಜಾಗರೂಕತೆ ಬೇಕು.

ಮಕರ ರಾಶಿ:

ನಿಮ್ಮಿಂದ ಉಪಕಾರ ಪಡೆದವರು ಗೌರವಿಸುವರು. ನೀವು ಇಷ್ಟಪಡುವ ಜನರು ನಿಮಗೆ ಸಹಾಯ ಮಾಡುವರು. ಹೆತ್ತವರಿಂದ ನಿಮಗೆ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ನಿಮಗೆ ಕೋಪಗೊಳ್ಳಲು ಕಾರಣ ಸಿಗದು. ಸಾಲವನ್ನು ಮಾಡಲು ಹಿಂಜರಿದರೂ ಅನಿವಾರ್ಯವಾಗಿ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು. ಕೆಲವನ್ನು ನೀವು ಅನಗತ್ಯವಾಗಿ ತೆಗೆದುಕೊಳ್ಳುವಿರಿ.

ಕುಂಭ ರಾಶಿ:

ನಿಮ್ಮನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಮನೆಯವರು ಇರುವರು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ಆಲಸ್ಯವು ಒಳ್ಳೆಯದಲ್ಲ‌. ಹೊಸ ವಸ್ತ್ರಗಳಿಂದ ನೀವು ಬಹಳ ಶೋಭಿಸುವಿರಿ. ಬಾಕಿ ಇರುವ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ದೈಹಿಕ ಶ್ರಮವು ಇಂದು ಅಧಿಕವಾಗಬಹುದು. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ.

ಮೀನ ರಾಶಿ:

ನೀವು ತಪ್ಪುಗಳ ಮಾಡದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯೂ ಇಲ್ಲ. ಜವಾಬ್ದಾರಿಯ ವೈಫಲ್ಯವನ್ನೂ ಯಾರೂ ಹೊರಲಾರರು. ಆರ್ಥಿಕವಾದ ತೊಂದರೆಯಲ್ಲಿ ಇರುವಾಗ ಅಕಸ್ಮಾತ್ ಸಂಪತ್ತು ನಿಮ್ಮ ಕೈ ಸೇರಬಹುದು. ಎಲ್ಲಿಗಾದರೂ ದೂರ ಹೋಗಲು ಮನಸ್ಸು ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಮಕ್ಕಳ ವಿದ್ಯಾಭ್ಯಾಸದ ಖರ್ಚು ಅಧಿಕವಾಗಿ ತೋರುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಶನಿ ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಪ್ರೀತಿ, ಕರಣ : ಬಾಲವ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:42 – 10:48, ಯಮಗಂಡ ಕಾಲ 14:00 – 15:36, ಗುಳಿಕ ಕಾಲ 05:59 – 07:35

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us