
ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳು ಆಗಬಹುದು. ಮಕ್ಕಳಿಂದ ಆಗುವ ಅಸಮಾಧಾನವನ್ನು ನೀವು ಸಹಿಸಿಕೊಳ್ಳಲಾರಿರಿ. ಕೆಲವು ಸಂಗತಿಗಳು ನಿಮಗೆ ಗೊತ್ತಾಗದಿದ್ದರೇ ಉತ್ತಮ. ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗಿ ಮುಕ್ತಾಯವಾಗದು. ಸಹೋದರರ ನಡುವೆ ಆಪ್ತತೆಯು ಹೆಚ್ಚಾಗಬಹುದು. ನಿಮ್ಮ ಕೈತಪ್ಪಿ ಹೋದುದನ್ನು ಪುನಃ ಸ್ವಾಧೀನ ಮಾಡಿಕೊಳ್ಳುವಿರಿ.
ಬಹಳ ದಿನಗಳ ಅನಂತರ ದೂರಪ್ರಯಾಣವನ್ನು ಮಾಡಲು ಹೊರಟಿರುವಿರಿ. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡಲಿವೆ. ನಿಮ್ಮ ಸಾಮರ್ಥ್ಯವು ಎಲೆಮರೆಯ ಕಾತಿಯಂತೆ ಇರಲಿದೆ. ಪ್ರೇಮವನ್ನು ಹೇಳಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ಆಪತ್ಕಾಲಕ್ಕೆ ಇಟ್ಟ ಹಣವನ್ನು ಖರ್ಚು ಮಾಡಿಕೊಳ್ಳುವಿರಿ.
ಉದ್ಯೋಗದಲ್ಲಿ ಮನಸ್ತಾಪ ಬಂದು ನೀವು ಮಾಡುತ್ತಿರುವ ಆ ಉದ್ಯೋಗವನ್ನೇ ಬಿಡುವಿರಿ. ಮೇಲಧಿಕಾರಿಗಳ ಜೊತೆ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಆಗದೇ ಇರುತ್ತವೆ. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ಏಕಾಂತ ಬೇಕೆನಿಸಿ ದೂರ ಎಲ್ಲಿಯಾದರೂ ಹೋಗುವ ಮನಸ್ಸು ಮಾಡುವಿರಿ.
ಸರ್ಕಾರದ ಅಧಿಕಾರಿಗಳು ನಿಮ್ಮನ್ನು ಪೀಡಿಸಬಹುದು. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯವು ಇರುವುದು. ಜೀವನದಲ್ಲಿ ಜುಗುಪ್ಸೆ ಬಂದಂತೆ ವರ್ತಿಸುವಿರಿ. ಮಕ್ಕಳಿಂದ ನೀವು ಪೀಡಿತರಾಗುವಿರಿ. ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು. ಸಮಯವನ್ನು ನಿರೀಕ್ಷಿಸುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಕುಲದಿಂದ ಗೌರವವು ಸಿಗಬಹುದು.
ಲಾಭವೇ ಇಲ್ಲದ ಪ್ರಯಾಣ ನಮಗೆ ಬೇಸರವನ್ನು ತರಿಸಬಹುದು. ನಿಮಗೆ ಪ್ರಶಂಸೆಯ ಜೊತೆ ಹೆಚ್ಚಿನ ಜವಾಬ್ದಾರಿಗಳೂ ಬರಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗಬಹುದು. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಖುವುದು ನಿಮಗೆ ಕಷ್ಟವಾದೀತು. ಅಧಿಕ ಖರ್ಚನ್ನು ನೀವು ನಿಯಂತ್ರಿಸುವುದು ಒಳ್ಳೆಯದೇ. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು.
ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವಿರಿ. ಮಾತನಾಡುವಾಗ ಹೆಚ್ಚು ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರಬಹುದು. ಯಾರಾದರೂ ನಿಮ್ಮ ಬಳಿ ಅಮೂಲ್ಯವಾದ ವಸ್ತುಗಳನ್ನು ಜೋಪಾನ ಮಾಡಿ ಇಡಲು ಹೇಳಬಹುದು. ಶತ್ರುಗಳು ನಿಮ್ಮ ಕಾರ್ಯವನ್ನು ತಪ್ಪಿಸಲು ಹುಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ಮನೆಯವರು ಹಾಕಿಕೊಟ್ಟ ಚೌಕಟ್ಟನ್ನು ಮೀರಲಾರರು. ನಿಮ್ಮ ವಿದ್ಯೆಗೆ ಯೋಗ್ಯವಾದ ಉದ್ಯಮವನ್ನು ಅನ್ವೇಷಣೆ ಮಾಡುವಿರಿ.
ಬಹುದಿನಗಳಿಂದ ಇದ್ದ ನಿರುದ್ಯೋಗ ಸಮಸ್ಯೆಯು ಇಂದು ದೂರಾಗಿ, ಬೇಸರವೂ ಕಳೆಯಬಹುದು. ಭೂಮಿಯು ಲಾಭವಾಗುವಂತೆ ಇದ್ದರೂ ಕೈ ತಪ್ಪಿ ಹೋಗಬಹುದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು. ಒಳ್ಳೆಯ ವಸ್ತುವಿನ ಲಾಭವಾಗುವುದು. ಯಾರನ್ನೂ ನೀವು ಕೆಳಮಟ್ಟದಲ್ಲಿ ಕಾಣಲು ಬೇಡ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ ಜೊತೆ ತರಳುವಿರಿ. ಸ್ಥಾನಚ್ಯುತಿಯ ಭಯವು ನಿಮ್ಮನ್ನು ಕಾಡಬಹುದು.ಮನೆಯ ಸಂದರ್ಭವನ್ನು ನೆನೆದು ದುಃಖಿಸಬಹುದು.
ಅಸೂಯೆಯು ನಿಮ್ಮ ಇತರ ಕೆಲಸಗಳನ್ನು ನಷ್ಟ ಮಾಡಿಸುವುದು. ಸ್ನೇಹಿತರ ಸಹಾಯವು ನಿಮಗೆ ಬಲವನ್ನು ತಂದುಕೊಡುವುದು. ಪ್ರಭಾವೀ ವ್ಯಕ್ತಿಗಳು ನಿಮ್ಮನ್ನು ಆಕರ್ಷಿಸಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ. ಎಲ್ಲವನ್ನೂ ತಿಳಿದುಕೊಂಡೂ ನೀವು ಮುಂದೆ ಸಾಗಲು ಭಯಪಡುವಿರಿ. ಕೆಲವರ ಮಾತು ನಿಮ್ಮನ್ನು ನಿಷ್ಕ್ರಿಯಗೊಳಿಸಬಹುದು. ವ್ಯಾಪಾರವನ್ನು ಮಿತವಾದ ಲಾಭದಲ್ಲಿ ಮಾಡಿ.
ನಾನಾ ಮಾರ್ಗಗಳಿಂದ ಗೊತ್ತಿಲ್ಲದೇ ಹಣವು ಸಂದಾಯವಾಗುವುದು. ಉತ್ಸಾಹಕ್ಕೆ ಭಂಗ ಬರುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಬಹುದು. ಪ್ರಸಿದ್ಧಿಗಾಗಿ ನೀವು ಹಂಬಲಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಇತರರ ಕೆಲಸದ ಕಡೆ ಗಮನ ಹರಿಸುವಿರಿ. ಹೂಡಿಕೆಯಿಂದ ಕೈಯನ್ನು ಸುಟ್ಟುಕೊಳ್ಳಬಹುದು. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ.
ಹಿರಿಯರೆದುರು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ದೇವತಾಕಾರ್ಯಗಳಲ್ಲಿ ಆಸಕ್ತಿಯು ಇದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗದು. ಯಾರಾದರೂ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಬಹುದು. ನಿಮ್ಮ ಸಂಬಂಧಗಳು ಬಳಕೆಯಲ್ಲಿ ಇಲ್ಲದೇ ದೂರವಾಗುವುದು. ನಿಮ್ಮ ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ. ಇದು ನೀವು ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ನೀಡುತ್ತದೆ. ನಿಮ್ಮ ಪ್ರೇಮದ ಸಂಗಾತಿ ನಿಮ್ಮನ್ನು ಹೊಗಳಬಹುದು.
ಕೋಪದಲ್ಲಿ ಬಾಯಿ ತಪ್ಪಿ ಏನನ್ನಾದರೂ ಹೇಳಬಹುದು, ಜಾಗ್ರತೆ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಇರಲಿದೆ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ ಇಂದು. ಅಸತ್ಯದ ಮಾತುಗಳು ಯಾರಿಗೂ ಸಂದೇಶವನ್ನು ಉಂಟುಮಾಡದು. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾಗಬಹುದು. ಯಾರಾದರೂ ಏನನ್ನಾದರೂ ಕೊಡಲು ಬಂದರೆ ನಿರಾಕರಿಸಿ.
ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ನಕಾರಾತ್ಮಕ ಆಲೋಚನೆಗಳೇ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತವೆ. ಒತ್ತಡದಿಂದ ಕೆಲಸವನ್ನು ಮಾಡಬೇಕಾಗಬಹುದು. ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ಇದುವರೆಗೆ ನಿಮ್ಮ ಸಮಸ್ಯೆಯಂದರೆ ನೀವು ಪ್ರಯತ್ನಿಸದೇ ಕೇವಲ ಆಸೆಪಡುತ್ತೀರಿ. ಮಕ್ಕಳ ಬಗ್ಗೆ ಹೆಚ್ಚು ಗಮನ ಅಗತ್ಯ. ಯಾರನ್ನು ನೆಚ್ಚುವಿರಿ ಎನ್ನುವುದರ ಮೇಲೆ ನಿಮ್ಮ ಜೀವನಕ್ಕೆ ದಾರಿ ಗೊತ್ತಾಗಲಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಬ್ರಹ್ಮ, ಕರಣ : ಶಕುನಿ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:38 – 12:07, ಯಮಗಂಡ ಕಾಲ 15:05 – 16:34, ಗುಳಿಕ ಕಾಲ 07:39 – 09:09
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ