ದಿನ ಭವಿಷ್ಯ: ಇಂದು ಈ ರಾಶಿಯವರು ಅತಿಯಾದ ತೊಂದರೆಯಿಂದ ದೈವಕ್ಕೆ ಶರಣಾಗುವರು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶೀ ತಿಥಿಯ ಗುರುವಾರದಂದು ನಿರ್ಮಾಣ ಕಾರ್ಯಕ್ಕೆ ಬ್ರೇಕ್, ಕಾನೂನಾತ್ಮಕ ಹೋರಾಟ, ದಾಂಪತ್ಯದಲ್ಲಿ ಕಲಹ, ಸಮಯಾಭಾವ, ಮನೋನಿಗ್ರಹ, ಹೊಸ ಕೆಲಸದ ಸಾಧಕ ಬಾಧಕಗಳ ಚರ್ಚೆ ಇವೆಲ್ಲ ಈ ದಿನದ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರು ಅತಿಯಾದ ತೊಂದರೆಯಿಂದ ದೈವಕ್ಕೆ ಶರಣಾಗುವರು...
ದಿನ ಭವಿಷ್ಯ
Edited By:

Updated on: Sep 10, 2026 | 12:48 AM

ಮೇಷ ರಾಶಿ:

ಆಸ್ತಿಯ ಹಂಚಿಕೆಯ ವಿಚಾರದಲ್ಲಿ ಚರ್ಚೆಗಳು ಆಗಲಿದೆ. ನಿಮ್ಮ ಕೆಲಸಗಳಿಗೆ ವಿಘ್ನಗಳು ಬರಬಹುದು. ಸ್ವ ಉದ್ಯೋಗದ ಓಡಾಟ. ವ್ಯಾಪಾರವು ಅಭಿವೃದ್ಧಿಯಾಗಿ ಒಂದೊಂದೇ ಹಂತವನ್ನು ಏರುವಿರಿ. ಕುಟುಂಬ ನಿರಾತಂಕವಾಗಿ ಜೀವನ ನಡೆಸುವುದು. ನಿಮ್ಮ‌ ಬಗ್ಗೆ ಆಡಿಕೊಳ್ಳಲು ಏನಾದರೂ ಸಿಗಲಿದೆ. ಇದು ನಿಮಗೆ ಬೇಸರವನ್ನು ತರಿಸುವುದು. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು.

ವೃಷಭ ರಾಶಿ:

ಬಂಧುಗಳ ಭೇಟಿಯಿಂದ ಚಿತ್ತವು ಉತ್ಸಾಹದಿಂದ ಇರವುದು. ಮಾಡಬೇಕಾದ ಕೆಲಸಗಳನ್ನು ವೇಗವಾಗಿ, ಎಚ್ಚರಿಕೆಯಿಂದ ಮಾಡಿ. ಸಹೋದರನ ಅನಿರೀಕ್ಷಿತ ಸಹಾಯವು ಸಂತಸವನ್ನು ತರುವುದು. ಉಪಕಾರಕ್ಕೆ ಪ್ರತ್ಯುಪಕಾರದ ಮನೋಭಾವ ಇರಲಿ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಸಹವಾಸದಿಂದ ನಿಮ್ಮ ಸ್ವಭಾವವು ಗೊತ್ತಾಗದೇ ಬದಲಾಗುವುದು. ನಿಮ್ಮ ಹೇಳಿಕೆಗಳು ಮಹತ್ತ್ವದ್ದಾಗಿರದು.

ಮಿಥುನ ರಾಶಿ:

ನೀವು ಇಂದು ಯಾರ ಸಹಾಯವನ್ನೂ ಪಡೆಯಲು ಇಚ್ಛಿಸುವುದಿಲ್ಲ. ಆಲಸ್ಯದಿಂದ ಕಛೇರಿಯ ಕೆಲಸವನ್ನು ಮಾಡಲು ಆಸಕ್ತಿ ತೋರಿಸುವುದಿಲ್ಲ. ಒಳ್ಳೆಯ ಅಭ್ಯಾಸಗಳು ನಿಮ್ಮನ್ನು ಆರೋಗ್ಯವಾಗಿ ಇಡುವುದು. ಹಿತಶತ್ರುಗಳನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಜೀವನ ಸಂಗಾತಿಯ ಜೊತೆ ಹೆಚ್ಚು ಮಾತನಾಡುವಿರಿ. ಮೋಸದ ಜಾಲಕ್ಕೆ ಸಿಕ್ಕಬಹುದು. ಕರೆಗಳನ್ನು ನಿರ್ಲಕ್ಷಿಸಿ. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಸಮಯವನ್ನು ಯಾರಾದರೂ ವ್ಯರ್ಥಮಾಡಬಹುದು.

ಕರ್ಕಾಟಕ ರಾಶಿ:

ಯಾವ ಸತ್ಯವನ್ನೂ ನೀವು ನಂಬುವ ಸ್ಥಿತಿಯಲ್ಲಿ ಇರುವುದಿಲ್ಲ. ವೈಯಕ್ತಿಕ ಕಾರಣದಿಂದ ನಿಮ್ಮ ಉದ್ಯೋಗವನ್ನು ಬದಲಿಸಬೇಕಾಗುವುದು. ಪಡೆದ ಸಾಲವನ್ನು ತೀರಿಸುವಿರಿ. ಬಾಂಧವ್ಯವನ್ನು ಉಳಿಸಿಕೊಳ್ಳುವುದು ನಿಮಗೆ ಹಿಡಿಸದು. ಪ್ರಯಾಣವನ್ನು ಅನಾರೋಗ್ಯದ ಕಾರಣ ಕಡಿಮೆ ಮಾಡುವಿರಿ. ಏಕಾಂತವನ್ನು ಇಷ್ಟಪಟ್ಟರು ಇರಲಾಗದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು.

ಸಿಂಹ ರಾಶಿ:

ಅಪರಿಚಿತರು ನಿಮ್ಮ ಉಪಯೋಗವನ್ನು ಪಡೆದುಕೊಳ್ಳಲು ಇಚ್ಛಿಸಬಹುದು. ಸ್ನೇಹಿತರ ಮಾತುಗಳು ನಿಮಗೆ ಉಪಯೋಗಬಹುದು. ಉದ್ಯಮವನ್ನು ನೀವು ಹೆಚ್ಚಿಸುವ ಯೋಚನೆ ಇರಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಅಳುಕು ಇರುವುದು. ನಿಮ್ಮ ಒತ್ತಡವನ್ನು ಕಡಿಮೆ‌ಮಾಡಿಕೊಳ್ಳಲು ಕೆಲಸವನ್ನು ಹಂಚುವಿರಿ. ಸಮಾಜಸೇವಕರ ಭೇಟಿಯಾಗಿ ನಿಮ್ಮ ಸಮಸ್ಯೆಗೆ ಸಮಾಧಾನ ತಂದುಕೊಳ್ಳುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲೂ ಚಿಂತಿಸುವಿರಿ.

ಕನ್ಯಾ ರಾಶಿ:

ಮನಸ್ಸು ಉದ್ವಿಗ್ನದಿಂದ ಹೊರಬರಲು ಮಾರ್ಗವನ್ನು ಹುಡುಕುವಿರಿ. ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ನಿರ್ಧಾರವನ್ನು ಮಾಡುವಿರಿ. ಯಾವುದೇ ದೊಡ್ಡ ಮೊತ್ತದ ಖರೀದಿಯನ್ನು ಮಾಡುವಾಗ ಅವಶ್ಯಕತೆ ಅನಿವಾರ್ಯತೆಗಳ ಬಗ್ಗೆ ಗಮನವಿರಲಿ. ಉದ್ಯಮಿಗಳ ಭೇಟಿಯಾಗುವ ಸಾಧ್ಯತೆ ಇದೆ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ವೃತ್ತಿಯಲ್ಲಿ ನಿಮ್ಮ ಬಗ್ಗೆ ಬಣ್ಣದ ಮಾತುಗಳು ಬರಬಹುದು.

ತುಲಾ ರಾಶಿ:

ಪುಣ್ಯಸ್ಥಳಕ್ಕೆ ಅನಿರೀಕ್ಷಿತ ಭೇಟಿ ಹಾಗೂ ಸಮಾಧಾನ ಸಿಗಲಿದೆ. ಸಾಲವನ್ನು ಮರುಪಾವತಿ‌ ಮಾಡಿ ನಿರಾಳವಾಗುವಿರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸದೇ ಕೋಪಗೊಳ್ಳುವಿರಿ. ಯಾರದೋ ಸಿಟ್ಟನ್ನು ನಿಮ್ಮವರ ಮೇಲೆ ತೋರಿಸುವಿರಿ. ನಿಮ್ಮವರ ಬಗ್ಗೆ ತಿಳಿಯುವ ಕುತೂಹಲ. ಇದು ನಿಮ್ಮನ್ನು ಉದ್ವೇಗಕ್ಕೆ ಒಳಗಾಗಿಸುವುದು. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ.

ವೃಶ್ಚಿಕ ರಾಶಿ:

ನಿಮ್ಮ ವಸ್ತುವನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂವನೆಯನ್ನು ನೀವು ಇಷ್ಟಪಡುವಿರಿ. ನಿಮಗೆ ವಹಸಿದ ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ವೇತನ ಅಧಿಕ ಮಾಡಿಕೊಳ್ಳಲು ಹಲವು ದಾರಿಗಳಲ್ಲಿ ಪರಿಶ್ರಮ ವಹಿಸುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ಅಹಂಕಾರವನ್ನು ಎಲ್ಲರದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ನಿಲುವನ್ನು ಸಂಗಾತಿಯು ಪ್ರೋತ್ಸಾಹಿಸಬಹುದು.

ಧನು ರಾಶಿ:

ಒತ್ತಡದಿಂದ ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಬೆರೆಯುವ ಒಳ್ಳೆಯ ಸ್ವಭಾವದಿಂದ ಅಪವಾದ ಬರಬಹುದು. ಸದಾ ಕಾಲ ಹೊಸತನ್ನು ನೀವು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು.

ಮಕರ ರಾಶಿ:

ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು. ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮಗೆ ಯಾರು ಬೆಂಬಲ ಕೊಡುತ್ತಾರೆ ಎನ್ನುವದೇ ಗೊತ್ತಾಗದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ‌ ನಿಮಗೆ ಗೊಂದಲವು ಬರಬಹುದು. ಯಾರೂ ನಿಮ್ಮ ಆಜ್ಞೆಯನ್ನು ಮೀರದಂತೆ ನೋಡಿಕಳ್ಳಬಹುದು. ನಿದ್ರೆಯನ್ನು ಕಡಿಮೆ‌ ಮಾಡುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು.

ಕುಂಭ ರಾಶಿ:

ಇಂದು ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಕಾರ್ಯವು ಸಿದ್ಧಿಯಾಗುವ ತನಕವಾದರೂ ಮೌನವಾಗಿರುವುದು ಉತ್ತಮವೆಂದು ಹಿರಿಯರಿಂದ ಉಪದೇಶ ಸಿಗುವುದು.. ನೀವು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಲು ಬಯಸುವಿರಿ. ಹಳೆಯ ಕಡತಗಳ ಪರಿಶೀಲನೆ ಮಾಡಿ ಅಮೂಲ್ಯ ದಾಖಲೆಯನ್ನು ಪಡೆಯುವಿರಿ. ಇನ್ನೊಬ್ಬರ ಇಚ್ಛೆಯಂತೆ ನಡೆಯಲಿದ್ದು ನೀವು ಎಲ್ಲದಕ್ಕೂ ಸಾಕ್ಷಿಯಾಗಿರುವಿರಿ‌.

ಮೀನ ರಾಶಿ:

ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಅತಿಯಾದ ಪ್ರಶಂಸೆಯಿಂದ ದಾರಿ ತಪ್ಪುತ್ತದೆ ಎಂದು ಗೊತ್ತಾಗುವ ಮೊದಲೇ ನಿಮ್ಮನ್ನು ದಾರಿ ತಪ್ಪಿಸಿ ಅನ್ಯ ಮಾರ್ಗವೇ ಇಲ್ಲದಂತೆ ಆಗುವುದು. ಹೆಸರನ್ನು ಗಳಿಸಲು ನಿಮಗೆ ನಾನಾ ದಾರಿಗಳು ಸಿಗಬಹುದು. ತಾಯಿಯ ಆರೋಗ್ಯವು ಸುಧಾರಿಸಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಶಿವ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 23 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:48 – 15:20, ಯಮಗಂಡ ಕಾಲ 06:10 – 07:41, ಗುಳಿಕ ಕಾಲ 09:13 – 10:45

-ಲೋಹಿತ್ ಹೆಬ್ಬಾರ್ – 8762924271 (what’s app only)

Published On - 12:47 am, Thu, 10 September 26

Loading...
Unable to load recommendations.
Follow Us