
ನಿಮ್ಮ ಅನೇಕ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ಬೇರೆ ಕಡೆಗೆ ಇರಲು ಬಯಸುವಿರಿ. ಆರ್ಥಿಕತೆಯ ಹಿನ್ನಡೆಯಿಂದಾಗಿ ಕಾರ್ಯಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯವನ್ನು ಬಯಸುವಿರಿ. ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ. ಮಾತನ್ನು ಉಳಿಸಿಕೊಳ್ಳುವಿರಿ. ನಿಮ್ಮದಾದ ವಸ್ತುಗಳನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸಿ. ಅಪರಿಚಿತರ ವ್ಯಕ್ತಿಗಳಿಂದ ನೀವು ಸಂತೋಷಗೊಳ್ಳುವಿರಿ.
ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರ ಜೊತೆ ಪರ್ಯಟನೆಗೆ ಸಮಯ ನಿಶ್ಚಿಯವಾಗಲಿದೆ. ಸ್ತ್ರೀಯರಿಂದ ಸಹಾಯವು ನಿಮಗೆ ಸಿಗಲಿದೆ. ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನು ಕೊಡಲಾಗದು. ಒತ್ತಡದ ನಿವಾರಣೆ ಸುತ್ತಾಡಿ ಬರುವ ಮನಸ್ಸಾದೀತು. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳಿ. ಉಪಾಯದಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವುದು ಉತ್ತಮ.
ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವು ಕಡಿಮೆ ಸಿಗಲಿದೆ. ಯಾರದೋ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿರಿ. ಆರ್ಥಿಕ ನಷ್ಟದ ಹಾಗೂ ಸಮಯದ ನಷ್ಟವಾಗಿ ಬೇಸರಿಸುವಿರಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿಕೊಂಡು, ಮಾತನಾಡಿ. ಮಕ್ಕಳ ಕಾರಣಕ್ಕಾಗಿ ವಿದೇಶ ವಾಸ ಅನಿವಾರ್ಯ. ಸಾಮಾಜಿಕ ಗೌರವವನ್ನು ನೀವಿಂದು ಪಡೆಯುವಿರಿ. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ.
ಮಕ್ಕಳಿಂದ ಸಂತೋಷದ ವಾರ್ತೆಯು ಇರುತ್ತದೆ. ನೀವು ಇಂದು ಅಸರಂಭಿಸಿದ ಕಾರ್ಯವನ್ನು ಪೂರ್ಣ ಆಗುವವರೆಗೂ ಬಿಡುವವರಲ್ಲ. ಸಂಗಾತಿಯ ಜೊತೆ ಸಮಯ ಕಳೆಯುವ ಮನಸ್ಸಾಗುವುದು. ಮನೆ ಬಳಕೆಗೆ ಬೇಕಾದ ವಸ್ತುವನ್ನು ಕಡಿಮೆ ಬೆಲೆಗೆ ಪಡೆಯುವಿರಿ. ರಾತ್ರಿಯ ಪ್ರಯಾಣಕ್ಕೆ ಮನೆಯವರ ಅನುಮತಿ ಸಿಗದು. ವಿದೇಶದ ಸ್ನೇಹಿತನ ಪರಿಚಯವಾಗುವುದು. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ಯಾರಿಂದಲೂ ಆಗದ್ದನ್ನು ನೀವು ಮಾಡುವುದು ಬೇಡ.
ಇಂದು ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸಹೋಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಬಂದ ಹಣವನ್ನು ಕಳೆದುಕೊಳ್ಳುವಿರಿ. ಭೂ ಕಲಹವು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ. ಸ್ನೇಹಿತ ಜೊತೆ ಪ್ರವಾಸವನ್ನು ಯೋಜಿಸುವಿರಿ. ವಿವಾಹಕ್ಕೆ ನಿಮಗೆ ಮನಸ್ಸು ಇರದು. ಸ್ವತಂತ್ರವಾಗಿ ಇರಲು ನೀವು ಬಯಸಬಹುದು. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ.
ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಸಕಾಲಕ್ಕೆ ನಿಮಗೆ ಹಣವು ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಅವಶ್ಯಕ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ಬೈಗುಳಗಳು ಸಿಗಬಹುದು. ನಿತ್ಯದ ಕಲಸವನ್ನೇ ಹೊಸ ರೀತಿಯಲ್ಲಿ ಮಾಡಲು ಇಚ್ಛಿಸುವಿರಿ. ಆಲಸ್ಯದಿಂದ ಕೆಲಸವನ್ನು ಹೆಚ್ಚು ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯುವ ಸಂದರ್ಭ ಬರಬಹುದು.
ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗುವಿರಿ. ನಿಮಗೆ ಇರುವ ಕಾರ್ಯಕುಶಲತೆಯನ್ನು ಮುಚ್ಚಿಕೊಳ್ಳುವರು. ಇನ್ನೊಬ್ಬರಿಗೆ ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡುವಿರಿ. ಶುಚಿತ್ವಕ್ಕೆ ಆದ್ಯತೆ ಕಡಿಮೆಯಾಗಲಿದೆ. ಹೆಚ್ಚಿನ ಆದಾಯದ ಉದ್ಯೋಗವನ್ನು ಹುಡುಕುತ್ತಿರುವಿರಿ. ಬೇಕೆಂದಾಗ ಸಿಗದುದರ ಬಗ್ಗೆ ದುಃಖ ಬರಲಿದೆ. ನಿಮ್ಮ ಸರಳತೆಯು ಇತರರಿಗೆ ಪ್ರೇರಣೆಯಾದೀತು.
ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು. ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಮಕ್ಕಳಿಂದ ನಿಮಗೆ ಶ್ರೇಯಸ್ಸು ಸಿಗುವುದು. ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು. ಕಠೋರತೆಯಿಂದಾಗಿ ಹೇಳಿದ ಕೆಲಸವು ಸಾಧ್ಯವಾಗುವುದು. ಮೇಲಧಿಕಾರಿಗಳ ಒತ್ತಡವು ನಿಮಗೆ ಸಾಕಾಗುವುದು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ ಅವಕಾಶದಿಂದ ವಂಚಿತರಾಗುವಿರಿ.
ದಾನದಲ್ಲಿ ನೀವು ಬಹಳ ಹಿಂಗೈಯುಳ್ಳವರಾಗುವಿರಿ. ಇಂದು ನಿಮಗೆ ರುಚಿಸುವ ಸಂಗತಿಗಳನ್ನೇ ಮಾತನಾಡುತ್ತಾರೆ ಎಂದು ತಿಳಿಯುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ ಮೌನವು ಮಾತಾಗಿ ಬಾರದು. ಸಂಗಾತಿಯನ್ನು ಪಡೆಯಲು ನೀವು ಬಹಳ ಶ್ರಮವಹಿಸುವಿರಿ. ಕೃಷಿಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಮಕ್ಕಳಿಗೆ ಪ್ರೀತಿಯನ್ನು ತೋರಿಸಲು ಸಮಯದ ಅಭಾವ ಆಗಬಹುದು. ಕೃಷಿಯಲ್ಲಿ ಸಾಧಿಸುವ ಛಲವು ಬಂದೀತು.
ನಿಮ್ಮವರೇ ಆದರೂ ನೀವು ನಂಬಿಕೆಯನ್ನು ಇಡಲಾರಿರಿ. ಹೊಸತನ್ನು ಕಲಿಯುವ ಹಂಬಲವು ಕಡಿಮೆಯಾಗಬಹುದು. ದಿನಕ್ಕಿಂತ ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಬೇಕಾಗುವುದು. ನಿಮ್ಮದೇ ರೀತಿಯ ಮಾರ್ಗದಲ್ಲಿ ನೀವು ಮುಂದುವರಿಯುವಿರಿ. ಮನಸ್ಸಿನ ಸ್ಥಿರತೆಯನ್ನು ತಂದುಕೊಳ್ಳುವುದು ಕಷ್ಟವಾದೀತು. ಪರನಿಂದನೆಯಿಂದ ಆಚೆ ಬರುವುದು ಉತ್ತಮ. ಯಾರನ್ನೂ ಎದುರಿಸುವ ಧೈರ್ಯವನ್ನು ಇಂದು ತೋರಿಸುವಿರಿ.
ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಜಯವು ಸಿಗಲಿದೆ. ಯಾದ್ದಾದದರೂ ಕಣ್ತಪ್ಪಿಸಿ ಏನನ್ನಾದರೂ ಮಾಡಲಾಗದು. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮುಖಂಡರಾಗಿ ಪಕ್ಷಪಾತವನ್ನು ಮಾಡುವುದು ಯೋಗ್ಯವಾಗದು. ಖರ್ಚಿಗಾಗಿ ತಂದೆಯಿಂದ ಹಣವನ್ನು ಪಡೆಯುವಿರಿ. ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ನೀಡುವಿರಿ.
ನಿಮ್ಮನ್ನು ಭೇಟಿ ಮಾಎಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ಅನಿವಾರ್ಯ ಕಾರಣದಿಂದ ನಿಮ್ಮ ಇಂದಿನ ಯೋಜನೆಯನ್ನು ಬದಲಿಸಬೇಕಾಗುವುದು. ಬೆಳಗಿನಿಂದಲೇ ಮಾನಸಿಕ ಕಿರಿಕಿರಿ ಆರಂಭ. ಸಿಟ್ಟುಗೊಳ್ಳುವ ಸಂದರ್ಭದಲ್ಲಿ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವುದು ಬೇಡ. ನೌಕರರಿಂದ ನಿಮ್ಮ ಕೆಲಸವು ಸುಲಭವಾಗುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ವಾಯುವಿಹಾರವನ್ನು ಸ್ನೇಹಿತರ ಜೊತೆ ಮಾಡುವಿರಿ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಶೂಲಿ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 12 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:41 – 12:11, ಯಮಗಂಡ ಕಾಲ 15:12 – 16:42, ಗುಳಿಕ ಕಾಲ 07:40 – 09:11
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ