Horoscope: ದಿನಭವಿಷ್ಯ, ಈ ರಾಶಿಯವರು ಆಂತರಿಕ ಕಲಹವನ್ನು ಬಿಟ್ಟುಕೊಡುವುದು ಬೇಡ, ಶತ್ರುಗಳು ಇದನ್ನು ಬಳಸಿಕೊಳ್ಳಬಹುದು

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಆಂತರಿಕ ಕಲಹವನ್ನು ಬಿಟ್ಟುಕೊಡುವುದು ಬೇಡ, ಶತ್ರುಗಳು ಇದನ್ನು ಬಳಸಿಕೊಳ್ಳಬಹುದು
ಇಂದಿನ ರಾಶಿಭವಿಷ್ಯImage Credit source: istock
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jul 14, 2023 | 12:32 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶೂಲ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:28 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:49 ರಿಂದ 09:25ರ ವರೆಗೆ.

ತುಲಾ: ಆಸ್ತಿಯನ್ನು ಮಕ್ಕಳಿಗೆ ಹಂಚುವ ತೀರ್ಮಾ‌ನವು ನಿಮ್ಮದಾಗಲಿದೆ. ಮಕ್ಕಳಿಗೆ ಇದರಿಂದ ಬೇಸರವಾದೀತು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ಸಂತೋಷವಾಗಲಿದೆ. ವ್ಯಾಪಾರದಲ್ಲಿ ನಿಮಗೆ ಜನರ ಆಕರ್ಷಣೆ ಮಾಡುವುದು ಅಭ್ಯಾಸವಾಗುವುದು. ನಿಮ್ಮ ಅಸಮಾಧಾನವನ್ನು ಹೊರಹಾಕಲು ಸ್ಥಳವನ್ನು ನೋಡಿಕೊಳ್ಳಿ.‌ ಕಛೇರಿಯು‌ ಸೂಕ್ತ ಸ್ಥಳವಲ್ಲ. ತಂದೆಯ ಮೇಲೆ‌ ನಿಮ್ಮ‌ ಗೌರವವು ಅಧಿಕಾಗುವುದು. ಹಿರಿಯರ ಮಾರ್ಗದರ್ಶನವನ್ನು ನೀವು ಪಡೆಯುವ ಮನಸ್ಸಾದೀತು. ಆಂತರಿಕ ಕಲಹವನ್ನು ಬಿಟ್ಟುಕೊಡುವುದು ಬೇಡ. ಶತ್ರುಗಳು ಇದನ್ನು ಬಳಸಿಕೊಳ್ಳಬಹುದು.

ವೃಶ್ಚಿಕ: ಮನಸ್ಸಿಗೆ ಬೇರಸವಾಗುವ ಸಂಗತಿಗಳನ್ನು ದೂರವಿಡುವುದು ಒಳ್ಳೆಯದು.‌ ಇಲ್ಲವಾದರೆ ಬೇಸರವನ್ನು ಮಾಡಿಕೊಳ್ಳುವುದು ಬೇಡ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಕನಸನ್ನು ನನಸು ಮಾಡಿಕೊಳ್ಳಲು ನೀವು ಪ್ರಯತ್ನಿಸುವಿರಿ. ಸರ್ಕಾರಿ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸುವಿರಿ. ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ.‌ ನಿಮಗೆ‌ ಅಗತ್ಯವಿದ್ದರೆ ಮಾತ್ರ ಖರೀದಿಸಿ.‌ ಹಣವನ್ನು ವೃಥಾ ಖಾಲಿ ಮಾಡುವುದು ಬೇಡ. ಸ್ನೇಹಿತರ ಜೊತೆ ಪ್ರಯಾಣವನ್ನು ಮಾಡುವ ಮನಸ್ಸಾದೀತು. ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ‌ ಅಲೋಚನಾ‌ ವಿಧಾನವು ಮಂದಗತಿಯಲ್ಲಿ ಸಾಗುವುದು.

ಧನುಸ್ಸು: ಹಿರಿಯರ ಅನುಕೂಲಕ್ಕಾಗಿ ನಿಮ್ಮ ಕಾರ್ಯಗಳನ್ನು ಬದಲಿಸಿಕೊಳ್ಳುವಿರಿ. ಸ್ನೇಹಿತರ ಒಡನಾಟದಿಂದ ದುಶ್ಚಟವನ್ನು ಕಲಿಯುವಿರಿ. ವಿದ್ಯಾಭ್ಯಾಸಕ್ಕೆಂದು ಮನೆಯಿಂದ ಹಣವನ್ನು ಪಡೆದು ಅನ್ಯಕಾರ್ಯಕ್ಕೆ ಬಳಸುವಿರಿ. ನಂಬಿಕೆಯನ್ನು ಕಳೆದುಕೊಳ್ಳುವಿರಿ. ಉದ್ಯಮವನ್ನು ಮುನ್ನಡೆಸಲು ನಿಮಗೆ ಕಷ್ಟವಾದೀತು. ಒಂದೊಂದೇ ಸಮಸ್ಯೆಗಳನ್ನು ಎದುರಿಸಿ ನೀವು ಸೋಲುವಿರಿ. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಬೆಲೆ‌ಯು ಕಡಿಮೆ ಆಗಬಹುದು. ಸಮಾರಂಭಗಳಗೆ ಆಹ್ವಾನ ಬರಬಹುದು. ಹೊಸ ಸಾಧ್ಯತೆಯತ್ತ ನಿಮ್ಮ ಗಮನ ಇರಲಿದೆ. ಸಂತೋಷದ ಸಂಗಾತಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ.

ಮಕರ: ಭವಿಷ್ಯವನ್ನು ಕಲ್ಪಿಸಿಕೊಂಡು ದಾಂಪತ್ಯದಲ್ಲಿ ಬಿರುಕುಗಳು ಕಡಿಮೆಯಾಗಬಹುದು. ಸಹೋದರರು ಸೇರು ಕೊಂಡು ಹೊಸ ಉದ್ಯೋಗದ ಪ್ರಾರಂಭಕ್ಕೆ ಅಣಿಯಾಗುಬಿರಿ. ಪಿತ್ರಾರ್ಜಿತ ಆಸ್ತಿಯು ದೊರೆಯಬಹುದು. ಸ್ನೇಹಿತರು ನಿಮ್ಮ ಜೊತೆ ಜಗಳವಾಡಿ ದೂರವಾಗಬಹುದು. ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಜೋಡಿಸುವುದು ನಿಮಗೆ ಇಂದು ಕಷ್ಟವಾದೀತು. ನಿಮ್ಮ‌ ಮಾರ್ಗದರ್ಶನವನ್ನು ಬಯಸುವರು. ವಾತಾವರಣದ ಬದಲಾವಣೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಪ್ರತ್ಯೇಕವಾಗಿ ಇರಲು ಬಯಸುವಿರಿ. ನಿಮ್ಮ ಶ್ರಮವು ವ್ಯರ್ಥವಾದಂತೆ ತೋರುವುದು.

ಕುಂಭ: ನಿಮ್ಮ ಮಾತುಗಳಿಂದ ಕುಟುಂಬದಲ್ಲಿ ಆತಂಕವು ಉಂಟಾಗಬಹುದು. ಸಾಧಿಸಲು ಹೋಗಿ ಸಂಬದ್ಧವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಹನದಿಂದ ಶರೀರಕ್ಕೆ ನೋವಾಗುವ ಸಾಧ್ಯತೆ ಇದೆ. ಜಾಡ್ಯವು ನಿಮ್ಮನ್ನು ಬಿಡದೇ ನಿಮ್ಮಿಂದ ಏನೂ ಸಾಧ್ಯವಾಗದು. ನಿಮಗೆ ಪೂರಕವಾದ ವಾತಾವರಣದಲ್ಲಿ ಇರಲು ನೀವು ಇಷ್ಟಪಡುವಿರಿ. ಸಹೋದರರ ಜೊತೆ ಸಣ್ಣ ವಿಷಯಕ್ಕೂ ವಾದವನ್ನು ಮಾಡುವಿರಿ.‌ ನಿಮ್ಮದೇ ಉದ್ಯೋಗದ ಅವಶ್ಯಕತೆ ಇಂದು ನಿಮಗೆ ಎದ್ದು ತೋರುವುದು. ಧಾರ್ಮಿಕ ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರಳವಾದ ಜೀವನವನ್ನು ಕಳೆಯುವ ಬಯಕೆ ಆಗುವುದು.

ಮೀನ: ಬೇರೆ ಬೇರೆ ಕಾರ್ಯಗಳ ಒತ್ತಡದಿಂದ ನಿಮ್ಮ ಮುಖ್ಯ‌ ಕೆಲಸವು ನಿಧಾನವಾಗುವುದು. ನೂತನ ವಾಹನವನ್ನು ಖರೀದಿಸುವ ಆಲೋಚನೆಗಳು ಇರಲಿದೆ. ಸ್ನೇಹಿತರ ಸಂಪಾದನೆಯನ್ನು ಮಾಡುವಿರು. ಅಧಿಕಾರದ ಮಾತುಗಳನ್ನು ನೀವು ಆಡಿಲಿದ್ದು ಅಹಂಕಾರದಂತೆ ತೋರುವುದು.‌ ಅಶಕ್ತರಿಗೆ ನಿಮ್ಮ ಕೈಲಾದ ಸಹಕಾರವನ್ನು ಕೊಡುವಿರಿ. ಸಂಬಂಧಗಳನ್ನು ಬೆಳೆಸಿಕೊಳ್ಳುವುದು ನಿಮಗೆ ಇಷ್ಟವಾದೀತು. ಹಣಕಾಸಿನ ವಿಚಾರದಲ್ಲಿ ನೀವು ನಿಮ್ಮ ಕ್ರಮವು ಸರಿ ಇರಲಿದೆ. ಮನಸ್ಸಿಗೆ ಬಂದಿದ್ದನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವುದು ಇಂದು ಒಳ್ಳೆಯದಲ್ಲ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ