Daily Horoscope 14 July: ಮನಸ್ಸಿಗೆ ಬೇರಸವಾಗುವ ಸಂಗತಿಗಳಿಂದ ದೂರವಿರುವುದು ಒಳ್ಳೆಯದು
ಇಂದಿನ (2023 ಜುಲೈ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶೂಲ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:28 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:49 ರಿಂದ 09:25ರ ವರೆಗೆ.
ಮೇಷ: ಸಹೋದ್ಯೋಗಿಗಳ ಜೊತೆ ಸಾಮರಸ್ಯದ ಕೊರತೆ ಇರಲಿದೆ. ನಿಮ್ಮ ಕೆಲಸವನ್ನು ಬೇರೆಯವರು ಅಲ್ಪ ಕಾಲದಲ್ಲಿ ಮುಗಿಸಿ ನಿಮಗೆ ಅಪಮಾನವಾಗುವಂತೆ ಮಾಡುವರು. ಹಣವನ್ನು ಸಂಪಾದಿಸುವ ಭರದಲ್ಲಿ ನಿಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗಲಿದ್ದು ಕೆಲವು ಸಮಯವನ್ನು ಅವರ ಜೊತೆ ಕಳೆಯುವಿರಿ. ನಿಮ್ಮ ಬದುಕನ್ನು ಇನ್ನೊಬ್ಬರ ಬಳಿ ಹೇಳುವಿರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ್ದನ್ನು ಮಾಡಲು ಹೋಗಿ ಮುಖಭಂಗವಾಗಬಹುದು. ಸ್ತ್ರೀಯರಿಂದ ಸಂತೋಷವನ್ನು ಪಡೆಯುವಿರಿ.
ವೃಷಭ: ಇಂದು ನಿಮ್ಮ ಪ್ರಮುಖವಾದ ಅಂಶಗಳು ದೂರವಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬಹಬಹುದು. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಅಸಫಲರಾಗುವಿರಿ. ನಿಮ್ಮವರ ಮಾತು ನಿಮಗೆ ಅಸಮಾಧಾನವನ್ನು ತರಿಸಬಹುದು. ಕಂಡಿದ್ದನ್ನು ಹೇಳಿ ಕೆಂಗಣ್ಣಿಗೆ ಗುರಿಯಾಗಬಹುದು. ಸಮಾಜಸೇವೆ ನಿಮಗೆ ಸಾಕೆನಿಸಬಹುದು. ಸೋಲಿನಲ್ಲಿ ಸುಖವನ್ನು ಕಾಣುವಿರಿ. ಕೆಲವರ ಮಾತು ನಿಮ್ಮ ಉತ್ಸಾಹವನ್ನು ಕಡಿತ ಮಾಡೀತು. ಸಮ್ಮಾನದ ಅಪೇಕ್ಷೆ ಇರಲಿದೆ.
ಮಿಥುನ: ಗೌಪ್ಯತೆಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡುವಿರಿ. ಸುಗ್ರಾಸಭೋಜನವು ನಿಮಗೆ ಸಿಗಲಿದೆ. ನಿಮ್ಮ ಸಾಧನೆಯನ್ನು ಇನ್ನೊಬ್ಬರು ಹೇಳುವರು. ಸಹಜ ಸೌಂದರ್ಯಕ್ಕೆ ನೀವು ಮಾರುಹೋಗಬಹುದು. ಮನೆಯ ನಿರ್ಮಾಣಕ್ಕೆ ಮಕ್ಕಳಿಂದ ಹಣವನ್ನು ಪಡೆಯುವಿರಿ. ನಿಮ್ಮ ಆಲೋಚನೆಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ಕಲಾಸಕ್ತಿಯು ಮೂಡಬಹುದು. ಲೋಭಕ್ಕೆ ಸಿಕ್ಕಿ ನೀವು ಇಂದು ಅತೃಪ್ತರಂತೆ ಇರುವಿರಿ. ಕಾರ್ಯದಲ್ಲಿ ಮಗ್ನರಾಗಿ ಎಲ್ಲ ಕೆಲಸಗಳನ್ನು ಮುಗಿಸುವಿರಿ. ಸಹೋದ್ಯೋಗಿಗಳ ಜೊತೆ ಮಾಡುವ ತಮಾಷೆಯು ಜಗಳವಾಗಿ ಪರ್ಯವಸಾನ ಹೊಂದಬಹುದು.
ಕರ್ಕ: ವಿದೇಶೀ ವಿನಿಮಯವನ್ನು ನೀವು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಅಜ್ಞಾನದ ಪ್ರದರ್ಶನ ನೀವೇ ಮಾಡಿಕೊಳ್ಳುವಿರಿ. ಸಾಮರಸ್ಯದ ಜೊತೆ ಜೀವಿಸಲು ಇಷ್ಟಪಡುವಿರಿ. ತಮ್ಮವರು ಎನ್ನುವ ಮಮಕಾರವು ಹೆಚ್ಚಾಗಲಿದೆ. ನೀವು ಇಂದು ಯಾರ ಜೊತೆಯೂ ಸೇರಿಕೊಳ್ಳಲು ಇಷ್ಟಪಡುವುದಿಲ್ಲ. ತಪ್ಪನ್ನು ಇನ್ನೊಬ್ಬರಿಂದ ಕೇಳಿ ನೀವು ಸಿಟ್ಟಾಗುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಬರುವಂತೆ ಮಾತನಾಡುವಿರಿ. ಸಂಗಾತಿಯ ಮಾತನ್ನು ಸ್ವೀಕರಿಸುವ ಮನೋಭಾವವನ್ನು ಇಟ್ಟಕೊಳ್ಳುವುದು ಉತ್ತಮ. ಹರಟೆಯಲ್ಲಿ ಸಮಯವನ್ನು ಕಳೆಯುವಿರಿ. ಉದ್ವೇಗವು ನಿಮ್ಮ ನಿಯಂತ್ರಣವನ್ನು ತಪ್ಪಿಸಬಹುದು.
ಸಿಂಹ: ಉದ್ಯೋಗದ ಬದಲಾವಣೆಗೆ ಮನೆಯಿಂದಲೇ ಒತ್ತಡವು ಇರಲಿದೆ. ಬೇಡವೆಂದರೂ ಅಸಂಬದ್ಧ ಆಲೋಚನೆಗಳು ಬರಬಹುದು. ಶ್ರಮಕ್ಕೆ ಸ್ವಲ್ಪ ಫಲವು ಸಿಗಬಹುದು. ಕೆಲಸದಲ್ಲಿ ಆಸಕ್ತಿಯು ಕುಂದಬಹುದು. ನಿಮ್ಮ ಕಾರ್ಯಕ್ಕೆ ವಿರೋಧವು ಇರಲಿದೆ. ಹಳೆಯ ಪ್ರೇಯಸಿಯನ್ನು ಕಂಡು ಸಂಕಟಪಟ್ಟುಕೊಳ್ಳುವಿರಿ. ಉಸಿರಾಟ ತೊಂದರೆ ಬರಬಹುದು. ಭೋಜನವನ್ನು ಸಕಾಲಕ್ಕೆ ಮಾಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಮಾತುಗಳು ಸಂದರ್ಭಕ್ಕೆ ತಕ್ಕಂತೆ ಇರಲಿ. ಸಾಹಿತ್ಯಾಸಕ್ತರಿಗೆ ಸ್ವಲ್ಪ ಬಿಡುವು ಸಿಗಬಹುದು. ನಿಮಗೆ ಹಿಡಿಸದ ವಿಚಾರದ ಬಗ್ಗೆ ಮೌನವಹಿಸುವಿರಿ.
ಕನ್ಯಾ: ಕೆಟ್ಟವರ ಸಹವಾಸವು ಸಿಗಬಹುದು. ಸಮಯವನ್ನು ವ್ಯರ್ಥಮಾಡಿಕೊಂಡು ನೀವು ದುಃಖಿಸಬಹುದು. ನಿಮ್ಮ ಸಹಜತೆಯು ಅಸಹಜತೆಯಂತೆ ಕಾಣಲಿದೆ. ಗುತ್ತಿಗೆ ಕೆಲಸಗಳು ನಿಮಗೆ ಸಾಕೆನಿಸಬಹುದು. ಇಂದು ಅವ್ಯಕ್ತ ಭಯವು ನಿಮ್ಮನ್ನು ಕಾಡಬಹುದು. ಕೃಷಿಕರಿಗೆ ಆದಾಯದ ಮೂಲವು ಗೊತ್ತಾಗಬಹುದು. ಭೂಮಿಯ ಸ್ವಲ್ಪ ಭಾಗವನ್ನು ನಿರ್ಲಕ್ಷ್ಯದಿಂದ ಕಳೆದುಕೊಳ್ಳುವಿರಿ. ಬಂಧುವರ್ಗದಿಂದ ನೀವು ಧನಸಹಾಯವನ್ನು ಅಪೇಕ್ಷಿಸುವಿರಿ. ಅಂದುಕೊಂಡ ಕೆಲಸವು ಆಗದೇ ನಿಮಗೆ ಹತಾಶೆ ಆಗಬಹುದು. ಶ್ರೀಮಂತರ ಸ್ನೇಹವು ಲಭಿಸುವುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸುವಿರಿ.
ತುಲಾ: ಆಸ್ತಿಯನ್ನು ಮಕ್ಕಳಿಗೆ ಹಂಚುವ ತೀರ್ಮಾನವು ನಿಮ್ಮದಾಗಲಿದೆ. ಮಕ್ಕಳಿಗೆ ಇದರಿಂದ ಬೇಸರವಾದೀತು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ಸಂತೋಷವಾಗಲಿದೆ. ವ್ಯಾಪಾರದಲ್ಲಿ ನಿಮಗೆ ಜನರ ಆಕರ್ಷಣೆ ಮಾಡುವುದು ಅಭ್ಯಾಸವಾಗುವುದು. ನಿಮ್ಮ ಅಸಮಾಧಾನವನ್ನು ಹೊರಹಾಕಲು ಸ್ಥಳವನ್ನು ನೋಡಿಕೊಳ್ಳಿ. ಕಛೇರಿಯು ಸೂಕ್ತ ಸ್ಥಳವಲ್ಲ. ತಂದೆಯ ಮೇಲೆ ನಿಮ್ಮ ಗೌರವವು ಅಧಿಕಾಗುವುದು. ಹಿರಿಯರ ಮಾರ್ಗದರ್ಶನವನ್ನು ನೀವು ಪಡೆಯುವ ಮನಸ್ಸಾದೀತು. ಆಂತರಿಕ ಕಲಹವನ್ನು ಬಿಟ್ಟುಕೊಡುವುದು ಬೇಡ. ಶತ್ರುಗಳು ಇದನ್ನು ಬಳಸಿಕೊಳ್ಳಬಹುದು.
ವೃಶ್ಚಿಕ: ಮನಸ್ಸಿಗೆ ಬೇರಸವಾಗುವ ಸಂಗತಿಗಳನ್ನು ದೂರವಿಡುವುದು ಒಳ್ಳೆಯದು. ಇಲ್ಲವಾದರೆ ಬೇಸರವನ್ನು ಮಾಡಿಕೊಳ್ಳುವುದು ಬೇಡ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಕನಸನ್ನು ನನಸು ಮಾಡಿಕೊಳ್ಳಲು ನೀವು ಪ್ರಯತ್ನಿಸುವಿರಿ. ಸರ್ಕಾರಿ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸುವಿರಿ. ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ. ನಿಮಗೆ ಅಗತ್ಯವಿದ್ದರೆ ಮಾತ್ರ ಖರೀದಿಸಿ. ಹಣವನ್ನು ವೃಥಾ ಖಾಲಿ ಮಾಡುವುದು ಬೇಡ. ಸ್ನೇಹಿತರ ಜೊತೆ ಪ್ರಯಾಣವನ್ನು ಮಾಡುವ ಮನಸ್ಸಾದೀತು. ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ ಅಲೋಚನಾ ವಿಧಾನವು ಮಂದಗತಿಯಲ್ಲಿ ಸಾಗುವುದು.
ಧನುಸ್ಸು: ಹಿರಿಯರ ಅನುಕೂಲಕ್ಕಾಗಿ ನಿಮ್ಮ ಕಾರ್ಯಗಳನ್ನು ಬದಲಿಸಿಕೊಳ್ಳುವಿರಿ. ಸ್ನೇಹಿತ ಒಡನಾಟದಿಂದ ದುಶ್ಚಟವನ್ನು ಕಲಿಯುವಿರಿ. ವಿದ್ಯಾಭ್ಯಾಸಕ್ಕೆಂದು ಮನೆಯಿಂದ ಹಣವನ್ನು ಪಡೆದು ಅನ್ಯಕಾರ್ಯಕ್ಕೆ ಬಳಸುವಿರಿ. ನಂಬಿಕೆಯನ್ನು ಕಳೆದುಕೊಳ್ಳುವಿರಿ. ಉದ್ಯಮವನ್ನು ಮುನ್ನಡೆಸಲು ನಿಮಗೆ ಕಷ್ಟವಾದೀತು. ಒಂದೊಂದೇ ಸಮಸ್ಯೆಗಳನ್ನು ಎದುರಿಸಿ ನೀವು ಸೋಲುವಿರಿ. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಬೆಲೆಯು ಕಡಿಮೆ ಆಗಬಹುದು. ಸಮಾರಂಭಗಳಗೆ ಆಹ್ವಾನ ಬರಬಹುದು. ಹೊಸ ಸಾಧ್ಯತೆಯತ್ತ ನಿಮ್ಮ ಗಮನ ಇರಲಿದೆ. ಸಂತೋಷದ ಸಂಗಾತಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ.
ಮಕರ: ಭವಿಷ್ಯವನ್ನು ಕಲ್ಪಿಸಿಕೊಂಡು ದಾಂಪತ್ಯದಲ್ಲಿ ಬಿರುಕುಗಳು ಕಡಿಮೆಯಾಗಬಹುದು. ಸಹೋದರರು ಸೇರು ಕೊಂಡು ಹೊಸ ಉದ್ಯೋಗದ ಪ್ರಾರಂಭಕ್ಕೆ ಅಣಿಯಾಗುಬಿರಿ. ಪಿತ್ರಾರ್ಜಿತ ಆಸ್ತಿಯು ದೊರೆಯಬಹುದು. ಸ್ನೇಹಿತರು ನಿಮ್ಮ ಜೊತೆ ಜಗಳವಾಡಿ ದೂರವಾಗಬಹುದು. ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಜೋಡಿಸುವುದು ನಿಮಗೆ ಇಂದು ಕಷ್ಟವಾದೀತು. ನಿಮ್ಮ ಮಾರ್ಗದರ್ಶನವನ್ನು ಬಯಸುವರು. ವಾತಾವರಣದ ಬದಲಾವಣೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಪ್ರತ್ಯೇಕವಾಗಿ ಇರಲು ಬಯಸುವಿರಿ. ನಿಮ್ಮ ಶ್ರಮವು ವ್ಯರ್ಥವಾದಂತೆ ತೋರುವುದು.
ಕುಂಭ: ನಿಮ್ಮ ಮಾತುಗಳಿಂದ ಕುಟುಂಬದಲ್ಲಿ ಆತಂಕವು ಉಂಟಾಗಬಹುದು. ಸಾಧಿಸಲು ಹೋಗಿ ಸಂಬದ್ಧವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಹನದಿಂದ ಶರೀರಕ್ಕೆ ನೋವಾಗುವ ಸಾಧ್ಯತೆ ಇದೆ. ಜಾಡ್ಯವು ನಿಮ್ಮನ್ನು ಬಿಡದೇ ನಿಮ್ಮಿಂದ ಏನೂ ಸಾಧ್ಯವಾಗದು. ನಿಮಗೆ ಪೂರಕವಾದ ವಾತಾವರಣದಲ್ಲಿ ಇರಲು ನೀವು ಇಷ್ಟಪಡುವಿರಿ. ಸಹೋದರರ ಜೊತೆ ಸಣ್ಣ ವಿಷಯಕ್ಕೂ ವಾದವನ್ನು ಮಾಡುವಿರಿ. ನಿಮ್ಮದೇ ಉದ್ಯೋಗದ ಅವಶ್ಯಕತೆ ಇಂದು ನಿಮಗೆ ಎದ್ದು ತೋರುವುದು. ಧಾರ್ಮಿಕ ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರಳವಾದ ಜೀವನವನ್ನು ಕಳೆಯುವ ಬಯಕೆ ಆಗುವುದು.
ಮೀನ: ಬೇರೆ ಬೇರೆ ಕಾರ್ಯಗಳ ಒತ್ತಡದಿಂದ ನಿಮ್ಮ ಮುಖ್ಯ ಕೆಲಸವು ನಿಧಾನವಾಗುವುದು. ನೂತನ ವಾಹನವನ್ನು ಖರೀದಿಸುವ ಆಲೋಚನೆಗಳು ಇರಲಿದೆ. ಸ್ನೇಹಿತರ ಸಂಪಾದನೆಯನ್ನು ಮಾಡುವಿರು. ಅಧಿಕಾರದ ಮಾತುಗಳನ್ನು ನೀವು ಆಡಿಲಿದ್ದು ಅಹಂಕಾರದಂತೆ ತೋರುವುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಕಾರವನ್ನು ಕೊಡುವಿರಿ. ಸಂಬಂಧಗಳನ್ನು ಬೆಳೆಸಿಕೊಳ್ಳುವುದು ನಿಮಗೆ ಇಷ್ಟವಾದೀತು. ಹಣಕಾಸಿನ ವಿಚಾರದಲ್ಲಿ ನೀವು ನಿಮ್ಮ ಕ್ರಮವು ಸರಿ ಇರಲಿದೆ. ಮನಸ್ಸಿಗೆ ಬಂದಿದ್ದನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವುದು ಇಂದು ಒಳ್ಳೆಯದಲ್ಲ.