AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಒಂದಿಲ್ಲೊಂದು ಕೆಲಸದಲ್ಲಿ ಹೆಚ್ಚು ಮಗ್ನರಾಗಿರುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 26: ಇಷ್ಟ ಮಿತ್ರರ ಜೊತೆ ಸಮಯವನ್ನು ಕಳೆಯುವಿರಿ. ಅಸೂಯೆಯ ಕಾರಣ ಯಾವ ಸಂತೋಷವ‌ನ್ನೂ ನೀವು ಪೂರ್ಣವಾಗಿ ಅನುಭವಿಸಲಾರಿರಿ. ಬಂಧುಗಳ ಮಾತು ನಿಮ್ಮ ಸಿಟ್ಟಿಗೆ ಕಾರಣವಾಗಬಹುದು. ನಿರಂತರ ಒಂದಲ್ಲ ಒಂದು ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಹಾಗಾದರೆ ಸೆಪ್ಟೆಂಬರ್​ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಒಂದಿಲ್ಲೊಂದು ಕೆಲಸದಲ್ಲಿ ಹೆಚ್ಚು ಮಗ್ನರಾಗಿರುವಿರಿ
ಈ ರಾಶಿಯವರು ಒಂದಿಲ್ಲೊಂದು ಕೆಲಸದಲ್ಲಿ ಹೆಚ್ಚು ಮಗ್ನರಾಗಿರುವಿರಿ
TV9 Web
| Edited By: |

Updated on: Sep 26, 2024 | 12:05 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:54 ರಿಂದ ಸಂಜೆ 03:24, ಯಮಘಂಡ ಕಾಲ ಬೆಳಿಗ್ಗೆ 06:23ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:54 ರ ವರೆಗೆ.

ಸಿಂಹ ರಾಶಿ: ನಿಮಗೆ ಇಂದು ಏನಾದರೂ ಹೊಸತನ್ನು ಮಾಡುವ ಉದ್ದೇಶವಿರುವುದು. ಇಂದು ನಿಮ್ಮ ಕರ್ತವ್ಯಗಳನ್ನು ಮರೆಯು ಸಾಧ್ಯತೆ ಇದ್ದು, ಯಾರೋ ಅದನ್ನು ನೆನಪಿಸಬೇಕಾದೀತು. ಹೂಡಿಕೆಯನ್ನು ಮಾಡಿ ಹೊಸ ಚಿಂತೆಯನ್ನು ತಂದುಕೊಳ್ಳುವಿರಿ. ಇಷ್ಟ ಮಿತ್ರರ ಜೊತೆ ಸಮಯವನ್ನು ಕಳೆಯುವಿರಿ. ಅಸೂಯೆಯ ಕಾರಣ ಯಾವ ಸಂತೋಷವ‌ನ್ನೂ ನೀವು ಪೂರ್ಣವಾಗಿ ಅನುಭವಿಸಲಾರಿರಿ. ಬಂಧುಗಳ ಮಾತು ನಿಮ್ಮ ಸಿಟ್ಟಿಗೆ ಕಾರಣವಾಗಬಹುದು. ನಿರಂತರ ಒಂದಲ್ಲ ಒಂದು ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗಬಹಿಸುವಿರಿ. ನಿಮಗೆ ಬರಬೇಕಾದ ಹಣವನ್ನು ಕೇಳಿ ಪಡೆಯುವಿರಿ. ನಿಮ್ಮ ಸ್ಥಾನವನ್ನು ನೀವು ಬಿಟ್ಟಕೊಡುವಿರಿ. ಮತ್ತೆ ಆರೋಗ್ಯವು ಕಡೆವುದು ನಿಮಗೆ ಕಷ್ಟವಾಗುವುದು. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ಮಿತ್ರರ ಜೊತೆ ಮನೋರಂಜನೆಗೆ ತೆರಳುವಿರಿ.

ಕನ್ಯಾ ರಾಶಿ: ಇಂದು ನೀವು ನಿಮ್ಮ ಪ್ರತಿಬಂಧವನ್ನು ಮೀರಿ ತೊಂದರೆ ಪಡುವಿರಿ. ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮರೆಯಬಹುದು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಹೊಸ ವಸ್ತುಗಳು ನಿಮಗೆ ಖುಷಿಯನ್ನು ಕೊಟ್ಟೀತು. ಆರ್ಥಿಕ ವ್ಯವಹಾರವು ನಿಮ್ಮ ಪರವಾಗಿ ಇರುವುದು. ದಾಂಪತ್ಯದಲ್ಲಿ ಅಸಹಜ‌ ಮಾತುಕತೆಗಳು ಕಿರಿಕಿರಿಯನ್ನು ತಂದೀತು. ಶುಭ ಸಮಾಚಾರದ ನಿರೀಕ್ಷೆಯಲ್ಲಿ ನೀವು ಇರುವಿರಿ. ಕರ್ತವ್ಯದಲ್ಲಿ ನೀವು ಇಂದು ನಿರತರಾಗಿರುವಿರಿ. ಪ್ರೇಮ ಸಂಬಂಧವು ದಾರಿತಪ್ಪಬಹುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಅಧಿಕಲಾಭವೂ ಆಗದು. ಸಾತ್ತ್ವಿಕ ವಿಚಾರದ ಕಡೆ ನಿಮ್ಮ ಗಮನವು ಹೋಗುವುದು.

ತುಲಾ ರಾಶಿ: ಇಂದು ನಿಮ್ಮಲ್ಲಿ ಉತ್ಸಾಹವಿದ್ದು ನೀವೇ ಸ್ವತಃ ಜವಾಬ್ದಾರಿಯನ್ನು ಪಡೆಯುವಿರಿ. ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾಗುವುದು. ನಿಮ್ಮ ವ್ಯಕ್ತತ್ವಕ್ಕೆ ಕಳಂಕವನ್ನು ಶತ್ರುಗಳು ಮಸಿ ಬಳಿಯಬಹುದು. ಬೆನ್ನು ನೋವು ನಿಮ್ಮ ಯಾವ ಕೆಲಸವನ್ನೂ ಮಾಡಲು ಕೊಡದು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡಲಿದ್ದೀರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಅತಿಯಾದ ಆಸೆ ಬೇಡ. ಕೂಡಿಟ್ಟ ಹಣವನ್ನು ನೀವು ಇಂದು ಬಿಡಿಸಿಕೊಳ್ಳುವಿರಿ. ನಿಮ್ಮ ನೋವಿಗೆ ಅಪರಿಚಿತರು ಸ್ಪಂದಿಸಬಹುದು.‌ ಸಂಗಾತಿಯ ಜೊತೆ ಹಳೆ ವಿಚಾರಗಳನ್ನು ಮಾತನಾಡುವಿರಿ. ಅಪರೂಪಕ್ಕೆ ಸಿಕ್ಕ ಆಹಾರವನ್ನು ಮಿತವಾಗಿ ಸೇವಿಸಿ, ಆರೋಗ್ಯವನ್ನು ಕಾಅಡಿಕೊಳ್ಳಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಹವ್ಯಾಸಗಳು ನಿಮಗೆ ಪ್ರಯೋಜನವನ್ನು ಕೊಡುತ್ತದೆ. ಇಂದು ಖರೀದಿಸಿದ ಹೊಸ ವಸ್ತುವಿನಿಂದ ನಿಮಗೆ ಖುಷಿಯಾಗುವುದು.

ವೃಶ್ಚಿಕ ರಾಶಿ: ವ್ಯಾವಹಾರಿಕ ಸಂಬಂಧವನ್ನು ಹಾಗೆಯೇ ಇಟ್ಟುಕೊಂಡರೆ ಒಳ್ಳೆಯದು. ನಿಮ್ಮ ಮಕ್ಕಳ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ವ್ಯಾಪರವು ನಷ್ಟವಾದರೂ ತಾಳ್ಮೆಯಿಂದ ಇದ್ದು ಇದನ್ನು ಮುಂದುವರಿಸಿ. ಮೂರನೇ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬಯಸುವಿರಿ. ವಿದೇಶವನ್ನು ಸುತ್ತುವ ಮನಸ್ಸಾಗುವುದು. ಆರ್ಥಿಕತೆಯನ್ನು ಸುಸ್ಥಿರ ಮಾಡಿಕೊಳ್ಳಲು ದೇಹವನ್ನು ದಂಡಿಸಬೇಕಾಗುವುದು. ಆಯಾಸದಂತೆ ನಿಮಗೆ ಅನ್ನಿಸೀತು. ನೆಮ್ಮದಿಗಾಗಿ ದೇವಾಲಯಕ್ಕೆ ಹೋಗಬಹುದು. ನಿಮ್ಮ ನಿರೀಕ್ಷೆಯಲ್ಲಿ ಕೆಲವು ಫಲಿಸಬಹುದು. ಅನಾಯಾಸವಾಗಿ ಫಲವನ್ನು ಪಡೆಯಲು ಬಯಸುವುದು ಸರಿಯಲ್ಲ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಸ್ವಾಲಂಬಿಯಾಗುವುದು ಕೂಡಲೇ ಕಷ್ಟ. ಅಮಂಗಲವಾದ ಕಾರ್ಯಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ. ರಾಜಕೀಯ ಏರಿಳಿತದಿಂದ ನಿಮ್ಮ ನಿರ್ಧಾರವು ಸರಿಯಾಗದು.

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ