Horoscope Today May 01 2024: ಬುಧವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

2024 ಮೇ 01ರ ದಿನ ಭವಿಷ್ಯ: ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಮಂಗಳವಾರದ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today May 01 2024: ಬುಧವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 30, 2024 | 6:31 PM

ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮೇ​​​​​ 01 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ12:30 ರಿಂದ 02:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:46 ರಿಂದ 09:21 ರ ವರೆಗೆ, ಗುಳಿಕ ಕಾಲ 10:55 ರಿಂದ 12:30ರ ವರೆಗೆ

ಮೇಷ ರಾಶಿ : ನಿಮ್ಮನ್ನು ನೀವು ಪ್ರಶಂಸಿಸುವುದರಲ್ಲಿ ಅರ್ಥವಿಲ್ಲ. ಉಪಯೋಗಕ್ಕೆ ಬಾರದ ಕೆಲಸವನ್ನು ಬಿಟ್ಟುಬಿಡುವುದು ಒಳ್ಳೆಯದು. ಮಂಗಲಕರವಾದ ಕಾರ್ಯಗಳನ್ನು ಮಾಡಲಿದ್ದೀರಿ. ಸ್ವಲ್ಪ ಆಯಾಸವು ಬಾಧಿಸಬಹುದು. ತಕ್ಕ ವಿಶ್ರಾಂತಿಯಿಂದ ಪರಿಹಾರವನ್ನು ಮಾಡಿಕೊಳ್ಳಿ. ನಿಮ್ಮ ಬುದ್ಧಿಯನ್ನು ಬೇಕಾದ ಕಡೆ ಉಪಯೋಗಿಸಿ. ಭೂಮಿಯ ವ್ಯವಹಾರದ ಬಗ್ಗೆ ತಾತ್ಸಾರವು ಯಾರದೋ ಕಾರಣಕ್ಕೆ ಬರಬಹುದು. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಕೆಲವನ್ನು ನೀವು ಮನಸ್ಸಿನಿಂದ ತೆಗೆದರಷ್ಟೇ ನೆಮ್ಮದಿ ಸಾಧ್ಯ.

ವೃಷಭ ರಾಶಿ : ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗುವುದು ನಿಮ್ಮ‌ ಸಂತೋಷಕ್ಕೆ ಕಾರಣವಾಗುತ್ತದೆ. ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ಅಧಿಕವಾದ ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಸಾಮರ್ಥ್ಯ ಮತ್ತು ಸಂಪತ್ತಿಗೆ ಅನುಸಾರವಾಗಿ ಯೋಚನೆ ಹಾಗೂ ಯೋಜನೆಗಳು ಇರಲಿ. ಅನಿರೀಕ್ಷಿತ ಬಂಧುಗಳ ಆಗಮನದಿಂದ ನಿಮ್ಮ ಕಾರ್ಯಕ್ಕೆ ತೊಂದರೆಯಾದರೂ ತೋರಿಸಿಕೊಳ್ಳಲು ಹೋಗದೇ ಸಂತೋಷದಿಂದ ಇರುವಿರಿ. ನಿಮ್ಮ ಆಸ್ತಿಕತೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಬಳಿ ಯಾರೂ ವಾದ‌ಮಾಡಬಾರದು ಎನ್ನಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಕೆರಳಿಸುವ ಸ್ವಭಾವವನ್ನು ಬಿಡುವುದು ಉತ್ತಮ.

ಮಿಥುನ ರಾಶಿ : ಪಕ್ಷಪಾತದ ಧೋರಣೆಯನ್ನು ನೀವು ಸಹಿಸಲಾರಿರಿ. ನಿಮಗೆ ಬೇಕಾದ ಸಲಹೆ ಸಹಕಾರಗಳು ಸಿಗಲಿವೆ. ಬಂಧುಗಳ ಮಾತು ಕಹಿ ಎನಿಸಬಹುದು. ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ಆಪ್ತರ ಮಾತುಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು.‌ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವು ನಿಮ್ಮ ನಿತ್ಯಮಂತ್ರವಾಗಲಿ. ವ್ಯವಹಾರದಲ್ಲಿ ಶುದ್ಧರಾಗಿರಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಎಲ್ಲದಕ್ಕೂ ಇನ್ನೊಬ್ಬರನ್ನು ಬೊಟ್ಟು ಮಾಡುವುದು ಸರಿಯಾಗದು.‌ ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.

ಕಟಕ ರಾಶಿ : ಎಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ನಿರ್ಣಯಿಸುವುದು ಕಷ್ಟವೇ ಆದೀತು. ಹಳೆಯ ಸಿಟ್ಟನ್ನು ನೆನಪಿಸಿಕೊಂಡು ದ್ವೇಷವನ್ನು ಸಾಧಿಸುವ ಕೆಲಸವನ್ನು ಮಾಡಬೇಡಿ. ಭೂಮಿಯ ವ್ಯವಹಾರದ ಕಾರಣಕ್ಕೆ ಹೆಚ್ಚು ಓಡಾಟವನ್ನು ಮಾಡಬೇಕಾಗಿ ಬರಬಹುದು. ನಿಮ್ಮ ಪ್ರಭಾವವು ಜೊತೆಗಾರರಿಗೆ ಗೊತ್ತಾಗಲಿದೆ. ನಿಮ್ಮ ಸಹಾಯಕ್ಕೆ ಬರುವವರನ್ನು ಗೌರವಿಸಿ. ಸರಿಯಾದ ಸ್ಥಾನವನ್ನೂ ಕೊಡಬೇಕಾಗುವುದು. ಅನಿವಾರ್ಯತೆಯಿಂದ ಹಣವನ್ನು ಖರ್ಚುಮಾಡಬೇಕಾಗಿ ಬರುವುದು ಸ್ವಲ್ಪಮಟ್ಟಿಗೆ ಅಳುಕಿರುವುದು. ಅದನ್ನು ಗಮನಿಸಿಕೊಂಡು ಮಾಡಬೇಕಾದ ಕೆಲಸದಕಡೆ ಗಮನ ಹರಿಸಿ. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಕಾನೂನಾತ್ಮಕ ವಿಚಾರವು ನಿಮಗೆ ಅರ್ಥವಾಗದಿರಬಹುದು.

ಸಿಂಹ ರಾಶಿ : ಮನೆಯ ನಿರ್ಮಾಣದ ಕಾರ್ಯಕ್ಕೆ ಯಾರಿಂದಲಾದರೂ ತೊಂದರೆ ಬರಬಹುದು. ಯಾರಾದರೂ ನಿಮ್ಮ ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸದೇ ತೊಂದರೆಗಳನ್ನು ಕೊಡಬಹುದು. ಅದಕ್ಕೆ ಬೇಕಾದ ಕಾನೂನಿನ ಹಾದಿಯನ್ನು ಅನುಸರಿಸಿ ಸರಿಮಾಡಿಕೊಳ್ಳಿ. ನಿಮ್ಮಿಂದಾಗದ ಕಾರ್ಯವನ್ನು ಬೇರೆಯವರು ಮಾಡಿ ತೋರಿಸುವುದು ನಿಮಗೆ ಅಪಮಾನಕರವೆನಿಸವುದು. ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ವಿವಾಹದ ಬಗ್ಗೆ ಎಲ್ಲರೂ ನಿಮ್ಮನ್ನು ಪ್ರಶ್ನಿಸುವರು. ಮುಜುಗರಕ್ಕೆ ಸಿಕ್ಕಿಕೊಳ್ಳಬೇಕಾದೀತು.

ಕನ್ಯಾ ರಾಶಿ : ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ‌. ಸಂಗಾತಿಯಿಂದ ಅಪಮಾನವೂ ಆಗಬಹುದು. ಬೇಕಾದುದನ್ನು ಯಾರದೋ ಮೂಲಕ ಪಡೆಯುವುದು ಅನಿವಾರ್ಯವಾಗಬಹುದು. ಕಾಲಾನಂತರ ನಿಮಗೆ ಉತ್ತಮವಾದ ಫಲವನ್ನೇ ನೀಡುವುದು. ತಿಳಿದುಕೊಳ್ಳುವ ಕುತೂಹಲವು ನಿಮ್ಮಲಿಂದು ಅಧಿಕವಾಗಿರುವುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಕೋಪದಿಂದ ಎಲ್ಲವನ್ನೂ ಸಾಧಿಸಲಾಗದು. ಅದರ ಅರಿವಿರಲಿ. ವಿದ್ಯುತ್ ಗೆ ಸಂಬಂಧಿಸಿದ ಕಾರ್ಯದಲ್ಲಿ ಲಾಭವಿರಲಿದೆ.

ತುಲಾ ರಾಶಿ : ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ನಿಮ್ಮನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಮುಂದಿನ ಹೆಜ್ಜೆಯನ್ನು ಇಡುವಾಗ ಜಾಗರೂಕರಾಗಿರಿ. ಸೋಲಬಾರದು ಎಂಬ ಛಲವು ಇದ್ದು ಕಾರ್ಯವನ್ನು ಮಾಡುವಿರಿ. ಮಾನಸಿಕ ಸ್ಥಿತಿಯು ಶಾಂತವಾಗುವ ತನಕ ವಿರಾಮವನ್ನೂ ಪಡೆದು ಸ್ವಲ್ಪ ಆರಾಮದಾಯಕವಾದ ಸ್ಥಳಕ್ಕೆ ಹೋಗಿ ಬನ್ನಿ. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು. ‌ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು.

ವೃಶ್ಚಿಕ ರಾಶಿ : ನೀವಿಂದು ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ನಿಮ್ಮೊಳಗೆ ಇಂದು ವಿಚಿತ್ರವಾದ ಕೆಲವು ಆಲೋಚನೆಗಳು ಬರಲಿದ್ದು, ನಿಮಗೇ ಆಶ್ಚರ್ಯವೆನಿಸುವಂತೆ ಮಾಡುವುದು. ತಂದೆ ಮತ್ತು ತಾಯಿಯರು ನಿಮಗೆ ಹಿತವಚನವನ್ನು ಹೇಳುವರು. ಆಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಿ. ರಕ್ಷಣೆಗೆ ಸಂಬಂಧಿಸಿದ ಯಾವುದಾದರೂ ಉದ್ಯೋಗವು ಸಿಗಬಹುದು. ವ್ಯವಹಾರವನ್ನು ಬಂಧುಗಳ ಜೊತೆ ಮಾಡಬೇಡಿ. ಎಲ್ಲಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಲಿದ್ದೀರಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಹೊಸ ವಸ್ತುಗಳನ್ನು ನೀವು ಯಾರದೋ ಮೂಲಕ ಪಡೆದುಕೊಳ್ಳುವಿರಿ. ಅಶ್ರದ್ಧೆಯನ್ನು ತೋರಿಸುವುದು ಬೇಡ.

ಧನು ರಾಶಿ : ಇಂದು ಹಣದ ಅಗತ್ಯತೆಗಳು ತುಂಬಾ ಇರಲಿವೆ. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಖರ್ಚನ್ನು ಕಡಿಮೆಮಾಡಿಕೊಳ್ಳುವ ವಿಚಾರದಲ್ಲಿ ಚಿಂತಿಸುವುದು ಉತ್ತಮ. ಬಂಧುಗಳಿಂದ ನಿಮಗೆ ಬೇಕಾದುದು ಸಿಗದೇಹೋಗಬಹುದು. ಅದಕ್ಕೋಸ್ಕರ ಸಿಟ್ಟಾಗುವುದು ಬೇಡ. ಅನಗತ್ಯವಾದ ಖರ್ಚು ಅಗತ್ಯದ ವಸ್ತುಗಳನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಬಂಧುಗಳು ನಿಮ್ಮ ನಡೆತೆಯಿಂದ ದೂರವೂ ಹೋಗಬಹುದು ಅಥವಾ ನಿಮ್ಮಿಬ್ಬರ ನಡುವೆ ಕಲಹವೂ ಆಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು.

ಮಕರ ರಾಶಿ : ಇಂದಿನ‌ ನಿಮ್ಮ ದುಡಿಮೆಯನ್ನು ಸರಿಯಾದ ಕ್ರಮದಲ್ಲಿ ವಿನಿಯೋಗಿಸುವಿರಿ. ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಮಕ್ಕಳಿಂದ ನಿಮಗೆ ಖುಷಿಯಾಗಲಿದೆ. ಕುಟುಂಬವು ಯಾವತ್ತೂ ಇರುವಂತೆ ನಿಮ್ಮ ಬೆಂಬಲಕ್ಕೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಾವ ಪ್ರತ್ಯುತ್ತರವನ್ನೂ ಬಯಸದೇ ಮಾತನಾಡುವ ನಿಮ್ಮ ವಾಚಾಳಿತನವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಿ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಉನ್ನತವಾದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆದಂತೆ ಅನಿಸುವುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ.

ಕುಂಭ ರಾಶಿ : ಕಷ್ಟಗಳು ನಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರುತ್ತದೆ. ದುಡುಕಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ನಿಮಗೆ ಕೊಡುವ ಭರವಸೆಯು ನಿಮ್ಮಲ್ಲಿ ಬಲವನ್ನು ತರುವುದು. ಸಹೋದರರು ನಿಮಗೆ ಬೇಕಾದ ಸಲಹೆಗಳನ್ನು ಕೊಡುವರು. ಇಷ್ಟವಿಲ್ಲದಿದ್ದರೂ‌ ಅನಿವಾರ್ಯವಾಗಿ ಕೇಳಬೇಕಾದೀತು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು.

ಮೀನ ರಾಶಿ : ನಿಮ್ಮದಾದುದನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ಅಡ್ಡಿಗಳು ಇರಲಿವೆ. ಇರುವುದರಲ್ಲಿ ಖುಷಿಪಡುವುದು ಉತ್ತಮ. ಭೂಮಿಯ ಕ್ರಯ ಹಾಗೂ ವಿಕ್ರಯದ ವಿಚಾರದಲ್ಲಿ ನಿಮಗೆ ಲಾಭವಂತೂ ಸಿಗಲಿದೆ. ಕೃಷಿ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. ಸಂಗಾತಿಯ ಜೊತೆ ಖುಷಿಯಿಂದ ಇರಲಿದ್ದೀರಿ. ಯಾರೋ ಬಂದು ನಿಮ್ಮ ದಾಂಪತ್ಯದಲ್ಲಿ ಹುಳಿಯನ್ನು ಹಿಂಡುವ ಸಾಧ್ಯತೆ ಇದೆ. ನಂಬಿಕೆಯು ಶುದ್ಧವಾಗಿರಲಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 6:31 pm, Tue, 30 April 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ