ನಿತ್ಯ ಭವಿಷ್ಯ : ಇಂದು ಈ ರಾಶಿಯವರ ದೌರ್ಬಲ್ಯದಿಂದ ಕುಟುಂಬದಲ್ಲಿ ಒಡಕು…

ಇಂದಿನ ಶಾಲಿವಾಹನ ಶಕ 1949ರ ದಕ್ಷಿಣಾಯನ, ಕಾರ್ತಿಕ ಮಾಸದ ರಾಶಿ ಭವಿಷ್ಯವು ನಿಮ್ಮ ವೃತ್ತಿ, ಆರ್ಥಿಕ ಸ್ಥಿತಿ, ಆರೋಗ್ಯ ಮತ್ತು ಪ್ರೇಮ ಜೀವನದ ಕುರಿತು ವಿವರವಾದ ಅನ್ವೇಷಣೆಯನ್ನು ನೀಡುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ದೈನಂದಿನ ಯಶಸ್ಸು, ಆರೋಗ್ಯದ ಏರುಪೇರು, ಆರ್ಥಿಕ ರಹಸ್ಯಗಳು, ಮತ್ತು ಸ್ವೋದ್ಯೋಗದ ಅವಕಾಶಗಳ ಕುರಿತು ತಿಳಿಯಿರಿ. ನಿಮ್ಮ ದಿನವನ್ನು ಉತ್ತಮವಾಗಿ ಯೋಜಿಸಲು ಸಹಕಾರಿಯಾದ ಮಾರ್ಗದರ್ಶನ ಇಲ್ಲಿದೆ.

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ದೌರ್ಬಲ್ಯದಿಂದ ಕುಟುಂಬದಲ್ಲಿ ಒಡಕು...
ಸಾಂದರ್ಭಿಕ ಚಿತ್ರ
Edited By:

Updated on: Nov 28, 2026 | 3:16 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಶನಿವಾರದಂದು ಯಶಸ್ವೀ ಅನ್ವೇಷಣೆ, ಪ್ರಚಾರ, ಆರೋಗ್ಯದಲ್ಲಿ ಏರುಪೇರು, ಕನಿಕರ, ಆರ್ಥಿಕ ರಹಸ್ಯ ಬಯಲು, ಸ್ವೋದ್ಯೋಗಕ್ಕೆ ಒತ್ತು ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸಿದ್ಧ, ಕರಣ : ಬವ, ಸೂರ್ಯೋದಯ – 06 – 25 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:17 – 10:42, ಯಮಗಂಡ ಕಾಲ 13:33 – 14:59, ಗುಳಿಕ ಕಾಲ 06:26 – 07:51

Loading...

ಮೇಷ ರಾಶಿ :
ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಲಿದೆ. ಇಂದು ಕಾರ್ಯದಲ್ಲಿ ಸ್ವಲ್ಪ ಒತ್ತಡವು ಇರಲಿದೆ. ನಿಮಗೆ ಕೊಟ್ಟ ಸಣ್ಣ ಕೆಲಸವನ್ನೂ ಶಿಸ್ತು ಹಾಗೂ ಉತ್ಸಾಹದಿಂದ ಮಾಡುವಿರಿ.

ವೃಷಭ ರಾಶಿ :
ನಿಮ್ಮ ಅಸತ್ಯಗಳನ್ನು ಜನರು ಎಂದಿನಂತೆ ನಂಬಲಾರರು. ಇಂದು ನಿವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥ‌ಮಾಡುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಪ್ರೀತಿಯಲ್ಲಿ ನೀವು ಅಂದುಕೊಂಡ ಬದಲಾವಣೆ ಆಗದು. ನಿಮ್ಮ ವಿರುದ್ಧ ನಡೆಯುವ ತಂತ್ರವನ್ನು ನೀವು ಅರಿತುಕೊಳ್ಳುವಿರಿ. ನಿಮ್ಮ ಸಿದ್ಧಾಂತದ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು.

ಮಿಥುನ ರಾಶಿ :
ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿ ಇರಲಿ. ಆಗಬೇಕಾದ ವಿವಾಹವನ್ನು ತಪ್ಪಿಸುವ ಸಾಧ್ಯತೆ ಇದೆ. ಬೇಕಾದ ವಸ್ತುವನ್ನು ಯಾರಿಗಾದರೂ ಕೊಟ್ಟು ಕಳೆದುಕೊಳ್ಳುವಿರಿ.

ಕರ್ಕಾಟಕ ರಾಶಿ :
ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೋಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು ಇಂದು. ಕಾರ್ಯದಲ್ಲಿ ಆಗುವ ವ್ಯತ್ಯಸದಿಂದ ಕೋಪಗೊಳ್ಳುವುದು ಬೇಡ. ಒಂದು ನಾಣ್ಯಕ್ಕೆ ಎರಡು ಮುಖಗಳು. ಪ್ರೀತಿಯಲ್ಲಿ ಗೊಂದಲ ನಿವಾರಿಸಿಕೊಂಡು ಸಂಬಂಧ ಮೃದುಗೊಳ್ಳುತ್ತದೆ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಿ.

ಸಿಂಹ ರಾಶಿ :
ನಿಮಗೆ ಸಕಾಲಕ್ಕೆ ಸಿಗುವ ಸಹಾಯದಿಂದ ಸಂತೋಷ. ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಪ್ರೀತಿಯಲ್ಲಿ ಆಳವಾದ ಆತ್ಮೀಯತೆ ಹೆಚ್ಚಿ ಸಂಬಂಧ ಗಾಢವಾಗುತ್ತದೆ. ಭೂಮಿಯ ಮೇಲೆ ಹೂಡಿಕೆ ಮಾಡುವುದು ನಿಮಗೆ ಸೂಕ್ತ ಎನಿಸಬಹುದು.

ಕನ್ಯಾ ರಾಶಿ :
ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ. ಆರೋಗ್ಯ ಹಗುರವಾಗಿದ್ದು ಪ್ರೀತಿಯಲ್ಲಿ ಹೊಸ ಮೃದುತನದಿಂದ ಸಂಬಂಧ ಸಮತೋಲನವಾಗುತ್ತದೆ. ಮನೆಯಲ್ಲಿ ನಡೆಯುವ ವಿವಾಹದ ಮಾತುಕತೆಗಳಿಂದ ನಿಮಗೆ ಖುಷಿಯಾಗುವುದು.

ತುಲಾ ರಾಶಿ :
ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ನಿಮಗೆ ಇಂದು ಧೈರ್ಯದ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ಪ್ರೀತಿಯಲ್ಲಿ ಸಂಗಾತಿಯ ಮನಸ್ಸು ಅಸ್ಥಿರವಾಗಿ ಸಂಬಂಧದಲ್ಲಿ ಅಹಿತವನ್ನು ತರಬಹುದು. ಅಚಾತುರ್ಯವು ನಿಮ್ಮಿಂದ ಆಗಬಹುದು.

ವೃಶ್ಚಿಕ ರಾಶಿ :
ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು. ಪರಿಚಿತರ ಮಾತು ನಿಮ್ಮ ಮನಸ್ಸಿಗೆ ನಾಟುವುದು. ಕಳೆದುಹೋದ ಸಂಬಂಧವನ್ನು ಮತ್ತೆ ಸರಿ ಮಾಡಿಕೊಳ್ಳುವಿರಿ.

ಧನು ರಾಶಿ :
ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಡೆಯುವುದು. ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಎಲ್ಲ ಸನ್ನಿವೇಶದಲ್ಲಿಯೂ ನಿಮ್ಮ ವರ್ತನೆಯನ್ನು ಸರಿಯಾಗಿ ಇರಲಿ. ಸಂಗಾತಿಯ ಮೇಲೆ ನಿಮಗೆ ಸಿಟ್ಟು ಬರಲಿದೆ.

ಮಕರ ರಾಶಿ :
ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ತೃಪ್ತಿ ಇರದು. ನಿಮ್ಮ ಇಂದಿನ ಕೆಲಸವು ಯಶಸ್ಸಿನ ಶಿಖರವನ್ನು ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ಮಾತಗಳನ್ನು‌ ಇಂದು ಕಡಿಮೆ ಆಡಲಿದ್ದೀರಿ. ಆರೋಗ್ಯ ಮಧ್ಯಮವಾಗಿದ್ದು ಪ್ರೀತಿಯಲ್ಲಿ ಗೊಂದಲ ನಿವಾರಣೆ ಕಂಡು ಸಂಬಂಧ ಸುಧಾರಿಸುತ್ತದೆ.

ಕುಂಭ ರಾಶಿ :
ನೀವು ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ಅಪ್ತರ ಮೇಲಿನ ನಂಬಿಕೆಯು ನಷ್ಟವಾಗುವುದು. ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕಾರ್ಯದಿಂದ ಕೋಪಗೊಳ್ಳಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನ್ನಿ್ಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ಹಲವು ಮಾನಸಿಕ ತೊಡಕುಗಳಿಂದ ನೀವು ಹೊರಬರುವಿರಿ.

ಮೀನ ರಾಶಿ :
ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಸಂಬಂಧದಲ್ಲಿ ಅಸಮಾಧಾನ ಕಂಡರೂ ನಡುವೆ ಚಿಕ್ಕ ವಿವಾದ ಸಂಭವಿಸಿದರೂ ಸುಖಾಂತ್ಯವಾಗಲಿದೆ. ಗೃಹನಿರ್ಮಾಣದ ಕಾರ್ಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು.

-ಲೋಹಿತ್ ಹೆಬ್ಬಾರ್-8762924271 (what’s app only)

Published On - 3:15 am, Sat, 28 November 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us