Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 19ರ ದಿನಭವಿಷ್ಯ

ಸಂಖ್ಯಾ ಶಾಸ್ತ್ರ ನಿತ್ಯ ಭವಿಷ್ಯ: ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 19ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 19ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: istockphoto.com
Follow us
TV9 Web
| Updated By: Digi Tech Desk

Updated on:Feb 19, 2023 | 8:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 19ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ನಿಮ್ಮ ಬಗ್ಗೆ ನಿಮಗೆ ಅಪರಿಮಿತವಾದ ಆತ್ಮವಿಶ್ವಾಸ, ಭರವಸೆ ಮೂಡುವ ದಿನ ಇದು. ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸೂಕ್ತವಾದ ದಿನ ಇದು. ಎಲ್ಲರನ್ನೂ ಜತೆಗೆ ಕರೆದುಕೊಂಡು ಮುಂದಕ್ಕೆ ಸಾಗಬೇಕು ಎಂಬ ನಿಮ್ಮ ಅಪೇಕ್ಷೆಗೆ ತಕ್ಕಂತೆ ಬೆಳವಣಿಗೆಗಳನ್ನು ಕಾಣಬಹುದು. ಆದರೆ ಹಣಕಾಸು ಖರ್ಚಿನ ವಿಚಾರದಲ್ಲಿ ಲೆಕ್ಕಾಚಾರ ತಪ್ಪಬೇಡಿ. ಗ್ಯಾಜೆಟ್ ಖರೀದಿ ಮಾಡಬೇಕು ಎಂದು ಕ್ರೆಡಿಟ್ ಕಾರ್ಡ್ ಬಳಸಿ, ಖರ್ಚು ಆಗಬಹುದು, ಜಾಗ್ರತೆ ಇರಲಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2) ಯಾವ ಸ್ವಭಾವವನ್ನು ನಿಮ್ಮ ದೌರ್ಬಲ್ಯ ಎಂದು ನೀವಂದುಕೊಂಡಿರುವುದಿಲ್ಲವೋ ಅದು ಬಲವಾಗಿ ಮಾರ್ಪಡುತ್ತದೆ. ಮನೆಗೆ ಅತಿಥಿಗಳು ಅಥವಾ ಸ್ನೇಹಿತರು ಬರುವಂಥ ಸಾಧ್ಯತೆಗಳಿವೆ. ಮನರಂಜನೆ, ಹೋಟೆಲ್, ಕಿರು ಪ್ರವಾಸ ಇಂಥವುಗಳಿಗಾಗಿ ಹಣ ಖರ್ಚು ಮಾಡಲಿದ್ದು, ಕುಟುಂಬದವರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ಸಾಧ್ಯವಾದಲ್ಲಿ ಮನೆದೇವರ ಸ್ಮರಣೆಯನ್ನು ಮಾಡಿ, ಇದರಿಂದ ನೆಮ್ಮದಿ ದೊರೆಯಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3) ಪಬ್, ರೆಸ್ಟೋರೆಂಟ್‌ಗಳು, ಮಲ್ಟಿಪ್ಲೆಕ್ಸ್‌ಗಳು ಇಂಥ ಕಡೆ ಈ ದಿನ ನಿಮಗೆ ಖರ್ಚಾಗುವ ಯೋಗ ಇದೆ. ಇನ್ನು ಬಟ್ಟೆ ವಿಚಾರದಲ್ಲೂ ಒಂದಿಷ್ಟು ಧಾರಾಳವಾಗಿ ಖರ್ಚಾಗಬಹುದು. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ನಿಗಾ ಇಡಿ. ದಿನದ ದ್ವಿತೀಯಾರ್ಧದಲ್ಲಿ ಸೊಗಸಾದ ಆಹಾರ ತಿನಿಸುಗಳನ್ನು ಸವಿಯುವ ಯೋಗ ಇದೆ. ಹೊಸ ವಾಹನ ಖರೀದಿಗಾಗಿ ಅಡ್ವಾನ್ಸ್ ಮಾಡುವ ಅಥವಾ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿನ ಕೆಲ ಬೆಳವಣಿಗೆಗಳು ಬೇಸರಕ್ಕೆ ಕಾರಣ ಆಗಬಹುದು. ಅಥವಾ ಅಲ್ಲಿನ ವಿಚಾರಗಳು ನಿಮಗೆ ಬೇರೆ ರೀತಿಯಲ್ಲಿ ತಲುಪಬಹುದು. ಸ್ಟಾರ್ ಗೇಜ್ ಮಾಡುವಂಥವರು, ಪಕ್ಷಿ ವೀಕ್ಷಣೆ ಮಾಡುವಂಥವರು, ಭಾಷೆಗಳನ್ನು ಕಲಿಸುವಂಥವರಿಗೆ ಈ ದಿನ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಇತರರ ವೈಯಕ್ತಿಕ ವಿಚಾರಗಳಲ್ಲಿ ವಿಪರೀತ ಆಸಕ್ತಿ ತೋರದಿರಿ, ಅವಮಾನದ ಪಾಲಾಗುತ್ತೀರಿ

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5) ಎಲ್ಲವನ್ನೂ ಮುಂಚೆಯೇ ಹೇಳಿಬಿಟ್ಟಿದ್ದೀರೇನೋ ಎಂಬಂತೆ ನಿಮ್ಮ ಮನಸಿನ ಮಾತುಗಳನ್ನು ಆಪ್ತರು, ಹತ್ತಿರದವರು ನಡೆದುಕೊಳ್ಳಲಿದ್ದಾರೆ. ಕುಟುಂಬದವರೊಂದಿಗೆ ಒಟ್ಟಿಗೆ ಸಮಯ ಕಳೆಯಲಿದ್ದೀರಿ. ನೀವು ಬಳಸುವ ವಾಹನದ ಸರ್ವೀಸ್ ಬಗ್ಗೆ ಕಾಳಜಿ ನೀಡಿ, ಇಲ್ಲದಿದ್ದಲ್ಲಿ ಮುಖ್ಯವಾದ ಸಮಯದಲ್ಲೇ ಕೈ ಕೊಡಬಹುದು. ದೂರ ಪ್ರಯಾಣ ಮಾಡುವವರಿದ್ದಲ್ಲಿ ಸಿದ್ಧತೆ ಸರಿಯಾಗಿ ಮಾಡಿಕೊಳ್ಳುವುದು ಅಗತ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6) ಇತರರು ಒಪ್ಪಿಕೊಂಡರು ಅನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ಸಂಗತಿಗಳನ್ನು ನೀವೂ ಒಪ್ಪಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವವರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಇತರ ವಸ್ತುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಯಾವುದೇ ಮುಖ್ಯ ಕೆಲಸ ಇದ್ದರೂ ಸಾಧ್ಯವಾದಲ್ಲಿ ಈ ದಿನ ಅದನ್ನು ಮುಂದಕ್ಕೆ ಹಾಕಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7) ಎಲ್ಲದಕ್ಕೂ ನನ್ನದೊಂದು ಅಭಿಪ್ರಾಯ ಇರಲಿ ಎಂಬ ಧೋರಣೆ ಸರಿ ಇಲ್ಲ. ಆದ್ದರಿಂದ ನಿಮಗೆ ಗೊತ್ತಿರುವುದೇನು, ಗೊತ್ತಿಲ್ಲದ್ದೇನು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ ಅಂತಾದಲ್ಲಿ ಆ ಬಗ್ಗೆ ಮಾತನಾಡಬೇಡಿ. ದೊಡ್ಡ ಮೊತ್ತದ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದಲ್ಲಿ ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಿರಿ. ಇದಕ್ಕೆ ಯಾವುದೇ ಹಿಂಜರಿಕೆ ಬೇಡ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8) ನಾನು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ ಈ ದಿನ ಒಳ್ಳೆಯದಲ್ಲ. ಹೀಗೆ ಮಾಡಿದಲ್ಲಿ ನಿಮ್ಮ ಆತ್ಮೀಯರು ಹಾಗೂ ಬಹಳ ಮೆಚ್ಚುವಂಥವರ ಜತೆಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಏರ್ಪಡಬಹುದು. ಇನ್ನು ಹಳೆಯ ನೋವು ಎಂದು ಕಾಡುತ್ತಿದ್ದಲ್ಲಿ ಮಂಡಿನೋವು ಈ ದಿನ ನಿಮಗೆ ಕಾಡಬಹುದು. ತೂಕದ ಸಮಸ್ಯೆ ಎದುರಿಸುತ್ತಿರುವವರು ಇಳಿಸಿಕೊಳ್ಳುವ ಕಡೆಗೆ ಗಮನ ವಹಿಸಿ. ಸರಿಯಾದ ವೈದ್ಯರ ಹಾಗೂ ಸೂಕ್ತ ಔಷಧೋಪಚಾರದ ಅಗತ್ಯ ಕಂಡುಬರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9) ಯಾರಿಗೂ ಹೇಳಬೇಡಿ ಎಂದು ನೀವು ಹೇಳಿದ್ದ ಸಂಗತಿಯೊಂದು, ಅದೇ ವ್ಯಕ್ತಿಯಿಂದ ಹಲವರಿಗೆ ತಿಳಿಯುವಂತಾಗುತ್ತದೆ. ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಮನೆಯ ನವೀಕರಣ, ದುರಸ್ತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಬಹಳ ಹಿಂದೆ ಖರೀದಿ ಮಾಡಿದ್ದ ಆಸ್ತಿಯೊಂದಕ್ಕೆ ಈಗ ಅತ್ಯುತ್ತಮವಾದ ಬೆಲೆ ದೊರೆಯುತ್ತದೆ. ತಂದೆಯ ಸ್ನೇಹಿತರು ಸಹಾಯ ಕೇಳಿಕೊಂಡು ಬರಬಹುದು.

ಲೇಖನ- ಎನ್‌.ಕೆ.ಸ್ವಾತಿ

Published On - 6:00 am, Sun, 19 February 23

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ