Love Horoscope: ಡಿಸೆಂಬರ್ನ 3ನೇ ವಾರ ಈ ರಾಶಿಯ ಸ್ನೇಹದ ಪರಿಚಯ ಪ್ರೀತಿಯಾಗಿ ಬೆಳೆಯುವ ಸೂಚನೆ
ಡಿಸೆಂಬರ್ 14 ರಿಂದ 20ರ ಈ ವಾರ ಪ್ರೇಮ ಮತ್ತು ವಿವಾಹ ಸಂಬಂಧಗಳಲ್ಲಿ ಶುಕ್ರ, ಗುರು, ಕುಜರ ಪ್ರಭಾವದಿಂದ ಏರಿಳಿತ ಕಾಣಲಿದೆ. ಶುಕ್ರನ ಸ್ಥಾನ ಬದಲಾವಣೆಯಿಂದ ಪ್ರೇಮದಲ್ಲಿ ಆಧಿಕ್ಯ, ಗಾಢವಾದ ಬಂಧ, ಮತ್ತು ಕೆಲವು ಅಸಹಜ ಮಾರ್ಗಗಳ ಸೂಚನೆ ಇದೆ. ಮಕ್ಕಳ ವಿಚಾರದಲ್ಲಿ ಪಾಲಕರಿಗೆ ಜಾಗರೂಕತೆ ಅಗತ್ಯ. ಪ್ರತಿಯೊಂದು ರಾಶಿಯವರಿಗೂ ಪ್ರೀತಿ, ವಿವಾಹ ಯೋಗದಲ್ಲಿ ವಿಭಿನ್ನ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಡಿಸೆಂಬರ್ 14 ರಿಂದ ಡಿಸೆಂಬರ್ 20 ವರೆಗೆ ಮೂರನೇ ವಾರವಾಗಿದ್ದು ಪ್ರೇಮಕ್ಕೆ, ವಿವಾಹಕ್ಕೆ ಕಾರಣನಾಗುವ ಶುಕ್ರನು ಗುರುವಿನ ಸ್ಥಾನಕ್ಕೆ ಹೋಗಲಿದ್ದು, ಕುಜ, ಸೂರ್ಯರು ಇರಲಿದ್ದು ಚಂದ್ರ ಆಗಮನವು ವಾರದ ಕೊನೆಯಲ್ಲಿ ಬರುವ ಕಾರಣ ಪ್ರೇಮದಲ್ಲಿ ಆಧಿಕ್ಯ ಉಂಟಾಗುವ ಸಾಧ್ಯತೆ ಇದೆ. ಕುಜನೂ ಇದೇ ರಾಶಿಯಲ್ಲಿದ್ದು ಗಾಢವಾದ ಬಂಧವು ಹೆಚ್ಚಾಗುವಂತೆ ಮಾಡುತ್ತಾನೆ ಮಾತ್ರವಲ್ಲ ಬಲವಂತದಿಂದ ಒಪ್ಪಿಗೆಯನ್ನು ಪಡೆಯುವ, ಅಸಹಜ ಮಾರ್ಗವನ್ನೂ ಅನುಸರಿಸುವನು. ಮಕ್ಕಳ ವಿಚಾರದಲ್ಲಿ ಪಾಲಕರಿಗೆ ಜಾಗರೂಕತೆ ಇರುವ ವಾರವಾಗಿದೆ. ಎಲ್ಲರಿಗೂ ಶುಭವಾಗಲಿ.
ಮೇಷ ರಾಶಿ:
ಮೂರನೇ ವಾರ ಶುಕ್ರನು ನವಮದಲ್ಲಿ ಇರುವುದರಿಂದ ಪೂರ್ವ ಪುಣ್ಯದಿಂದ ಪ್ರೇಮ ಜೀವನದಲ್ಲಿ ಯಶಸ್ಸು ಹೆಚ್ಚುತ್ತದೆ. ಸಂಗಾತಿಯ ಭಾವನೆಗಳಿಗೆ ಹೆಚ್ಚು ಸ್ಪಂದಿಸುವ ಅವಶ್ಯಕತೆ. ಹಳೆಯ ಮನಸ್ತಾಪ ಪರಿಹಾರಕ್ಕೆ ಈ ವಾರ ಸಹಕಾರಿ. ಒಂದು ಮಾತಿನ ತಪ್ಪು ಗೊಂದಲಕ್ಕೆ ಕಾರಣವಾಗಬಹುದು, ಆದರೆ ಶಾಂತ ಸಂಭಾಷಣೆ ಸಮತೋಲನ ತರುತ್ತದೆ. ಹೊಸ ಪರಿಚಯವನ್ನು ಅಪೇಕ್ಷಿಸುವವರಿಗೆ ಅದು ಬಲಿಷ್ಠವಾಗಿ ರೂಪುಗೊಳ್ಳುವ ಸಾಧ್ಯತೆ ಸ್ಪಷ್ಟವಾಗುತ್ತಿದೆ.
ವೃಷಭ ರಾಶಿ:
ಎರಡನೇ ರಾಶಿಯವರಿಗೆ ಈ ವಾರ ಶುಕ್ರನು ಪೂರ್ಣ ಬಲದಲ್ಲಿ ಇಲ್ಲದ ಕಾರಣ ಅಸಹಜಯೆ ಸಂಬಂಧಗಳಲ್ಲಿ ಕಾಣಿಸುತ್ತದೆ. ಬುಧನು ಸಪ್ತಮದಲ್ಲಿದ್ದು ಸಂಗಾತಿಯ ಎಲ್ಲ ಪ್ರಶ್ನೆಗೆ ಉತ್ತರಿಸುವ ಅಗತ್ಯ ಬರುವುದು. ಮುಚ್ಚಮರೆಯಿಂದ ಅನುಮಾನ ಸಾಧ್ಯತೆ. ಈ ವಾರ ಕೆಲವು ಬಾರಿ ಅಳತೆಗಿಂತ ಹೆಚ್ಚು ಪ್ರೀತಿ ವ್ಯಕ್ತಪಡಿಸುವಂತೆ ಮಾಡುತ್ತದೆ. ಮಾನಸಿಕ ನೋವಿನ ಗುಣದಲ್ಲಿ ಕಡಿಮೆಯಾಗುವ ಸೂಚನೆ. ದಾಂಪತ್ಯದಲ್ಲಿ ಸಹಾನುಭೂತಿ ಹೆಚ್ಚಾಗಿ ಒಗ್ಗಟ್ಟನ್ನು ತರಲಿದೆ. ಹೊಸ ಪ್ರೀತಿ ನಿಧಾನವಾಗಿ ಆರಂಭವಾದರೂ ದೃಢತೆ ಇರಲಿದೆ.
ಮಿಥುನ ರಾಶಿ:
ಮೂರನೇ ರಾಶಿಯವರಿಗೆ ಮೂರನೇ ವಾರದಲ್ಲಿ ನಾಲ್ಕು ಗ್ರಹರ ಯೋಗವು ಸಪ್ತಮದಲ್ಲಿ ಇರಲಿದೆ. ಇಬರ ಪ್ರಭಾವದಿಂದ ಮಾತುಗಳಲ್ಲಿ ಮೃದುತ್ವ ಬರುತ್ತದೆ. ಕೆಲವು ಅಸ್ಥಿರತೆ ಇದ್ದರೂ ಪ್ರೀತಿಯಲ್ಲಿ ಹೊಸ ಚೈತನ್ಯ ಮೂಡುತ್ತದೆ. ಸಂಬಂಧದಲ್ಲಿ ನಂಬಿಕೆ ಬಲವಾಗಲಿದೆ. ಅತಿಯಾದ ಯೋಚನೆ ತಪ್ಪಿಸುವುದು ಉತ್ತಮ. ಸ್ನೇಹದ ಪರಿಚಯವು ಪ್ರೀತಿಯಾಗಿ ಬೆಳೆಯುವ ಸೂಚನೆ. ಮನಃಶಾಂತಿ ಹೆಚ್ಚಾಗಿ ಭಾವನಾತ್ಮಕ ಸಾಮೀಪ್ಯ ಮಾನೆಮಾಡುವುದು.
ಕರ್ಕಾಟಕ ರಾಶಿ:
ಡಿಸೆಂಬರ್ ಮೂರನೇ ವಾರ ಶುಕ್ರನು ಷಷ್ಠಸ್ಥಾನದಲ್ಲಿ ಇರಲಿದ್ದು ಪ್ರೀತಿ ಮಾರ್ಗವನ್ನು ತಪ್ಪುವುದು. ಹೊಂದಾಣಿಕೆಯ ಮಾತುಗಳು ಭಾವನಾತ್ಮಕ ಗುರುತುಗಳನ್ನು ಅರಿತರೆ ಸಂಬಂಧ ಗಟ್ಟಿಯಾಗುತ್ತದೆ. ಶುಕ್ರನ ಪ್ರಭಾವವು ಬಲವಂತವನ್ನು ಅಧಿಕವಾಗಿಸುತ್ತದೆ. ಕೃತಕ ಮಾರ್ಗದಿಂದ ಕೆಲವು ಕಾಲ ಸಂತೋಷ ಸಿಗಬಹುದು. ಕುಟುಂಬದ ವಿಚಾರಗಳು ಪ್ರೇಮಕ್ಕೆ ಪ್ರಭಾವ ಬೀಳಬಹುದಾದರೂ ಸಂಗಾತಿ ಬೆಂಬಲ ಸ್ಪಷ್ಟ. ಕಲಹದ ಅನಂತರದ ಮನಸ್ಸಿಗೆ ನವೀನತೆ.
ಸಿಂಹ ರಾಶಿ:
ಮೂರನೇ ವಾರದಲ್ಲಿ ಶುಕ್ರನು ಪಂಚಮದಲ್ಲಿ ಇರಲಿದ್ದು ವಿದ್ಯಾಭ್ಯಾಸಕ್ಕೆ ಪ್ರೇಮ ಅಡ್ಡಿಯಾಗುವುದು. ತಂದೆಯ ಒಪ್ಪಿಗೆ ಇದ್ದರೂ ತಾಯಿಯಿಂದ ಒಪ್ಪಿಗೆ ಇರದು. ಹೇಗಾದರೂ ಬರುವ ಅಹಂಕಾರದ ಪ್ರವೇಶವನ್ನು ತಪ್ಪಿಸಬೇಕು. ಸಂಗಾತಿಯ ಮಾತುಗಳನ್ನು ಆಲಿಸಿದರೆ ಸಾಕು ಸಂಬಂಧ ಸುಧಾರಿಸುತ್ತದೆ. ಹೊಸ ಪರಿಚಯಗಳಲ್ಲಿ ಆಕರ್ಷಣೆ ಗಾಢವಾಗಬಹುದು. ಸಂಗಾತಿಯ ಜೊತೆ ಪ್ರಯಾಣ, ತೀರ್ಥಕ್ಷೇತ್ರಗಳ ದರ್ಶನವಾಗಲಿದೆ. ವಾರಾಂತ್ಯದಲ್ಲಿ ಪ್ರೀತಿ, ಉತ್ಸಾಹದಿಂದ ತುಂಬುತ್ತದೆ.
ಕನ್ಯಾ ರಾಶಿ:
ಆರನೇ ರಾಶಿಯವರಿಗೆ ಈ ವಾರ ನವವಿವಾಹಿತರ ಸಂವಹನದಲ್ಲಿ ಸಮತೋಲನ ಉಂಟಾಗಲಿದೆ. ಪ್ರೇಮದಲ್ಲಿ ತಮ್ಮ ಭಾವನೆಗಳನ್ನು ತೆರೆದಂತೆ ಬೆಂಬಲ ದೊರೆಯುತ್ತದೆ. ಶುಕ್ರನು ಸಂಬಂಧಕ್ಕೆ ಮೃದುವಾದ ಚೈತನ್ಯ ನೀಡುತ್ತಾನೆ. ಕುಟುಂಬದಿಂದ ಬೆಂಬಲದ ನಿರೀಕ್ಷೆ ಫಲಪ್ರದ. ಹಳೆಯ ವಿಷಯಕ್ಕೆ ಹಿಡಿದುಕೊಳ್ಳದೆ ಮುಂದೆ ನೋಡುವುದು ಉತ್ತಮ. ಹೊಸ ಬಾಂಧವ್ಯ ನಿಧಾನವಾದರೂ ಸ್ಥಿರ.
ತುಲಾ ರಾಶಿ:
ಏಳನೇ ರಾಶಿಗೆ ಶುಕ್ರನೇ ಅಧಿಪತಿ. ತೃತೀಯದಲ್ಲಿ ಇರುವ ಕಾರಣ ಪ್ರೀತಿಗೆ ವಿಶೇಷ ಹೊಳಪು. ಸಂಗಾತಿಯ ಜೊತೆ ಸಮಯ ಕಳೆಯಲು ಅವಕಾಶಗಳು ಹೆಚ್ಚಾಗುತ್ತವೆ. ಕೆಲವು ಭವಿಷ್ಯದ ಗೊಂದಲಗಳು ದೀರ್ಘವಾದ ಮಾತುಕತೆಗಳ ಮೂಲಕ ಪರಿಹಾರವಾಗುತ್ತವೆ. ಆಕಸ್ಮಿಕವಾಗಿ ಬರುವ ಮಾತುಗಳು ಹೃದಯದ ನಿಜಭಾವನೆಗಳನ್ನು ಹೊರತರುವಂತೆ ಮಾಡುತ್ತದೆ. ನಿಮ್ಮ ಒಂಟಿತನವನ್ನು ಇತರರು ಆಡಿಕೊಳ್ಳಬಹುದು.
ವೃಶ್ಚಿಕ ರಾಶಿ:
ಎಂಟನೇ ರಾಶಿಯವರಿಗೆ ಈ ವಾರ ಸಂಗಾತಿಯ ಕಾರಣಕ್ಕೆ ಧನನಷ್ಟ. ಪ್ರೀತಿಪಾತ್ರರಲ್ಲಿ ಪ್ರೀತಿಯ ಆಳ, ತೀವ್ರ. ಸಂಬಂಧಗಳಲ್ಲಿ ಪಾರದರ್ಶಕತೆ ಮುಖ್ಯವಾಗಿರುವಂತೆ ನೋಡಿಕೊಳ್ಳಿ. ಭಾವನಾತ್ಮಕತೆಯಲ್ಲಿ ಜಾಡ್ಯ ಹೆಚ್ಚಾದರೂ ಸಂಗಾತಿಯ ಅಂತರಂಗ ಅರಿತರೆ ಉತ್ತಮ. ಹಳೆಯ ವಿಷಯಗಳನ್ನು ನೆನಪಿಸಬಹುದಾದರೂ ಪರಿಹಾರ ಸುಲಭ. ಹಳೆಯ ಪ್ರೇಮವೇ ಹೊಸದಾಗಿ ಆರಂಭವಾಗುವ ಸಾಧ್ಯತೆ.
ಧನು ರಾಶಿ:
ಗುರುವಿನ ಆಧಿಪತ್ಯದಲ್ಲಿ ನಾಲ್ಕು ಗ್ರಹಗಳ ಸಾನ್ನಿಧ್ಯವಿರಲಿದೆ. ಗುರುವಿನ ದೃಷ್ಟಿಯೂ ಇರುವ ಕಾರಣ ವಿವಾದಿತ ದಾಂಪತ್ಯಕ್ಕೆ ತೆರೆ. ಸಂಬಂಧಗಳಲ್ಲಿ ಉದಾರತೆ ಹೆಚ್ಚಾಗುತ್ತದೆ. ಪ್ರಯಾಣ ಅಥವಾ ಹೊಸ ಕಾರ್ಯಗಳಲ್ಲಿ ಸಂಗಾತಿ ಬೆಂಬಲವೂ ದೊರೆಯುವುದು. ಮನದ ಸಂಶಯಗಳನ್ನು ಒಂದೊಂದಾಗಿಯೇ ಬಿಡಿಸುವಿರಿ. ಪರಿಚಯಗಳು ಆತ್ಮೀಯತೆಯಲ್ಲಿ ಬಲವಾಗಬಹುದು. ದಾಂಪತ್ಯದಲ್ಲಿ ಶಾಂತಿ ಮನೆಮಾಡುತ್ತದೆ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ಮಕರ ರಾಶಿ:
ಶನಿಯ ಸ್ಥಾನವಾದ ಈ ರಾಶಿಯವರಿಗೆ ಮೂರನೇ ವಾರ ಸಂಗಾತಿಯ ಜೊತೆ ಸುತ್ತಾಟ, ಖರೀದಿ, ಮೋಜಿಗೆ ಹಣ ಖಾಲಿ. ಆಸೆಗಳನ್ನು ಅದುಮಿಟ್ಟುಕೊಂಡರೂ ಅದು ಯಾವುದೋ ಕಾಲದಲ್ಲಿ ಪ್ರಕಟವಾಗಲಿದೆ. ಸಂಗಾತಿಯ ನಿರೀಕ್ಷೆ ಹೆಚ್ಚಾಗಬಹುದು. ಅವರಿಗೆ ಭದ್ರತೆ ನೀಡುವ ಮಾತುಗಳು ಅಗತ್ಯ. ನಿಮ್ಮ ಪ್ರೇಮದ ಬಗ್ಗೆ ಅನ್ಯ ರೀತಿ ಸಂದೇಶ ಹರಿದಾಡುವುದು.
ಕುಂಭ ರಾಶಿ:
ಹನ್ನೊಂದನೇ ರಾಶಿಯವರಿಗೆ ಈ ವಾರ ಪ್ರಭಾವವನ್ನು ಮೂಡಿಸುವ ಸಂವಹನವು ಪ್ರೀತಿಯಲ್ಲಿ ಬೀಳಿವಂತೆ ಮಾಡುವುದು. ಸಿಕ್ಕಿರುವುದನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಯೋಚನೆ ಬರಲಿ. ಸಂಗಾತಿಯೊಂದಿಗೆ ನಂಬಿಕೆಯನ್ನು ಹಂಚಿಕೊಂಡರೆ ಸಂಬಂಧದ ಗಡಿ ವಿಸ್ತರಿಸುವುದು. ಸಣ್ಣ ಸಂದೇಹಗಳನ್ನೂ ಶಮನ ಮಾಡಿಕೊಳ್ಳುವುದು ಉತ್ತಮ. ಆಕರ್ಷಕವಾಗಿದ್ದೂ ಯಾರಿಗೂ ಸೋಲಲಾರಿರಿ.
ಮೀನ ರಾಶಿ:
ಗುರುವಿನ ಆಧಿಪತ್ಯದ ಈ ರಾಶಿಗೆ ಈ ವಾರ ಪ್ರೀತಿಯ ಕನಸು ಬಲವಾಗಲಿದೆ. ಸಂವೇದನಾಶೀಲ ಮಾತುಗಳು ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಗೌಪ್ಯವಾದ ಸಂದೇಶವು ಇತರರಿಗೆ ಗೊತ್ತಾಗುವುದು. ಹಾವ ಭಾವದ ಬದಲಾವಣೆ ನಿಮ್ಮ ಮೇಲೆ ಸಂದೇಹ ಬರುವಂತೆ ಮಾಡಲಿದೆ. ಕೆಲಸವು ಮೆಚ್ಚುಗೆಯಾಗಿ ಪ್ರೀತಿ ಉಂಟಾಗುವುದು.
– ಲೋಹಿತ ಹೆಬ್ಬಾರ್ – 8762924271 (what’s app only)
Published On - 5:47 pm, Thu, 11 December 25




