Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 2ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 2ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 2ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Feb 02, 2026 | 12:15 AM

ಪೈರೈಟ್ ನಿಂದ ಸಿದ್ಧಪಡಿಸಿದ ಫ್ರೇಮ್ ಒಳಗೆ ಏಳು ಕುದುರೆಗಳು ಓಡುತ್ತಿರುವಂತೆ ಇರುವ ಚಿತ್ರವನ್ನು ಹಾಕಿರಲಾಗುತ್ತದೆ. ಅಂಥದ್ದನ್ನು ನಿಮ್ಮ ಮನೆಯ ಈಶಾನ್ಯದ ಗೋಡೆಯಲ್ಲಿ ಹಾಕಿ. ಅದರಲ್ಲೂ ಆರು ಅಡಿಗಿಂತ ಎತ್ತರದ ಜಾಗದಲ್ಲಿ ಅದು ಇರಬೇಕು. ಹೀಗೆ ಮಾಡುವುದರಿಂದ ಹಲವು ರೀತಿಯ ಪಾಸಿಟಿವ್ ಬೆಳವಣಿಗೆ ನಿರೀಕ್ಷೆ ಮಾಡಬಹುದು.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮಲ್ಲಿ ಕೆಲವರು ಹೊಸ ಭಾಷೆ ಕಲಿಯುವುದಕ್ಕೆ ಕೋರ್ಸ್ ಗೆ ಸೇರಿಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶ ಸಿಗಲಿದೆ. ಹಣಕಾಸು ವಿಚಾರದಲ್ಲಿ ನೀವು ಮಾಡಿಕೊಂಡಂಥ ಪ್ಲಾನಿಂಗ್ ಕೈ ಹಿಡಿಯಲಿದೆ. ಸಣ್ಣ ಮಟ್ಟದ ಹೂಡಿಕೆ ಮಾಡಿ ಆರಂಭಿಸಿದ್ದ ವ್ಯವಹಾರ- ವ್ಯಾಪಾರಗಳಲ್ಲಿ ನೀವು ನಿರೀಕ್ಷೆ ಕೂಡ ಮಾಡಿರದಂಥ ಯಶಸ್ಸು ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಾ ಇದ್ದಲ್ಲಿ ಅವು ಒತ್ತಡವಾಗಿ ಪರಿಣಮಿಸಲಿವೆ. ನಿಮ್ಮಲ್ಲಿ ಕೆಲವರಿಗೆ ಆಸ್ತಿ ಕೈ ಬಿಟ್ಟುಹೋಗುವ ಸುಳಿವು ದೊರೆಯಲಿದೆ. ಇನ್ನು ಚಿನ್ನ- ಬೆಳ್ಳಿ ಇಂಥವುಗಳ ಅಡಮಾನ ಮಾಡಿ, ಸಾಲವನ್ನು ಪಡೆದುಕೊಂಡಿದ್ದಲ್ಲಿ ಅದು ಹರಾಜಿಗೆ ಬರುವ ಸಾಧ್ಯತೆ ಇದೆ. ನಿಗದಿತ ದಿನಾಂಕಕ್ಕೆ ಹಣ ಮರುಪಾವತಿ ಮಾಡುವ ಕಡೆಗೆ ನಿಮ್ಮ ಲಕ್ಷ್ಯ ಇರಲಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಒಂದು ಬಗೆಯ ಸಮಾಧಾನ- ಸಂತೃಪ್ತಿ ಹಾಗೂ ಸಾರ್ಥಕ್ಯದ ಭಾವ ನಿಮ್ಮಲ್ಲಿ ಇರಲಿದೆ. ಕೊಟ್ಟ ಮಾತಿನಂತೆಯೇ ಹಾಗೂ ಅಂದುಕೊಂಡ ರೀತಿಯಲ್ಲಿ ಕೆಲಸ- ಕಾರ್ಯಗಳನ್ನು ಮಾಡಿಕೊಡಲಿದ್ದೀರಿ. ಹಣಕಾಸಿನ ಒತ್ತಡಗಳಿಂದ ಹೊರಬರುವುದಕ್ಕೆ ಮಾರ್ಗೋಪಾಯಗಳು ಗೋಚರಿಸಲಿವೆ.

ಲೇಖನ- ಸ್ವಾತಿ ಎನ್.ಕೆ.