AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 15ರ ದಿನಭವಿಷ್ಯ

Daily Numerology February 15: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 15ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 15ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on:Feb 15, 2026 | 12:15 AM

Share

ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ, ಶೈಕ್ಷಣಿಕವಾಗಿ ಬಹಳ ಮುಖ್ಯವಾದ ಪರೀಕ್ಷೆಗಳನ್ನು ಇನ್ನೇನು ಎದುರಿಸಲಿದ್ದೀರಿ ಎಂದಾದಲ್ಲಿ ಗ್ರೀನ್ ಅವೆಂಚೂರಿಯನ್ ಸ್ಟೋನ್ ಬಳಸಿ. ಇನ್ನು ನಿಮ್ಮಲ್ಲಿ ಯಾರು ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೂ ಈ ಸ್ಟೋನ್ ಸೂಕ್ತ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾರು ಹಳೇ ನಾಣ್ಯ, ಅಂಚೆ ಚೀಟಿ ಅಥವಾ ಪುರಾತನ ವಸ್ತುಗಳ ಖರೀದಿ ಹಾಗೂ ಮಾರಾಟವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುತ್ತೀರೋ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಕ್ಯಾಟರಿಂಗ್ ಮಾಡುತ್ತಿರುವವರು ದಿಢೀರನೆ ನಾನಾ ಸವಾಲುಗಳನ್ನು ಎದುರಿಸುವಂತಾಗಲಿದೆ. ಕೆಲಸಕ್ಕೆ ಬರುವುದಾಗಿ ಮಾತು ನೀಡಿದ್ದಂಥ ವ್ಯಕ್ತಿಗಳು ಏಕಾಏಕಿ ತಮ್ಮಿಂದ ಬರುವುದಕ್ಕೆ ಸಾಧ್ಯವಿಲ್ಲ ಎಂದುಬಿಡಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ಈ ದಿನ ಸಾಧ್ಯವಾದಷ್ಟೂ ದೂರದಲ್ಲಿ ಇರುವುದು ಕ್ಷೇಮ. ಬಾಯಿ ರುಚಿಗೆ ಬಿದ್ದಲ್ಲಿ ಹೊಟ್ಟೆ ನೋವು, ಹೊಟ್ಟೆಯುಬ್ಬರ ಅಥವಾ ಹೊಟ್ಟೆಯುರಿ ಇಂಥ ಆರೋಗ್ಯ ಸಮಸ್ಯೆಗಳಿಂದ ಬಳಲುವಂತೆ ಆಗಲಿದೆ. ಈ ಹಿಂದೆ ಬಹಳ ಹಣ ಖರ್ಚು ಮಾಡಿ, ಖರೀದಿಸಿ ತಂದಂಥ ಸಲಕರಣೆ ಅಥವಾ ಉಪಕರಣಗಳು ಏನಾದರೊಂದು ಸಮಸ್ಯೆ ತರಬಹುದು. ತಕ್ಷಣಕ್ಕೆ ಇದಕ್ಕೆ ಏನು ಪರಿಹಾರ ಎಂಬುದು ತಿಳಿಯದೆ ಬೇಸರ ಪಡುವಂತೆ ಆಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಏಕ ಕಾಲಕ್ಕೆ ಹಲವು ಕೆಲಸಗಳನ್ನು ನಿಗಾ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಇದು ಒತ್ತಡವಾಗಿ ಮಾರ್ಪಡಲಿದೆ. ಇನ್ನು ಮಕ್ಕಳಿರುವವರಿಗೆ ಅವರ ಆರೋಗ್ಯ ಸ್ಥಿತಿಯು ಏಕಾಗ್ರತೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದಂಥ ಸ್ಥಿತಿಯನ್ನು ಸೃಷ್ಟಿ ಮಾಡಲಿವೆ. ನೀವು ಬಹಳ ಆಸ್ಥೆ ವಹಿಸಿ, ಶ್ರಮ ಪಟ್ಟು ಮಾಡಿದ ಪ್ರಾಜೆಕ್ಟ್- ಕಾರ್ಯಗಳ ಬಗ್ಗೆ ಇತರರು ಉದಾಸೀನ- ಉಡಾಫೆಯಿಂದ ಮಾತನಾಡಿದರು ಎಂಬುದು ಸಿಟ್ಟಿಗೆ ಕಾರಣವಾಗಲಿದೆ.

ಲೇಖನ- ಸ್ವಾತಿ ಎನ್.ಕೆ.

Published On - 12:15 am, Sun, 15 February 26

ಟಿವಿ9ನಿಂದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಟಿವಿ9ನಿಂದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಗಂಗಾ ನದಿಯ ಥೀಮ್​ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್
ಗಂಗಾ ನದಿಯ ಥೀಮ್​ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್
ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ
ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ
ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು
ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು
ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ
ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ
ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​
ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​
ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ
ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ
ಸರ್ಕಾರಿ ಮಕ್ಕಳಿಗೆ'ಸರ್ಪ್ರೈಸ್' ಕೊಟ್ಟ ಸಚಿವ ಜಮೀರ್
ಸರ್ಕಾರಿ ಮಕ್ಕಳಿಗೆ'ಸರ್ಪ್ರೈಸ್' ಕೊಟ್ಟ ಸಚಿವ ಜಮೀರ್
ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್