ಫೆಬ್ರವರಿ ಮಾಸ ಭವಿಷ್ಯ 2025: ಫೆಬ್ರವರಿ ತಿಂಗಳಲ್ಲಿ ನಿಮ್ಮ ರಾಶಿಫಲ ಹೇಗಿದೆ? ಈ ರಾಶಿಗೆ ಕತ್ತಲು ಕಳೆದು ಬೆಳಕು ಬರುವುದು
ಸೂರ್ಯನು ಶತ್ರು ರಾಶಿ ಕುಂಭಕ್ಕೂ ಬುಧನು ನೀಚಸ್ಥಾನವಾದ ಮೀನಕ್ಕೂ ಹೋಗಲಿದ್ದು, ಇದರಿಂದ ಕೆಲವು ವ್ಯತ್ಯಾಸ ಆಗಲಿದೆ. ಶುಕ್ರ ದಶೆಯವರಿಗೆ ಸಕಲ ಸೌಭಾಗ್ಯ ಪ್ರಾಪ್ತಿ. ಬುಧನ ದಶೆಯವರಿಗೆ ಆರೋಗ್ಯದಲ್ಲಿ ತೊಂದರೆ, ವಿದ್ಯಾಭ್ಯಾಸಕ್ಕೆ ತಡೆಗಳು ಬರಬಹುದು. ಎಲ್ಲಿಯೂ ಉದ್ವೇಗಗೊಳ್ಳದೇ ತಾಳ್ಮೆಯಿಂದ ಮುಂದುವರಿದರೆ ಹೊಸ ದಾರಿ ಸಿಗಲಿದೆ. ಕತ್ತಲು ಕಳೆದು ಬೆಳಕು ಬರುವುದು. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ
2025ರ ಫೆಬ್ರವರಿ ತಿಂಗಳಲ್ಲಿ ಶುಕ್ರನು ಉಚ್ಚ ಸ್ಥಾನವಾದ ಮೀನ ರಾಶಿಯನ್ನು ಪ್ರವೇಶ ಮಾಡುವನು. ಸೂರ್ಯನು ಶತ್ರು ರಾಶಿ ಕುಂಭಕ್ಕೂ ಬುಧನು ನೀಚಸ್ಥಾನವಾದ ಮೀನಕ್ಕೂ ಹೋಗಲಿದ್ದು, ಇದರಿಂದ ಕೆಲವು ವ್ಯತ್ಯಾಸ ಆಗಲಿದೆ. ಶುಕ್ರ ದಶೆಯವರಿಗೆ ಸಕಲ ಸೌಭಾಗ್ಯ ಪ್ರಾಪ್ತಿ. ಬುಧನ ದಶೆಯವರಿಗೆ ಆರೋಗ್ಯದಲ್ಲಿ ತೊಂದರೆ, ವಿದ್ಯಾಭ್ಯಾಸಕ್ಕೆ ತಡೆಗಳು ಬರಬಹುದು. ಎಲ್ಲಿಯೂ ಉದ್ವೇಗಗೊಳ್ಳದೇ ತಾಳ್ಮೆಯಿಂದ ಮುಂದುವರಿದರೆ ಹೊಸ ದಾರಿ ಸಿಗಲಿದೆ. ಕತ್ತಲು ಕಳೆದು ಬೆಳಕು ಬರುವುದು.
ಮೇಷ ರಾಶಿ :
ಫೆಬ್ರವರಿ ತಿಂಗಳಲ್ಲಿ ರಾಶಿ ಚಕ್ರದ ಮೊದಲನೇ ರಾಶಿವರಿಗೆ ರಾಶಿಯ ಅಧಿಪತಿ ಹಾಗೂ ಅಷ್ಟಮಾಧಿಪತಿ ಕುಜನಿಂದ ಶುಭ. ತೃತೀಯದಲ್ಲಿ ಇರುವ ಕುಜನು ಸಹೋದರ ಬಾಂಧವ್ಯವನ್ನು ಚೆನ್ನಾಗಿಸುವನು. ಕೆಟ್ಟ ಆಲೋಚನೆಗೆ ಅವಕಾಶ ಕೊಡಲಾರ. ದ್ವಾದಶದ ಗುರು ದ್ವಿತೀಯದಲ್ಲಿ, ದ್ವಿತೀಯದ ಶುಕ್ರ ದ್ವಾದಶದಲ್ಲಿ ಉಚ್ಚನಾಗಿರುವನು. ಆರ್ಥಿಕವಾಗಿ ಸದೃಢತೆ ಕಂಡರೂ ಕೆಲವು ವೆಚ್ಚಗಳು ಅನಿರೀಕ್ಷಿತವಾಗಿ ಬರುವುದು. ಬಂಧುಗಳಿಗೆ ಆರ್ಥಿಕ ಸಹಕಾರವನ್ನು ಕೊಡಬೇಕಾಗುವುದು. ವಾಹನದಿಂದ ನಷ್ಟ ಸಾಧ್ಯತೆ ಇದೆ. ಚಾಲನೆಯ ಸಂದರ್ಭದಲ್ಲಿ ಎಚ್ಚರಿಕೆ ಮುಖ್ಯ. ಕುಮಾರನನ್ನು ನಿರಂತರ ಸ್ಮರಿಸಿ, ಧೈರ್ಯವು ಕುಗ್ಗದಂತೆ ಕಾಪಾಡುವನು.
ವೃಷಭ ರಾಶಿ :
ರಾಶಿ ಚಕ್ರದ ಎರಡನೇ ರಾಶಿಯವರಿಗೆ ರಾಶಿಯ ಅಧಿಪತಿ ಷಷ್ಠಾಧಿಪತಿ ಶುಕ್ರನು ಏಕಾದಶಕ್ಕೆ ಬರಲಿದ್ದಾನೆ. ಉತ್ತಮ ಸಂಪತ್ತು ನಿಮ್ಮದಾಗಲಿದೆ. ಶ್ರಮಕ್ಕೆ ಯೋಗ್ಯ ಫಲವನ್ನು ಪಡೆಯುವಿರಿ. ಒಳ್ಳೆಯ ಕಡೆ ಹೂಡಿಕೆ ಮಾಡುವ ಸಂದರ್ಭವೂ ಬರಲಿದೆ. ಕಲಾಕಾರರು ಗೌರವ, ಸ್ಥಾನಮಾನಗಳನ್ನು ಪಡೆಯುವರು. ವಾಹನ ಲಾಭವಾದರೂ ಎಚ್ಚರಿಕೆ ಅಗತ್ಯ. ದಾಂಪತ್ಯದಲ್ಲಿ ವೈಮನಸ್ಯ ಬಂದರೂ ಅನಂತರ ಹೊಂದಾಣಿಕೆಗೆ ಮಣಿಯುವುದು. ಶನಿ ದಶೆಯಿದ್ದವರಿಗೆ ಉದ್ಯಮ ಉತ್ತಮ ಗತಿಯನ್ನು ತೋರಿಸುವುದು. ಪ್ರೇಮವು ತಾತ್ಕಾಲಿಕ ಎನಿಸವುದು. ನಿಮ್ಮ ಉದ್ದೇಶ ಬದಲಾಗಲಿದೆ. ಬಂಧುಗಳ ಮೇಲೆ ಅಸಮಾಧಾನ. ವಿಷ್ಣು ಸಹಸ್ರನಾಮವನ್ನು ಪಠಿಸಿ.
ಮಿಥುನ ರಾಶಿ :
ಫೆಬ್ರವರಿ ತಿಂಗಳಲ್ಲಿ ನಿಮಗೆ ರಾಶಿಯ ಅಧಿಪತಿ ದಶಮದಲ್ಲಿ ನೀಚನಾಗಿದ್ದು ಅಶುಭವನ್ನು ಕೊಡುವನು. ಉದ್ಯೋಗದಲ್ಲಿ ಹಿನ್ನಡೆ, ಸ್ಥಾನವೂ ಇಲ್ಲದೇ ಹೋಗಬಹುದು. ಸುಖದ ನಾಶ, ಮುಂದೆ ಏನು ಮಾಡಬೇಕು ಎನ್ನುವ ಚಿಂತೆಯಲ್ಲಿ ಮಗ್ನರಾಗಬೇಕಾಗುವುದು. ನಿಮ್ಮ ಮಾತಿನ ಮೇಲೆ ನಂಬಿಕೆ ಇರದು. ಧನವು ನಷ್ಟವಾದರೂ ಒಳ್ಳೆಯ ಕಾರ್ಯಕ್ಕೆ ಆಗಲಿದೆ ಎಂಬ ನಂಬಿಕೆ ನಿಮಗೆ ನೆಮ್ಮದಿ ಕೊಡುವುದು. ಬುಧ ದೆಶೆಯಲ್ಲಿ ನೀವಿದ್ದರೆ ಎಲ್ಲದರ ಅನುಭವೂ ನಿಮಗೆ ಆಗಲಿದೆ. ಲಕ್ಷ್ಮೀನಾರಾಯಣರಿಗೆ ಶರಣಾದರೆ ದಾರಿಯೊಂದು ತೋರಲಿದೆ.
ಕರ್ಕಾಟಕ ರಾಶಿ :
ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ತಿಂಗಳು ಶುಭ. ಶುಕ್ರನು ನವ್ಯ ಇರಲಿದ್ದು ಆರ್ಥಿಕ ಲಾಭಕ್ಕಾಗಿಯೇ ಮಾಡುತ್ತಿರುವ ಉದ್ಯೋಗದಿಂದ ಹಣದ ಹರಿವು ಕಾಣಿಸುವುದು. ಬರಬೇಕಾದ ಹಣವು ತಾನಾಗಿಯೇ ಕೈಗೆ ಬಂದು ಸಂತಸವಾಗಲಿದೆ. ಹೂಡಿಕೆಯಿಂದಲೂ ಲಾಭ. ಆದಷ್ಟು ನಿಮಗೆ ಪೂರ್ವದಲ್ಲಿ ಹೂಡಿಕೆ ಮಾಡಿದ್ದಕ್ಕೆ ಫಲ ಸಿಗಲಿದೆ. ಅದನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಅಲ್ಪನಿಗೆ ಐಶ್ವರ್ಯ ಬಂದಂತಾಗಬಹುದು. ತಾಯಿಯಿಂದ ಆರ್ಥಿಕ ನೆರವು ಸಿಗುವುದು. ತಂತ್ರಜ್ಞರಿಗೆ ಉನ್ನತಿ ಅಧಿಕಾರ ಪ್ರಾಪ್ತಿ. ದುರ್ಗಾಪರಮೇಶ್ವರಿಯ ಪ್ರಸಾದ ಸಿಗುವುದು.
ಸಿಂಹ ರಾಶಿ :
ಫೆಬ್ರವರಿ ತಿಂಗಳಲ್ಲಿ ನಿಮಗೆ ಮಿಶ್ರಫಲವಿರಲಿದೆ. ರಾಶಿಯ ಅಧಿಪತಿ ಸಪ್ತಮದಲ್ಲಿ ಇರಲಿದ್ದು ವಿವಾಹ ಸಂಬಂಧಕ್ಕೆ ಅಡ್ಡಿಯಾಗುವುದು. ಆತ್ಮವಿಶ್ವಾಸಕ್ಕೆ ಭಂಗವಿದೆ. ಉದ್ಯೋಗಾಧಿಪತಿ ಉಚ್ಚನಾಗಿದ್ದರೂ ಷಷ್ಠದಲ್ಲಿ ರಾಹುವಿನ ಜೊತೆ, ನೀಚ ಬುಧನ ಸಾಂಗತ್ಯದಲ್ಲಿ ಇರುವ ಕಾರಣ ಸ್ತ್ರೀಯರು ಉದ್ಯೋಗದಲ್ಲಿ ಅಪಮಾನವಾಗಲಿದೆ. ವಾಹನ ಸವಾರಿಯಲ್ಲಿ ನಿಯಂತ್ರಣ ತಪ್ಪಬಹುದು. ಮಕ್ಕಳಿಂದ ದೂರವಿರಬೇಕಾಗುವುದು. ಧಾರ್ಮಿಕ ಮುಖಂಡರಿಗೆ ಗೌರವ ಸಿಗುವುದು. ನಿಮ್ಮ ಕೋಪದ ನಿಯಂತ್ರಣ ಕಷ್ಟವಾಗುವುದು. ಆದಿತ್ಯಹೃದಯ ಪಠನೆಯಿಂದ ಆಪತ್ತು ದೂರು.
ಕನ್ಯಾ ರಾಶಿ :
ಜನವರಿ ತಿಂಗಳಲ್ಲಿ ರಾಶಿ ಚಕ್ರದ ಆರನೇ ರಾಶಿಯವರಿಗೆ ಶುಭ. ಗುರು ಬಲ ಹಾಗೂ ಗುರು ದೃಷ್ಟಿ ಎರಡೂ ಇದೆ. ರಾಶಿಯ ಅಧಿಪತಿ ಪಂಚಮದಲ್ಲಿ ಸೂರ್ಯನ ಜೊತೆ ಇದ್ದಾನೆ. ಬೌದ್ಧಿಕ ವಿಚಾರದಲ್ಲಿ ನಿಮಗೆ ಯಶಸ್ಸು. ಸರಿಯಾದ ತೀರ್ಮಾನವನ್ನು ಕಾಲಕ್ಕೆ ಸರಿಯಾಗಿ, ಯೋಗ್ಯವಾದುದನ್ನೇ ತೆಗೆದುಕೊಳ್ಳುವಿರಿ. ಶುಕ್ರನು ರಾಹುವಿನ ಜೊತೆ ಇದ್ದು ಸಂಗಾತಿಯ ನಡುವೆ ವೈಮನಸ್ಯ ಬರುವಂತೆ ಮಾಡುವನು. ಕೇತುವು ನಿಮ್ಮ ರಾಶಿಯಲ್ಲಿ ಇರುವುದರಿಂದ ಸಂಗಾತಿಯ ಬಗ್ಗೆ ಸಂದೇಹಗಳೂ ಬರುತ್ತವೆ. ಕುಜನು ಏಕಾದಶದಲ್ಲಿ ನೀಚನಾಗಿದ್ದಾನೆ. ಆದಾಯದ ವಿಚಾರದಲ್ಲಿ ಗಲಾಟೆಗಳು ನಡೆಯುವುದು. ಬುಧನು ನೀಚನಾಗಿದ್ದು ನಿಮ್ಮ ಕಾರ್ಯಗಳು ಫಲಹೀನವೂ ಆಗಲಿದೆ. ಆಸೆಯೂ ವಿಫಲವಾಗುವುದು. ಮಹಾವಿಷ್ಣುವಿನ ಸ್ತೋತ್ರ ಮಾಡಿ.
ತುಲಾ ರಾಶಿ :
ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಅಶುಭ. ರಾಶಿಯ ಅಧಿಪತಿ ಉಚ್ಚಸ್ಥಾನಕ್ಕೆ ಹೋದರೂ ರಾಹುವಿನ ಸಾಂಗತ್ಯ ಬರುವ ಕಾರಣ ಪೂರ್ಣಶುಭವೂ ಇರದು. ಶತ್ರುಗಳಿಂದ ತೊಂದರೆಗೆ ಸಿಕ್ಕಿಕೊಳ್ಳಬೇಕಾಗುವುದು. ಬಂಧುಗಳೇ ನಿಮ್ಮ ಬಗ್ಗೆ ಬೇಡದ್ದನ್ನು ಹೇಳುವರು. ವಾಹನದಿಂದ ಸಂಕಷ್ಟ ಕಾಣಿಸುವುದು. ಆರ್ಥಿಕತೆಯ ಮುಗ್ಗಟ್ಟು ಎದುರಾಗುವುದು. ಸಂಗಾತಿಯ ಮಾತುಗಳಿಗೆ ಮಣಿಯುವ ಅನಿವಾರ್ಯತೆ ಬರಲಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇದ್ದರೆ ಅಲ್ಪಕಾಲದಲ್ಲಿ ಸಿಗುವುದು. ತಾಳ್ಮೆಯಿಂದ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು. ಮಹಾಗೌರಿಯನ್ನು ಸ್ತುತಿಸಿ.
ವೃಶ್ಚಿಕ ರಾಶಿ :
ವರ್ಷದ ಎರಡನೇ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಹಾಗೂ ಷಷ್ಠಾಧಿಪತಿ ಅಷ್ಟಮದಲ್ಲಿ ಇದ್ದು ಬಾಧೆಯನ್ನು ಕೊಟ್ಟರೂ ದೃಢತೆಯೊಂದು ಇದ್ದರೆ ಗೆಲ್ಲಬಹುದು. ಮಾನಸಿಕವಾಗಿ ದುರ್ಬಲರಾಗಬೇಕಿಲ್ಲ. ಗುರುಬಲವೇ ನಿಮಗೆ ರಕ್ಷಣೆಯಾಗಿದ್ದು, ಶುಕ್ರನು ಪಂಚಮದಲ್ಲಿ ಇರುವ ಕಾರಣ ಶಿಕ್ಷಣಕ್ಕೆ ಪ್ರತಿಫಲ ಸಿಗಲಿದೆ. ಆದರೆ ಬುದ್ಧಿಯನ್ನು ಸ್ತಿಮಿತದಲ್ಲಿ ಇಡಲಾಗದು. ಏನೇನೋ ನಕಾರಾತ್ಮಕ ಅಂಶಗಳನ್ನು ತಂದುಕೊಳ್ಳುವುದು. ಸಂಗಾತಿಯ ಬಗ್ಗೆ ಸದ್ಭಾವ ಬರುವುದು. ದುರ್ಬುದ್ಧಿಯಿಂದ ನಿಮ್ಮ ಕೈಯಾರೆ ಉದ್ಯೋಗವನ್ನು ಕಳೆದುಕೊಳ್ಳಬೇಕಾಗಬಹುದು. ಹಿರಿಯರ ಸಹಾಯದಿಂದ ಉದ್ಯೋಗವು ಸರಿದಾರಿಗೆ ಬರುವುದು. ಸುಬ್ರಹ್ಮಣನ ಸಹಸ್ರನಾಮವನ್ನು ಪಠಿಸಿ.
ಧನು ರಾಶಿ :
ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಅಶುಭ. ರಾಶಿಯ ಅಧಿಪತಿ ಹಾಗೂ ಚತುರ್ಥದ ಅಧಿಪತಿ ಷಷ್ಠದಲ್ಲಿ ಇದ್ದಾನೆ. ಕುಟುಂಬದಲ್ಲಿ ಸಾಮರಸ್ಯವಿಲ್ಲ. ತನ್ನ ಬಗ್ಗೆಯೇ ಬೇಸರ ಎನಿಸುವುದು. ತಾಯಿಯಿಂದ ನಿಮ್ಮ ಆಲೋಚನೆಗಳು ಸರಿಯಾಗುವುದು. ನಕಾರಾತ್ಮಕ ಅಂಶಗಳಿಂದ ದೂರವಿರುವಿರಿ. ವಿವಾಹಕ್ಕೆ ಕಾಲ ಸರಿಯಾದುದಲ್ಲ. ವಿವಾಹಕ್ಕೆ ನಿಮಗೆ ಯೋಗ್ಯವಲ್ಲದ ಸ್ತ್ರೀ ಸಿಗಬಹುದು. ಉದ್ಯೋಗದಲ್ಲಿ ಕಿರಿಕಿರಿ, ಒತ್ತಡ, ಎಲ್ಲ ತಪ್ಪಿಗೂ ನೀವೇ ಹೊಣೆಗಾರರಾಗುವಿರಿ. ನಿಮ್ಮ ಆದಾಯವನ್ನು ಕುಟುಂಬಕ್ಕೆ ನೀಡಬೇಕಾಗಬಹುದು. ಗುರುಚರಿತ್ರೆಯನ್ನು ಯಥಾ ಸಾಧ್ಯ ಪಠಿಸಿ.
ಮಕರ ರಾಶಿ :
ಫೆಬ್ರವರಿ ತಿಂಗಳಲ್ಲಿ ನಿಮಗೆ ಶುಭದ ಸೂಚನೆ ಹೆಚ್ಚು ಕಾಣಿಸುವುದು. ರಾಶಿಯ ಅಧಿಪತಿ ದ್ವಿತೀಯದಲ್ಲಿ ಸೂರ್ಯನ ಸಂಯೋಗದಲ್ಲಿ ಇದ್ದು, ಕೊಡಬೇಕಾದುದನ್ನು ಪೂರ್ಣವಾಗಿ ಕೊಡಲಾರನು. ಸಾಡೇ ಸಾಥ್ ಅಂತ್ಯಭಾಗದಲ್ಲಿ ಇರುವ ಶನಿಯು ಕಷ್ಟಕೊಟ್ಟರೂ ಅನೇಕ ಶುಭವನ್ನು ಮಾಡುವನು. ತೃತೀಯದಲ್ಲಿ ಬುಧನು ನೀಚನೂ ಶುಕ್ರನು ಉಚ್ಚನೂ ಆಗಿದ್ದಾನೆ. ರಾಹುವಿನ ಯೋಗವೂ ತೃತೀಯದಲ್ಲಿ ಇರಲಿದೆ. ಶತ್ರುಗಳ ದುರ್ಬುದ್ಧಿಗೆ ಸಿಕ್ಕಿಕೊಳ್ಳುವಿರಿ. ಸಹೋದರಿಯ ಬಗ್ಗೆ ಅನುಕಂಪ ಉಂಟಾಗುವುದು. ಜ್ಞಾನಾರ್ಜನೆಯ ಹಾದಿ ಸುಗಮವಾಗಿದ್ದು ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗದಲ್ಲಿ ಸಹವಾಸ ಸರಿಯಾಗಿಲಿ. ಅಧೈರ್ಯ, ಗೊಂದಲಗಳಿದ್ದರೆ ಹನುಮಾನ್ ಚಾಲೀಸ್ ಪಠಿಸಿ.
ಕುಂಭ ರಾಶಿ :
ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಫೆಬ್ರವರಿ ತಿಂಗಳು ಅಶುಭ. ರಾಶಿಯ ಅಧಿಪತಿ ಸ್ವರಾಶಿಯಲ್ಲಿ ಇದ್ದರೂ ಸೂರ್ಯನ ಅಗಮನ ಆಗಿರುವುದರಿಂದ ಮಾನಸಿಕ ಆರೋಗ್ಯ ಕೆಡುವುದು. ಮನಸ್ತಾಪಗಳು ದಾಂಪತ್ಯದಲ್ಲಿ ಹೆಚ್ಚು ತೋರಿಬರುವುದು. ದ್ವಿತೀಯದಲ್ಲಿ ಬುಧ ಹಾಗೂ ಶುಕ್ರರ ಸಮಾಗಮವಾಗಲಿದ್ದು ಆರ್ಥಿಕ ಸುಧಾರಣೆ ಕಾಣಿಸುವುದು. ತಾಯಿ ಅಥವಾ ತಂದೆಯ ಕಡೆಯಿಂದ ಬೆಂಬಲ ಸಿಗಲಿದೆ. ವಿವಾಹಕ್ಕೆ ಯೋಗ್ಯವಾದ ಕಾಲವಿಲ್ಲ. ಔದ್ಯೋಗಿಕವಾಗಿ ಉನ್ನತಿಯು ಪ್ರತಿಭಾನ್ವಿತರಿಗೆ ಸೇರುವುದು. ನಿಮ್ಮ ಯಾವ ಯುಕ್ತಿಯೂ ಕೆಲಸ ಮಾಡದು. ಯಾವುದನ್ನೂ ಅತಿಯಾಗಿ ಮಾಡಿಕೊಳ್ಳದೇ ಯಥಾಸ್ಥಿತಿಯಲ್ಲಿ ಮುಂದುವರಿಯುವುದು ಉತ್ತಮ. ಶಿವಾರಧನೆ ಮಾನಸಿಕ ಶಕ್ತಿಯನ್ನು ಕೊಡುವುದು.
ಮೀನ ರಾಶಿ :
ಫೆಬ್ರವರಿ ತಿಂಗಳಲ್ಲಿ ರಾಶಿಯ ಅಧಿಪತಿ ಹಾಗೂ ದಶಮದ ಅಧಿಪತಿಯಾದ ಗುರು ತೃತೀಯದಲ್ಲಿ ಇರುವನು. ಗುರುವಿಗೆ ಶತ್ರುಸ್ಥಾನವಾದ ಕಾರಣ ಸಹೋದರರ ಬಗ್ಗೆ ಸದ್ಭಾವವಿರದು. ಉದ್ಯೋಗದಲ್ಲಿ ನೀವು ಕೃತಕತೆಯನ್ನು ಬಳಸಿ ಸ್ಥಾನವನ್ನು ನಿಮ್ಮದಾಗಿಸಿಕೊಳ್ಳು ಪ್ರಯತ್ನ ಮಾಡುವಿರಿ. ಸಾಮರ್ಥ್ಯವನ್ನು ಉಪಯೋಗಿಸಿಕೊಂಡರೆ ಉತ್ತಮ. ಶುಕ್ರನು ಈ ರಾಶಿಯನ್ನು ಪ್ರವೇಶ ಮಾಡಲಿದ್ದು ವಿರೂಪವನ್ನು ಸುರೂಪ ಮಾಡಿಕೊಳ್ಳುವಿರಿ. ಸಂಗಾತಿಯಿಂದ ನೀವು ಅಪಕೀರ್ತಿಯನ್ನು ಪಡೆಯುವಿರಿ. ಕೌಟುಂಬಿಕ ವಿಚಾರದಲ್ಲಿ ಸಮಾಧಾ ಕಾಣಿಸುವುದು. ದಾಂಪತ್ಯದಲ್ಲಿ ಅತಿರೇಕವಾದರೆ ರಾಮ ಪಟ್ಟಾಭಿಷೇಕವನ್ನು ಮಾಡಬೇಕಾಗುವುದು.
-ಲೋಹಿತ ಹೆಬ್ಬಾರ್ – 8762924271 (what’s app only)