ಮಿಥುನ ರಾಶಿಯವರಿಗೆ ಹೊಸ ವರ್ಷದ ಎರಡನೇ ತಿಂಗಳು ಹೇಗಿದೆ?

ಮಿಥುನ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಗ್ರಹಗತಿಗಳ ಮಿಶ್ರಫಲವಿದೆ. ಗುರು, ಬುಧ, ಶುಕ್ರರಿಂದ ಆತ್ಮವಿಶ್ವಾಸ, ಅದೃಷ್ಟ, ಪ್ರೇಮದಲ್ಲಿ ಯಶಸ್ಸು. ಶನಿ, ರಾಹು, ಸೂರ್ಯರ ಪ್ರಭಾವದಿಂದ ವೃತ್ತಿಜೀವನದಲ್ಲಿ ಒತ್ತಡ, ಹಣಕಾಸಿನಲ್ಲಿ ಏರಿಳಿತ ಹಾಗೂ ತಂದೆಯ ಆರೋಗ್ಯಕ್ಕೆ ಕಾಳಜಿ ಬೇಕು. ಶ್ರಮಕ್ಕೆ ಪ್ರತಿಫಲ, ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ಅನಗತ್ಯ ಖರ್ಚು ಕಡಿಮೆ ಮಾಡಿ ಮಾನಸಿಕ ನೆಮ್ಮದಿಗಾಗಿ ಪ್ರಯತ್ನಿಸಿ.

ಮಿಥುನ ರಾಶಿಯವರಿಗೆ ಹೊಸ ವರ್ಷದ ಎರಡನೇ ತಿಂಗಳು ಹೇಗಿದೆ?
ಸಾಂದರ್ಭಿಕ ಚಿತ್ರ
Edited By:

Updated on: Feb 14, 2026 | 9:59 AM

ಈ ತಿಂಗಳಲ್ಲಿ ಬುಧನ ಆಧಿಪತ್ಯದ ಮಿಥುನ ರಾಶಿಯವರಿಗೆ ಗ್ರಹಗತಿಗಳ ಬದಲಾವಣೆಯಿಂದಾಗಿ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ. ಪ್ರಮುಖವಾಗಿ ರಾಶಿಯಲ್ಲಿಯೇ ಇರುವ ಗುರು, ದಶಮದ ಶನಿ ಮತ್ತು ನವಮದ ಬುಧ ಗ್ರಹಗಳ ಸಂಚಾರವು ನಿಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ​ಇದರ ವಿಸ್ತೃತ ಅಂಶಗಳನ್ನು ನೋಡಬಹುದು.

ಶುಭ ಫಲ ನೀಡುವ ಗ್ರಹಗಳ ದಶೆ

​ಗುರು :

ಗುರುವು ನಿಮ್ಮ ರಾಶಿಯ ಪ್ರಥಮ ಭಾವದಲ್ಲಿ ಸಂಚರಿಸುತ್ತಿರುವುದರಿಂದ ಗುರು ಬಲ’ ಹೆಚ್ಚಿದೆ. ಇದು ನಿಮಗೆ ಆತ್ಮವಿಶ್ವಾಸ, ಉತ್ತಮ ಆರೋಗ್ಯ ಮತ್ತು ಗೌರವವನ್ನು ತಂದುಕೊಡುತ್ತದೆ. ಫೆಬ್ರವರಿಯಿಂದ ಜೂನ್ ವರೆಗಿನ ಸಮಯವು ನಿಮಗೆ ಅತ್ಯಂತ ಅನುಕೂಲಕರವಾಗಿರಲಿದೆ.

​ಬುಧ :

ಫೆಬ್ರವರಿ ಆರಂಭದಲ್ಲಿ ಬುಧನು ನಿಮ್ಮ ಒಂಭತ್ತನೆಯ ಮನೆ ಭಾಗ್ಯ ಸ್ಥಾನವಾದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಹಿರಿಯರ ಬೆಂಬಲ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ವಿದೇಶ ಪ್ರಯಾಣದ ಯೋಗವನ್ನು ಇದು ನೀಡುತ್ತದೆ.

​ಶುಕ್ರ:

ಶುಕ್ರನ ಶುಭ ದೃಷ್ಟಿಯಿಂದಾಗಿ ಪ್ರೇಮ ಜೀವನ ಮತ್ತು ಕೌಟುಂಬಿಕ ಸಂಬಂಧಗಳಲ್ಲಿ ಸಾಮರಸ್ಯ ಇರಲಿದೆ. ಹೊಸ ವಸ್ತುಗಳ ಖರೀದಿ ಅಥವಾ ಐಷಾರಾಮಿ ಜೀವನದತ್ತ ಒಲವು ಹೆಚ್ಚಾಗಲಿದೆ.

​ಅಶುಭ ಅಥವಾ ಮಿಶ್ರ ಫಲ ನೀಡುವ ಗ್ರಹಗಳ ದಶೆ

​ಶನಿ :

ಶನಿಯು ನಿಮ್ಮ ಹತ್ತನೇ ಮನೆ ಕರ್ಮ ಸ್ಥಾನವಾದ ಮೀನ ರಾಶಿಯಲ್ಲಿದ್ದಾನೆ. ಇದು ವೃತ್ತಿಜೀವನದಲ್ಲಿ ಅತಿಯಾದ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳನ್ನು ತರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ವಿಳಂಬವಾಗಬಹುದು. ಶಾರ್ಟ್‌ಕಟ್ ಅಥವಾ ಸೋಮಾರಿತನ ಬಿಟ್ಟು ಕೆಲಸ ಮಾಡುವುದು ಅನಿವಾರ್ಯ.

​ರಾಹು ಮತ್ತು ಸೂರ್ಯ :

ಕುಂಭ ರಾಶಿಯಲ್ಲಿನ ಗ್ರಹಗಳ ಸಮಾಗಮದಿಂದಾಗಿ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಏರಿಳಿತಗಳಿರಬಹುದು.

​ಈ ತಿಂಗಳಲ್ಲಿ ಪ್ರಭಾವ ಬೀರುವ ಪ್ರಮುಖ ಅಂಶಗಳಿವಾಗಿದ್ದು, ಜಾಗರೂಕತೆ ಇರಲಿ. ಶನಿಯ ಪ್ರಭಾವದಿಂದ ಉದ್ಯೋಗ ಸವಾಲಿನೊಂದಿಗೆ ಇರಲಿದ್ದು. ಯಶಸ್ಸಿಗೆ ಶಿಸ್ತುಬದ್ಧ ಪ್ರಯತ್ನ ಅಗತ್ಯ.ಹಣಕಾಸಿನಲ್ಲಿ ಸುಧಾರಣೆ ಇದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿಕೊಳ್ಳಬೇಕಾಗುವುದು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸರಸ್ವತಿ ಯೋಗವು ಸಂಭವಿಸಲಿದ್ದು ವಿದ್ಯಾಭ್ಯಾಸದಲ್ಲಿ ಪ್ರಗತಿ ಬರಲಿದೆ. ಆರೋಗ್ಯವು ಸಾಧಾರಣವಾಗಿರಲಿದ್ದು ಮಾನಸಿಕ ನೆಮ್ಮದಿಯನ್ನು ಪಡೆಯುವುದು ಅನಿವಾರ್ಯ.

– ಲೋಹಿತ ಹೆಬ್ಬಾರ್