AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದವರು ಮಾನವಂತರು, ಸಿರಿವಂತರು, ನೀವು ಮೂಲೆ ಸೇರಬೇಕಾಗಿಲ್ಲ..!

ಧನು ರಾಶಿಯಲ್ಲಿ ಬರುವ ಪ್ರಥಮ ನಕ್ಷತ್ರ ಇದು. ರಾಕ್ಷಸ ಗಣ ಹಾಗೂ ಆದಿನಾಡಿಯಾಗಿರಲಿದೆ. ಯೇ ಯೋ ಭ ಭಿ ಈ ನಕ್ಷತ್ರ ನಾಮಾಕ್ಷರಗಳು. ಅಧಿಪತಿ ಗ್ರಹ ಕೇತು. ಈ ನಕ್ಷತ್ರವು ಅತ್ಯಂತ ದಾರುಣ ನಕ್ಷತ್ರ ಎಂದು ಪ್ರಸಿದ್ಧಿ ಪಡೆದಿದೆ. ಅದರಲ್ಲಿಯೂ ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಗೆ ಉತ್ತಮ ವರಪ್ರಾಪ್ತಿಯಾಗದು. ಬೇಗ ವಿವಾಹವಾಗದು ಎನ್ನುವ ಅಪವಾದವಿದೆ. ಇದು ವಿವಾಹಕ್ಕೆ ಮಾತ್ರ. ಉಳಿದಂತೆ ಯಾವ ತೊಂದರೆ ಇರದು.

ಈ ನಕ್ಷತ್ರದವರು ಮಾನವಂತರು, ಸಿರಿವಂತರು, ನೀವು ಮೂಲೆ ಸೇರಬೇಕಾಗಿಲ್ಲ..!
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 22, 2025 | 9:11 AM

Share

ಹತ್ತೊಂಭತ್ತನೇ ನಕ್ಷತ್ರ ಮೂಲ. ಇದರ ದೇವತೆ ನಿರ್ಋತಿ. ರಾಕ್ಷಸ ಎಂಬುದಾಗಿಯೂ ಕರೆಯುತ್ತಾರೆ. ಐದು ನಕ್ಷತ್ರಗಳ ಸಮೂಹ ಇದು. ಧನು ರಾಶಿಯಲ್ಲಿ ಬರುವ ಪ್ರಥಮ ನಕ್ಷತ್ರ ಇದು. ರಾಕ್ಷಸ ಗಣ ಹಾಗೂ ಆದಿನಾಡಿಯಾಗಿರಲಿದೆ. ಯೇ ಯೋ ಭ ಭಿ ಈ ನಕ್ಷತ್ರ ನಾಮಾಕ್ಷರಗಳು. ಅಧಿಪತಿ ಗ್ರಹ ಕೇತು. ಈ ನಕ್ಷತ್ರವು ಅತ್ಯಂತ ದಾರುಣ ನಕ್ಷತ್ರ ಎಂದು ಪ್ರಸಿದ್ಧಿ ಪಡೆದಿದೆ. ಅದರಲ್ಲಿಯೂ ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಗೆ ಉತ್ತಮ ವರಪ್ರಾಪ್ತಿಯಾಗದು. ಬೇಗ ವಿವಾಹವಾಗದು ಎನ್ನುವ ಅಪವಾದವಿದೆ. ಇದು ವಿವಾಹಕ್ಕೆ ಮಾತ್ರ. ಉಳಿದಂತೆ ಯಾವ ತೊಂದರೆ ಇರದು. ಮೂಲಾ ನಕ್ಷತ್ರದಲ್ಲಿ ಪುರುಷನ ಜನನಕ್ಕೆ ಅತಿಯಾದ ಆತಂಕ ಕಾಣಿಸದು. ಏಕೆಂದರೆ ಸ್ತ್ರೀ ವಿವಾಹವಾಗಿ ಇನ್ನೊಂದು ಮನೆಯನ್ನು ಬೆಳಗಬೇಕಾದ ಕಾರಣ ಆಕೆಯಿಂದ ಯಾವುದೇ ತೊಂದರೆ ಬಾರದಿರಲಿ ಎನ್ನುವುದು ಉದ್ದೇಶ.

ಈ ನಕ್ಷತ್ರದಲ್ಲಿ ಜನಿಸಿದವರು ಎಷ್ಟೆಲ್ಲ ಸಮೃದ್ಧಿಯನ್ನು ಪಡೆದಿರುತ್ತಾರೆ ಎನ್ನುವುದನ್ನು ನೋಡುವುದಾದರೆ,

ಮಾನವಂತರು :

ಇವರು ಮಾನವಂತರಾಗಿರುವರು. ಯಾವ ವಿಚಾರದಲ್ಲಿಯೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸಲಾರರು.

ಇದನ್ನೂ ಓದಿ
Image
ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಲೇಬೇಡಿ; ಸಮಸ್ಯೆ ತಪ್ಪಿದಲ್ಲ!
Image
ಈ ಗುಣಗಳಿದ್ದರೆ ಲಕ್ಷಗಟ್ಟಲೆ ಸಂಬಳ ಇದ್ದರೂ ನೀವು ಸಾಲದಲ್ಲೇ ಇರುತ್ತೀರಿ
Image
ಮನೆಯಲ್ಲಿ ದೇವರಿಗೆ ಒಂದು ಅಗರಬತ್ತಿ ಏಕೆ ಹಚ್ಚಬಾರದು?
Image
ಮನೆಯಲ್ಲಿ ಶ್ರೀಕೃಷ್ಣನ ಫೋಟೋ, ಮೂರ್ತಿ ಇಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

ಸಿರಿವಂತ :

ಬೇಕಾದಷ್ಟು ಸಂಪತ್ತನ್ನು ಪೂರ್ವಜರಿಂದ ಪಡೆದಿರಬಹುದು ಅಥವಾ ಸ್ವಯಾರ್ಜಿತ ಸಂಪತ್ತಿನಿಂದ ಶ್ರೀಮಂತರಾಗಿರುವರು. ಚರ ಹಾಗೂ ಸ್ಥಿರ ಆಸ್ತಿಗಳ ಒಡೆತನವೂ ಆಗುವುದು. ರಾಜನಿಗೆ ಸಮಾನವಾದ ಆಸ್ತಿಗಳು, ಸಂಪತ್ತುಗಳು ಇರಲಿವೆ.

ಅಹಿಂಸೆ :

ಇವರ ವಿಶೇಷ ಗುಣಗಳಲ್ಲಿ ಅಹಿಂಸೆಯೂ ಒಂದು. ಯಾರನ್ನೂ ಮಾತಿನಿಂದ, ಕೃತಿಯಿಂದ ಹಾಗೂ ಮನಸ್ಸಿನಿಂದ ಹಿಂಸೆಯನ್ನು ಬಯಸಲಾರರು. ಅಹಿಂಸಾ ತತ್ತ್ವವನ್ನು ಹೆಚ್ಚು ಬೋಧಿಸುವವರು.

ಸ್ಥಿರವಾದ ಬುದ್ಧಿ :

ಚಂಚಲ ಬುದ್ಧಿ ಇರದು. ಒಂದು ನಿರ್ಧಾರಕ್ಕೆ ಬದ್ಧರಾದಮೇಲೆ ಬದಲಿಸುವ, ಸಡಿಲಿಸುವ, ಪಲಾಯನ ಮಾಡುವುದು ಜಾಯಮಾನವಾಗಿರದು.

ಸಂಗಾತಿಯ ಗೌರವ :

ಸಂಗಾತಿಯಿಂದ ಇವರಿಗೆ ಪ್ರೀತಿ, ಗೌರವಗಳು ಸಿಗಲಿವೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವವಿರುವುದು.

ದುರಭ್ಯಾಸದಿಂದ ದೂರ :

ಈ ನಕ್ಷತ್ರದವರು ಜೂಜೂ, ಮಧ್ಯಾಪಾನ, ಕಾನೂನು ಬಾಹಿರವಾದ ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಾತ್ತ್ವಿಕ ಜೀವನವನ್ನು ನಡೆಸುವರು.

ಬಹು-ಪ್ರಿಯಸುತರು :

ಇವರಿಗೆ ಮಕ್ಕಳು ಒಂದಕ್ಕಿಂತ ಅಧಿಕ ಹಾಗೂ ಮಕ್ಕಳು ಇವರನ್ನು ಹೆಚ್ಚು ಪ್ರೀತಿಸುವರು, ಇವರೂ ಮಕ್ಕಳನ್ನು ಪ್ರೀತಿಸುವವರಾಗಿರುತ್ತಾರೆ.

ಶತ್ರುರಾಹಿತ್ಯ :

ಇವರಿಗೆ ಶತ್ರುಗಳಿರಲಾರರು. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಂಡು ಎಲ್ಲರನ್ನು ತಮ್ಮ ಜಾಣತನದಿಂದ ಮಿತ್ರರನ್ನಾಗಿಸಿಕೊಳ್ಳುವರು.

ಇದನ್ನೂ ಓದಿ: ವಿಶ್ವಾವಸು ಸಂವತ್ಸರದಲ್ಲಿ ಕಾಡಲಿದೆ ಹೊಸ ರೋಗ

ಹೀಗೆ ಅನೇಕ ಗುಣಗಳಿಂದ ಕೂಡಿದ ನಕ್ಷತ್ರವಿದು. ವಿವಾಹಕ್ಕೆ ಮಾತ್ರ ತಕರಾರಿರುವ ನಕ್ಷತ್ರವಿದು. ಅದರಲ್ಲಿಯೂ ಮೂಲಾ ನಕ್ಷತ್ರದ ಮೂರು ಪಾದಗಳು ಮಾತ್ರ ದೋಷಪೂರಿತ. ಕೊನೆಯದ್ದು ಶುಭ. ಮೊದಲನೆಯ ಪಾದದಿಂದ ತಂದೆಯ ನಾಶ, ಎರಡನೇ ಪಾದದಿಂದ ತಾಯಿ ಹಾಗೂ ಮೂರನೇ ಪಾದದಿಂದ ಧನನಾಶ ಎಂದೂ ಮೊದಲನೇ ಪಾದ ಸೋದರ ಮಾವ, ಎರಡನೆಯದು ಪತಿಯ ತಂದೆ, ಮೂರನೇ ಪಾದ ಪತಿಯ ತಾಯಿ ಎಂಬುದಾಗಿಯೂ ಹೇಳುತ್ತಾರೆ. ಇಲ್ಲಿ ನಾಶವೆಂದರೆ ಪ್ರಾಣಹರಣ ಎಂದಲ್ಲ. ಇರುವ ಸ್ಥಿತಿಗಿಂತ ಭಿನ್ನತೆ, ಕ್ಲೇಶ, ಮನಸ್ತಾಪ, ಧನದಿಂದ ತೊಂದರೆಗಳು ಬರುತ್ತವೆ.

ಇದರಲ್ಲಿಯೂ ಅನೇಕ ಭೇದಗಳನ್ನು ಋಷಿ ಮುನಿಗಳು ಕಂಡುಕೊಂಡಿರುತ್ತಾರೆ.

– ಲೋಹಿತ ಹೆಬ್ಬಾರ್-8762924271 (what’s app only)

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 am, Sat, 22 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ