ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು

Daily Horoscope, 16 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ಚತುರ್ದಶೀ ತಿಥಿಯ ಗುರುವಾರದಂದು ನಿಜಸ್ಥಿತಿಯ ಅರಿವು, ಉತ್ಸಾಹದ ಮನಸ್ಸು, ಅನಿರೀಕ್ಷಿತ ಅನಾರೋಗ್ಯ, ಉದ್ಯಮದಲ್ಲಿ ಕ್ರಿಯಾಶೀಲತೆ, ದೂರ ಪ್ರಯಾಣಕ್ಕೆ ತಡೆ, ಆದಾಯಕ್ಕೆ ಸುಲಭೋಪಾಯ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು
ದಿನ ಭವಿಷ್ಯ
Edited By:

Updated on: Apr 16, 2026 | 12:34 AM

ಮೇಷ ರಾಶಿ:

ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ದುಡುಕುವುದು ನಿಮ್ಮ ಸ್ವಭಾವಕ್ಕೆ ವಿರುದ್ಧವಾದಂತೆ. ಹೊಸ ಮನೆಯನ್ನೋ ಜಾಗವನ್ನೋ ತೆಗದುಕೊಳ್ಳುವ ಪ್ರಸ್ತಾಪವಿರಲಿದೆ. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಔಚಿತ್ಯ ಪೂರ್ಣವಾಗಿ ಮಾತನಾಡುವಿರಿ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಒಂದೇ ಆಯಾಮದ ಕಾರ್ಯಗಳಿಂದ ವಿಶ್ರಾಂತಿಯು ಬೇಕೆನಿಸಬಹುದು.

ವೃಷಭ ರಾಶಿ:

ಇಂದು ಸ್ಪರ್ಧಾತ್ಮಕ ವಿಚಾರಗಳಿಂದ ಸೋಲಾಗುವುದು. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸಿ ಕೈ ಬಿಡವರು.‌ ವಿದ್ಯುದುಪಕರಣಗಳ ಖರೀದಿಯಿಂದ ನಿಮಗೆ ಧನವ್ಯಯವಾಗುವ ಸಾಧ್ಯತೆಯಿದೆ. ಹಣಬೇಕೆಂದು ಸಲ್ಲದ ದಾರಿಯಲ್ಲಿ ನಡೆದರೆ ಬಂದುದೆಲ್ಲ ಹಾಗೇ ಹೋಗುವುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ.

ಮಿಥುನ ರಾಶಿ:

ದೈವಾನುಕೂಲ ಬಂದಾಗ ನಿಮ್ಮಲ್ಲಿ ಹೊಳಪು ಬರಲಿದೆ. ಯಾರನ್ನೂ ಪೂರ್ಣ ನಂಬುವ ಸ್ಥಿತಿ ಇರದು. ಸಂಗಾತಿಯೊಡನೆ ಸಮಾರಂಭಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳು ಸಭೆಯನ್ನು ವಿಸ್ಮಿತಗೊಳಿಸಲಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲಿದ್ದೀರಿ. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ.

ಕರ್ಕಾಟಕ ರಾಶಿ:

ಮಾಡಲು ಏನೂ ಕೆಲಸವಿಲ್ಲವೆಂದು ಹೇಳಿ ನಿಮ್ಮರ ಬಾಯಿಗೆ ಸಿಗಬೇಡಿ. ಏನಾದರೂ ಉತ್ತಮವಾದ ಕೆಲಸವನ್ನು ಮಾಡಿ, ಅದನ್ನೇ ಹೇಳಿ. ಕರ್ತವ್ಯಶೂನ್ಯತೆಯಿಂದ ತಂದೆಗೆ ಬೇಸರವಾಗಬಹುದು. ಆಗ ತಾನಾಗಿಯೇ ಬಾಯಿ ಮುಚ್ಚುವುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು.

ಸಿಂಹ ರಾಶಿ:

ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಪರಿಶ್ರಮದಿಂದ ಸಕಾಲಕ್ಕೆ ಸರಿಯಾಗಿ ಫಲವನ್ನು ಪಡೆಯುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದಪಡುವುದು. ನಿಮ್ಮ ವರ್ತನೆಗಳಲ್ಲಿ ಬದಲಾವಣೆಯನ್ನು ಆಪ್ತರು ಗಮನಿಸುವರು. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ:

ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನಕ್ಕೆ ಸಿಕ್ಕಿಹಾಕಿಕೊಳ್ಳುವಿರಿ. ಅನಗತ್ಯ ಮಾತುಗಳಿಂದ ಸಣ್ಣವರಾಗುವಿರಿ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ನಿದ್ರಾಹಿನತೆಯಿಂದ ಆಲಸ್ಯವೂ ಬರಬಹುದು. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ದಿವ್ಯಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು.

ತುಲಾ ರಾಶಿ:

ಸ್ತ್ರೀಯರು ಇಂದು ತಾಳ್ಮೆಯನ್ನು ಕಳೆದುಕೊಂಡು ದುಃಖಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಎಲ್ಲದಕ್ಕೂ ಮಿತಿಯಿದೆ ಎಂದು ಅಂದುಕೊಂಡು ಸಮಾಧಾನವನ್ನು ಪಡೆಯುವಿರಿ. ವೈಷಮ್ಯವನ್ನು ನಾಜೂಕಿನಿಂದ ದೂರಮಾಡಬೇಕು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಮಕ್ಕಳ ವಿಚಾರದಲ್ಲಿ ನಿಮಗೆ ಬಹಳ ಮೃದು ಸ್ವಭಾವವಿರುವುದು.

ವೃಶ್ಚಿಕ ರಾಶಿ:

ಧಾನ್ಯ ವ್ಯಾಪಾರದವರಿಗೆ ಹೆಚ್ಚಿನ ಲಾಭವಿದೆ. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ಸುಮ್ಮನಿರುವವರ ಬಾಯಿಗೆ ಕೋಲುಹಾಕಿ ಹಾಳುಮಾಡಿಲೊಳ್ಳುವಿರಿ. ನಿಮ್ಮ ಪ್ರಭಾವವು ಅಷ್ಟಾಗಿ‌ ನಡೆಯದು. ಸಹೋದರನ ಜೊತೆ ನಿಮ್ಮ ಕಲಹವಿರಲಿದೆ. ಮನೆಯ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವಿರಿ.

ಧನು ರಾಶಿ:

ನಿಮ್ಮ ಬಗ್ಗೆ ಇಲ್ಲದ ಆಪಾದನೆಗಳು ಬರಬಹುದು. ಸ್ತ್ರೀಯರಿಗೆ ಶತ್ರು ಬಾಧೆ ಹೆಚ್ಚಾಗುವುದು. ಯಂತ್ರಾಗಾರದಲ್ಲಿ ಕೆಲಸ ಮಾಡುವವರಿಗೆ ಶುಭವಿದೆ. ಮಾನಸಿಕ ತುಮುಲಗಳು ಇಂದಿರಲಿವೆ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ಕಠಿಣ ವ್ಯಾಯಾಮವನ್ನು ಮಾಡುವ ಮುಂಚೆ ದೇಹದ ಸಾಮರ್ಥ್ಯವನ್ನು ತಿಳಿಯಲು ವೈದ್ಯರನ್ನು ಭೇಟಿಯಾಗಿ.

ಮಕರ ರಾಶಿ:

ಗೃಹಬಳಕೆಯ ವಸ್ತುಗಳನ್ನು ಖರೀದಿಸುವ ಕೆಲಸಕ್ಕೆ ಹೋಗುವಿರಿ. ವಿವೇಚನೆ ಇಲ್ಲದೇ ಬೇಗನೆ ಕೋಪಗೊಳ್ಳುವಿರಿ. ಕಬ್ಬಿಣದ ವ್ಯಾಪಾರದಲ್ಲಿ ನಷ್ಟವಾಗಬಹುದು. ಇಂದಿನ ಬೆಳಗಿನ ನಿಮ್ಮ ಮನಃಸ್ಥಿತಿಯೇ ಇಂದಿನ ದಿನವನ್ನು ಹೇಳುತ್ತದೆ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ.

ಕುಂಭ ರಾಶಿ:

ನಿಮ್ಮ ಮಾತು ಕಿರಿಕಿರಿ ಎನಿಸಿ, ಇತರರಿಗೆ ಕೇಳಲಾಗದು. ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ. ಆರ್ಥಿಕವಾಗಿ ಗಟ್ಟಿ ಇದ್ದರೂ, ಅಕಸ್ಮಾತ್ ಆದ ಖರ್ಚು ನಿಮ್ಮನ್ನು ಕಂಗೆಡಿಸುವುದು. ನಿಮಗೆ ಬದಲಾವಣೆ ದೀರ್ಘಕಾಲ ಉಳಿಸಿಕೊಳ್ಳಲಾಗದು. ಹೊಸ ಉದ್ಯೋಗದ ಕಡೆಗೆ ಮನಸ್ಸು ಮಾಡುವಿರಿ. ವ್ಯಾಪಾರದ ಗುಣಮಟ್ಟ ಹೆಚ್ಚಿಸಲು ಖರ್ಚು ಮಾಡಬೇಕಾಗುತ್ತದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು.

ಮೀನ ರಾಶಿ:

ಮಕ್ಕಳು ನಿಮ್ಮನ್ನು ನಡತೆಯನ್ನು ಪ್ರಶ್ನಿಸಬಹುದು. ಮೌನವನ್ನೇ ಉತ್ತರವಾಗಿ ನೀಡಿ. ಸಮಯ ಬಂದಾಗ ತಾನಾಗಿಯೇ ಉತ್ತರವು ಅವರಿಗೆ ಗೋಚರಿಸುವುದು. ಅನುಕಂಪಕ್ಕೆ ಕರುಗುವಿರಿ. ನಿಮ್ಮವರ ಜೊತೆ ದೀರ್ಘಕಾಲದಿಂದ ಬಿಟ್ಟಿದ್ದ ಮಾತುಗಳನ್ನು ಇಂದಿನಿಂದ ಮುಂದುವರಿಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಬ್ರಹ್ಮ, ಕರಣ : ತೈತಿಲ, ಸೂರ್ಯೋದಯ – 06 – 11 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:57 – 15:31, ಯಮಗಂಡ ಕಾಲ 06:12 – 07:45, ಗುಳಿಕ ಕಾಲ 09:18 – 10:50

-ಲೋಹಿತಶರ್ಮಾ – 8762924271 (what’s app only)

Follow Us